ಜಗತ್ತನ್ನು ಗಮನಿಸುವುದು
ಭವಿಷ್ಯತ್ತಿನ ಕುರಿತಾದ ಅಭಿಪ್ರಾಯಗಳು
21ನೇ ಶತಮಾನದ ಸಮೀಪಿಸುವಿಕೆಯೊಂದಿಗೆ, ಭವಿಷ್ಯತ್ತಿನ ಕುರಿತಾದ ಅಭಿಪ್ರಾಯಗಳ ಉಕ್ಕೇರುವಿಕೆಯಿದೆ. ಅಮೆರಿಕದಲ್ಲಿ ನ್ಯೂಸ್‌ವೀಕ್‌ನಿಂದ ನಡೆಸಲ್ಪಟ್ಟ ಸಮೀಕ್ಷೆಯೊಂದರಲ್ಲಿ, ಜನರಿಗೆ ಮುಂದಿನ ಶತಮಾನಕ್ಕಾಗಿರುವ ಅವರ ನಿರೀಕ್ಷಣೆಗಳನ್ನು ಕೇಳಲಾಯಿತು. ಸಮೀಕ್ಷೆನಡೆಸಲ್ಪಟ್ಟವರಲ್ಲಿ ಸುಮಾರು 64 ಪ್ರತಿಶತ ಮಂದಿ, ಅಂತರಿಕ್ಷಯಾನಿಗಳು ಮಂಗಳ ಗ್ರಹದ ಮೇಲೆ ನಡೆಯುವರು ಎಂದು ಕಾಲಜ್ಞಾನ ಹೇಳುತ್ತಾರೆ. ಸುಮಾರು 55 ಪ್ರತಿಶತ ಮಂದಿ, ಮಾನವರು ವಿಶ್ವದಲ್ಲಿನ ಇತರ ಸ್ಥಾನಗಳಲ್ಲಿ ಕ್ರಮೇಣವಾಗಿ ವಾಸಿಸುವರು ಎಂದು ನಿರೀಕ್ಷಿಸುತ್ತಾರೆ. ಏಡ್ಸ್ ಔಷಧವನ್ನು ವಿಜ್ಞಾನಿಗಳು ಕಂಡುಹಿಡಿಯುವರೆಂದು ಎಪ್ಪತ್ತು ಪ್ರತಿಶತ ಮಂದಿ ನೆನಸುತ್ತಾರೆ ಹಾಗೂ 72 ಪ್ರತಿಶತ ಮಂದಿ, ಕ್ಯಾನ್ಸರ್ ಔಷಧವು ವಿಕಸನಗೊಳ್ಳುವುದೆಂದು ಕಾಲಜ್ಞಾನ ಹೇಳುತ್ತಾರೆ. ಹೆಚ್ಚು ನಿರಾಶಾವಾದಿ ಅವಲೋಕನೆಯೇನೆಂದರೆ, ಸಂದರ್ಶಿಸಲ್ಪಟ್ಟವರಲ್ಲಿ 73 ಪ್ರತಿಶತ ಮಂದಿ, ಧನಿಕ ಹಾಗೂ ಬಡವರ ಮಧ್ಯೆ ಒಂದು ದೊಡ್ಡ ಅಂತರವನ್ನು ನಿರೀಕ್ಷಿಸುತ್ತಾರೆ, ಹಾಗೂ 48 ಪ್ರತಿಶತ ಮಂದಿ, ಕಳೆದ 100 ವರ್ಷಗಳಲ್ಲಿ ಸಂಭವಿಸಿದುದಕ್ಕಿಂತ ಹೆಚ್ಚು ಯುದ್ಧಗಳನ್ನು ಎದುರುನೋಡುತ್ತಾರೆ. ಸುಮಾರು 70 ಪ್ರತಿಶತ ಮಂದಿ, ಮಾನವನು ಲೋಕದ ಹಸಿವನ್ನು ತೆಗೆದುಹಾಕಲು ಅಸಮರ್ಥನಾಗಿರುವನು ಎಂದು ನೆನಸುತ್ತಾರೆ.
