ಸಾರುವ ವಿಷಯದಲ್ಲಿ ತುರ್ತು ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಹೇಗೆ?
ತುರ್ತು ಪ್ರಜ್ಞೆ ತನ್ನಿಂದ ತಾನೇ ಬರುವುದಿಲ್ಲ, ನಾವದನ್ನು ಬೆಳೆಸಿಕೊಳ್ಳಬೇಕು. ಈ ಲೋಕದ ಅಂತ್ಯದಿಂದ ಪಾರಾಗಲು ಆ ಮನೋಭಾವ ನಮ್ಮಲ್ಲಿರುವುದು ತುಂಬ ಅಗತ್ಯ. ನಮಗಿರುವ ತುರ್ತು ಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳಲು ಇಲ್ಲಿ ಕೆಲವು ಮರುಜ್ಞಾಪನಗಳಿವೆ:
• ದೇವರ ರಾಜ್ಯ ಬರಲಿ ಎಂದು ಯಾವಾಗಲೂ ಪ್ರಾರ್ಥಿಸಿ.—ಮತ್ತಾ. 6:10.
• ಬೈಬಲನ್ನು ಪ್ರತಿದಿನ ಓದುವ ಮೂಲಕ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿ.—ಇಬ್ರಿ. 3:12.
• ಸಮಯವನ್ನು ವಿವೇಕದಿಂದ ಉಪಯೋಗಿಸಿ.—ಎಫೆ. 5:15, 16; ಫಿಲಿ. 1:10.
• ಕಣ್ಣು ‘ಸರಳವಾಗಿರಲಿ’ ಅಂದರೆ ಪ್ರಾಮುಖ್ಯ ವಿಷಯದ ಮೇಲೆ ಕೇಂದ್ರಿತವಾಗಿರಲಿ. ಲೋಕದ ಆಶೆಗಳ ಕಡೆಗೆ ನಿಮ್ಮ ಗಮನ ತಿರುಗದಿರಲಿ.—ಮತ್ತಾ. 6:22, 25; 2 ತಿಮೊ. 4:10.
• ಬೈಬಲ್ ಪ್ರವಾದನೆ ನೆರವೇರಿಕೆ ಹೊಂದುತ್ತಿರುವುದಕ್ಕೆ ಗಮನಕೊಡುತ್ತಾ ಸದಾ ಎಚ್ಚರವಾಗಿರಿ.—ಮಾರ್ಕ 13:35-37.
ನಾವು ಮಾಡಿಮುಗಿಸಲಿಕ್ಕಿರುವ ಸಾರುವ ಕಾರ್ಯದಲ್ಲಿ ಪೂರ್ಣವಾಗಿ ಭಾಗವಹಿಸುವಂತೆ ತುರ್ತು ಪ್ರಜ್ಞೆ ಪ್ರಚೋದಿಸುತ್ತದೆ.—ಯೋಹಾ. 4:34, 35.