ಇಟಲಿಯಲ್ಲಿ ಮನೆಯಿಂದ ಮನೆಗೆ ಸುವಾರ್ತೆ ಸಾರುತ್ತಿದ್ದಾರೆ
ಮಾದರಿ ನಿರೂಪಣೆಗಳು
ಮುಂದೆ ಈ ಲೋಕ ಹೇಗಿರುತ್ತದೆ? (T-31)
ಪ್ರಶ್ನೆ: ಕಾಯಿಲೆ-ಕಷ್ಟ ಇಲ್ಲದೆ, ತೃಪ್ತಿ ಕೊಡುವಂಥ ಕೆಲಸ ಮಾಡಿಕೊಂಡು ಸಂತೋಷದಿಂದ ನಮ್ಮ ಕುಟುಂಬ ಮತ್ತು ಸ್ನೇಹಿತರೊಟ್ಟಿಗೆ ಶಾಶ್ವತವಾಗಿ ಇರಬೇಕು ಅಂತ ನಾವೆಲ್ಲರೂ ಇಷ್ಟಪಡುತ್ತೇವೆ. ಇದು ನಿಜ ಆದ್ರೆ ಹೇಗಿರುತ್ತೆ?
ವಚನ: ಕೀರ್ತ 37:11, 29
ಕರಪತ್ರ ಕೊಡುವಾಗ ಹೀಗೆ ಹೇಳಿ: ಇದು ಹೇಗೆ ನಿಜ ಆಗುತ್ತೆ ಅಂತ ಈ ಕರಪತ್ರದಲ್ಲಿ ತಿಳಿಸಲಾಗಿದೆ.
ಸತ್ಯವನ್ನು ಕಲಿಸಿ
ಪ್ರಶ್ನೆ: ಎಲ್ಲಿ ನೋಡಿದರೂ ಕಷ್ಟನೇ ತುಂಬಿತುಳುಕುತ್ತಿದೆ. ಯಾಕೆ?
ವಚನ: 1ಯೋಹಾ 5:19
ಸತ್ಯ: ಪಿಶಾಚನಾದ ಸೈತಾನ ಈ ಲೋಕವನ್ನು ಆಳುತ್ತಿದ್ದಾನೆ.
ಬೈಬಲ್ ಅಧ್ಯಯನ ಅಂದರೇನು?
ವಿಡಿಯೋ ತೋರಿಸುವಾಗ ಹೀಗೆ ಹೇಳಿ: ಇಂದು ಯಾಕೆ ಇಷ್ಟೊಂದು ಕಷ್ಟ ಇದೆ? ನಮ್ಮ ಕುಟುಂಬ ಹೇಗೆ ಸಂತೋಷವಾಗಿ ಇರಬಹುದು? ಎಂಬ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಯೆಹೋವನ ಸಾಕ್ಷಿಗಳು ಉಚಿತ ಚರ್ಚೆ ನಡೆಸುತ್ತಾರೆ. ಈ ಚಿಕ್ಕ ವಿಡಿಯೋ ನಮ್ಮ ಚರ್ಚೆ ಹೇಗೆ ನಡೆಯುತ್ತೆ ಅಂತ ತಿಳಿಸುತ್ತೆ. [ಬೈಬಲ್ ಅಧ್ಯಯನ ಅಂದರೇನು? ವಿಡಿಯೋ ಹಾಕಿ.] ನಾವು ಈ ಪ್ರಕಾಶನವನ್ನು ಬಳಸಿ ಚರ್ಚೆ ಮಾಡಬಹುದು. [ಅಧ್ಯಯನ ಮಾಡುವ ಯಾವುದಾದರೊಂದು ಪ್ರಕಾಶನ ತೋರಿಸಿ, ಸಾಧ್ಯವಾದರೆ ಬೈಬಲ್ ಅಧ್ಯಯನ ಮಾಡಿ ತೋರಿಸಿ.]
ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.