“ಪ್ರಾಮಾಣಿಕ” ವಂಚನೆ
ಆರ್ಜೆಂಟೀನದಲ್ಲಿರುವ ವಿಮಾ ಕಂಪನಿಗಳು, ತಮ್ಮ ಗಿರಾಕಿಗಳ ವತಿಯಿಂದ ನಡೆಸಲ್ಪಡುವ ವಂಚನೆಯ ಕೆಲಸಗಳಿಂದ ಪ್ರತಿ ವರ್ಷ ಸುಮಾರು 20 ಕೋಟಿ ಡಾಲರುಗಳ ನಷ್ಟವನ್ನು ಅನುಭವಿಸುತ್ತಿವೆ. ಫಲಸ್ವರೂಪವಾಗಿ, ಮೋಟಾರುಗಾಡಿ ವಿಮೆಯು ಹೆಚ್ಚಿನ ಇತರ ದೇಶಗಳಲ್ಲಿರುವುದಕ್ಕಿಂತಲೂ ಹತ್ತಿರ ಹತ್ತಿರ 30 ಪ್ರತಿಶತ ಹೆಚ್ಚಾಗಿರುತ್ತದೆ. ಆಂಬೀಟೋ ಫೀನಾಸ್ಯೇರೋ ಎಂಬ ವಾರ್ತಾಪತ್ರಿಕೆಗನುಸಾರ, “ನಡೆಸಲ್ಪಟ್ಟ ವಂಚನೆಗಳಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟು, ‘ಪ್ರಾಮಾಣಿಕ ನಾಗರಿಕರು’ ಎಂದು ಕರೆಯಲ್ಪಡುವವರ ಕೆಲಸವಾಗಿದೆ.” ವಿಮೆಯನ್ನು ಪಡೆದಿರುವವರಲ್ಲಿ ಸುಮಾರು 40 ಪ್ರತಿಶತ ಮಂದಿ ಒಂದಲ್ಲ ಒಂದು ವಿಧದಲ್ಲಿ ತಮ್ಮ ವಿಮಾ ಕಂಪನಿಯನ್ನು ದುರುಪಯೋಗಿಸಿದ್ದಾರೆಂದು ಹೇಳಲಾಗಿದೆ. ಅಂಥ ವಂಚನೆಯ ಕಾರ್ಯವು, ತಮ್ಮ ವಿಮಾ ಕಂಪನಿಗಳಿಂದ ತಾವು ಮೋಸಗೊಳಿಸಲ್ಪಟ್ಟಿದ್ದೇವೆಂದು ನೆನಸುವ ಅಸಂತೃಪ್ತ ಗಿರಾಕಿಗಳ ಒಂದು ರೀತಿಯ ಪ್ರತೀಕಾರವನ್ನು ಪ್ರತಿನಿಧಿಸುತ್ತದೆ ಎಂದು ಆ ವಾರ್ತಾಪತ್ರಿಕೆಯು ಮುಕ್ತಾಯಗೊಳಿಸುತ್ತದೆ.
ಜಪಾನಿನಲ್ಲಿ ಮನುಷ್ಯರು ಪೂರ್ವ ಸ್ಥಿತಿಗೆ ಹಿಂದಿರುಗುತ್ತಾರೆ
“ಜಪಾನಿನ ಕೈಗಾರಿಕೆಯಲ್ಲಿ ಒಂದು ಪ್ರಧಾನವಾದ ಬದಲಾವಣೆಯು ಆಗುತ್ತಿದೆ” ಎಂದು ಫಾರ್ ಈಸ್ಟರ್ನ್ ಇಕೊನಾಮಿಕ್ ರಿವ್ಯೂ ವಾರ್ತಾಪತ್ರಿಕೆಯು ಗಮನಿಸುತ್ತದೆ. “ಎರಡು ದಶಕಗಳಿಂದ, ಜಪಾನೀಯರ ಕೈಗಾರಿಕೆಗಳು ಮನುಷ್ಯರ ಸ್ಥಾನದಲ್ಲಿ ಯಂತ್ರಗಳನ್ನು ಸ್ಥಾನಪಲ್ಲಟಮಾಡುವ ಮೂಲಕ ಫಲಕಾರಿತ್ವವನ್ನು ಬೆನ್ನಟ್ಟಿವೆ. ಈಗ ಮನುಷ್ಯನು ಪೂರ್ವ ಸ್ಥಿತಿಗೆ ಹಿಂದಿರುಗುತ್ತಿದ್ದಾನೆ. ಕೆಲವು ಬೃಹತ್ ತಯಾರಕರು ಯಂತ್ರಮಾನವರನ್ನು ಜೋಡಣೆಯ ಸಾಲುಗಳಿಂದ ವಾಸ್ತವವಾಗಿ ತೆಗೆದುಹಾಕುತ್ತಾ, ಅವುಗಳ ಸ್ಥಾನದಲ್ಲಿ ಮನುಷ್ಯರನ್ನು ಸ್ಥಾನಪಲ್ಲಟಗೊಳಿಸುತ್ತಿದ್ದಾರೆ.” ಏಕೆ? ಏಕೆಂದರೆ ಯಂತ್ರಮಾನವರಲ್ಲಿ ಇಲ್ಲದಿರುವ ಒಂದು ವಿಷಯವು ಮನುಷ್ಯರಲ್ಲಿದೆ—ನಮ್ಯತೆ. ಉತ್ಪನ್ನದ ಒಂದು ಮಾದರಿಯನ್ನು ಬದಲಾಯಿಸುವ ಸಂಬಂಧದಲ್ಲಿ, ಯಂತ್ರಮಾನವರನ್ನು ಪುನರ್‌ಜೋಡಣೆ ಮಾಡುವುದು ತಿಂಗಳಾನುಗಟ್ಟಲೆ ಸಮಯವನ್ನು ತೆಗೆದುಕೊಳ್ಳುವಾಗ, ಮನುಷ್ಯರು ಶೀಘ್ರವಾಗಿ ಅದಕ್ಕೆ ಹೊಂದಿಕೊಳ್ಳಬಲ್ಲರು. “ಯಂತ್ರಮಾನವರನ್ನು ಉಪಯೋಗಿಸುವುದಕ್ಕಿಂತಲೂ ಮೊದಲು ನಾವು ಜನರನ್ನು ಯಂತ್ರಮಾನವರಂತೆ ಉಪಯೋಗಿಸಲು ಪ್ರಾರಂಭಿಸಿದೆವು” ಎಂದು ಎನ್‌ಈಸಿಯ ಕಾರ್ಖಾನೆಯ ಅಧ್ಯಕ್ಷರಾದ ಟಾಮೀಯಾಕೀ ಮಿಸೂಕಾಮೀ ಹೇಳುತ್ತಾರೆ. “ಆದರೆ ನಾವು ಈಗ ಅವರ ಬುದ್ಧಿಶಕ್ತಿಯನ್ನು ಉಪಯೋಗಿಸಬೇಕೆಂಬುದನ್ನು ಮನಗಂಡಿದ್ದೇವೆ. ಯಂತ್ರಮಾನವರನ್ನು ಉಪಯೋಗಿಸುವುದು ಒಳ್ಳೆಯದ್ದಾಗಿತ್ತು ಆದರೆ ಜನರನ್ನು ಉಪಯೋಗಿಸುತ್ತಿರುವುದು ನಿಜವಾಗಿಯೂ ಹೆಚ್ಚು ಶೀಘ್ರವಾಗಿದೆ ಎಂಬುದನ್ನು ನಾವು ಈಗ ಕಂಡುಹಿಡಿಯುತ್ತಿದ್ದೇವೆ.” ಉದಾಹರಣೆಗೆ, ಎನ್‌ಈಸಿಯಲ್ಲಿರುವ ಕೆಲಸಗಾರರು ಯಂತ್ರಮಾನವರು ಜೋಡಿಸಸಾಧ್ಯವಿರುವುದಕ್ಕಿಂತಲೂ 45 ಪ್ರತಿಶತ ಹೆಚ್ಚು ಪರಿಣಾಮಕಾರಿಯಾಗಿ ಫೋನ್‌ಗಳನ್ನು ಜೋಡಿಸಬಲ್ಲರೆಂದು ಕಂಡುಕೊಳ್ಳಲಾಯಿತು. ಜನರು ಯಂತ್ರಗಳಿಗೆ ಬೇಕಾಗಿರುವ ಸ್ಥಳಕ್ಕಿಂತಲೂ ಕಡಿಮೆ ಸ್ಥಳವನ್ನು ತೆಗೆದುಕೊಳ್ಳುತ್ತಾರೆ ಹಾಗೂ ಜಟಿಲವಲ್ಲದ ಯಂತ್ರಗಳು ಕೇವಲ ಕೆಲವೇ ಮೆಕ್ಯಾನಿಕ್‌ಗಳು ಹಾಗೂ ತೀರ ಕಡಿಮೆ ದುರಸ್ತು ಖರ್ಚುಗಳಲ್ಲಿ ಫಲಿಸುತ್ತವೆ. “ಕಡಿಮೆ ಯಂತ್ರೀಕರಣದೊಂದಿಗೆ ಪ್ರಯೋಗವನ್ನು ಮಾಡಿದ ಎರಡು ಅಥವಾ ಮೂರು ವರ್ಷಗಳ ಅನಂತರ, ತಯಾರಕರು ಹೆಚ್ಚು ಮೊತ್ತದ ಹಣ ಉಳಿತಾಯಗಳನ್ನು ಹಾಗೂ ಉತ್ಪನ್ನ ಹೆಚ್ಚಳವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ” ಎಂದು ಆ ಪತ್ರಿಕೆಯು ಹೇಳುತ್ತದೆ.
ಸಾಯುತ್ತಿರುವ ಒಂದು ಸಮುದ್ರ
ಮೃತ ಸಮುದ್ರವು ಇಂಗಿಹೋಗುತ್ತಿದೆ. “ಈಗಾಗಲೇ ಭೂಮಿಯ ಮೇಲಿರುವ ಅತ್ಯಂತ ಕಡಿಮೆ ಮಟ್ಟದ ಜಲರಾಶಿಯಾದ, (ಲೋಕದ ಸಾಗರಗಳ ಮಧ್ಯಸ್ಥ ಮಟ್ಟಕ್ಕಿಂತಲೂ 410 ಮೀಟರುಗಳಷ್ಟು ಕೆಳಮಟ್ಟ) ಮೃತ ಸಮುದ್ರದ ಮೇಲ್ಮೈ ಒಂದೇ ಸಮನೆ ಕೆಳಗಿಳಿಯುತ್ತಿದೆ” ಎಂದು ಯು.ಎಸ್.ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಹೇಳುತ್ತದೆ. ಏಕೆ? ಬಾಷ್ಪೀಕರಣದ ಪರಿಣಾಮಗಳಲ್ಲದೆ, ಹಲವಾರು ನೀರಾವರಿ ವ್ಯವಸ್ಥೆಗಳು ಹಾಗೂ ಅಣೆಕಟ್ಟುಗಳು ನೀರನ್ನು ಮೃತ ಸಮುದ್ರದ ನೀರಿನ ಪ್ರಮುಖ ಆಕರವಾದ, ಜಾರ್ಡನ್ ನದಿಯಿಂದ ಬೇರೆ ಕಡೆಗೆ ತಿರುಗಿಸುತ್ತವೆ. ಹಾಗೂ “ಖನಿಜಗಳನ್ನು ಹೊರತೆಗೆಯಲಿಕ್ಕಾಗಿ ಬಾಷ್ಪೀಕರಣ ಕೊಳಗಳ ಒಳಗೆ ಮೃತ ಸಮುದ್ರದ ನೀರನ್ನು ಪಂಪ್ ಮಾಡುವ ರಾಸಾಯನಿಕ ಕೈಗಾರಿಕೆಗಳು ಇಂಗುವಿಕೆಯನ್ನು ತ್ವರಿತಗೊಳಿಸಿವೆ.” 1950ಗಳ ಮಧ್ಯಭಾಗದಿಂದ ಮೃತ ಸಮುದ್ರದ ಮೇಲ್ಮೈ ಸುಮಾರು 20 ಮೀಟರುಗಳಷ್ಟು ಕೆಳಗೆ ಇಳಿದಿದೆ. ಪ್ರಸ್ತುತದಲ್ಲಿ ಚರ್ಚಾಸ್ಪದವಾಗಿರುವ ಒಂದು ದೋಷಪರಿಹಾರಕ ಹೆಜ್ಜೆಯೇನೆಂದರೆ, ಕೆಂಪು ಸಮುದ್ರದಿಂದ ನೀರನ್ನು ತರಲಿರುವ 190 ಕಿಲೊಮೀಟರುಗಳ ನಾಲೆಯ ನಿರ್ಮಾಣವೇ. ಆ ನೀರನ್ನು 120 ಲಂಬ ಮೀಟರುಗಳಷ್ಟು ಎತ್ತರಕ್ಕೆ ಪಂಪುಮಾಡಬೇಕಾಗುವುದು ಹಾಗೂ ಅನಂತರ ಮೃತ ಸಮುದ್ರದೊಳಕ್ಕೆ 530 ಲಂಬ ಮೀಟರುಗಳಷ್ಟು ಕೆಳಗೆ ಇಳಿಸಬೇಕಾಗುವುದು.
