ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 3/8 ಪು. 5-7
  • “ಸುಮ್ಮನೆ ಕುಳಿತು ಗಮನ ಕೊಡಿ!”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಸುಮ್ಮನೆ ಕುಳಿತು ಗಮನ ಕೊಡಿ!”
  • ಎಚ್ಚರ!—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಏಡಿಏಚ್‌ಡಿಯನ್ನು ಯಾವುದು ಉಂಟುಮಾಡುತ್ತದೆ?
  • ಏಡಿಏಚ್‌ಡಿ ತರುಣ ಮತ್ತು ವಯಸ್ಕ
  • ಪಂಥಾಹ್ವಾನವನ್ನು ಎದುರಿಸುವುದು
    ಎಚ್ಚರ!—1997
  • ನಮ್ಮ ವಾಚಕರಿಂದ
    ಎಚ್ಚರ!—1998
  • ಕಲಿಕೆಯ ವಿಕಲತೆಯುಳ್ಳ ಮಕ್ಕಳಿಗೆ ಸಹಾಯ
    ಎಚ್ಚರ!—2009
  • ನಾನು ಏಕೆ ಕಲಿಯಲಾರೆ?
    ಎಚ್ಚರ!—1996
ಇನ್ನಷ್ಟು
ಎಚ್ಚರ!—1997
g97 3/8 ಪು. 5-7

“ಸುಮ್ಮನೆ ಕುಳಿತು ಗಮನ ಕೊಡಿ!”

ನ್ಯೂನ ಗಮನ ಅತಿಕ್ರಿಯಾಶೀಲತೆ ಅಸ್ವಸ್ಥತೆಯೊಂದಿಗೆ ಜೀವಿಸುವುದು

“ಕಾಲ್‌, ಅತಿಯಾದ ಮುದ್ದಿನಿಂದ ಕೆಟ್ಟುಹೋಗಿದ್ದನೆಂದು ಮತ್ತು ನಾವು—ಅಂದರೆ ನಾನು—ಅವನ ಮೇಲೆ ಶಿಸ್ತಿನ ಕ್ರಮಕೈಕೊಳ್ಳುವಲ್ಲಿ ಅವನ ವರ್ತನೆಯು ಉತ್ತಮಗೊಳ್ಳುವುದೆಂದು ಜಿಮ್‌ ಯಾವಾಗಲೂ ಹೇಳುತ್ತಿದ್ದರು. ಆದರೆ ಈ ವೈದ್ಯನು, ಅದು ನನ್ನ ತಪ್ಪಾಗಲಿ, ನಮ್ಮ ತಪ್ಪಾಗಲಿ, ಕಾಲ್‌ನ ಶಿಕ್ಷಕರ ತಪ್ಪಾಗಲಿ ಅಲ್ಲ, ನಿಜವಾಗಿಯೂ ನಮ್ಮ ಚಿಕ್ಕ ಹುಡುಗನಲ್ಲಿ ಏನೋ ತಪ್ಪಾಗಿತ್ತೆಂದು ನಮಗೆ ಹೇಳುತ್ತಿದ್ದಾನೆ.”

