ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ijwyp ಲೇಖನ 102
  • ನಾನು ಸ್ಕೂಲ್‌ ಬಿಟ್ಟುಬಿಡ್ಲಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಾನು ಸ್ಕೂಲ್‌ ಬಿಟ್ಟುಬಿಡ್ಲಾ?
  • ಯುವಜನರ ಪ್ರಶ್ನೆಗಳು
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕೆಲವ್ರು ಯಾಕೆ ಸ್ಕೂಲ್‌ ಬಿಟ್ಟುಬಿಡ್ತಾರೆ?
  • ಪರಿಣಾಮದ ಬಗ್ಗೆ ಯೋಚ್ನೆ ಮಾಡಿ
  • ಏನ್‌ ಮಾಡಿದ್ರೆ ಒಳ್ಳೇದು?
  • ನಾನು ಶಾಲೆಗೆ ಹೋಗುವುದನ್ನು ಬಿಟ್ಟುಬಿಡಬೇಕಾ?
    ಎಚ್ಚರ!—2011
  • ನಾನು ಶಾಲೆಯಲ್ಲಿ ಹೆಚ್ಚು ಉತ್ತಮವಾಗಿ ಕಲಿಯಶಕ್ತನಾಗಿರುವೆನೊ?
    ಎಚ್ಚರ!—1998
  • ಸ್ಕೂಲಲ್ಲಿ ಫೇಲ್‌ ಆದ್ರೆ ಏನ್‌ ಮಾಡಲಿ?
    ಯುವಜನರ ಪ್ರಶ್ನೆಗಳು
  • ಶಾಲೆಯಿಂದ ಅತ್ಯುತ್ತಮ ಪ್ರಯೋಜನವನ್ನು ಪಡೆದುಕೊಳ್ಳಿರಿ
    1997 ನಮ್ಮ ರಾಜ್ಯದ ಸೇವೆ
ಯುವಜನರ ಪ್ರಶ್ನೆಗಳು
ijwyp ಲೇಖನ 102
ಸ್ಕೂಲ್‌ ಸಹವಾಸ ಸಾಕು ಅಂತ ಸ್ಕೂಲಿಂದ ಆಚೆ ಬರ್ತಿರೋ ಒಬ್ಬ ಹುಡುಗ.

ಯುವ ಜನರ ಪ್ರಶ್ನೆಗಳು

ನಾನು ಸ್ಕೂಲ್‌ ಬಿಟ್ಟುಬಿಡ್ಲಾ?

“ಸ್ಕೂಲ್‌ ಅಂದ್ರೆ ನನ್ಗೆ ಬಿಲ್‌ಕುಲ್‌ ಇಷ್ಟ ಇಲ್ಲ!” ಈ ತರ ಹೇಳೋರಿಗೆ ಸ್ಕೂಲ್‌ಗೆ ಹೋಗೋದನ್ನ ಬಿಟ್ಟುಬಿಡಬೇಕು ಅನ್ಸೋದು ಸಹಜ. ಆದ್ರೆ ಒಳ್ಳೇ ನಿರ್ಧಾರ ಮಾಡೋಕೆ ಈ ಲೇಖನ ಸಹಾಯ ಮಾಡುತ್ತೆ.

  • ಕೆಲವ್ರು ಯಾಕೆ ಸ್ಕೂಲ್‌ ಬಿಟ್ಟುಬಿಡ್ತಾರೆ?

  • ಪರಿಣಾಮದ ಬಗ್ಗೆ ಯೋಚ್ನೆ ಮಾಡಿ

  • ಏನ್‌ ಮಾಡಿದ್ರೆ ಒಳ್ಳೇದು?

  • ನಿಮ್ಮ ವಯಸ್ಸಿನವರು ಏನಂತಾರೆ

ಕೆಲವ್ರು ಯಾಕೆ ಸ್ಕೂಲ್‌ ಬಿಟ್ಟುಬಿಡ್ತಾರೆ?

ಸ್ಕೂಲ್‌ ಅರ್ಧದಲ್ಲೇ ಬಿಡೋಕೆ ಏನೆಲ್ಲಾ ಕಾರಣಗಳು ಇರಬಹುದು ಅಂತ ಕೆಲವು ಪರಿಣಿತರ ಅಭಿಪ್ರಾಯ:

  • ಓದೋಕೆ ಕಷ್ಟ. ‘ನನ್ನ ಮಾರ್ಕ್ಸ್‌ ಕಡಿಮೆ ಆಗ್ತಾನೇ ಇದೆ.’

