ಬೈಬಲಿನಲ್ಲಿರುವ ರತ್ನಗಳು | ಕೊಲೊಸ್ಸೆ 1-4
ಹಳೆಯ ವ್ಯಕ್ತಿತ್ವವನ್ನು ತೆಗೆದುಹಾಕಿ, ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಿ
ನೀವು ಸತ್ಯ ಕಲಿತಾಗ ನಿಮ್ಮ ವ್ಯಕ್ತಿತ್ವದಲ್ಲಿ ದೊಡ್ಡ ದೊಡ್ಡ ಬದಲಾವಣೆಗಳನ್ನು ಮಾಡಿಕೊಂಡಿದ್ದೀರಾ? ಆ ಬದಲಾವಣೆ ಮಾಡಿಕೊಳ್ಳಲು ನೀವು ತುಂಬ ಪ್ರಯತ್ನಪಟ್ಟದ್ದನ್ನು ನೋಡಿ ಯೆಹೋವನಿಗೆ ಖಂಡಿತ ಖುಷಿ ಆಗಿರುತ್ತದೆ. (ಯೆಹೆ 33:11) ನಿಮ್ಮ ಹಳೇ ವ್ಯಕ್ತಿತ್ವ ಪುನಃ ತಲೆ ಎತ್ತಬಾರದೆಂದರೆ ಮತ್ತು ಹೊಸ ವ್ಯಕ್ತಿತ್ವವನ್ನು ತೋರಿಸುತ್ತಾ ಇರಬೇಕೆಂದರೆ ನಿಮ್ಮ ಪ್ರಯತ್ನವನ್ನು ಯಾವತ್ತಿಗೂ ಬಿಡಬೇಡಿ. ಕೆಳಗಿರುವ ಪ್ರಶ್ನೆಗಳಿಗೆ ನೀವು ಉತ್ತರ ಕೊಡುವಾಗ ಇನ್ನೂ ಯಾವ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ ಅಂತ ನಿಮಗೆ ಗೊತ್ತಾಗಬಹುದು.
ಮನಸ್ಸಿಗೆ ನೋವು ಮಾಡಿದವರ ಬಗ್ಗೆ ಇನ್ನೂ ಕೋಪ ಇಟ್ಟುಕೊಂಡಿದ್ದೇನಾ?
ನನಗೆ ಸಮಯ ಇಲ್ಲದಿದ್ದಾಗಲೂ, ಸುಸ್ತಾದಾಗಲೂ ತಾಳ್ಮೆಯಿಂದ ನಡಕೊಳ್ಳುತ್ತೇನಾ?
ಅನೈತಿಕ ಯೋಚನೆ ಬಂದಾಗ ತಕ್ಷಣ ಆ ಯೋಚನೆಯಿಂದ ಹೊರಬರುತ್ತೇನಾ?
ಬೇರೆ ದೇಶದ ಅಥವಾ ಜನಾಂಗದ ಜನರು ನನಗೆ ಇಷ್ಟ ಆಗಲ್ವಾ?
ಇತ್ತೀಚೆಗೆ ಯಾರ ಹತ್ತಿರಾದ್ರೂ ಕೋಪದಿಂದ ಅವರಿಗೆ ಬೇಜಾರಾಗುವ ತರ ಮಾತಾಡಿದ್ದೇನಾ?