ಕಾಲ್‌, ನ್ಯೂನ ಗಮನ ಅತಿಕ್ರಿಯಾಶೀಲತೆ ಅಸ್ವಸ್ಥತೆ (ಏಡಿಏಚ್‌ಡಿ)ಯಿಂದ ಕಷ್ಟಾನುಭವಿಸುತ್ತಾನೆ. ಇದು ಅನವಧಾನತೆ, ಆವೇಗಪರ ವರ್ತನೆ, ಮತ್ತು ಅತಿಕ್ರಿಯಾಶೀಲತೆಯಿಂದ ವೈಲಕ್ಷಣ್ಯವಾಗಿರುವ ಸ್ಥಿತಿಯಾಗಿದೆ. ಈ ಅಸ್ವಸ್ಥತೆಯು, ಎಲ್ಲ ಶಾಲಾ ವಯಸ್ಸಿನ ಮಕ್ಕಳಲ್ಲಿ 3ರಿಂದ 5 ಪ್ರತಿಶತ ಮಕ್ಕಳನ್ನು ಬಾಧಿಸುತ್ತದೆಂದು ಅಂದಾಜುಮಾಡಲಾಗಿದೆ. “ಅವರ ಮನಸ್ಸುಗಳು, ಕೆಟ್ಟುಹೋದ ಚ್ಯಾನಲ್‌ ಆಯ್ಕೆಮಾಡುವ ಯಂತ್ರಗಳುಳ್ಳ ಟಿವಿ ಸೆಟ್ಟುಗಳಂತಿವೆ,” ಎಂಬುದಾಗಿ ಕಲಿಕೆಯ ವಿಶೇಷಜ್ಞೆ ಪ್ರಿಸಿಲ್ಲಾ ಎಲ್‌. ವೇಲ್‌ ಹೇಳುತ್ತಾರೆ. “ಒಂದು ಆಲೋಚನೆಯು ಮತ್ತೊಂದಕ್ಕೆ—ಯಾವುದೇ ಕ್ರಮ ಇಲ್ಲವೆ ಸುವ್ಯವಸ್ಥೆಯಿಲ್ಲದೆ—ನಡೆಸುತ್ತದೆ.”

ನಾವು ಏಡಿಏಚ್‌ಡಿಯ ಮೂರು ಪ್ರಧಾನ ರೋಗಲಕ್ಷಣಗಳನ್ನು ಸಂಕ್ಷಿಪ್ತವಾಗಿ ಪರಿಗಣಿಸೋಣ.

ಅನವಧಾನತೆ: ಏಡಿಏಚ್‌ಡಿ ಪೀಡಿತ ಮಗುವಿಗೆ, ಪ್ರಮುಖವಲ್ಲದ ವಿವರವನ್ನು ಕಡೆಗಣಿಸಿ, ಒಂದು ವಿಷಯದ ಮೇಲೆ ಮನನೆಡಲು ಸಾಧ್ಯವಿಲ್ಲ. ಹೀಗೆ, ಅವನು ಬಾಹ್ಯ ನೋಟಗಳು, ಶಬ್ದಗಳು, ಮತ್ತು ವಾಸನೆಗಳಿಂದ ಸುಲಭವಾಗಿ ಅಪಕರ್ಷಿಸಲ್ಪಡುತ್ತಾನೆ.a ಅವನು ಗಮನ ನೀಡುತ್ತಾ ಇದ್ದಾನೆ, ಆದರೆ ಯಾವ ನಿರ್ದಿಷ್ಟ ವಿಷಯವೂ ಅವನ ಗಮನವನ್ನು ಸೆಳೆಯುವುದಿಲ್ಲ. ಯಾವ ವಿಷಯವು ಅವನ ಆದ್ಯ ಏಕಾಗ್ರತೆಗೆ ಯೋಗ್ಯವಾಗಿದೆ ಎಂಬುದನ್ನು ಅವನಿಗೆ ನಿರ್ಧರಿಸಲು ಸಾಧ್ಯವಿಲ್ಲ.

ಆವೇಗಪರ ವರ್ತನೆ: ಏಡಿಏಚ್‌ಡಿ ಪೀಡಿತ ಮಗುವು, ಪರಿಣಾಮಗಳನ್ನು ಪರಿಗಣಿಸದೆಯೇ, ತಾನು ಯೋಚನೆಮಾಡುವ ಮೊದಲು ಕ್ರಿಯೆಗೈಯುತ್ತಾನೆ. ಅವನು ನ್ಯೂನ ಯೋಜನೆ ಹಾಗೂ ಅಭಿಪ್ರಾಯವುಳ್ಳವನಾಗಿದ್ದು, ಕೆಲವೊಮ್ಮೆ ಅವನ ಕ್ರಿಯೆಗಳು ಅಪಾಯಕಾರಿಯಾಗಿರುತ್ತವೆ. “ಅವನು ಬೀದಿಯ ಕಡೆಗೆ ನುಗ್ಗುತ್ತಾನೆ, ಗೋಡೆಚಾಚನ್ನು ಹತ್ತುತ್ತಾನೆ, ಮರವನ್ನೇರುತ್ತಾನೆ,” ಎಂಬುದಾಗಿ ಡಾ. ಪೌಲ್‌ ವೆಂಡರ್‌ ಬರೆಯುತ್ತಾರೆ. “ಫಲಸ್ವರೂಪವಾಗಿ, ಅವನು ಅನೇಕ ಅನಾವಶ್ಯಕ ಗಾಯಗಳನ್ನು, ಪೆಟ್ಟುಗಾಯಗಳನ್ನು, ಉಜ್ಜುಗಾಯಗಳನ್ನು ಪಡೆದಿದ್ದು, ಹಲವಾರು ಬಾರಿ ವೈದ್ಯರ ಬಳಿಗೆ ಹೋಗುತ್ತಾನೆ.”