  • ನಿರಾಸಕ್ತಿ. ‘ಸ್ಕೂಲಲ್ಲಿ ಕಲಿಯೋ ವಿಷ್ಯಗಳಿಂದ ನನ್ಗೆ ಏನೂ ಪ್ರಯೋಜನ ಇಲ್ಲ ಅನ್ಸುತ್ತೆ.’

  • ಆರ್ಥಿಕ ಸಂಕಷ್ಟ. ‘ನನ್ನ ಕುಟುಂಬದ ಹೊಟ್ಟೆ ತುಂಬ್ಸೋಕೆ ನಾನೂ ಕೆಲ್ಸಕ್ಕೆ ಹೋಗಬೇಕು.’

ಪರಿಣಾಮದ ಬಗ್ಗೆ ಯೋಚ್ನೆ ಮಾಡಿ

“ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 14:15) ಇದ್ರಿಂದ ಏನ್‌ ಗೊತ್ತಾಗುತ್ತೆ? ಒಂದುವೇಳೆ ಸ್ಕೂಲ್‌ ಬಿಟ್ಟುಬಿಡಬೇಕು ಅಂತ ನಿಮ್ಗೆ ಅನ್ಸಿದ್ರೆ ಅದ್ರಿಂದ ಮುಂದೆ ಆಗೋ ಪರಿಣಾಮಗಳನ್ನ ಕೂಡ ಎದುರಿಸೋಕೆ ನೀವು ರೆಡಿ ಇರಬೇಕು.

ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ:

  • ‘ಓದೋದನ್ನ ಬಿಟ್ಟುಬಿಟ್ರೆ ಮುಂದೆ ಕೆಲ್ಸ ಸಿಗುತ್ತಾ?’

    “ನಿಮ್ಗೆ ಒಳ್ಳೆ ಕೆಲ್ಸ ಸಿಕ್ಕಿ ನಿಮ್ಮ ಕುಟುಂಬನ ಚೆನ್ನಾಗಿ ನೋಡ್ಕೊಬೇಕಾ? ನೀವು ಹೈಸ್ಕೂಲೂ ಮುಗ್ಸಿಲ್ಲ ಅಂದ್ರೆ ಹೇಗೆ ಕೆಲ್ಸ ಸಿಗುತ್ತೆ?”—ಜೂಲಿಯಾ.

  • ‘ಸ್ಕೂಲ್‌ ಬಿಟ್ಟುಬಿಟ್ರೆ ಮುಂದೆ ಬರೋ ಕಷ್ಟಗಳನ್ನ ಎದುರಿಸೋಕೆ ಆಗುತ್ತಾ?’

    “ನಿಮ್ಮ ಜೀವನದಲ್ಲಿ ಬರೋ ಸವಾಲುಗಳನ್ನ ಎದುರಿಸೋಕೆ ಸ್ಕೂಲ್‌ ನಿಮ್ಮನ್ನ ರೆಡಿ ಮಾಡುತ್ತೆ. ಸ್ಕೂಲಲ್ಲಿ ನೀವು ಹೊಸ ವ್ಯಕ್ತಿಗಳನ್ನ, ಒತ್ತಡಗಳನ್ನ, ಬೇರೆ ಬೇರೆ ಕೆಲ್ಸಗಳನ್ನ ಮಾಡಿರ್ತೀರ. ಮುಂದೆ ನೀವು ದೊಡ್ಡವರಾದ ಮೇಲೆ ಇದೇ ತರ ಪರಿಸ್ಥಿತಿ ಎದುರಿಸೋದ್ರಿಂದ ಆಗ ನಿಮ್ಗೆ ಸುಲಭ ಆಗುತ್ತೆ.”—ಡ್ಯಾನಿಯೆಲ್‌.

  • ‘ಸ್ಕೂಲ್‌ ಬಿಟ್ಟುಬಿಟ್ರೆ ದೊಡ್ಡವನಾದಾಗ ಇರಬೇಕಾದ ಸಾಮರ್ಥ್ಯ ನನಗಿರುತ್ತಾ?’

    “ಸ್ಕೂಲ್‌ನಲ್ಲಿ ಕಲಿಯೋದು ಏನೂ ಪ್ರಯೋಜ್ನ ಇಲ್ಲ ಅಂತ ಈಗ ನಿಮ್ಗೆ ಅನಿಸಬಹುದು. ಆದ್ರೆ ನಿಮ್ಗೆ 23 ವರ್ಷ ಆಗಿ ದುಡ್ಡು ಕಾಸಿನ ವ್ಯವಹಾರ ನೋಡ್ಕೊಳ್ಳುವಾಗ, ‘ನಾನು ಮ್ಯಾತ್ಸ್‌ ಕ್ಲಾಸಲ್ಲಿ ಗಮನ ಕೊಟ್ಟಿದ್ದು ಸಾರ್ಥಕ ಆಯ್ತು’ ಅನ್ಸುತ್ತೆ.”—ಆ್ಯನ.

ಏನ್‌ ಮಾಡಿದ್ರೆ ಒಳ್ಳೇದು?

  • ಸಹಾಯ ಪಡ್ಕೊಳ್ಳಿ. “ತುಂಬ ಸಲಹೆಗಾರರು ಇದ್ರೆ ಯಶಸ್ಸು ಖಂಡಿತ” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 11:14, NW) ನಿಮ್ಗೆ ಕಮ್ಮಿ ಮಾರ್ಕ್ಸ್‌ ಬರ್ತಿದ್ರೆ ನಿಮ್ಮ ಅಪ್ಪ ಅಮ್ಮ ಹತ್ರನೋ, ನಿಮ್ಮ ಟೀಚರ್‌ ಹತ್ರನೋ ಅಥವಾ ಯಾರಾದ್ರೂ ದೊಡ್ಡವ್ರ ಹತ್ರ ಮಾತಾಡಿ. ಚೆನ್ನಾಗಿ ಮಾರ್ಕ್ಸ್‌ ತೆಗಿಯೋಕೆ ಏನು ಮಾಡಬೇಕು ಅಂತ ಕೇಳಿ.

    “ಓದೋದಿಕ್ಕೆ ಕಷ್ಟ ಆಗ್ತಿದ್ರೆ ಟೀಚರ್‌ ಹತ್ರ ಮಾತಾಡಿ. ಕೆಲವೊಮ್ಮೆ ಟೀಚರೇ ಸರಿಯಾಗಿ ಪಾಠ ಮಾಡ್ತಿಲ್ಲ ಅಂತ ನಿಮ್ಗೆ ಅನಿಸಬಹುದು. ಆದ್ರೆ ಅವ್ರ ಸಹಾಯ ತಗೊಂಡ್ರೆ ಖಂಡಿತ ಒಳ್ಳೇ ಮಾರ್ಕ್ಸ್‌ ತೆಗೀಬಹುದು.”—ಎಡ್ವರ್ಡ್‌.

  • ಮುಂದೆ ಸಿಗೋ ಪ್ರಯೋಜ್ನ ತಿಳ್ಕೊಳ್ಳಿ. ಬೈಬಲ್‌ “ಆದಿಗಿಂತ ಅಂತ್ಯವು ಲೇಸು” ಅಂತ ಹೇಳುತ್ತೆ. (ಪ್ರಸಂಗಿ 7:8) ನೀವು ಸ್ಕೂಲಲ್ಲಿ ಬರೀ ಪಾಠಗಳನ್ನಷ್ಟೇ ಕಲಿಯಲ್ಲ. ಅದರ ಜೊತೆ ಜೀವನ ಮಾಡೋದಿಕ್ಕೆ ಬೇಕಾದ ಕೌಶಲ್ಯಗಳು ಮತ್ತು ಗುಣಗಳ ಬಗ್ಗೆ ಕಲಿತ್ಕೊತೀರ.

    “ನೀವು ದೊಡ್ಡವರಾದ ಮೇಲೆ ಪ್ರಬಂಧಗಳನ್ನ ಬರಿಬೇಕಾಗಿಲ್ಲ, ಎಕ್ಸಾಂಗೆ ಓದೋ ಟೆನ್ಷನ್‌ ಇರಲ್ಲ. ಆದ್ರೆ ನೀವು ಸ್ಕೂಲಲ್ಲಿ ಒತ್ತಡಗಳನ್ನ ಹೇಗೆ ನಿಭಾಯಿಸಬೇಕು ಅಂತ ಕಲ್ತಿರೋದ್ರಿಂದ ಮುಂದೆ ಜೀವನದಲ್ಲಿ ಬರೋ ಸಮಸ್ಯೆಗಳನ್ನ ಸುಲಭವಾಗಿ ಎದುರಿಸ್ತೀರ.”—ವಿರ.

    ದಡ ಮುಟ್ಟೋಕೆ ಮುಂಚೆ ದೋಣಿಯಿಂದ ಇಳಿತಿರೋ ಹುಡುಗನಿಗೆ ಅವನ ಟೀಚರ್‌ ಮತ್ತು ಸ್ನೇಹಿತರು ಬೇಡ ಅಂತಿದ್ದಾರೆ.

