ನಮ್ಮ ಕ್ರೈಸ್ತ ಜೀವನ
ಯೋಸೇಫನನ್ನು ಅನುಕರಿಸಿ—ಅನೈತಿಕತೆಯಿಂದ ದೂರ ಓಡಿಹೋಗಿ
ಅನೈತಿಕತೆಗೆ ನಡೆಸೋ ಸನ್ನಿವೇಶ ಬಂದಾಗೆಲ್ಲಾ ಯೋಸೇಫನನ್ನ ನೆನಪಿಸಿಕೊಳ್ಳಿ. ಈ ವಿಷಯದಲ್ಲಿ ಅವನು ಉತ್ತಮ ಮಾದರಿ! ಹೇಗೆ? ಯಜಮಾನನ ಹೆಂಡತಿ ತನ್ನೊಂದಿಗೆ ಸಂಬಂಧ ಇಟ್ಟುಕೊಳ್ಳಲು ಪದೇಪದೇ ಪ್ರಯತ್ನಿಸಿದರೂ ಅವನು ಒಪ್ಪಲಿಲ್ಲ. (ಆದಿ 39:7-10) “ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ” ಅಂತ ಹೇಳಿದ. ಒಬ್ಬ ವ್ಯಕ್ತಿ ತನ್ನ ವಿವಾಹ ಸಂಗಾತಿಯೊಂದಿಗೆ ಮಾತ್ರ ಲೈಂಗಿಕ ಸಂಬಂಧ ಇಟ್ಟುಕೊಳ್ಳಬೇಕು ಅಂತ ಯೆಹೋವನು ಬಯಸುತ್ತಾನೆ ಅನ್ನೋದು ಯೋಸೇಫನಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಯೆಹೋವನ ವಿರುದ್ಧ ಪಾಪ ಮಾಡೋ ಸನ್ನಿವೇಶ ಬಂದಾಗ ಯೋಸೇಫ ತಕ್ಷಣ ಅಲ್ಲಿಂದ ಓಡಿಹೋದ. ಅಲ್ಲೇ ಇದ್ದಿದ್ದರೆ ಅವನ ತೀರ್ಮಾನ ಬದಲಾಗೋ ಸಾಧ್ಯತೆ ಇತ್ತೇನೋ. ಆದರೆ ಅವನು ಅದಕ್ಕೆ ಅವಕಾಶನೇ ಕೊಡಲಿಲ್ಲ.—ಆದಿ 39:12; 1ಕೊರಿಂ 6:18.
ಅನೈತಿಕತೆಯಿಂದ ಓಡಿಹೋಗಿ ಅನ್ನೋ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
ಜಿನ್ಗೆ ಶಾಲೆಯಲ್ಲಿ ಯಾವ ಸನ್ನಿವೇಶ ಎದುರಾಯಿತು?
ಮ್ಯಾತ್ಸ್ ಹೇಳಿಕೊಡು ಅಂತ ಮೀ ಕ್ಯೆಂಗ್ ಕೇಳಿದಾಗ ಜಿನ್ ಏನು ಯೋಚಿಸಿದ?
ಮೀ ಕ್ಯೆಂಗ್ ಸಹಾಯ ಕೇಳಿದ ಮೇಲೆ ಜಿನ್ ಮನಸ್ಸೆಲ್ಲಾ ಯಾವುದರ ಮೇಲಿತ್ತು?
ಜಿನ್ಗೆ ಯಾರು ಸಹಾಯ ಮಾಡಿದರು? ಹೇಗೆ?
ಅನೈತಿಕತೆಯಿಂದ ದೂರ ಓಡಿ ಹೋಗಲು ಜಿನ್ ಯಾವ ಹೆಜ್ಜೆ ತೆಗೆದುಕೊಂಡ?
ಈ ವಿಡಿಯೋದಿಂದ ನೀವೇನು ಕಲಿತ್ರಿ?