ವಿಶ್ವೌಷಧ ಸಿಕ್ಕಿಬಿಟ್ಟಿತೇ?
ಒಂದು ಮುದ್ರಿತ ವರದಿಗನುಸಾರ, “ರಕ್ತದೊತ್ತಡವನ್ನು ಶೀಘ್ರವಾಗಿಯೂ ಔಷಧಗಳಷ್ಟೇ ಪರಿಣಾಮಕಾರಿಯಾಗಿ ಕಡಿಮೆಗೊಳಿಸಲು ಪ್ರಥಮ ಬಾರಿಗೆ, ಕೊಬ್ಬಿನಾಂಶದಲ್ಲಿ ಕಡಿಮೆ ಹಾಗೂ ಹಣ್ಣುಗಳು ಮತ್ತು ಕಾಯಿಪಲ್ಯಗಳಲ್ಲಿ ಸಮೃದ್ಧವಾದ ಒಂದು ಆಹಾರಪಥ್ಯವು ಕಂಡುಹಿಡಿಯಲ್ಪಟ್ಟಿದೆ” ಎಂದು ದ ನ್ಯೂ ಯಾರ್ಕ್ ಟೈಮ್ಸ್ ವರದಿಸುತ್ತದೆ. ರಾಷ್ಟ್ರೀಯ ಹೃದಯ, ಶ್ವಾಸಕೋಶ, ಹಾಗೂ ರಕ್ತ ಸಂಘದಲ್ಲಿ, ನಿವಾರಣಾ ವೈಜ್ಞಾನಿಕ ಸಂಶೋಧನಾ ಗುಂಪಿನ ಮುಖ್ಯಸ್ಥೆಯಾಗಿರುವ ಡೆನೀಸ್ ಸೈಮನ್ ಮಾರ್ಟನ್, “ಒಂದೇ ಆಹಾರಪಥ್ಯವು ಎಲ್ಲವನ್ನೂ ಮಾಡಬಹುದು”—ಹೃದ್ರೋಗ, ಅಧಿಕ ರಕ್ತದೊತ್ತಡ, ಹಾಗೂ ಅನೇಕ ಕ್ಯಾನ್ಸರುಗಳನ್ನು ತಡೆಗಟ್ಟಲು ಸಹಾಯಮಾಡಬಹುದಾಗಿ ಒಂದು ಅಧ್ಯಯನವು ಸಲಹೆನೀಡುತ್ತದೆ ಎಂದು ಹೇಳುತ್ತಾರೆ. ಆ ವಿಶ್ಲೇಷಣವು ದೇಶದಾದ್ಯಂತವಿರುವ ಆರು ವೈದ್ಯಕೀಯ ಕೇಂದ್ರಗಳಲ್ಲಿ ನೂರಾರು ವಯಸ್ಕರ ಪಥ್ಯಕ್ರಮ ಬದಲಾವಣೆಗಳನ್ನು ಪರೀಕ್ಷಿಸಿತು. ಭಾಗಿದಾರರನ್ನು ಮೂರು ಗುಂಪುಗಳನ್ನಾಗಿ ಪ್ರತ್ಯೇಕಿಸಲಾಯಿತು. ಒಂದು ಗುಂಪಿಗೆ “ಸರಿಸುಮಾರು” ಅಮೆರಿಕದ ಆಹಾರಪಥ್ಯಕ್ಕೆ ತದ್ರೀತಿಯದ್ದಾದ ಒಂದು ಆಹಾರಪಥ್ಯವನ್ನು ನೀಡಲಾಯಿತು. ಎರಡನೇ ಗುಂಪಿಗೆ ಹಣ್ಣುಗಳಲ್ಲಿ ಹಾಗೂ ಕಾಯಿಪಲ್ಯಗಳಲ್ಲಿ ಸಮೃದ್ಧವಾಗಿರುವ ಆದರೆ ಇತರ ಎಲ್ಲ ಐಟಮ್‌ಗಳು ಅಮೆರಿಕನ್ ಪಥ್ಯದಂತೆ ಇದ್ದ ಒಂದು ಆಹಾರಪಥ್ಯವನ್ನು ನೀಡಲಾಯಿತು. ಮೂರನೇ ಗುಂಪಿಗೆ ಹಣ್ಣುಗಳಲ್ಲಿ, ಕಾಯಿಪಲ್ಯಗಳಲ್ಲಿ ಸಮೃದ್ಧವಾಗಿರುವ ಹಾಗೂ ಸಂಪೂರ್ಣ ಕೊಬ್ಬು, ಕೊಲೆಸ್ಟರಾಲ್, ಹಾಗೂ ಪರ್ಯಾಪ್ತ ಕೊಬ್ಬಿನಲ್ಲೂ ಕಡಿಮೆಯಾಗಿದ್ದ ಕಡಿಮೆ ಕೊಬ್ಬಿನಾಂಶದ ಹೈನು ಪದಾರ್ಥಗಳನ್ನು ನೀಡಲಾಯಿತು. ಎರಡನೇ ಹಾಗೂ ಮೂರನೇ ಗುಂಪುಗಳಿಗೆ—ಎರಡಕ್ಕೂ—ವೈದ್ಯಕೀಯವಾಗಿ ಗಮನಾರ್ಹವಾಗಿದ್ದ ರಕ್ತದೊತ್ತಡದ ತಗ್ಗುವಿಕೆಗಳಿದ್ದವಾದರೂ, ಮೂರನೇ ಗುಂಪಿನ ಆಹಾರಪಥ್ಯವು ಅತ್ಯುತ್ತಮ ಫಲಿತಾಂಶಗಳನ್ನು ತೋರಿಸಿತು. ಅಧಿಕ ರಕ್ತದೊತ್ತಡವನ್ನು ಹೊಂದಿದ್ದ ಭಾಗಿದಾರರಿಗಾದರೋ, ಫಲಿತಾಂಶಗಳು ಔಷಧದ್ರವ್ಯವನ್ನು ಬಳಸಿ ಪಡೆದುಕೊಂಡ ಫಲಿತಾಂಶಗಳಷ್ಟೇ ಒಳ್ಳೆಯದಾಗಿದ್ದವು ಅಥವಾ ಅದಕ್ಕಿಂತಲೂ ಇನ್ನೂ ಉತ್ತಮವಾಗಿದ್ದವು. ಆ ಎರಡು ಆಹಾರಪಥ್ಯಗಳು ಪ್ರತಿ ದಿನ ಹಣ್ಣುಗಳ ಹಾಗೂ ಕಾಯಿಪಲ್ಯಗಳ ಒಂಬತ್ತರಿಂದ ಹತ್ತು ನಿಷ್ಕರ್ಷಿತ ಭಾಗಗಳನ್ನು ಒಳಗೊಂಡವು.
ಐರೋಪ್ಯ ಧೂಮಪಾನಿಗಳು
ಐರೋಪ್ಯ ಹಾಗೂ ಚೀನಾದ ನಾಗರಿಕರು ಏಕಾಂಶವಾಗಿ ಲೋಕದ ಅತ್ಯಂತ ಹೆಚ್ಚು ಹೊಗೆಸೊಪ್ಪು ಸೇವನೆಯನ್ನು ಮಾಡುವವರಾಗಿದ್ದಾರೆ ಎಂದು ಫ್ರ್ಯಾಂಕ್‌ಫರ್ಟ್ ಜರ್ಮನಿಯ, ನಾಸ್ಯುಯಿಶಿ ನೊಯೆ ಪ್ರಿಸಿ ವರದಿಸುತ್ತದೆ. ಐರೋಪ್ಯ ಒಕ್ಕೂಟದಲ್ಲಿ ಪುರುಷರಲ್ಲಿ 42 ಪ್ರತಿಶತ ಹಾಗೂ ಸ್ತ್ರೀಯರಲ್ಲಿ 28 ಪ್ರತಿಶತ ಮಂದಿ ಧೂಮಪಾನಮಾಡುತ್ತಾರೆ. ಆದರೂ, ಪ್ರತಿಶತಗಳು, 25ರಿಂದ 39ರ ವಯಸ್ಸಿನ ಗುಂಪಿನೊಳಗೆ ಪರಿಗಣನೀಯವಾಗಿ ಹೆಚ್ಚಾಗಿವೆ. ಧೂಮಪಾನವು ಪ್ರತಿ ವರ್ಷ ಜರ್ಮನಿಯಲ್ಲಿ 1,00,000 ಜನರನ್ನು ಹಾಗೂ ಬ್ರಿಟನಿನಲ್ಲಿ ಬೇರೆ 1,00,000 ಜನರನ್ನು ಕೊಲ್ಲುತ್ತದೆ. ಇತ್ತೀಚೆಗೆ, ಅನೇಕ ವರ್ಷಗಳಿಂದ ಭಾರೀ ಧೂಮಪಾನಿಗಳಾಗಿದ್ದ, ಚೆಕ್ ರಿಪಬ್ಲಿಕ್‌ನ ರಾಷ್ಟ್ರಾಧ್ಯಕ್ಷರಾದ ವಾಟ್ಸ್‌ಸ್ಲಾಫ್ ಹ್ಯಾವಲ್‌ಗೆ ಶ್ವಾಸಕೋಶದ ಕ್ಯಾನ್ಸರಿಗಾಗಿ ಚಿಕಿತ್ಸೆನೀಡಲಾಯಿತು. ಧೂಮಪಾನದ ದುರಭ್ಯಾಸವನ್ನು ಬಿಟ್ಟುಬಿಡುವುದರಲ್ಲಿ ಸಫಲನಾಗುವ ಯಾರನ್ನೇ ಆಗಲಿ ತಾನು ಶ್ಲಾಘಿಸುತ್ತೇನೆಂದು ಧೂಮಪಾನ ಅಥವಾ ಆರೋಗ್ಯ ಎಂದು ಕರೆಯಲ್ಪಡುವ ಐರೋಪ್ಯ ಕಾರ್ಯಾಚರಣೆಗೆ ಆ ರಾಷ್ಟ್ರಾಧ್ಯಕ್ಷರು ಬರೆದರು ಎಂದು ಸ್ಯೂಡಾಚಿ ಟ್ಸೈಟುಂಗ್ ವರದಿಸುತ್ತದೆ.
