ನವೆಂಬರ್ 9ರ ವಾರಕ್ಕಾಗಿರುವ ಶೆಡ್ಯೂಲ್
ನವೆಂಬರ್ 9ರ ವಾರ
ಗೀತೆ 62 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 80 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 21-25 (8 ನಿ.)
ನಂ. 1: 1 ಪೂರ್ವಕಾಲವೃತ್ತಾಂತ 23:1-11 (3 ನಿಮಿಷದೊಳಗೆ)
ನಂ. 2: ಎಲೀಷ—ವಿಷಯ: ಯೆಹೋವನ ಸೇವಕರನ್ನು ತುಂಬ ಗೌರವಿಸಿ—1 ಅರ 19:16-21; 2 ಅರ 2:3-5; 3:11 (5 ನಿ.)
ನಂ. 3: ರಾಜ್ಯ—‘ಹೃದಯಗಳಲ್ಲಿ’ ಅಲ್ಲ, ಮಾನವರ ಪ್ರಯತ್ನಗಳಿಂದಲೂ ಅಲ್ಲ—ಬೈಬಲ್ ವಿಷಯಗಳು 33 ಸಿ (5 ನಿ.)
ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: “ನಾನು ನೆಟ್ಟೆನು, ಅಪೊಲ್ಲೋಸನು ನೀರುಹೊಯ್ದನು, ಆದರೆ ದೇವರು ಅದನ್ನು ಬೆಳೆಸುತ್ತಾ ಬಂದನು.”—1 ಕೊರಿಂ. 3:6
10 ನಿ: “ನಾನು ನೆಟ್ಟೆನು, ಅಪೊಲ್ಲೋಸನು ನೀರುಹೊಯ್ದನು, ಆದರೆ ದೇವರು ಅದನ್ನು ಬೆಳೆಸುತ್ತಾ ಬಂದನು.” ತಿಂಗಳ ಮುಖ್ಯ ವಿಷಯದ ಮೇಲೆ ಆಧಾರಿತ ಭಾಷಣ. (1 ಕೊರಿಂ. 3:6) ಸಮಯವಿದ್ದಲ್ಲಿ ಜುಲೈ 15, 2008ರ ಕಾವಲಿನಬುರುಜು ಪುಟ 12-16ರಲ್ಲಿರುವ ಅಂಶಗಳನ್ನು ತಿಳಿಸಿ. ಈ ತಿಂಗಳ ಸೇವಾ ಕೂಟದ ಕಾರ್ಯಕ್ರಮಗಳ ಬಗ್ಗೆ ಚುಟುಕಾಗಿ ತಿಳಿಸುತ್ತಾ ಅವುಗಳು ಮುಖ್ಯ ವಿಷಯಕ್ಕೆ ಹೇಗೆ ಸಂಬಂಧಿಸಿವೆ ಎಂದು ಹೇಳಿ.
20 ನಿ: “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಬೈಬಲ್ ಬೋಧಿಸುತ್ತದೆ ಪುಸ್ತಕ ಕೊಡಿ.” ಚರ್ಚೆ. ಎರಡು ಸನ್ನಿವೇಶಗಳನ್ನು ಅಭಿನಯಿಸಿ ತೋರಿಸಿ. ಒಂದು, ಈ ಲೇಖನದಲ್ಲಿ ಕೊಡಲಾಗಿರುವ ಸಲಹೆಯನ್ನು ಪಾಲಿಸುವ ಸನ್ನಿವೇಶ. ಮತ್ತೊಂದು, ಸೇವೆಯಲ್ಲಿ ಪರಿಣಾಮಕಾರಿಯಾಗಿ ಕಂಡುಬಂದ ವೈಯಕ್ತಿಕ ನಿರೂಪಣೆಯನ್ನು ಮಾಡಿ ತೋರಿಸುವ ಸನ್ನಿವೇಶ.
ಗೀತೆ 111 ಮತ್ತು ಪ್ರಾರ್ಥನೆ