ಅತಿಕ್ರಿಯಾಶೀಲತೆ: ಅತಿಕ್ರಿಯಾಶೀಲ ಮಕ್ಕಳು ಸತತವಾಗಿ ಚಡಪಡಿಸುತ್ತಿರುತ್ತಾರೆ. ಅವರಿಗೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. “ಅವರು ದೊಡ್ಡವರಾಗಿರುವಾಗಲೂ, ಒಬ್ಬನು ಅವರನ್ನು ಜಾಗರೂಕವಾಗಿ ವೀಕ್ಷಿಸುವಲ್ಲಿ, ಅವರ ಕಾಲುಗಳು, ಪಾದಗಳು, ಬಾಹುಗಳು, ಕೈಗಳು, ತುಟಿಗಳು ಇಲ್ಲವೆ ನಾಲಿಗೆಯನ್ನೊಳಗೊಂಡ ಯಾವುದೊ ಬಗೆಯ ನಿರಂತರವಾದ ಚಲನೆಯನ್ನು ಒಬ್ಬನು ಗಮನಿಸುವನು,” ಎಂಬುದಾಗಿ ಗುಪ್ತವಾಗಿರುವ ದೌರ್ಬಲ್ಯ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಡಾ. ಗಾರ್ಡನ್‌ ಸರ್ಫನ್ಟಿನ್‌ ಬರೆಯುತ್ತಾರೆ.

ಆದರೂ, ಅನವಧಾನರೂ ಆವೇಗಪರರೂ ಆಗಿರುವ ಕೆಲವು ಮಕ್ಕಳು, ಅತಿಕ್ರಿಯಾಶೀಲರಾಗಿರುವುದಿಲ್ಲ. ಅವರ ಅಸ್ವಸ್ಥತೆಯು ಕೆಲವೊಮ್ಮೆ ಕೇವಲ ನ್ಯೂನ ಗಮನ ಅಸ್ವಸ್ಥತೆ, ಅಥವಾ ಏಡಿಡಿ ಎಂಬುದಾಗಿ ಸೂಚಿಸಲ್ಪಡುತ್ತದೆ. ಡಾ. ರಾನಲ್ಡ್‌ ಗೋಲ್ಡ್‌ಬರ್ಗ್‌ ವಿವರಿಸುವುದೇನೆಂದರೆ, ಏಡಿಡಿ “ಯಾವ ಅತಿಕ್ರಿಯಾಶೀಲತೆಯೂ ಇಲ್ಲದೆ ಸಂಭವಿಸಬಲ್ಲದು. ಇಲ್ಲವೆ ಅದು ಅತಿಕ್ರಿಯಾಶೀಲತೆಯ ಯಾವುದೇ ಮಟ್ಟ—ಗಮನಾರ್ಹವೂ ಆಗಿರದ ಮಟ್ಟದಿಂದ, ಹೆಚ್ಚುಕಡಿಮೆ ರೇಗಿಸುವ ಮಟ್ಟ, ಇದರಿಂದ ಹೆಚ್ಚಾಗಿ ಅಶಕ್ತಮಾಡುವ ಮಟ್ಟದೊಂದಿಗೆ ಸಂಭವಿಸಬಲ್ಲದು.”