ಕೀಟನಾಶಕ ಅಪಾಯಗಳು
ಫಿಲಿಪ್ಪೀನ್ಸ್‌ನಲ್ಲಿರುವ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಘಕ್ಕನುಸಾರ, ರೈತರು ಯಾವುದೇ ಕೀಟನಾಶಕಗಳನ್ನು ಉಪಯೋಗಿಸದೇ ಇದ್ದರೂ ಅಕ್ಕಿ ಉತ್ಪಾದನೆಯು ಅದೇ ರೀತಿ ಉಳಿಯುವುದು. ಬೆಳೆಗಳಿಗೆ ತುಂಬ ಸಿಂಪಡಿಸುವಿಕೆಯು ಪೋಲುಮಾಡುವಿಕೆಯೂ ಅನಾವಶ್ಯಕವೂ ಆದದ್ದಾಗಿದೆ ಎಂದು ಅಕ್ಕಿ ಸಂಘವನ್ನು ಹೊಂದಿರುವ ಒಬ್ಬ ವಿಜ್ಞಾನಿಯು, ಫಿಲಿಪ್ಪೀನ್ಸ್‌ನಲ್ಲಿ ನಡೆದ ಲೋಕ ಆಹಾರ ಶೃಂಗಸಭೆಗೆ ಹೇಳಿದನು. ರೈತರು ವರ್ಷದ ತಪ್ಪಾದ ಸಮಯದಲ್ಲಿ ಸಿಂಪಡಿಸುತ್ತಾರೆ ಮಾತ್ರವಲ್ಲ, ಅವರು ವಾಸ್ತವವಾಗಿ ತಪ್ಪಾದ ಕೀಟಗಳನ್ನು ಕೊಲ್ಲುತ್ತಾರೆ ಎಂದು ನ್ಯೂ ಸೈಎಂಟಿಸ್ಟ್ ಪತ್ರಿಕೆಯು ವರದಿಸುತ್ತದೆ. ಅಷ್ಟುಮಾತ್ರವಲ್ಲದೆ, ರಾಸಾಯನಿಕಗಳನ್ನು ಹಚ್ಚುವಾಗ ಅನೇಕ ರೈತರು ರಾಸಾಯನಿಕಗಳನ್ನು ಸಿಂಪಡಿಸಲಿಕ್ಕಾಗಿರುವ ಸುರಕ್ಷಾ ಸಲಹೆಯನ್ನು ಅಲಕ್ಷಿಸುತ್ತಾರೆ ಮತ್ತು ಸುಲಭವಾಗಿ ಒಳಸೇದಿಕೊಳ್ಳಸಾಧ್ಯವಿರುವ ಸೂಕ್ಷ್ಮ ಸಿಂಪಡಿಸುವಿಕೆಗಳನ್ನು ಉಪಯೋಗಿಸುತ್ತಾರೆ ಅಥವಾ ಮಣ್ಣಿನೊಂದಿಗೆ ಸಸ್ಯನಾಶಕಗಳನ್ನು ಮಿಶ್ರಣಮಾಡಿ, ಅದನ್ನು ಕೈಯಿಂದ ಹರಡಿಸುತ್ತಾರೆ. ಲೋಕವ್ಯಾಪಕವಾಗಿ ಕೀಟನಾಶಕಗಳು ಪ್ರಸ್ತುತದಲ್ಲಿ ಪ್ರತಿ ವರ್ಷ 2,20,000 ಮರಣಗಳನ್ನು ಹಾಗೂ 30 ಲಕ್ಷ ಗಂಭೀರತರದ ವಿಷಪ್ರಯೋಗಗಳನ್ನು ಉಂಟುಮಾಡುತ್ತವೆ ಎಂದು ಲೋಕಾರೋಗ್ಯ ಸಂಸ್ಥೆಯು ವರದಿಸುತ್ತದೆ.
ಗದ್ದಲದಿಂದ ಅಸ್ವಸ್ಥರೋ?
