ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 8/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1997
  • ಅನುರೂಪ ಮಾಹಿತಿ
  • ರಕ್ತಹೀನತೆಯ ಕಾರಣ, ಲಕ್ಷಣ ಮತ್ತು ಚಿಕಿತ್ಸೆ
    ಇತರ ವಿಷಯಗಳು
  • ನಮ್ಮ ವಾಚಕರಿಂದ
    ಎಚ್ಚರ!—1996
  • ನಮ್ಮ ವಾಚಕರಿಂದ
    ಎಚ್ಚರ!—1994
  • ನಮ್ಮ ವಾಚಕರಿಂದ
    ಎಚ್ಚರ!—1997
ಇನ್ನಷ್ಟು
ಎಚ್ಚರ!—1997
g97 8/8 ಪು. 30

ನಮ್ಮ ವಾಚಕರಿಂದ

ಬಂಧಿಸುವಂತಹ ಪ್ರೀತಿ ಪ್ರಿಯ ಸಹೋದರರೇ, “ಬೈಬಲಿನ ದೃಷ್ಟಿಕೋನ: ಬಂಧಿಸುವಂತಹ ಪ್ರೀತಿ” (ನವೆಂಬರ್‌ 8, 1996) ಎಂಬ ಲೇಖನವನ್ನು ಮುದ್ರಿಸಿದ್ದಕ್ಕಾಗಿ ನಾನು ನಿಮಗೆ ಉಪಕಾರವನ್ನು ಹೇಳಲು ಬಯಸುತ್ತೇನೆ. ಅನೇಕ ವರ್ಷಗಳಿಂದ ನಾನು ನನ್ನ ನಂಬಿಕೆಯ ಅನೇಕ ಪರೀಕ್ಷೆಗಳನ್ನು—ನನ್ನ ಹೆತ್ತವರ ಆಕಸ್ಮಿಕ ಮರಣವನ್ನೂ ಒಳಗೊಂಡು—ಎದುರಿಸಿದ್ದೇನೆ. ಆದರೆ ಬಂದಿರುವುದರಲ್ಲಿಯೇ ತೀರ ವಿಪರೀತವಾದ ಪರೀಕ್ಷೆಯು ಸಭೆಯೊಳಗಿಂದಲೇ ಒಬ್ಬರಿಂದ ಬಂದ ಪರೀಕ್ಷೆಯಾಗಿತ್ತು. ನನ್ನ ಹೃದಯದಲ್ಲಿ ನನಗಾಗಿರುವ ಅಳಲನ್ನು, ಘಾಸಿಯನ್ನು, ಹಾಗೂ ನೋವನ್ನು ಯೆಹೋವನು ತಿಳಿದಿದ್ದಾನೆ ಹಾಗೂ ಆತನು ಅರ್ಥಮಾಡಿಕೊಳ್ಳುತ್ತಾನೆಂಬುದನ್ನು ನಾನು ಅರಿತುಕೊಂಡಂತೆ, ಈ ಲೇಖನವು ನನಗೆ ಬಲವನ್ನೂ ಸಾಂತ್ವನವನ್ನೂ ನೀಡಿದೆ. ಅಪೊಸ್ತಲ ಪೌಲನು ಕೂಡ ಇಂಥದ್ದೇ ವ್ಯಥೆಗಳನ್ನು ಅನುಭವಿಸಿದನೆಂಬುದನ್ನು ನಾನು ತಿಳಿದುಕೊಂಡೆ. ಸಕಾಲದಲ್ಲಿ ಯೆಹೋವನು ನನ್ನ ಗಾಯಗಳನ್ನು ವಾಸಿಮಾಡುವನು ಎಂಬ ಭರವಸೆ ನನಗಿದೆ.

ಎಸ್‌. ಬಿ., ಕೆನಡ

ಈ ದುಷ್ಟ ವ್ಯವಸ್ಥೆಯಲ್ಲಿ, ಆತ್ಮಿಕ ವಿಷಯಗಳ ಮೇಲಿನ ಗಮನವನ್ನು ಕೇಂದ್ರೀಕರಿಸಲು ತಪ್ಪಿಹೋಗುವುದು ಬಹು ಸುಲಭ. ಲೇಖನವು ನನಗೆ ಬಹಳ ಪ್ರೋತ್ಸಾಹದಾಯಕವೂ ಪ್ರಚೋದಿಸುವಂಥದ್ದೂ ಆಗಿತ್ತು. ಇತ್ತೀಚೆಗೆ, ಜೀವಿತದ ದಿನನಿತ್ಯದ ವ್ಯಾಕುಲತೆಗಳಿಂದ ನಾನು ಬಹಳ ಒತ್ತಡಕ್ಕೊಳಗಾಗಿದ್ದೇನೆ. ಈ ಲೇಖನವು, ನಾವು ನಮ್ಮ ಅಪರಿಪೂರ್ಣ ಭಾವನೆಗಳ ಮೇಲೆ ಆತುಕೊಳ್ಳುವುದಕ್ಕಿಂತಲೂ ಯೇಸುವಿನ ಪ್ರೀತಿಯ ಮೇಲೆ ಆತುಕೊಳ್ಳುವ ಮಹತ್ತ್ವವನ್ನು ಗಣ್ಯಮಾಡುವಂತೆ ನನಗೆ ಸಹಾಯಮಾಡಿತು.

