ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
2014 ಫೆಬ್ರವರಿ 24ರ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುವುದು.
ಹವ್ವಳು ಯಾವುದರ ಮೇಲೆ ಗಮನಕೇಂದ್ರೀಕರಿಸುವಂತೆ ಸೈತಾನನು ಮಾಡಿದನು? ನಿಷೇಧಿತ ಹಣ್ಣನ್ನು ತಿನ್ನುವ ಮೂಲಕ ಆಕೆ ಏನನ್ನು ತೋರಿಸಿಕೊಟ್ಟಳು? (ಆದಿ. 3:6) [ಜನ. 6, ಕಾವಲಿನಬುರುಜು 11 5/15 ಪು. 16 ಪ್ಯಾ. 5]
ಹೇಬೆಲ ಹೇಗೆ ಅಚಲ ನಂಬಿಕೆ ಬೆಳೆಸಿಕೊಂಡಿರಬಹುದು? ಇದರಿಂದ ಏನು ಫಲಿಸಿತು? (ಆದಿ. 4:4, 5; ಇಬ್ರಿ. 11:4) [ಜನ. 6, ಕಾವಲಿನಬುರುಜು 13 1/1 ಪು. 14 ಪ್ಯಾ. 4-5]
ಶುದ್ಧ ಮತ್ತು ಅಶುದ್ಧ ಪಶುಗಳ ನಡುವಿನ ಭಿನ್ನತೆಯನ್ನು ಗುರುತಿಸಲಿಕ್ಕಾಗಿ ಯಾವುದನ್ನು ಆಧಾರವಾಗಿ ಉಪಯೋಗಿಸಲಾಯಿತು? (ಆದಿ. 7:2) [ಜನ. 13, ಕಾವಲಿನಬುರುಜು 04 1/1 ಪು. 29 ಪ್ಯಾ. 7]
ಆದಿಕಾಂಡ 19:14-17, 26ರಲ್ಲಿ ಲೋಟ ಮತ್ತು ಅವನ ಹೆಂಡತಿಯ ಕುರಿತ ವೃತ್ತಾಂತದಿಂದ ನಾವೇನು ಕಲಿಯಬಹುದು? [ಜನ. 27, ಕಾವಲಿನಬುರುಜು 03 1/1 ಪು. 16 ಪ್ಯಾ. 20]
ತನ್ನೆಲ್ಲ ವಾಗ್ದಾನಗಳು ಸತ್ಯವಾಗುವವು ಎಂದು ದೇವರು ಅಬ್ರಹಾಮನಿಗೆ ಆಣೆಯಿಟ್ಟು ಹೇಳಿದ್ದೇಕೆ? (ಆದಿ. 22: 15-18) [ಫೆಬ್ರ. 3, ಕಾವಲಿನಬುರುಜು 12 10/15 ಪು. 24 ಪ್ಯಾ. 7]
ಆದಿಕಾಂಡ 25:23ರಲ್ಲಿರುವ “ಹಿರಿಯದು ಕಿರಿಯದಕ್ಕೆ ಸೇವೆಮಾಡುವುದು” ಎಂಬ ಪ್ರವಾದನಾ ಮಾತುಗಳಿಂದ ಯಾವ ಮುಖ್ಯ ಸತ್ಯಗಳನ್ನು ಕಲಿಯುತ್ತೇವೆ? [ಫೆಬ್ರ. 10, ಕಾವಲಿನಬುರುಜು 03 10/15 ಪು. 29 ಪ್ಯಾ. 2]
ಯಾಕೋಬನು ಕನಸಿನಲ್ಲಿ ಕಂಡ ‘ನಿಚ್ಚಣಿಗೆಯ’ ಅರ್ಥವೇನು? (ಆದಿ. 28:12, 13) [ಫೆಬ್ರ. 10, ಕಾವಲಿನಬುರುಜು 04 1/15 ಪು. 28 ಪ್ಯಾ. 6]
ರಾಹೇಲಳು ಕಾಮಜನಕ ಫಲಗಳಿಗಾಗಿ ಗರ್ಭಿಣಿಯಾಗುವ ಅವಕಾಶವನ್ನು ತೊರೆದದ್ದೇಕೆ? (ಆದಿ. 30:14, 15) [ಫೆಬ್ರ. 17, ಕಾವಲಿನಬುರುಜು 04 1/15 ಪು. 28 ಪ್ಯಾ. 7]
ಆಶೀರ್ವಾದಕ್ಕಾಗಿ ಪಟ್ಟುಹಿಡಿಯುವುದರಲ್ಲಿ ನಾವು ಯಾಕೋಬನ ಮಾದರಿಯನ್ನು ಹೇಗೆ ಅನುಕರಿಸಬಹುದು? (ಆದಿ. 32:24-29) [ಫೆಬ್ರ. 24, ಕಾವಲಿನಬುರುಜು 04 1/15 ಪು. 28 ಪ್ಯಾ. 9]
ದೀನಳು ಅನುಭವಿಸಿದ ಭೀಕರ ಫಲಿತಾಂಶಗಳನ್ನು ತಡೆಯಬಹುದಾದ ಒಂದು ವಿಧ ಯಾವುದು? (ಆದಿ. 34:1, 2) [ಫೆಬ್ರ. 24, ಕಾವಲಿನಬುರುಜು 01 8/1 ಪು. 20-21]