ಯೇಸುವಿನಿಂದ ಕಲೀರಿ
ದೇವರ ಬಗ್ಗೆ ಕಲಿಯೋಕೆ ಸಮಯ ಮಾಡ್ಕೊಳ್ಳಿ
ದೇವರ ಬಗ್ಗೆ ಕಲಿಯೋಕೆ ಮತ್ತು ಆತನಿಗೆ ಫ್ರೆಂಡ್ ಆಗೋಕೆ ಸಮಯ ಮಾಡ್ಕೊಂಡ್ರೆ ನಿಮ್ಮ ಜೀವನ ಚೆನ್ನಾಗಾಗುತ್ತೆ. ನೀವು ಇದನ್ನ ಮಾಡಿದ್ರೆ ನಿಮ್ಮ ಆಧ್ಯಾತ್ಮಿಕ ಅಗತ್ಯನೂ ಪೂರೈಸಿದ ಹಾಗಾಗುತ್ತೆ. ಈ ವಿಷ್ಯದ ಬಗ್ಗೆ ಯೇಸು ಏನು ಕಲಿಸಿದನು ಅಂತ ನೋಡಿ.
ಯೇಸು ಏನು ಹೇಳಿದನು
“ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆ ಇರೋರು ಖುಷಿಯಾಗಿ ಇರ್ತಾರೆ.”—ಮತ್ತಾಯ 5:3, ಪಾದಟಿಪ್ಪಣಿ.
ನಾವೆಲ್ರೂ ಈ ಪ್ರಶ್ನೆಗಳಿಗೆ ಉತ್ರ ತಿಳ್ಕೊಳ್ಳೋಕೆ ಇಷ್ಟಪಡ್ತೀವಿ: ಜೀವನದ ಉದ್ದೇಶ ಏನು? ಯಾಕಿಷ್ಟು ಕಷ್ಟ-ಸಂಕಟ ಇದೆ? ಸತ್ತ ಮೇಲೆ ಏನಾಗುತ್ತೆ? ನಾವು ಖುಷಿಯಾಗಿ ಇರಬೇಕಂದ್ರೆ ಈ ಪ್ರಶ್ನೆಗಳಿಗೆ ಉತ್ರ ತಿಳ್ಕೊಳ್ಳಬೇಕು.
“ಮನುಷ್ಯ ರೊಟ್ಟಿ ತಿನ್ನೋದ್ರಿಂದ ಮಾತ್ರ ಅಲ್ಲ, ಯೆಹೋವನa ಬಾಯಿಂದ ಬರೋ ಪ್ರತಿಯೊಂದು ಮಾತಿಂದ ಬದುಕಬೇಕು.”—ಮತ್ತಾಯ 4:4.
ನಾವು ಬದುಕಿರೋಕೆ ಶಾರೀರಿಕ ಆಹಾರ ಎಷ್ಟು ಮುಖ್ಯನೋ ಆಧ್ಯಾತ್ಮಿಕ ಆಹಾರನೂ ಅಷ್ಟೇ ಮುಖ್ಯ. ನಮ್ಮ ಆಧ್ಯಾತ್ಮಿಕ ಅಗತ್ಯನ ಪೂರೈಸ್ಕೊಳ್ಳೋಕೆ ನಾವು ಯಾವಾಗ್ಲೂ ದೇವರ ಸಹಾಯ ಪಡ್ಕೊಬೇಕು ಅಂತ ಯೇಸು ಸ್ಪಷ್ಟವಾಗಿ ಹೇಳಿದನು.
“ನಿನ್ನ ಮಾತುಗಳೇ ಸತ್ಯ.”—ಯೋಹಾನ 17:17.
ದೇವರು ನಮ್ಮ ಆಧ್ಯಾತ್ಮಿಕ ಅಗತ್ಯನ ಪೂರೈಸೋ ಒಂದು ಮುಖ್ಯವಾದ ವಿಧ ಆತನ ವಾಕ್ಯವಾದ ಬೈಬಲಿನ ಮೂಲಕ ಅಂತ ಯೇಸು ಕಲಿಸಿದನು.
ದೇವರ ಬಗ್ಗೆ ಕಲಿಯೋಕೆ ಮತ್ತು ನಿಮ್ಮ ಆಧ್ಯಾತ್ಮಿಕ ಅಗತ್ಯ ಪೂರೈಸ್ಕೊಳ್ಳೋಕೆ ನಾವು ನಿಮ್ಮನ್ನ ಪ್ರೋತ್ಸಾಹಿಸುತ್ತೇವೆ. ಇದರಿಂದ ನಿಮಗೆ ಶಾಶ್ವತ ಸಂತೋಷ ಸಿಗುತ್ತೆ. ನಿಮಗೆ ಸಹಾಯ ಮಾಡೋ ಕೆಲವು ವಿಷ್ಯಗಳು ಇಲ್ಲಿದೆ:
ಬೈಬಲ್ ಟೀಚರ್ ಜೊತೆ ಮಾಡೋ ಉಚಿತವಾದ ವೈಯಕ್ತಿಕ ಬೈಬಲ್ ಅಧ್ಯಯನಕ್ಕಾಗಿ ವಿನಂತಿಸಿ.
a ಯೆಹೋವ ಅನ್ನೋದು ದೇವರ ಹೆಸರು. (ಕೀರ್ತನೆ 83:18) “ಯೆಹೋವ ಯಾರು?” ಅನ್ನೋ ಲೇಖನ ನೋಡಿ