ನವೆಂಬರ್ 3ರ ವಾರಕ್ಕಾಗಿರುವ ಶೆಡ್ಯೂಲ್
ನವೆಂಬರ್ 3ರ ವಾರ
ಗೀತೆ 32 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 15 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಧರ್ಮೋಪದೇಶಕಾಂಡ 14-18 (10 ನಿ.)
ನಂ. 1: ಧರ್ಮೋಪದೇಶಕಾಂಡ 15:16–16:8 (4 ನಿಮಿಷದೊಳಗೆ)
ನಂ. 2: ವಿಗ್ರಹಾರಾಧನೆ ಇಸ್ರಾಯೇಲ್ ಜನಾಂಗಕ್ಕೆ ವಿನಾಶ ತಂದಿತು—ಬೈಬಲ್ ವಿಷಯಗಳು 35 ಬಿ (5 ನಿ.)
ನಂ. 3: ಉರಿಯುತ್ತಿರುವ ಪೊದೆ—ಬೈಬಲ್ ಕಥೆಗಳು, ಕಥೆ 30 (5 ನಿ.)
❑ ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: “ವಾಕ್ಯವನ್ನು ಸಾರು . . . ತುರ್ತಿನಿಂದ ಅದರಲ್ಲಿ ತಲ್ಲೀನನಾಗಿರು.”—2 ತಿಮೊ. 4:2.
10 ನಿ: ಧೈರ್ಯ ಮತ್ತು ವಿವೇಚನೆಯಿಂದ ಸಾರುವುದು ಭಾಷಣ. ಜನವರಿ 2008ರ ನಮ್ಮ ರಾಜ್ಯ ಸೇವೆಯಲ್ಲಿರುವ ಲೇಖನದ ಮೇಲೆ ಆಧರಿತ.
10 ನಿ: ಅವರು ಹೇಗೆ ತುರ್ತಿನಿಂದ ಸಾರುತ್ತಿದ್ದಾರೆ? ಸೇವೆಯನ್ನು ಹೆಚ್ಚಿಸಲು ಅಥವಾ ಪಯನೀಯರ್ ಸೇವೆ ಮಾಡಲು ತಮ್ಮ ಕೆಲಸಕಾರ್ಯಗಳನ್ನು ಹೊಂದಿಸಿಕೊಂಡು ಸಮಯ ಮಾಡಿಕೊಂಡ ಇಬ್ಬರು ಅಥವಾ ಮೂವರು ಪ್ರಚಾರಕರನ್ನು ಹಿರಿಯನು ಸಂದರ್ಶನ ಮಾಡಲಿ. ಕೊನೆಯಲ್ಲಿ, ಸಭೆಯ ಕ್ಷೇತ್ರ ಸೇವಾ ಏರ್ಪಾಡುಗಳನ್ನು ಚುಟುಕಾಗಿ ತಿಳಿಸಿ ಮತ್ತು ಸೇವೆಯಲ್ಲಿ ಪೂರ್ಣವಾಗಿ ಭಾಗವಹಿಸಲು ಹೆಜ್ಜೆ ತಕ್ಕೊಳ್ಳುವಂತೆ ಎಲ್ಲರನ್ನು ಉತ್ತೇಜಿಸಿ.
10 ನಿ: ನಿಮ್ಮ ಸೇವೆ ಹೇಗೆ ಪ್ರಗತಿ ಹೊಂದಿದೆ? ಸೇವಾ ಮೇಲ್ವಿಚಾರಕನಿಂದ ಚರ್ಚೆ. ಇತ್ತೀಚಿನ ತಿಂಗಳುಗಳಲ್ಲಿ ಮೂಡಿಬಂದ “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು” ಎಂಬ ಲೇಖನಗಳು ಸೇವೆಯಲ್ಲಿ ಪ್ರಗತಿ ಹೊಂದಲು ಹೇಗೆ ಸಹಾಯ ಮಾಡಿದೆ ಎಂದು ಸಭಿಕರನ್ನು ಕೇಳಿ. ಆ ಲೇಖನಗಳಲ್ಲಿರುವ ಸಲಹೆಗಳನ್ನು ಪಾಲಿಸುವ ಮೂಲಕ ತುರ್ತಿನಿಂದ ಸಾರುವಂತೆ ಎಲ್ಲರನ್ನು ಹುರಿದುಂಬಿಸುತ್ತಾ ಕೊನೆಗೊಳಿಸಿ.
ಗೀತೆ 100 ಮತ್ತು ಪ್ರಾರ್ಥನೆ