ಡಿಸೆಂಬರ್ 7ರ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 7ರ ವಾರ
ಗೀತೆ 51 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 84 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 10–14 (8 ನಿ.)
ನಂ. 1: 2 ಪೂರ್ವಕಾಲವೃತ್ತಾಂತ 13:13-22 (3 ನಿಮಿಷದೊಳಗೆ)
ನಂ. 2: ಎಪಫ್ರೊದೀತ—ವಿಷಯ: ಭರವಸಾರ್ಹ ಪುರುಷರನ್ನು ಗೌರವಿಸಿ—ಫಿಲಿ 2:25-30; 4:18 (5 ನಿ.)
ನಂ. 3: ಕ್ರಿಸ್ತನ ದೇಹದಲ್ಲಿರುವವರಿಗೆ ಮಾತ್ರ ಸ್ವರ್ಗೀಯ ನಿರೀಕ್ಷೆಯಿದೆ—ಬೈಬಲ್ ವಿಷಯಗಳು 7 ಬಿ (5 ನಿ.)
ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: “ನಾವು ಅನೇಕ ಸಂಕಟಗಳನ್ನು ತಾಳಿ ದೇವರ ರಾಜ್ಯವನ್ನು ಪ್ರವೇಶಿಸಬೇಕು.”—ಅಪೊಸ್ತಲರ ಕಾರ್ಯಗಳು 14:22.
10 ನಿ: “ನಾವು ಅನೇಕ ಸಂಕಟಗಳನ್ನು ತಾಳಿ ದೇವರ ರಾಜ್ಯವನ್ನು ಪ್ರವೇಶಿಸಬೇಕು.” ತಿಂಗಳ ಮುಖ್ಯ ವಿಷಯದ ಮೇಲೆ ಆಧಾರಿತ ಭಾಷಣ. ಅಪೊಸ್ತಲರ ಕಾರ್ಯಗಳು 14:21, 22 ಮತ್ತು 1 ಪೇತ್ರ 4:12-14ನ್ನು ಓದಿ ಚರ್ಚಿಸಿ. (ಕಾವಲಿನಬುರುಜು, ಸೆಪ್ಟೆಂಬರ್ 15, 2014, ಪುಟ 13, ಪ್ಯಾರ 3-6ನ್ನು ನೋಡಿ.) ಈ ತಿಂಗಳ ಸೇವಾ ಕೂಟದ ಕಾರ್ಯಕ್ರಮಗಳ ಬಗ್ಗೆ ಚುಟುಕಾಗಿ ತಿಳಿಸುತ್ತಾ ಅವುಗಳು ಮುಖ್ಯ ವಿಷಯಕ್ಕೆ ಹೇಗೆ ಸಂಬಂಧಿಸಿವೆ ಎಂದು ಹೇಳಿ.
10 ನಿ: ನೀವು ಹೇಗೆ ಉತ್ತರ ಕೊಡಬೇಕು? (ಕೊಲೊ. 4:6) ಭಾಷಣ. ಶುಶ್ರೂಷಾ ಶಾಲೆ ಪುಸ್ತಕ, ಪುಟ 69, ಪ್ಯಾರ 1-3ರ ಆಧಾರಿತ. ಒಂದಕ್ಕೊಂದು ತದ್ವಿರುದ್ಧವಾದ ಎರಡು ಅಭಿನಯಗಳಿರಲಿ. ಮೊದಲನೆಯದ್ದರಲ್ಲಿ, ಮನೆಯವನು ಒರಟಾಗಿ ಮಾತಾಡಿದಾಗ ಪ್ರಚಾರಕನು ಯೋಚಿಸದೆ ಒರಟಾಗಿ ಮಾತಾಡುತ್ತಾನೆ. ಇದರಿಂದಾಗಿ ಪ್ರಚಾರಕನಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುವುದಿಲ್ಲ. ಎರಡನೆಯದ್ದರಲ್ಲಿ, ಮನೆಯವನು ಒರಟಾಗಿ ಮಾತಾಡಿದಾಗ ಪ್ರಚಾರಕನು ಕೆಲವು ಕ್ಷಣಗಳು ಸುಮ್ಮನಿದ್ದು, ಯೋಚಿಸಿ ಮೃದುವಾಗಿ ಉತ್ತರಿಸುತ್ತಾನೆ. ಇದರಿಂದಾಗಿ ಮನೆಯವನು ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾನೆ.
10 ನಿ: “ಪ್ರವಾದಿಗಳನ್ನು ಮಾದರಿ ಮಾಡಿಕೊಳ್ಳಿ—ಹಬಕ್ಕೂಕ.” ಪ್ರಶ್ನೋತ್ತರ.
ಗೀತೆ 74 ಮತ್ತು ಪ್ರಾರ್ಥನೆ