ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mrt ಲೇಖನ 134
  • ಹಿಂಸೆ ಪರಿಹಾರ ಅಲ್ವೇ ಅಲ್ಲ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹಿಂಸೆ ಪರಿಹಾರ ಅಲ್ವೇ ಅಲ್ಲ!
  • ಇತರ ವಿಷಯಗಳು
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೇಸು ಏನು ಹೇಳಿದನು?
  • ಯೇಸು ಏನು ಮಾಡಿದನು ಮತ್ತು ಮುಂದೆ ಏನು ಮಾಡ್ತಾನೆ
  • ನಾವು ಬೇರೆಯವರ ಜೊತೆ ಹೇಗಿರಬೇಕು ಅಂತ ಬೈಬಲ್‌ ಹೇಳುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಒಳ್ಳೆಯದನ್ನು ಮಾಡುತ್ತಾ ಇರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಎಂದೆಂದಿಗೂ ಕೊಡಲ್ಪಟ್ಟ ಅತಿ ಪ್ರಖ್ಯಾತ ಪ್ರಸಂಗ
    ಅತ್ಯಂತ ಮಹಾನ್‌ ಪುರುಷ
  • ಕ್ರಿಸ್ತನ ಮನೋಭಾವ ನಿಮ್ಮಲ್ಲಿರಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
ಇನ್ನಷ್ಟು
ಇತರ ವಿಷಯಗಳು
mrt ಲೇಖನ 134
ಯೇಸು ಗಂಡಸರಿಗೆ, ಹೆಂಗಸರಿಗೆ ಮತ್ತು ಮಕ್ಕಳಿಗೆಲ್ಲ ಕಲಿಸ್ತಿದ್ದಾನೆ.

ಯೇಸುವಿನಿಂದ ಕಲೀರಿ

ಹಿಂಸೆ ಪರಿಹಾರ ಅಲ್ವೇ ಅಲ್ಲ!

ಗಲಾಟೆಗಳು ನಿಲ್ಲಬೇಕು, ಸಮಸ್ಯೆಗಳು ತೀರಬೇಕಂದ್ರೆ ಮನುಷ್ಯರಿಗಿರೋ ಒಂದೇ ಒಂದು ದಾರಿ, ಅದು ಹಿಂಸೆ ಅಂತ ತುಂಬ ಜನ ನಂಬ್ತಾರೆ. ಆದ್ರೆ ಯೇಸು ಈ ತರ ನಡ್ಕೊಳ್ಳಲಿಲ್ಲ, ಈ ತರ ಕಲಿಸಲೂ ಇಲ್ಲ. ಹಾಗಾದ್ರೆ ಯೇಸು ಹೇಗೆ ನಡ್ಕೊಂಡನು, ಏನು ಕಲಿಸಿದನು ಅಂತ ನೋಡೋಣ ಬನ್ನಿ.

ಯೇಸು ಏನು ಹೇಳಿದನು?

ದ್ವೇಷ, ಕೋಪ ಮತ್ತು ಹಿಂಸೆಯಿಂದ ಯಾರನ್ನೂ ಗೆಲ್ಲೋಕಾಗಲ್ಲ ಅಂತ ಬೆಟ್ಟದ ಭಾಷಣದಲ್ಲಿ ಯೇಸು ಹೇಳಿದನು. ಆತನು ಆ ಭಾಷಣದಲ್ಲಿ ಹೇಳಿದ ಕೆಲವು ವಿಷ್ಯಗಳನ್ನ ನೋಡಿ:

