ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 102-105
ನಾವು ಧೂಳಿಯಾಗಿದ್ದೇವೆ ಎಂದು ಯೆಹೋವನು ನೆನಪಿಸಿಕೊಳ್ಳುತ್ತಾನೆ
ಯೆಹೋವನ ಕರುಣೆಯನ್ನು ವರ್ಣಿಸಲು ದಾವೀದನು ಅಲಂಕಾರಗಳನ್ನು ಬಳಸಿದನು.
ಭೂಮಿಗೂ ಆಕಾಶಕ್ಕೂ ಇರುವ ಅಂತರವನ್ನು ನಾವು ಹೇಗೆ ಗ್ರಹಿಸಲು ಆಗುವುದಿಲ್ಲವೋ ಹಾಗೇ ಯೆಹೋವನ ನಿಷ್ಠಾವಂತ ಪ್ರೀತಿಯನ್ನು ಗ್ರಹಿಸಲು ಸಾಧ್ಯವಿಲ್ಲ
ಯೆಹೋವನು ನಮ್ಮ ಪಾಪಗಳನ್ನು ಪೂರ್ವಕ್ಕೂ ಪಶ್ಚಿಮಕ್ಕೂ ಇರುವಷ್ಟು ದೂರ ಅಂದರೆ ನಮ್ಮಿಂದ ಊಹಿಸಲಾಗದಷ್ಟು ದೂರ ಮಾಡುತ್ತಾನೆ
ಮಗನಿಗೆ ಏಟಾದಾಗ ತಂದೆ ಅವನನ್ನು ಕನಿಕರದಿಂದ ಆರೈಕೆ ಮಾಡುವಂತೆಯೇ, ಮಾಡಿದ ಪಾಪಗಳಿಗೆ ನೊಂದು ಪಶ್ಚಾತ್ತಾಪಪಟ್ಟಿರುವವರನ್ನು ಯೆಹೋವನು ಕನಿಕರಿಸುತ್ತಾನೆ