ಏಡಿಏಚ್‌ಡಿಯನ್ನು ಯಾವುದು ಉಂಟುಮಾಡುತ್ತದೆ?

ಅನೇಕ ವರ್ಷಗಳಿಂದ, ಗಮನದ ಕುರಿತಾದ ಸಮಸ್ಯೆಗಳು, ಹೆತ್ತವರ ವತಿಯ ನ್ಯೂನ ಪರಾಮರಿಕೆಯಿಂದ ಹಿಡಿದು ಅಗೋಚರ ಕಿರಣ ಸ್ಫುರಣ (ಫ್ಲೂಒರೆಸೆಂಟ್‌)ದಿಂದ ಹೊರಡುವ ಬೆಳಕಿನ ವರೆಗೆ, ಎಲ್ಲ ವಿಷಯಗಳ ಮೇಲೆ ಆಧ್ಯಾರೋಪಿಸಲ್ಪಟ್ಟಿವೆ. ಏಡಿಏಚ್‌ಡಿಯು, ಮಿದುಳಿನ ನಿರ್ದಿಷ್ಟ ಕಾರ್ಯಗಳಲ್ಲಿನ ಅಡಚಣೆಗಳೊಂದಿಗೆ ಸಂಬಂಧಿಸಿದೆ ಎಂಬುದಾಗಿ ಈಗ ನೆನಸಲಾಗಿದೆ. 1990ರಲ್ಲಿ, ಮಾನಸಿಕ ಆರೋಗ್ಯದ ರಾಷ್ಟ್ರೀಯ ಸಂಸ್ಥೆಯು, ಏಡಿಏಚ್‌ಡಿಯ ರೋಗಲಕ್ಷಣಗಳುಳ್ಳ 25 ವಯಸ್ಕರನ್ನು ಪರೀಕ್ಷಿಸಿತು. ಮತ್ತು ಚಲನೆ ಹಾಗೂ ಗಮನವನ್ನು ನಿಯಂತ್ರಿಸುವ ಮಿದುಳಿನ ಕ್ಷೇತ್ರಗಳಲ್ಲಿಯೇ ಆ ವಯಸ್ಕರು ಗ್ಲುಕೋಸನ್ನು ಬಹಳ ನಿಧಾನವಾಗಿ ಪರಿವರ್ತಿಸಿದರೆಂಬುದನ್ನು ಕಂಡುಕೊಂಡಿತು. ಏಡಿಏಚ್‌ಡಿಯ ಸುಮಾರು 40 ಪ್ರತಿಶತ ವಿದ್ಯಮಾನಗಳಲ್ಲಿ, ವ್ಯಕ್ತಿಯ ಆನುವಂಶೀಯ ರಚನೆಯು ಪಾತ್ರವಹಿಸುವಂತೆ ತೋರುತ್ತದೆ. ಅತಿಕ್ರಿಯಾಶೀಲ ಮಗುವಿನ ಪುಸ್ತಕ (ಇಂಗ್ಲಿಷ್‌)ಕ್ಕನುಸಾರ, ಏಡಿಏಚ್‌ಡಿಯೊಂದಿಗೆ ಸಂಬಂಧಿಸಿದ್ದಿರಬಹುದಾದ ಇತರ ಅಂಶಗಳು, ಗರ್ಭಾವಸ್ಥೆಯ ಸಮಯದಲ್ಲಿ ತಾಯಿಯು ಮದ್ಯಸಾರ ಅಥವಾ ಅಮಲೌಷಧಗಳನ್ನು ಬಳಸುವುದು, ಸೀಸ ವಿಷಪ್ರಯೋಗ, ಮತ್ತು ಕೆಲವು ವಿದ್ಯಮಾನಗಳಲ್ಲಿ ಮಗುವಿನ ಆಹಾರಪಥ್ಯ ಆಗಿವೆ.

