ನಮ್ಮ ಕ್ರೈಸ್ತ ಜೀವನ
ನಿಮ್ಮ ‘ಶರೀರದಲ್ಲಿ ಮುಳ್ಳಿದ್ದರೂ’ ನೀವು ಜಯ ಸಾಧಿಸಬಹುದು!
ಕಷ್ಟಗಳೇ ತುಂಬಿರುವ ಈ ಕಡೇ ದಿವಸಗಳಲ್ಲಿ ದೇವರ ಎಲ್ಲಾ ಸೇವಕರನ್ನು ಸಮಸ್ಯೆಗಳು ಮುಳ್ಳಿನಂತೆ ಚುಚ್ಚುತ್ತಿವೆ. (2ತಿಮೊ 3:1) ಈ ಸಮಸ್ಯೆಗಳನ್ನು ಯಶಸ್ವಿಕರವಾಗಿ ನಿಭಾಯಿಸಲು ನಾವು ಯೆಹೋವನ ಸಹಾಯ ಹೇಗೆ ಪಡಕೊಳ್ಳಬಹುದು? “ಕುರುಡರ ಕಣ್ಣು ಕಾಣುವುದು” ವಿಡಿಯೋ ನೋಡಿ. ಟಲೀಟ ಅಲ್ನಾಷಿ ಮತ್ತು ಅವಳ ಹೆತ್ತವರು ಏನು ಮಾಡಿದರೆಂದು ನೋಡಿ. ನಂತರ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಿ:
ಟಲೀಟ ‘ಶರೀರದಲ್ಲಿರುವ ಮುಳ್ಳು’ ಏನಾಗಿದೆ?
ಸಕಾರಾತ್ಮಕ ಮನೋಭಾವ ಇಟ್ಟುಕೊಳ್ಳಲು ಟಲೀಟ ಮತ್ತು ಅವಳ ಹೆತ್ತವರಿಗೆ ಬೈಬಲಿನ ಯಾವ ವಾಗ್ದಾನಗಳು ಸಹಾಯ ಮಾಡಿದವು?
ಟಲೀಟಗೆ ಶಸ್ತ್ರಚಿಕಿತ್ಸೆ ಆದ ಕೂಡಲೇ ಅವಳ ಹೆತ್ತವರು ಹೇಗೆ ಯೆಹೋವನ ಮೇಲೆ ತಮಗೆ ಭರವಸೆ ಇದೆ ಎಂದು ತೋರಿಸಿಕೊಟ್ಟರು?
ಟಲೀಟ ದೇವರ ಮೇಲೆ ಪ್ರೀತಿ ಬೆಳೆಸಿಕೊಳ್ಳಲು ಅವಳ ಹೆತ್ತವರು ಸಂಘಟನೆಯಿಂದ ಸಿಕ್ಕಿರುವ ಸಾಧನಗಳನ್ನು ಹೇಗೆ ಬಳಸುತ್ತಾರೆ?
ತನ್ನ ‘ಶರೀರದಲ್ಲಿ ಮುಳ್ಳಿದ್ದರೂ’ ತಾನು ಯೆಹೋವನಿಗೆ ಆಪ್ತಳಾಗುತ್ತಿದ್ದೇನೆ ಎಂದು ಟಲೀಟ ಹೇಗೆ ತೋರಿಸಿಕೊಟ್ಟಿದ್ದಾಳೆ?
ಟಲೀಟ ಉದಾಹರಣೆಯಿಂದ ನಿಮಗೆ ಯಾವ ಉತ್ತೇಜನ ಸಿಕ್ಕಿತು?