ಬೈಬಲಿನಲ್ಲಿರುವ ರತ್ನಗಳು | 2 ಕೊರಿಂಥ 11-13
ಪೌಲನ ‘ಶರೀರದಲ್ಲಿದ್ದ ಮುಳ್ಳು’
ಬೈಬಲಲ್ಲಿ ಹೆಚ್ಚಾಗಿ ಮುಳ್ಳನ್ನು ಹಾನಿಮಾಡುವ ಅಥವಾ ತೊಂದರೆ ಕೊಡುವ ಜನರಿಗೆ ಅಥವಾ ಸಮಸ್ಯೆ ತರುವ ವಸ್ತುಗೆ ಸೂಚಿಸಲಾಗುತ್ತದೆ. (ಅರ 33:55; ಜ್ಞಾನೋ 22:5; ಯೆಹೆ 28:24) ತನ್ನ ‘ಶರೀರದಲ್ಲಿದ್ದ ಮುಳ್ಳಿನ’ ಬಗ್ಗೆ ಪೌಲ ಮಾತಾಡಿದಾಗ ಅದನ್ನು ಸುಳ್ಳು ಅಪೊಸ್ತಲರು ಮತ್ತು ಇತರರಿಗೆ ಸೂಚಿಸಿರಬಹುದು. ಪೌಲನು ಅಪೊಸ್ತಲನೇ ಅಲ್ಲವೆಂದು ಇವರು ಹೇಳುತ್ತಿದ್ದರು, ಆತನ ಸೇವೆಯಲ್ಲಿ ತಪ್ಪು ಹುಡುಕುತ್ತಿದ್ದರು. ಪೌಲನು ಬೇರೆ ಯಾವುದನ್ನು ಮುಳ್ಳು ಅಂದಿರಬಹುದು ಎಂದು ಕೆಳಗಿರುವ ವಚನಗಳಿಂದ ಗೊತ್ತಾಗುತ್ತದೆ?
ನಿಮ್ಮ “ಶರೀರದಲ್ಲಿ” ಯಾವ ‘ಮುಳ್ಳಿದೆ’?
ಕಷ್ಟಗಳನ್ನು ತಾಳಿಕೊಳ್ಳಲು ಯೆಹೋವನ ಸಹಾಯ ಹೇಗೆ ಪಡಕೊಳ್ಳುತ್ತೀರಿ?