    ಸ್ಕೂಲನ್ನ ಅರ್ಧದಲ್ಲೇ ಬಿಡೋದು ದಡ ಮುಟ್ಟೋಕೆ ಮುಂಚೆ ದೋಣಿಯಿಂದ ಇಳಿದ ಹಾಗೆ ಇರುತ್ತೆ. ಆಮೇಲೆ ದೊಣಿಯಲ್ಲೇ ಇದ್ದಿದ್ರೆ ಚೆನ್ನಾಗಿರ್ತಿತ್ತು ಅಂತನ್ಸುತ್ತೆ

  • ಓದೋಕೆ ಬೇರೆ ದಾರಿ ಹುಡುಕಿ. “ಆತುರಪಡುವವರು ಬಡತನಕ್ಕೆ ಬೀಳ್ತಾರೆ” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 21:5, NW) ಸ್ಕೂಲ್‌ ಬಿಡೋದು ಒಂದೇ ದಾರಿ ಅಂತ ತಕ್ಷಣ ತೀರ್ಮಾನ ತಗೊಬೇಡಿ. ಆನ್‌ಲೈನ್‌ ಸ್ಕೂಲ್‌ ಮೂಲಕ ಅಥ್ವಾ ಹೋಮ್‌ ಸ್ಕೂಲ್‌ ಮೂಲಕ ನಿಮ್ಮ ಶಿಕ್ಷಣನಾ ಮುಗ್ಸಕ್ಕಾಗುತ್ತಾ ಅಂತ ಯೋಚ್ನೆ ಮಾಡಿ.

    “ಕಷ್ಟಪಟ್ಟು ಕೆಲಸ ಮಾಡೋದು, ಸಮಸ್ಯೆಗಳನ್ನ ಪರಿಹಾರ ಮಾಡೋದು, ಒಬ್ರಿಗೊಬ್ರು ಸಹಕಾರ ಕೊಡೊದು ಹೇಗೆ ಅಂತ ಸ್ಕೂಲ್‌ ನಮ್ಗೆ ಟ್ರೈನಿಂಗ್‌ ಕೊಡುತ್ತೆ. ಇದ್ರಿಂದ ಜೀವನ ಪೂರ್ತಿ ಪ್ರಯೋಜ್ನ ಇದೆ. ಅದಕ್ಕೆ ಸ್ಕೂಲನ್ನ ಅರ್ಧಕ್ಕೆ ಬಿಡದೆ ಪೂರ್ತಿ ಓದಿ ಮುಗ್ಸೋದು ಒಳ್ಳೆದು.”—ಬೆಂಜಮಿನ್‌.

ಪಾಠ: ಅರ್ಧದಲ್ಲೇ ಸ್ಕೂಲ್‌ ಬಿಡದೆ ಓದಿ ಮುಗಿಸೋದ್ರಿಂದ ತುಂಬ ವಿಷ್ಯಗಳನ್ನ ಕಲೀಬಹುದು. ಇದ್ರಿಂದ ನಿಮ್ಮ ಜೀವನದಲ್ಲಿ ಮುಂದೆ ತುಂಬ ಪ್ರಯೋಜ್ನ ಸಿಗುತ್ತೆ.

ನಿಮ್ಮ ವಯಸ್ಸಿನವರು ಏನಂತಾರೆ

ಅನಾಬೆಲ್ಲೆ.

“ನೀವು ಕೆಲ್ಸಕ್ಕೆ ಹೋಗಬೇಕಂದ್ರೆ ಸ್ಕೂಲ್‌ ಸರ್ಟಿಫಿಕೇಟ್‌ ಇರಲೇಬೇಕು. ನೀವು ಓದನ್ನ ಪೂರ್ತಿ ಮುಗಿಸೋದ್ರಿಂದ ನಿಮ್ಗೆ ಏನ್‌ ಕೆಲ್ಸ ಕೊಟ್ರೂ ಅದನ್ನ ಪೂರ್ತಿ ಮಾಡ್ತೀರ ಅಂತ ತೋರಿಸಿಕೊಡ್ತೀರ. ಆದ್ರಿಂದ ಓದನ್ನ ಅರ್ಧದಲ್ಲೇ ನಿಲ್ಲಿಸೋದು ಒಳ್ಳೇದಲ್ಲ.”—ಅನಾಬೆಲ್ಲೆ.

ಕೋಲ್‌.