ಏಡಿಏಚ್‌ಡಿ ತರುಣ ಮತ್ತು ವಯಸ್ಕ

ಏಡಿಏಚ್‌ಡಿ ಕೇವಲ ಬಾಲ್ಯಾವಸ್ಥೆಯ ಸ್ಥಿತಿಯಾಗಿಲ್ಲವೆಂದು ವೈದ್ಯರು ಇತ್ತೀಚಿನ ವರ್ಷಗಳಲ್ಲಿ ಕಂಡುಹಿಡಿದಿದ್ದಾರೆ. ಡಾ. ಲ್ಯಾರಿ ಸಿಲ್ವರ್‌ ಹೇಳುವುದು: “ಪ್ರಾತಿನಿಧಿಕವಾಗಿ, ಹೆತ್ತವರು ಚಿಕಿತ್ಸೆಗಾಗಿ ಮಗುವೊಂದನ್ನು ಕರೆದುಕೊಂಡು ಬಂದು, ಹೀಗೆ ಹೇಳುವರು, ‘ನಾನು ಮಗುವಾಗಿದ್ದಾಗ ಅದೇ ರೀತಿಯಲ್ಲಿ ವರ್ತಿಸುತ್ತಿದ್ದೆ.’ ತಮಗೆ ಸಾಲಿನಲ್ಲಿ ನಿಂತುಕೊಳ್ಳುವ, ಕೂಟಗಳಲ್ಲಿ ಕುಳಿತುಕೊಳ್ಳುವ, ಕೆಲಸವೊಂದನ್ನು ಪೂರ್ಣಗೊಳಿಸುವ ವಿಷಯದಲ್ಲಿ ಇನ್ನೂ ಸಮಸ್ಯೆಗಳಿವೆ ಎಂಬುದಾಗಿ ಅವರು ನಂತರ ಒಪ್ಪಿಕೊಳ್ಳುವರು.” ಏಡಿಏಚ್‌ಡಿಯಿರುವ ಎಲ್ಲ ಮಕ್ಕಳಲ್ಲಿ ಸುಮಾರು ಅರ್ಧದಷ್ಟು ಮಕ್ಕಳು, ಅವರ ರೋಗಲಕ್ಷಣಗಳಲ್ಲಿ ಕಡಿಮೆಪಕ್ಷ ಕೆಲವನ್ನಾದರೂ ತಾರುಣ್ಯ ಹಾಗೂ ಪ್ರಾಪ್ತವಯಸ್ಕತೆಗೆ ಕೊಂಡೊಯ್ಯುವರೆಂದು ಈಗ ನಂಬಲಾಗಿದೆ.

ತಾರುಣ್ಯದಲ್ಲಿ, ಏಡಿಏಚ್‌ಡಿಯುಳ್ಳವರು ಅಪಾಯಕರ ವರ್ತನೆಯಿಂದ ಅಪರಾಧಕ್ಕೆ ಬದಲಾಗಬಹುದು. “ಅವನಿಗೆ ಕಾಲೇಜಿನಲ್ಲಿ ಪ್ರವೇಶ ಸಿಗಲಿಕ್ಕಿಲ್ಲವೆಂದು ನಾನು ಚಿಂತಿಸುತ್ತಿದ್ದೆ, ಆದರೆ ಈಗ ಅವನು ಸೆರೆಮನೆಯಿಂದ ದೂರವಿದ್ದರೆ ಸಾಕೆಂದು ನಾನು ಪ್ರಾರ್ಥಿಸುತ್ತೇನೆ,” ಎಂಬುದಾಗಿ ಒಬ್ಬ ಏಡಿಏಚ್‌ಡಿ ತರುಣನ ತಾಯಿಯು ಹೇಳುತ್ತಾಳೆ. ಅಂತಹ ಭೀತಿಗಳು ಸಮಂಜಸವಾಗಿರಬಹುದೆಂಬುದು, 103 ಅತಿಕ್ರಿಯಾಶೀಲ ಯುವ ಜನರನ್ನು ಆ ಅಸ್ವಸ್ಥತೆಯಿರದ 100 ಮಕ್ಕಳ ಒಂದು ಆಧಾರ ಗುಂಪಿನೊಂದಿಗೆ ಹೋಲಿಸುವ ಒಂದು ಅಧ್ಯಯನದಿಂದ ತೋರಿಸಲಾಯಿತು. ನ್ಯೂಸ್‌ವೀಕ್‌ ವರದಿಸುವುದು, “ತಮ್ಮ 20ರ ಆದಿಭಾಗದೊಳಗೆ, ಅತಿಕ್ರಿಯಾಶೀಲ ಗುಂಪಿನ ಮಕ್ಕಳಿಗೆ ದಸ್ತಗಿರಿ ದಾಖಲುಗಳನ್ನು ಪಡೆಯುವ ಸಾಧ್ಯತೆ ಎರಡರಷ್ಟು, ಘೋರಾಪರಾಧ ನಿರ್ಣಯಗಳನ್ನು ಪಡೆಯುವ ಸಾಧ್ಯತೆ ಐದರಷ್ಟು ಮತ್ತು ಸೆರೆಮನೆಯಲ್ಲಿ ಶಿಕ್ಷೆಯನ್ನು ಅನುಭವಿಸುವ ಸಾಧ್ಯತೆ ಒಂಬತ್ತರಷ್ಟು ಇರುತ್ತದೆ.”