ಎ. ಎಮ್‌., ಅಮೆರಿಕ

ರಾಸಾಯನಿಕ ಅಸಮತೋಲನದ ಮೂಲಕ ಉಂಟಾದ ಖಿನ್ನತೆಯಿಂದ ನಾನು ಕಷ್ಟಾನುಭವಿಸುತ್ತೇನೆ. ಈ ಲೇಖನವು ನಾನು ನನ್ನ ಖಿನ್ನತೆಯೊಂದಿಗೆ ವ್ಯವಹರಿಸುವುದರಲ್ಲಿ ಮತ್ತೊಂದು ಹೆಜ್ಜೆಯನ್ನು ತೆಗೆದುಕೊಳ್ಳುವಂತೆ ಸಹಾಯಮಾಡಿದೆ.

ಬಿ. ಯು., ಅಮೆರಿಕ

ರೇಡಿಯೋ “ರೇಡಿಯೋ—ಜಗತ್ತನ್ನೇ ಬದಲಾಯಿಸಿದ ಒಂದು ಕಂಡುಹಿಡಿತ” (ನವೆಂಬರ್‌ 8, 1996) ಎಂಬ ಅತ್ಯುತ್ಕೃಷ್ಟ ಲೇಖನಕ್ಕಾಗಿ ನಿಮಗೆ ತುಂಬ ಉಪಕಾರ. ನಾನು 18 ವರ್ಷ ಪ್ರಾಯದವನು ಹಾಗೂ ರೇಡಿಯೋವನ್ನು ಆಲಿಸಲು ನನಗೆ ತುಂಬ ಇಷ್ಟ. ರೇಡಿಯೋವಿನ ವಿಕಸನೆಯ ಕುರಿತಾದ ಚರ್ಚೆಯು ತುಂಬ ಆಸಕ್ತಿಭರಿತವಾಗಿರುವುದನ್ನು ನಾನು ಕಂಡುಕೊಂಡೆ. ರಾಜ್ಯದ ಸುವಾರ್ತೆಯನ್ನು ಹಬ್ಬಿಸಲು ಹಿಂದೆ ಯೆಹೋವನ ಸಾಕ್ಷಿಗಳು ರೇಡಿಯೋವನ್ನು ಉಪಯೋಗಿಸುತ್ತಿದ್ದರು ಎಂಬ ವಿಷಯವನ್ನು ತಿಳಿದುಕೊಳ್ಳುವುದು ವಿಶೇಷವಾಗಿ ಆಸಕ್ತಿಭರಿತವಾಗಿತ್ತು.

ಎಫ್‌. ಬಿ., ಇಟಲಿ

ಚಿಟ್ಟೆಗಳು ನಾನು ವ್ಯವಸಾಯ ಕ್ಷೇತ್ರವೊಂದರಲ್ಲಿ ಒಬ್ಬನೇ ಸಾರುತ್ತಿದ್ದೆ ಮತ್ತು “ನಾಜೂಕು ಆದರೂ ದಿಟ್ಟವಾದ ಪ್ರವಾಸಿ” (ನವೆಂಬರ್‌ 8, 1996) ಎಂಬ ಲೇಖನವನ್ನು ಎತ್ತಿತೋರಿಸಲು ನಿರ್ಧರಿಸಿದೆ. ನಾನು ಒಬ್ಬ ಗಟ್ಟಿಮುಟ್ಟಾದ ರೈತನನ್ನು ಭೇಟಿಯಾದೆ—ಅವನು ಸಾಮಾನ್ಯವಾಗಿ ನಾನು ಚಿಟ್ಟೆಗಳ ಕುರಿತಾಗಿ ಮಾತಾಡುತ್ತಿದ್ದ ಒಬ್ಬ ವ್ಯಕ್ತಿಯಂತಿರಲಿಲ್ಲ! ಆದರೂ ಅವನು ಆ ಕಣ್ಣುಕೋರೈಸುವ ಚಿತ್ರಗಳನ್ನು ನೋಡಿದ ಅನಂತರ, ಅವನು ಆ ಪತ್ರಿಕೆಗಳನ್ನು ತೆಗೆದುಕೊಂಡು, ತನ್ನ ಹೊಲದಲ್ಲಿ ಚಿಟ್ಟೆಗಳ ಅನೇಕ ವಿರಳ ಜಾತಿಗಳನ್ನು ಕಂಡುಕೊಳ್ಳಸಾಧ್ಯವಿದೆ ಎಂದು ಹೇಳಿದನು. ನಾನು ಅಲ್ಲಿಂದ ಹೊರಟಾಗ, ಅವನ ಪತ್ನಿಯು ಪತ್ರಿಕೆಯನ್ನು ಓದುವುದರಲ್ಲಿ ತಲ್ಲೀನಳಾಗಿದ್ದಳು. ಆದುದರಿಂದ, ನಾನು ಚಿಟ್ಟೆಯಂತೆ ಹಿಂದಿರುಗಿ, ದೇವರ ರಾಜ್ಯದ ಕುರಿತಾದ ಹೆಚ್ಚಿನ ವಿಷಯವನ್ನು ಅವರಿಗೆ ತೋರಿಸುವೆ!

