ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
2015 ಅಕ್ಟೋಬರ್ 26 ರ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುವುದು.
2 ಅರಸುಗಳು 13:18, 19 ರಲ್ಲಿರುವ ವೃತ್ತಾಂತವು ದೇವರ ಸೇವೆಯನ್ನು ಹುರುಪಿನಿಂದಲೂ ಮನಃಪೂರ್ವಕವಾಗಿಯೂ ಮಾಡುವುದರ ಪ್ರಾಮುಖ್ಯತೆಯನ್ನು ಹೇಗೆ ತೋರಿಸುತ್ತದೆ? [ಸೆಪ್ಟೆಂ. 7, ಕಾವಲಿನಬುರುಜು 10 4/15 ಪು. 26 ಪ್ಯಾ. 11]
ಯೋನನು ಪ್ರವಾದಿಯಾಗಿದ್ದಾಗ ಇಸ್ರಾಯೇಲನ್ನು ಆಳುತ್ತಿದ್ದ ರಾಜ ಯಾರು ಮತ್ತು 2 ಅರಸುಗಳು 14:23-25 ರಲ್ಲಿರುವ ಯಾವ ಅಂಶವು ಯೋನನ ಸೇವೆಯನ್ನು ಮೆಚ್ಚುವಂತೆ ಮಾಡುತ್ತದೆ? [ಸೆಪ್ಟೆಂ. 7, ಕಾವಲಿನಬುರುಜು 09 ಏಪ್ರಿಲ್-ಜೂನ್ ಪು. 28 ಪ್ಯಾ. 4]
ಯೆಶಾಯನ ಮೂಲಕ ತಿಳಿಸಿದ ದೇವರ ಮಾತಿನಲ್ಲಿ ತನಗೆ ಭರವಸೆಯಿಲ್ಲವೆಂದು ಆಹಾಜನು ಹೇಗೆ ತೋರಿಸಿದನು ಮತ್ತು ಪ್ರಮುಖ ನಿರ್ಣಯಗಳನ್ನು ಮಾಡುವಾಗ ನಾವು ಯಾವ ಪ್ರಶ್ನೆಯನ್ನು ಕೇಳಿಕೊಳ್ಳಬೇಕು? (2 ಅರ. 16:7) [ಸೆಪ್ಟೆಂ. 14, ಕಾವಲಿನಬುರುಜು 13 11/15 ಪು. 17 ಪ್ಯಾ. 5]
ರಬ್ಷಾಕೆ ಮಾಡಿದ ಯಾವ ಕುತಂತ್ರವನ್ನು ಇಂದಿನ ದೇವಜನರ ವಿರೋಧಿಗಳು ಮಾಡುತ್ತಿದ್ದಾರೆ ಮತ್ತು ವಿರೋಧಿಗಳ ಸುಳ್ಳು ತರ್ಕಗಳನ್ನು ತಿರಸ್ಕರಿಸಲು ಯಾವ ಗುಣ ನಮಗೆ ಸಹಾಯ ಮಾಡುತ್ತದೆ? (2 ಅರ. 18:22, 25) [ಸೆಪ್ಟೆಂ. 14,ಕಾವಲಿನಬುರುಜು 10 7/15 ಪು. 13 ಪ್ಯಾ. 3-4]
ಬೈಬಲ್ ವಾಚನ ಮತ್ತು ಅಧ್ಯಯನದಿಂದ ನಾವು ಸಂಪೂರ್ಣ ಪ್ರಯೋಜನ ಪಡೆಯಲು ಯೋಷೀಯನ ದೀನತೆಯ ಉದಾಹರಣೆ ಹೇಗೆ ಸಹಾಯ ಮಾಡುತ್ತದೆ? (2 ಅರ. 22:19, 20) [ಸೆಪ್ಟೆಂ. 21, ಕಾವಲಿನಬುರುಜು 00 3/1 ಪು. 30 ಪ್ಯಾ. 2]
2 ಅರಸುಗಳು 24:3, 4 ರಿಂದ ನಾವೇನು ಕಲಿಯಬಹುದು? [ಸೆಪ್ಟೆಂ. 28, ಕಾವಲಿನಬುರುಜು 05 8/1 ಪು. 12 ಪ್ಯಾ. 1]
ಯಾಬೇಚನು ಪ್ರಾರ್ಥನೆಯಲ್ಲಿ ಯೆಹೋವನಿಗೆ ಯಾವ ಮೂರು ವಿನಂತಿಗಳನ್ನು ಮಾಡಿದನು ಮತ್ತು ನಾವು ಮಾಡುವ ಪ್ರಾರ್ಥನೆ ಹೇಗಿರಬೇಕೆಂದು ಇದು ಕಲಿಸುತ್ತದೆ? (1 ಪೂರ್ವ. 4:9, 10) [ಅಕ್ಟೋ. 5, ಕಾವಲಿನಬುರುಜು 11 ಏಪ್ರಿಲ್–ಜೂನ್ಪು. 23]
1 ಪೂರ್ವಕಾಲವೃತ್ತಾಂತ 5:18-22 ರಲ್ಲಿ ವಿವರಿಸಲಾಗಿರುವ ಯುದ್ಧದ ಫಲಿತಾಂಶವು ಆಧ್ಯಾತ್ಮಿಕ ಯುದ್ಧವನ್ನು ಧೈರ್ಯದಿಂದ ಎದುರಿಸಲು ನಮ್ಮಲ್ಲಿ ಹೇಗೆ ಬಲವನ್ನು ತುಂಬಿಸುತ್ತದೆ? [ಅಕ್ಟೋ. 12, ಕಾವಲಿನಬುರುಜು 05 10/1 ಪು. 9, ಪ್ಯಾ. 7]
ರಕ್ತದ ಕುರಿತಾಗಿ ಯೆಹೋವನು ಕೊಟ್ಟ ನಿಯಮದ ಹಿಂದಿರುವ ಮೂಲತತ್ವವನ್ನು ಅರ್ಥಮಾಡಿಕೊಳ್ಳಲು ಮತ್ತು ಅದನ್ನು ಗೌರವಿಸಲು ದಾವೀದನಿಗೆ ಏಕೆ ಸಾಧ್ಯವಾಯಿತು ಮತ್ತು ದಾವೀದನ ಈ ಉದಾಹರಣೆಯು ನಾವೇನು ಮಾಡುವಂತೆ ಕಲಿಸುತ್ತದೆ? (1 ಪೂರ್ವ. 11:17-19) [ಅಕ್ಟೋ. 19, ಕಾವಲಿನಬುರುಜು 12 11/15 ಪು. 6-7, ಪ್ಯಾ. 12-14]
ಒಡಂಬಡಿಕೆಯ ಮಂಜೂಷವನ್ನು ಯೆರೂಸಲೇಮಿಗೆ ತರಲು ಯೋಜಿಸಿದಾಗ ದಾವೀದನು ಏನು ಮಾಡಲು ತಪ್ಪಿಹೋದನು ಮತ್ತು ಈ ವೃತ್ತಾಂತದಿಂದ ನಾವು ಯಾವ ಪ್ರಾಮುಖ್ಯ ಪಾಠವನ್ನು ಕಲಿಯಬಹುದು? (1 ಪೂರ್ವ. 15:13) [ಅಕ್ಟೋ. 26, ಕಾವಲಿನಬುರುಜು 03 5/1 ಪು. 10-11, ಪ್ಯಾ. 11-13]