ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 1-10
ಯೆಹೋವನೊಂದಿಗೆ ಶಾಂತಿಯಿಂದ ಇರಬೇಕೆಂದರೆ ಯೇಸುವಿಗೆ ಗೌರವ ತೋರಿಸಲೇಬೇಕು
ಯೆಹೋವ ಮತ್ತು ಯೇಸುವನ್ನು ದ್ವೇಷಿಸುತ್ತಾರೆ ಎಂದು ಪ್ರವಾದಿಸಲಾಗಿದೆ
ಯೇಸುವಿನ ಅಧಿಕಾರವನ್ನು ರಾಷ್ಟ್ರಗಳು ಒಪ್ಪಿಕ್ಕೊಳ್ಳದೆ ತಮ್ಮ ಅಧಿಕಾರವನ್ನೇ ತೋರಿಸುತ್ತಾರೆ ಎಂದು ಪ್ರವಾದಿಸಲಾಗಿತ್ತು.
ಈ ಪ್ರವಾದನೆಯು ಯೇಸು ಭೂಮಿಯಲ್ಲಿದ್ದ ಸಮಯದಲ್ಲಿ ನೆರವೇರಿತು ಮತ್ತು ಇದರ ದೊಡ್ಡ ನೆರವೇರಿಕೆ ನಮ್ಮ ಈ ದಿನಗಳಲ್ಲಾಗಲಿದೆ
ರಾಷ್ಟ್ರಗಳವರು ವ್ಯರ್ಥಕಾರ್ಯವನ್ನು ಯೋಚಿಸುತ್ತಾರೆ ಎಂದು ಕೀರ್ತನೆಗಾರನು ಹೇಳಿದ್ದಾನೆ. ಇದರರ್ಥ ಅವರ ಉದ್ದೇಶಗಳು ಶೂನ್ಯವಾಗಿ ಖಂಡಿತ ಬಿದ್ದುಹೋಗುತ್ತವೆ
ಯೆಹೋವನು ಅಭಿಷೇಕಿಸಿದ ರಾಜನಿಗೆ ಗೌರವ ಕೊಡುವವರು ಮಾತ್ರ ಜೀವ ಪಡೆದುಕೊಳ್ಳುವರು
ಮೆಸ್ಸೀಯ ರಾಜನನ್ನು ವಿರೋಧಿಸುವವರೆಲ್ಲರು ನಾಶವಾಗುವರು
ಮಗನಾದ ಯೇಸುವನ್ನು ಗೌರವಿಸುವ ಪ್ರತಿಯೊಬ್ಬರು ರಕ್ಷಣೆ ಮತ್ತು ಶಾಂತಿಯನ್ನು ಪಡೆಯುವರು