ಒಬ್ಬ ವಯಸ್ಕನಿಗೆ, ಏಡಿಏಚ್‌ಡಿ ವಿಶೇಷ ಸಮಸ್ಯೆಗಳ ಮೊತ್ತವನ್ನು ಒಡ್ಡುತ್ತದೆ. ಡಾ. ಎಡ್ನಾ ಕೋಪ್ಲೆಂಡ್‌ ಹೇಳುವುದು: “ಅತಿಕ್ರಿಯಾಶೀಲನಾದ ಹುಡುಗನು, ಉದ್ಯೋಗಗಳನ್ನು ಪದೇ ಪದೇ ಬದಲಾಯಿಸುವ, ಕೆಲಸದಿಂದ ಬಹಳ ಸಲ ತೆಗೆದುಹಾಕಲ್ಪಡುವ, ದಿನವಿಡೀ ಸುಮ್ಮನೆ ಕೈಯಾಡಿಸುತ್ತಿರುವ ಮತ್ತು ತಳಮಳಿಸುತ್ತಿರುವ ಒಬ್ಬ ವಯಸ್ಕನಾಗಿ ಪರಿಣಮಿಸಬಹುದು.” ಕಾರಣವನ್ನು ಅರ್ಥಮಾಡಿಕೊಳ್ಳದಿದ್ದಾಗ, ಈ ರೋಗಲಕ್ಷಣಗಳು ಒಂದು ವಿವಾಹದ ಮೇಲೆ ಒತ್ತಡವನ್ನು ಹೇರಬಲ್ಲವು. “ಸಾಮಾನ್ಯ ಸಂಭಾಷಣೆಗಳಲ್ಲಿ, ನಾನು ಹೇಳುತ್ತಿದ್ದ ಎಲ್ಲವನ್ನು ಅವನು ಕೇಳಿಸಿಕೊಳ್ಳುತ್ತಿರಲಿಲ್ಲ ಸಹ. ಅದು, ಅವನು ಸದಾ ಬೇರೆಲ್ಲಿಯೊ ಇದ್ದಂತೆ ಇರುತ್ತಿತ್ತು,” ಎಂಬುದಾಗಿ ಏಡಿಏಚ್‌ಡಿಯಿರುವ ಒಬ್ಬ ಪುರುಷನ ಹೆಂಡತಿಯು ಹೇಳುತ್ತಾಳೆ.