ಬ್ರಿಟನಿನ ನ್ಯೂ ಸೈಎಂಟಿಸ್ಟ್ ಪತ್ರಿಕೆಯಲ್ಲಿ ವರದಿಸಲ್ಪಟ್ಟ ವಿಶ್ಲೇಷಣೆಗಳಿಗನುಸಾರ, ಗದ್ದಲಕ್ಕೆ ಒಡ್ಡಲ್ಪಡುವುದು, ಸಂಬಂಧಸೂಚಕವಾಗಿ ಕಡಿಮೆ ಮಟ್ಟಗಳಲ್ಲಿಯೂ, ನಿಮ್ಮನ್ನು ಅಸ್ವಸ್ಥರನ್ನಾಗಿ ಮಾಡಬಲ್ಲದು. ಅಂಥ ಕಂಡುಹಿಡಿತಗಳನ್ನು ಪರಿಗಣಿಸುತ್ತಾ, ಲೋಕಾರೋಗ್ಯ ಸಂಸ್ಥೆಯು ರಾತ್ರಿಹೊತ್ತಿನ ಸುರಕ್ಷಿತ ಗದ್ದಲ ಮಟ್ಟಗಳ ಕುರಿತಾದ ತನ್ನ ಮಾರ್ಗದರ್ಶನ ಸೂತ್ರಗಳನ್ನು ಪುನರ್‌ಪರಿಶೀಲಿಸಿದೆ. ತುಂಬ ಚಿಂತೆಯ ವಿಷಯವು, ಮಕ್ಕಳು ವಿಶೇಷವಾದ ಅಪಾಯದಲ್ಲಿರಬಹುದು ಎಂಬುದನ್ನು ಸೂಚಿಸುವ ಪುರಾವೆಯೇ ಆಗಿದೆ. ಮ್ಯೂನಿಕ್‌ನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಹತ್ತಿರ ವಾಸಿಸುತ್ತಿರುವ ಮಕ್ಕಳಿಗೆ ಅಧಿಕ ರಕ್ತದೊತ್ತಡ ಹಾಗೂ ನಿರ್ನಾಳ ಗ್ರಂಥಿಯ ಹಾರ್ಮೋನ್‌ಗಳ ಹೆಚ್ಚು ಪ್ರಮಾಣದ ಮಟ್ಟಗಳು, ಇವೆರಡೂ ಇದ್ದವು ಎಂಬುದನ್ನು ಒಂದು ಅಧ್ಯಯನವು ಕಂಡುಕೊಂಡಿತು. ಆ ಮಕ್ಕಳು ತಮ್ಮ ವಾಚನ ಕೌಶಲಗಳ ಹಾಗೂ ದೀರ್ಘಕಾಲದ ಜ್ಞಾಪಕಶಕ್ತಿಯ ದುರ್ಬಲತೆಯಿಂದ ಕಷ್ಟಾನುಭವಿಸಿದರೆಂಬುದನ್ನೂ ಸಂಶೋಧಕರು ಕಂಡುಕೊಂಡರು. ಗದ್ದಲಕ್ಕೆ ಹೊಂದಿಕೊಳ್ಳುವಂತೆ ತೋರುವ ಜನರು—ಹಾಗೆ ಮಾಡುವುದರಿಂದ ಅಂಥವರು—“ಯಾವಾಗಲೂ ತಮ್ಮ ವ್ಯವಸ್ಥೆಗೆ ಹಾನಿಯನ್ನು ತಂದುಕೊಳ್ಳುತ್ತಾರೆ” ಎಂದು ಗದ್ದಲ ವಿಶೇಷಜ್ಞೆಯಾದ ಆರ್‌ಲೀನ್ ಬ್ರಾನ್ಸ್‌ಫ್ಟ್ ಹೇಳುತ್ತಾರೆ. “ಗದ್ದಲವು ಒತ್ತಡಭರಿತವಾಗಿದೆ ಹಾಗೂ ಕಟ್ಟಕಡೆಗೆ ಒಂದಲ್ಲ ಒಂದು ವಿಧದಲ್ಲಿ ಶರೀರವು ಒತ್ತಡಕ್ಕೆ ಮಣಿಯುತ್ತದೆ.”
ರಕ್ತರಹಿತ ಔಷಧ
“ರಕ್ತದಿಂದ ಉಂಟಾಗುವ ವ್ಯಾಧಿಯ ಭಯಗಳನ್ನು ಹಾಗೂ ದಾನಮಾಡಲ್ಪಟ್ಟ ರಕ್ತದ ನಿರಂತರ ಕೊರತೆಗಳು, ಸಾಧ್ಯವಿರುವಲ್ಲೆಲ್ಲಾ ಪೂರಣಗಳನ್ನು ನಿರ್ಮೂಲನಮಾಡಲು ಒಂದು ಪ್ರಧಾನವಾದ ಪ್ರಯತ್ನವನ್ನು ಹೊತ್ತಿಸಿವೆ” ಎಂದು ದ ಗ್ಲೋಬ್ ಆ್ಯಂಡ್ ಮೆಯ್ಲ್ ವಾರ್ತಾಪತ್ರಿಕೆಯು ವರದಿಸುತ್ತದೆ. ರಕ್ತರಹಿತ ಔಷಧ ಹಾಗೂ ಶಸ್ತ್ರಚಿಕಿತ್ಸೆಯು, ರಕ್ತ ನಷ್ಟದ ಸೂಕ್ಷ್ಮ ನಿಯಂತ್ರಣದ ಮೇಲೆ ಅವಲಂಬಿಸುತ್ತದೆ ಹಾಗೂ “ಅನೇಕ ಹೊಸ ವಿಧಾನಗಳು ಮೂಲತಃ ಯೆಹೋವನ ಸಾಕ್ಷಿಗಳಿಗೆ ಚಿಕಿತ್ಸೆನೀಡಲು ವಿಕಸಿಸಲ್ಪಟ್ಟವು” ಎಂದು ಗ್ಲೋಬ್ ಹೇಳುತ್ತದೆ. ವೊಟಾವಾ ಹೃದಯ ಸಂಘದ—ರಕ್ತರಹಿತ ಶಸ್ತ್ರಚಿಕಿತ್ಸೆ ಕಾರ್ಯಕ್ರಮಗಳನ್ನು ಕಾರ್ಯಗತಮಾಡುವ ಅನೇಕ ಆಸ್ಪತ್ರೆಗಳಲ್ಲಿ ಒಂದಾಗಿರುವ—ವಿಶ್ವವಿದ್ಯಾನಿಲಯದಲ್ಲಿರುವ ಅರಿವಳಿಕೆ ತಜ್ಞರಾದ, ಡಾ. ಜೇಮ್ಸ್ ಎ. ರಾಬ್ಲೀ ಒಪ್ಪಿಕೊಂಡದ್ದು: “ಈ ವಿಷಯದ ಸಂಬಂಧದಲ್ಲಿ ಅವರು [ಯೆಹೋವನ ಸಾಕ್ಷಿಗಳು] ನಮ್ಮ ಜಾಗೃತಿಯನ್ನು ಮಹತ್ತರವಾಗಿ ಕೆರಳಿಸಿದ್ದಾರೆ ಎಂಬುದಾಗಿ ನಾನು ನಿಜವಾಗಿಯೂ ಭಾವಿಸುತ್ತೇನೆ.”