  • “ಜನ ನಿಮಗೇನು ಮಾಡಬೇಕಂತ ಇಷ್ಟಪಡ್ತೀರೋ ಅದನ್ನೇ ಅವ್ರಿಗೆ ಮಾಡಿ.” (ಮತ್ತಾಯ 7:12; ಲೂಕ 6:31) ಈ ನಿಯಮವನ್ನ ಸುವರ್ಣ ನಿಯಮa ಅಂತ ಕರೀತಾರೆ. ಈ ನಿಯಮದ ಪ್ರಕಾರ ಜನ ನಮ್ಮ ಜೊತೆ ಹೇಗೆ ನಡ್ಕೊಬೇಕು ಅಂತ ಇಷ್ಟಪಡ್ತೀವೋ ಅದೇ ತರ ನಾವು ಅವರ ಜೊತೆ ನಡ್ಕೊಬೇಕು. ಜನ ನಮ್ಮ ಜೊತೆ ಪ್ರೀತಿ ಗೌರವದಿಂದ ನಡ್ಕೊಬೇಕು ಅಂತ ನಾವೆಲ್ರೂ ಇಷ್ಟಪಡ್ತೀವಿ. ಅಂದ್ಮೇಲೆ ನಾವು ಅವ್ರ ಜೊತೆ ಅದೇ ತರ ನಡ್ಕೊಬೇಕು ಅಲ್ವಾ?

  • “ಯಾರಾದ್ರೂ ನಿನ್ನ ಬಲಗೆನ್ನೆಗೆ ಹೊಡೆದ್ರೆ ನಿನ್ನ ಎಡಗೆನ್ನೆನೂ ತೋರಿಸು.” (ಮತ್ತಾಯ 5:38, 39; ಲೂಕ 6:29) ಈ ಮಾತಿನ ಅರ್ಥ ಸಮಸ್ಯೆನ ನಮ್ಮ ಮೈ ಮೇಲೆ ಎಳ್ಕೊಬೇಕು ಅಂತ ಅಲ್ಲ. ಯೇಸು ಇಲ್ಲಿ ಸೇಡು ತೀರಿಸ್ಕೊಳ್ಳಬಾರದು ಅಂತ ಹೇಳ್ತಿದ್ದಾನೆ. ಯಾಕಂದ್ರೆ ಆಗಿನ ಕಾಲದಲ್ಲಿದ್ದ ಧರ್ಮಗುರುಗಳು ಸೇಡು ತೀರಿಸ್ಕೊಳ್ಳೋದ್ರಲ್ಲಿ ತಪ್ಪಿಲ್ಲ ಅಂತ ಕಲಿಸ್ತಿದ್ರು. ಅದಕ್ಕೆ ಯೇಸು ತನ್ನ ಶಿಷ್ಯರಿಗೆ ಮುಯ್ಯಿಗೆ ಮುಯ್ಯಿ ತೀರಿಸಬೇಡಿ ಮತ್ತು ಯಾರಾದ್ರೂ ರೇಗಿಸಿದ್ರೂ ಶಾಂತಿಯಿಂದ ನಡ್ಕೊಳ್ಳಿ ಅಂತ ಕಲಿಸಿದನು.b

  • “ನಿಮ್ಮ ಶತ್ರುಗಳನ್ನ ಪ್ರೀತಿಸ್ತಾ ಇರಿ.” (ಮತ್ತಾಯ 5:43, 44; ಲೂಕ 6:27) ಜನ ನಮ್ಮನ್ನ ದ್ವೇಷಿಸಿದ್ರೂ, ಅನ್ಯಾಯ ಮಾಡಿದ್ರೂ ನಾವು ಅವರ ಜೊತೆ ಯಾವಾಗ್ಲೂ ದಯೆಯಿಂದ, ಪ್ರೀತಿಯಿಂದ ನಡ್ಕೊಬೇಕು ಅಂತ ಯೇಸು ಹೇಳಿದನು. ಅದರ ಅರ್ಥ ಅವರು ತಪ್ಪು ಮಾಡಿದ್ರೂ ಅದನ್ನ ಸರಿ ಅಂತ ಒಪ್ಕೊತಿದ್ದೀವಿ ಅಂತಲ್ಲ.c ಬದಲಿಗೆ ನಾವು ಅಂಥವರಿಗೆ ದಯೆ ತೋರಿಸಿದ್ರೆ ಅವರ ಕೋಪ ತಣ್ಣಗೆ ಆಗುತ್ತೆ ಮತ್ತು ಮುಂದೆ ಅವರೂ ನಮ್ಮ ಜೊತೆ ದಯೆಯಿಂದ ನಡ್ಕೊತಾರೆ.

