ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ ಮೇ ಮತ್ತು ಜೂನ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಅಥವಾ ಕೆಳಕಂಡ ಕರಪತ್ರಗಳು: ಪರದೈಸಿಗೆ ಹೋಗುವ ಹಾದಿಯನ್ನು ಕಂಡುಕೊಳ್ಳುವ ವಿಧ, ಕಷ್ಟಾನುಭವವು ಎಂದಾದರೂ ಕೊನೆಗೊಳ್ಳುವುದೊ?, ಸರ್ವಶ್ರೇಷ್ಠ ಹೆಸರು, ಯೆಹೋವನ ಸಾಕ್ಷಿಗಳು ಯಾರು?, ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಜುಲೈ ಮತ್ತು ಆಗಸ್ಟ್: ದೇವರಿಂದ ನಿಮಗೊಂದು ಸಿಹಿಸುದ್ದಿ! ಅಥವಾ ಲಭ್ಯವಿರುವ ಯಾವುದೇ 32 ಪುಟಗಳ ಕಿರುಹೊತ್ತಗೆಗಳು.
◼ ಸಂಪರ್ಕಕ್ಕಾಗಿ ಬ್ರಾಂಚ್ ಆಫೀಸಿಗೆ ಕೊಟ್ಟಿರುವ ಸಭೆಯ ವಿಳಾಸ ಮತ್ತು ಫೋನ್ ನಂಬರ್‌ಗಳು ಸರಿಯಿದೆಯಾ ಎಂದು ಸಭೆಯ ಸೇವಾ ಕಮಿಟಿಯು ಖಚಿತ ಪಡಿಸಿಕೊಳ್ಳಬೇಕು. ಒಂದುವೇಳೆ ಪತ್ರಗಳನ್ನು ಕಳುಹಿಸಬೇಕಾದ ವಿಳಾಸದಲ್ಲಿ ಯಾವುದೇ ಬದಲಾವಣೆಯಾದರೆ ಸಭೆಯ ಸೇವಾ ಕಮಿಟಿಯು ಹಿರಿಯರ ಮಂಡಲಿಯ ಸಂಯೋಜಕ/ಸೆಕ್ರೆಟರಿಯ ವಿಳಾಸದ ಬದಲಾವಣೆ (S-29) ಫಾರ್ಮನ್ನು ಭರ್ತಿಮಾಡಿ ಬ್ರಾಂಚ್ ಆಫೀಸಿಗೆ ಕಳುಹಿಸತಕ್ಕದ್ದು. ಸಾಹಿತ್ಯಗಳನ್ನು ತಲುಪಿಸಬೇಕಾದ ವಿಳಾಸದಲ್ಲಿ ಬದಲಾವಣೆಯಿದ್ದಲ್ಲಿ ಶಿಪ್ಪಿಂಗ್ ಇನ್‌ಫಾರ್ಮೆಷನ್ (S-36) ಫಾರ್ಮನ್ನು ಭರ್ತಿಮಾಡಿ ಕಳುಹಿಸಿ. ಯಾವ ವಿಳಾಸದಲ್ಲಿ ಬದಲಾವಣೆಯಿದೆಯೋ ಅದಕ್ಕೆ ಸೂಕ್ತವಾದ ಫಾರ್ಮನ್ನೇ ಭರ್ತಿ ಮಾಡಿ ಬ್ರಾಂಚ್ ಆಫೀಸಿಗೆ ಕಳುಹಿಸಬೇಕು ಅಂತ ಗಮನದಲ್ಲಿಟ್ಟುಕೊಳ್ಳಿ.