ಲೋಕದ ಅತ್ಯಂತ ಮಹಾನ್ ಸೆರೆಮನೆ ಅಧಿಕಾರಿಗಳು
1995ರಲ್ಲಿ ಅಮೆರಿಕದ ಪ್ರತಿ 1,00,000 ನಿವಾಸಿಗಳಿಗೆ 615 ಜನರು ಸೆರೆಮನೆಯಲ್ಲಿದ್ದರು ಎಂದು ಯು.ಎಸ್. ಜಸ್ಟಿಸ್ ಡಿಪಾರ್ಟ್‌ಮೆಂಟ್ ಹೇಳುತ್ತದೆ. ಇದು ಲೋಕದ ಅತ್ಯಂತ ಹೆಚ್ಚಿನ ಪ್ರಮಾಣವನ್ನಾಗಿ ಮಾಡುತ್ತಾ, 1985ರ ಕಾರಾಗೃಹವಾಸದ ಸಂಖ್ಯಾಪ್ರಮಾಣದ ಇಮ್ಮಡಿಯಾಗಿದೆ ಎಂದು ದ ವಾಲ್ ಸ್ಟ್ರೀಟ್ ಜರ್ನಲ್ ವರದಿಸುತ್ತದೆ. ಲಭ್ಯವಿರುವ ತೀರ ಇತ್ತೀಚಿನ ದತ್ತಾಂಶದ ಮೇಲಾಧಾರಿಸಿ (1994), ಪ್ರತಿ 1,00,000ಕ್ಕೆ 590ರಂತೆ, ರಷ್ಯ ದೇಶವು ಎರಡನೆಯ ಸ್ಥಾನದಲ್ಲಿದೆ.
ಪುನರಾವರ್ತವು ಉಪಯುಕ್ತವಾಗಿದೆ
ಕರಾಕಸ್ ವೆನೆಸ್ವಲದ ವಾರ್ತಾಪತ್ರಿಕೆಯಾದ ಎಲ್ ಯೂನೀವರ್ಸಾಲ್‌ಗನುಸಾರ ಅಲ್ಯೂಮಿನಿಯಮ್ ಕ್ಯಾನ್‌ಗಳನ್ನು ಪುನರಾವರ್ತಿಸುವುದು, ಹೊಸ ಕ್ಯಾನ್‌ಗಳನ್ನು ಮಾಡಲು ಉಪಯೋಗಿಸುವ ಶಕ್ತಿಯ 90 ಪ್ರತಿಶತ ಶಕ್ತಿಯನ್ನು ಉಳಿತಾಯಮಾಡುತ್ತದೆ. ಕಾಗದವನ್ನು ಪುನರಾವರ್ತಿಸುವುದು ಸಹ ಜೀವಿಪರಿಸ್ಥಿತಿಶಾಸ್ತ್ರವನ್ನು ಉಪಯುಕ್ತವನ್ನಾಗಿ ಮಾಡುತ್ತದೆ. ಹೊಸ ಕಾಗದವನ್ನು ಉತ್ಪಾದಿಸಲಿಕ್ಕೆ ಉಪಯೋಗಿಸಲ್ಪಡುವ ಶಕ್ತಿಗಿಂತಲೂ ಐವತ್ತು ಪ್ರತಿಶತ ಕಡಿಮೆ ಶಕ್ತಿಯು ಕಾಗದವನ್ನು ಪುನರಾವರ್ತಿಸಲು ಉಪಯೋಗಿಸಲ್ಪಡುತ್ತದೆ, ಜಲಮಾಲಿನ್ಯವು 58 ಪ್ರತಿಶತದಷ್ಟು ಕಡಿಮೆಗೊಳಿಸಲ್ಪಡುತ್ತದೆ ಹಾಗೂ ವಾಯುಮಾಲಿನ್ಯವು 74 ಪ್ರತಿಶತದಷ್ಟು ಇಳಿಸಲ್ಪಡುತ್ತದೆ. ಗಾಜು ಇನ್ನೂ ಉತ್ತಮವಾದದ್ದಾಗಿದೆ ಏಕೆಂದರೆ ಅದು ಸಂಪೂರ್ಣವಾಗಿ ಪದೇ ಪದೇ ಪುನರಾವರ್ತಿಸಲ್ಪಡಸಾಧ್ಯವಿದೆ.