“ಸ್ಕೂಲಲ್ಲಿ ಓದೋದು ಕಷ್ಟ, ಬಿಟ್ಟುಬಿಡೋದು ಸುಲಭ ಅಂತ ಅನ್ಸುತ್ತೆ. ಆದ್ರೆ ಜೀವನದಲ್ಲಿ ಬರೋ ಸಮಸ್ಯೆಗಳನ್ನ ಎದುರಿಸೋ ಸಾಮರ್ಥ್ಯ ನಿಮ್ಗೆ ಬೇಕು ಅಂದ್ರೆ ನೀವು ಸ್ಕೂಲ್‌ಗೆ ಹೋಗ್ಲೇಬೇಕು. ಸ್ಕೂಲ್‌ ನಿಮ್ಗೆ ಬೇಕಾದ ತರಬೇತಿನ ಕೊಡುತ್ತೆ.”—ಕೋಲ್‌.

ಬ್ರೈನ್‌.

“ದೊಡ್ಡವರಾದ ಮೇಲೆ ತುಂಬ ಕಷ್ಟದ ಲೆಕ್ಕ ಮಾಡಬೇಕಾಗಿ ಬರಲ್ಲ. ಆದ್ರೆ ಜೀವನದಲ್ಲಿ ಸಮಯಾನ ಸರಿಯಾಗಿ ಉಪಯೋಗಿಸೋದು, ಕೆಲ್ಸಾನ ಕೊಟ್ಟ ಸಮಯಕ್ಕೆ ಮುಗಿಸೋದು, ಬೇಗ ಎದ್ದೇಳೋದು ಇನ್ನೂ ಬೇರೆ ವಿಷ್ಯಗಳನ್ನ ಮಾಡಬೇಕಾಗುತ್ತೆ. ಇದನ್ನೆಲ್ಲಾ ಸ್ಕೂಲ್‌ ನಮ್ಗೆ ಕಲ್ಸುತ್ತೆ.”—ಬ್ರೈನ್‌.

ನೆನಪಿಡಿ: ನಾನು ಸ್ಕೂಲ್‌ ಬಿಟ್ಟುಬಿಡ್ಲಾ?

  • ಪರಿಣಾಮದ ಬಗ್ಗೆ ಯೋಚ್ನೆ ಮಾಡಿ. ಸ್ಕೂಲ್‌ ಬಿಟ್ಟುಬಿಟ್ರೆ ಮುಂದೆ ನಿಮ್ಗೆ ಒಳ್ಳೇ ಕೆಲ್ಸ ಸಿಗಲ್ಲ. ಜೀವನದಲ್ಲಿ ಬರೋ ಕಷ್ಟಗಳನ್ನ ಎದುರಿಸೋಕಾಗಲ್ಲ.

  • ಸಹಾಯ ಪಡ್ಕೊಳ್ಳಿ. ಕಮ್ಮಿ ಮಾರ್ಕ್ಸ್‌ ಬರ್ತಿದ್ರೆ, ನಿಮ್ಮ ಅಪ್ಪ ಅಮ್ಮ ಹತ್ರನೋ, ನಿಮ್ಮ ಟೀಚರ್‌ ಹತ್ರನೋ ಅಥವಾ ಯಾರಾದ್ರೂ ದೊಡ್ಡವ್ರ ಹತ್ರ ಮಾತಾಡಿ ಸಹಾಯ ಪಡ್ಕೊಳ್ಳಿ.

  • ಮುಂದೆ ಸಿಗೋ ಪ್ರಯೋಜ್ನ ತಿಳ್ಕೊಳ್ಳಿ. ನೀವು ಸ್ಕೂಲಲ್ಲಿ ಬರೀ ಪಾಠಗಳನ್ನಷ್ಟೇ ಕಲಿಯಲ್ಲ. ಜೀವನದಲ್ಲಿ ಸಮಯಾನ ಸರಿಯಾಗಿ ಉಪಯೋಗಿಸೋಕೆ, ಕೆಲ್ಸಾನ ಕೊಟ್ಟ ಸಮಯಕ್ಕೆ ಮುಗಿಸೋಕೆ ಮತ್ತು ಜವಾಬ್ದಾರಿಗಳನ್ನ ನಿಭಾಯಿಸೋಕೆ ಸ್ಕೂಲ್‌ ಕಲ್ಸುತ್ತೆ.

  • ಓದೋಕೆ ಬೇರೆ ದಾರಿ ಹುಡುಕಿ. ಸ್ಕೂಲನ್ನ ಅರ್ಧದಲ್ಲೇ ಬಿಡಬೇಕಾದ ಪರಿಸ್ಥಿತಿ ಬಂದ್ರೆ, ಆನ್‌ಲೈನ್‌ ಸ್ಕೂಲ್‌ ಅಥ್ವಾ ಹೋಮ್‌ ಸ್ಕೂಲ್‌ ಮೂಲಕ ನಿಮ್ಮ ಶಿಕ್ಷಣನಾ ಮುಗಿಸಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