ಯೇಸು ಏನು ಮಾಡಿದನು ಮತ್ತು ಮುಂದೆ ಏನು ಮಾಡ್ತಾನೆ

ಹಿಂಸೆ ಸಮಸ್ಯೆಗೆ ಪರಿಹಾರ ಅಲ್ಲ ಅಂತ ಯೇಸು ಕಲಿಸಿದನು, ಕಲಿಸಿದಂತೆ ಜೀವಿಸಿದನು. ಒಂದು ರಾತ್ರಿ ಯೇಸುನ ಹಿಡಿಯೋಕೆ ಶತ್ರುಗಳು ಬಂದ್ರು. ಆಗ ಆತನ ಶಿಷ್ಯನೊಬ್ಬ ಹೋರಾಡೋಕೆ ಕತ್ತಿ ಹಿಡಿದ. ಆಗ ಯೇಸು ಅವನಿಗೆ: “ನಿನ್ನ ಕತ್ತಿನ ಎಲ್ಲಿಂದ ತಗೊಂಡೋ ಅಲ್ಲಿಡು. ಕತ್ತಿ ಹಿಡಿದವ್ರೆಲ್ಲ ಕತ್ತಿಯಿಂದಾನೇ ಸಾಯ್ತಾರೆ” ಅಂತ ಹೇಳಿದನು. (ಮತ್ತಾಯ 26:52) ಯೇಸು ಶತ್ರುಗಳಿಗೂ ಪ್ರೀತಿ ತೋರಿಸಿದನು, ತನಗೆ ಅನ್ಯಾಯ ಮಾಡಿದವರಿಗೂ ಪ್ರಾರ್ಥಿಸಿದನು!—ಲೂಕ 23:33, 34; 1 ಪೇತ್ರ 2:23.

ಯೇಸು ಸಮಾಧಾನದ ಪ್ರಭು ಆಗಿದ್ದಾನೆ ಮತ್ತು ಆತನು ಇವತ್ತು ಲೋಕದಲ್ಲಿ ನಡೀತಿರೋ ಎಲ್ಲ ಹಿಂಸೆನ ತೆಗೆದುಹಾಕ್ತಾನೆ ಅಂತ ಬೈಬಲ್‌ ಮಾತು ಕೊಟ್ಟಿದೆ. (ಯೆಶಾಯ 9:6, 7) ಭವಿಷ್ಯದ ಬಗ್ಗೆ ಇರೋ ಒಳ್ಳೆ ಭರವಸೆಯ ವಿಷ್ಯಗಳನ್ನ ತಿಳಿದುಕೊಳ್ಳೋಕೆ “ಯುದ್ಧ-ಹೊಡೆದಾಟಗಳು ಹೇಗೆ ಕೊನೆ ಆಗುತ್ತೆ?” ಅನ್ನೋ ಲೇಖನ ಓದಿ.

a ಇದ್ರ ಬಗ್ಗೆ ಜಾಸ್ತಿ ತಿಳ್ಕೊಳೋಕೆ, “ನಾವು ಬೇರೆಯವರ ಜೊತೆ ಹೇಗಿರಬೇಕು ಅಂತ ಬೈಬಲ್‌ ಹೇಳುತ್ತೆ?” ಅನ್ನೋ ಲೇಖನ ಓದಿ

b ಇದ್ರ ಬಗ್ಗೆ ಜಾಸ್ತಿ ತಿಳ್ಕೊಳೋಕೆ, “‘ಕಣ್ಣಿಗೆ ಪ್ರತಿಯಾಗಿ ಕಣ್ಣು’ ಅರ್ಥವೇನು?” ಅನ್ನೋ ಲೇಖನ ಓದಿ

c ಇದ್ರ ಬಗ್ಗೆ ಜಾಸ್ತಿ ತಿಳ್ಕೊಳೋಕೆ, “ವಾಟ್‌ ಡಸ್‌ ಇಟ್‌ ಮೀನ್‌ ಟು ‘ಲವ್‌ ಯುವರ್‌ ಎನಿಮೀಸ್‌’?” ಅನ್ನೋ (ಇಂಗ್ಲೀಷ್‌) ಲೇಖನ ನೋಡಿ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