ನಿಶ್ಚಯವಾಗಿಯೂ, ಈ ವಿಶೇಷಗುಣಗಳು ಅನೇಕ ಜನರಿಗೆ—ಕಡಿಮೆಪಕ್ಷ ಒಂದಿಷ್ಟು ಮಟ್ಟಿಗೆ—ಸಾಮಾನ್ಯವಾಗಿರುತ್ತವೆ. “ಈ ರೋಗಲಕ್ಷಣಗಳು ಸದಾ ಇದ್ದವುಗಳಾಗಿವೆಯೊ ಎಂಬುದನ್ನು ನೀವು ಕೇಳಿ ತಿಳಿಯಬೇಕೆಂದು,” ಡಾ. ಜಾರ್ಜ್‌ ಡೋರಿ ಹೇಳುತ್ತಾರೆ. ಉದಾಹರಣೆಗೆ, ಒಬ್ಬ ಮನುಷ್ಯನು ತನ್ನ ಉದ್ಯೋಗವನ್ನು ಕಳೆದುಕೊಂಡ ಸಮಯದಿಂದ ಇಲ್ಲವೆ ತನ್ನ ಹೆಂಡತಿಯು ಒಂದು ಮಗುವನ್ನು ಹೆತ್ತ ಸಮಯದಿಂದ ಮರೆಯುವ ಸ್ವಭಾವದವನಾಗಿ ಪರಿಣಮಿಸಿದ್ದರೆ, ಅದೊಂದು ಅಸ್ವಸ್ಥತೆಯಾಗಿರುವುದಿಲ್ಲ ಎಂದು ಅವರು ಗಮನಿಸುತ್ತಾರೆ.

ಇನ್ನೂ ಹೆಚ್ಚಾಗಿ, ಒಬ್ಬನಿಗೆ ನಿಜವಾಗಿಯೂ ಏಡಿಏಚ್‌ಡಿಯಿರುವಲ್ಲಿ, ರೋಗಲಕ್ಷಣಗಳು ವ್ಯಾಪಕವಾಗಿರುತ್ತವೆ—ಅಂದರೆ, ಅವು ಬಹುಮಟ್ಟಿಗೆ ವ್ಯಕ್ತಿಯ ಜೀವನದ ಪ್ರತಿಯೊಂದು ವಿಷಯಾಂಶವನ್ನು ಬಾಧಿಸುತ್ತವೆ. 38 ವರ್ಷ ಪ್ರಾಯದ ಬುದ್ಧಿವಂತನೂ ಚೈತನ್ಯಶಾಲಿಯೂ ಆದ ಗ್ಯಾರಿಯ ವಿಷಯದಲ್ಲಿ ಇದು ಸತ್ಯವಾಗಿತ್ತು. ಅವನು ಒಂದು ಕೆಲಸವನ್ನೂ ಅಪಕರ್ಷಣೆಯಿಲ್ಲದೆ ಮುಗಿಸಸಾಧ್ಯವಿರುವಂತೆ ತೋರುತ್ತಿರಲಿಲ್ಲ. ಅವನು ಈಗಾಗಲೇ 120ಕ್ಕಿಂತಲೂ ಹೆಚ್ಚು ಉದ್ಯೋಗಗಳನ್ನು ಬದಲಾಯಿಸಿದ್ದಾನೆ. “ನಾನು ಯಶಸ್ಸು ಗಳಿಸಲು ಸಾಧ್ಯವೇ ಇಲ್ಲವೆಂಬ ನಿಜತ್ವವನ್ನು ಸ್ವೀಕರಿಸಿಕೊಂಡಿದ್ದೆ,” ಎಂಬುದಾಗಿ ಅವನಂದನು. ಆದರೆ ಗ್ಯಾರಿ ಮತ್ತು ಇತರ ಅನೇಕರು—ಮಕ್ಕಳು, ತರುಣರು, ಹಾಗೂ ವಯಸ್ಕರು—ಏಡಿಏಚ್‌ಡಿಯನ್ನು ನಿಭಾಯಿಸುವಂತೆ ಸಹಾಯ ಮಾಡಲ್ಪಟ್ಟಿದ್ದಾರೆ. ಹೇಗೆ?

[ಅಧ್ಯಯನ ಪ್ರಶ್ನೆಗಳು]

a ಹೆಣ್ಣುಮಕ್ಕಳಿಗಿಂತ ಹೆಚ್ಚಾಗಿ ಗಂಡುಮಕ್ಕಳು ಬಾಧಿಸಲ್ಪಡುವುದರಿಂದ, ನಾವು ಕಷ್ಟಾನುಭವಿಯನ್ನು ಪುಲ್ಲಿಂಗದಲ್ಲಿ ಸೂಚಿಸುವೆವು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