ದೇವರ ವಾಕ್ಯ ನಿಮ್ಮ ದಿನನಿತ್ಯದ ಜೀವನವನ್ನು ಪ್ರಭಾವಿಸುತ್ತಿದೆಯಾ?
ಬೈಬಲನ್ನು ಪ್ರತಿದಿನ ಓದುವ ರೂಢಿ ನಾವು ಸತ್ಯದಲ್ಲಿ “ಬೇರೂರಿ” ‘ನಂಬಿಕೆಯಲ್ಲಿ ಸ್ಥಿರವಾಗಿರಲು’ ಸಹಾಯ ಮಾಡುತ್ತದೆ. (ಕೊಲೊ. 2: 6, 7) ಆದರೂ ದೇವರ ವಾಕ್ಯ ನಮ್ಮ ಜೀವನವನ್ನು ಪ್ರಭಾವಿಸಬೇಕೆಂದರೆ, ಓದಿದ ವಿಷಯದ ಬಗ್ಗೆ ಯಾವಾಗಲೂ ಯೋಚಿಸುತ್ತಾ ಅದರಲ್ಲಿರುವ ಮೂಲತತ್ವಗಳನ್ನು ಜೀವನದಲ್ಲಿ ಅನ್ವಯಿಸಿಕೊಳ್ಳಬೇಕು. (ಇಬ್ರಿ. 4:12; ಯಾಕೋ. 1:22-25) ಬೈಬಲ್ ಓದುವಾಗ ಪೂರ್ಣ ಪ್ರಯೋಜನ ಪಡೆಯಲು ಅನುಸರಿಸಬೇಕಾದ 3 ಹೆಜ್ಜೆಗಳ ಬಗ್ಗೆ ಯೆಹೋಶುವ 1:8 ರಲ್ಲಿ ತಿಳಿಸಲಾಗಿದೆ. ಅವು: (1) “ಹಗಲಿರುಳು” ದೇವರ ವಾಕ್ಯವನ್ನು ಓದಬೇಕು. (2) ‘ಧ್ಯಾನಿಸಬೇಕು’ [ತಗ್ಗುದನಿಯಲ್ಲಿ ಓದು, NW] ಅಂದರೆ ಪರಿಸ್ಥಿತಿ ಮತ್ತು ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳುತ್ತಾ ಧ್ಯಾನಿಸಲು ಸಾಧ್ಯವಾಗುವಷ್ಟು ವೇಗದಲ್ಲಿ ಓದಬೇಕು. (3) ‘ಅದರಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು ನಡೆಯಲು’ ನಮ್ಮಿಂದಾದಷ್ಟು ಪ್ರಯತ್ನಿಸಬೇಕು.’ ಈ ಸಲಹೆಗಳನ್ನು ಪಾಲಿಸುವುದಾದರೆ ಜೀವನದಲ್ಲಿ ‘ಯಶಸ್ಸನ್ನು ಪಡೆಯುತ್ತೇವೆ ಮತ್ತು ಯಾವಾಗಲೂ ವಿವೇಕಯುತ’ ನಿರ್ಣಯಗಳನ್ನೇ ಮಾಡುತ್ತೇವೆ.