ಫೆಬ್ರವರಿ 24ರ ವಾರಕ್ಕಾಗಿರುವ ಶೆಡ್ಯೂಲ್
ಫೆಬ್ರವರಿ 24ರ ವಾರ
ಗೀತೆ 69 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್—ಅದರಲ್ಲಿ ಏನಿದೆ? ಪಾಠ 10 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 32-35 (10 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ (20 ನಿ.)
ಸೇವಾ ಕೂಟ:
8 ನಿ: “ಕ್ರಿಸ್ತನ ಮರಣದ ಸ್ಮರಣೆಯ ಪ್ರಯುಕ್ತ ಅಭಿಯಾನ- ಮಾರ್ಚ್ 22ರಿಂದ.” ಸೇವಾ ಮೇಲ್ವಿಚಾರಕನಿಂದ ಭಾಷಣ. ಪ್ರತಿಯೊಬ್ಬರಿಗೂ ಒಂದೊಂದು ಆಮಂತ್ರಣ ಪತ್ರ ಕೊಡಿ ಮತ್ತು ಅದರಲ್ಲಿರುವ ವಿಷಯಗಳನ್ನು ಚರ್ಚಿಸಿ. ಹಿರಿಯರಿಗೆ ಕಳುಹಿಸಲಾಗಿರುವ ಸಲಹಾಪತ್ರದಿಂದ ಅನ್ವಯಿಸಬಹುದಾದ ಅಂಶಗಳ ಮತ್ತು ಸೇವಾಕ್ಷೇತ್ರವನ್ನು ಆವರಿಸಲು ಮಾಡಿರುವ ಸ್ಥಳೀಯ ಏರ್ಪಾಡುಗಳ ಬಗ್ಗೆ ತಿಳಿಸಿ.
22 ನಿ: “ಸಾರುವ ಮುನ್ನ ನೀವು ಹುಡುಕಬೇಕಾಗಬಹುದು.” ಪ್ರಶ್ನೋತ್ತರ. ಈ ಲೇಖನದಲ್ಲಿನ ಸಲಹೆಗಳನ್ನು ಸ್ಥಳೀಯವಾಗಿ ಹೇಗೆ ಅನ್ವಯಿಸಬಹುದೆಂದು ಒತ್ತಿ ಹೇಳಿ. ಸಭೆಯಲ್ಲಿ ಒಂದು ಭಾಷಾಗುಂಪು ಇರುವುದಾದರೆ ಅಥವಾ ಸಭೆಯ ಭಾಷೆಯನ್ನಾಡುವ ಜನರನ್ನು ಹುಡುಕುವ ಅವಶ್ಯಕತೆಯಿದ್ದರೆ 5ನೇ ಪ್ಯಾರ ಪರಿಗಣಿಸುವಾಗ ಹುಡುಕುವ ಕೆಲಸದಲ್ಲಿ ಹೇಗೆ ಮಾತಾಡಬಹುದೆಂಬ ಪ್ರಾತ್ಯಕ್ಷಿಕೆ ಇರಲಿ.
ಗೀತೆ 96 ಮತ್ತು ಪ್ರಾರ್ಥನೆ