ಬಿ. ಬಿ., ಇಂಗ್ಲೆಂಡ್‌

ಇದು ನಾನು ಓದಿರುವ ಲೇಖನಗಳಲ್ಲಿಯೇ ಅತ್ಯಂತ ಆನಂದದಾಯಕ ಲೇಖನವಾಗಿತ್ತು. ಪತ್ರಿಕೆಯು ಬಂದ ಸ್ವಲ್ಪ ದಿನಗಳ ಅನಂತರ, ನಮ್ಮ ಮರಗಳು ಮಾನರ್ಕ್‌ ಚಿಟ್ಟೆಗಳಿಂದ ಆವರಿಸಲ್ಪಟ್ಟಿರುವುದನ್ನು ನಾನು ಗಮನಿಸಿದೆ! ನಾನು ದೇವರಿಗೆ ಆತನ ಅದ್ಭುತಕರ ಸೃಷ್ಟಿಗಾಗಿ ಉಪಕಾರಸಲ್ಲಿಸಿದೆ.

ಎಸ್‌. ಎಮ್‌., ಅಮೆರಿಕ

ದುಷ್ಟತನವು ಅನುಮತಿಸಲ್ಪಟ್ಟಿದೆ “ಯುವ ಜನರು ಪ್ರಶ್ನಿಸುವುದು . . . ಕೆಟ್ಟ ಸಂಗತಿಗಳು ಸಂಭವಿಸುವಂತೆ ದೇವರು ಬಿಡುವುದೇಕೆ?” (ನವೆಂಬರ್‌ 8, 1996) ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ. ಸ್ತ್ರೀಯರನ್ನು ಗೌರವಿಸದ ಒಬ್ಬ ಅವಿಶ್ವಾಸಿ ಪತಿಯೊಡನೆ ವಿವಾಹದ 18 ವರ್ಷಗಳ ಕಾಲ ಒಂಟಿತನ, ಅವಮಾನ ಹಾಗೂ ತುಂಬ ದುಃಖವನ್ನು ಅನುಭವಿಸಿದ ಅನಂತರ, ಯೆಹೋವನು ನಮ್ಮ ಕುರಿತಾಗಿ ಕಾಳಜಿವಹಿಸುವ ಒಬ್ಬ ಪ್ರೀತಿಪರ ದೇವರು ಎಂಬ ವಿಷಯವನ್ನು ಓದುವುದು ವಾಸಿಕಾರಕ ಮುಲಾಮಿನ ಹಾಗೆ ಇತ್ತು. ಅದು ಯೆಹೋವನೇ ನನ್ನನ್ನು ಸಂತೈಸುತ್ತಿದ್ದನೋ ಎಂಬಂತ್ತಿತ್ತು.

ಎಚ್‌. ಟಿ., ಅಮೆರಿಕ

ಸಿಗರೇಟ್‌ಗಳು “ಸಿಗರೇಟ್‌ಗಳು—ನೀವು ಅವನ್ನು ನಿರಾಕರಿಸುತ್ತೀರೊ?” (ನವೆಂಬರ್‌ 8, 1996) ಎಂಬ ಲೇಖನದ ಬಗ್ಗೆ ಹೇಳಿಕೆಯನ್ನು ನೀಡಲು ನಾನು ಬಯಸುತ್ತೇನೆ. ಇದು ವರ್ಷಗಳ ಹಿಂದೆ ನನ್ನಲ್ಲಿ ಇರದಿದ್ದದ್ದು ಎಂಥ ಒಂದು ಶೋಚನೀಯ ವಿಷಯ! ಈ ವರ್ಷ ನನ್ನ ಪತಿ ಶ್ವಾಸಕೋಶದ ಕ್ಯಾನ್ಸರಿನಿಂದ ಸತ್ತರು. ಅವರು 50 ವರ್ಷಗಳ ಕಾಲ ಭಾರೀ ಧೂಮಪಾನಿಗಳಾಗಿದ್ದರು. ಸಿಗರೇಟ್‌ಗಳು ಅಂಥ ಒಂದು ವಿಧ್ವಂಸಕಾರಕ ಪರಿಣಾಮವನ್ನು ಪಡೆದಿದ್ದವು ಎಂಬುದು ಸ್ವತಃ ನನಗೇ ಗೊತ್ತಿರಲಿಲ್ಲ.

ಎಚ್‌. ಜಿ., ಜರ್ಮನಿ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