ಮೊದಲ ಶನಿವಾರದಂದು ಬೈಬಲ್ ಅಧ್ಯಯನ ಆರಂಭಿಸಿ
ಮೇ 2011ರ ಆರಂಭದಿಂದ ಪ್ರತಿ ತಿಂಗಳ ಮೊದಲ ಶನಿವಾರದಂದು ಬೈಬಲ್ ಅಧ್ಯಯನ ಆರಂಭಿಸುವಂತೆ ಎಲ್ಲಾ ಪ್ರಚಾರಕರನ್ನು ಉತ್ತೇಜಿಸಲಾಗಿತ್ತು. ಇದಕ್ಕೆ ಸಹಾಯವಾಗಲೆಂದೇ ಕಾವಲಿನಬುರುಜು ಸಾರ್ವಜನಿಕ ಆವೃತ್ತಿಯಲ್ಲಿ “ಬೈಬಲ್ ಕೊಡುವ ಉತ್ತರ” ಎಂಬ ಲೇಖನವನ್ನು ಪರಿಚಯಿಸಲಾಗಿದೆ. ಆದ್ದರಿಂದ ಮೊದಲ ಶನಿವಾರದಂದು ನಡೆಯುವ ಕ್ಷೇತ್ರ ಸೇವಾಕೂಟದಲ್ಲಿ ಈ ಲೇಖನವನ್ನು ಪರಿಚಯಿಸಿ ಹೇಗೆ ಬೈಬಲ್ ಅಧ್ಯಯನವನ್ನು ನಡೆಸಬಹುದೆಂದು ಪ್ರಾತ್ಯಕ್ಷಿಕೆ ತೋರಿಸಿ ಚರ್ಚಿಸಬೇಕು.
ಹಿರಿಯರು ತಮ್ಮ ಕ್ಷೇತ್ರ ಸೇವಾ ಗುಂಪಿನೊಂದಿಗೆ ಮೊದಲ ಶನಿವಾರ ಕೂಟವನ್ನು ನಡೆಸಬಹುದು ಅಥವಾ ಎಲ್ಲಾ ಗುಂಪನ್ನು ಒಟ್ಟು ಸೇರಿಸಿ ರಾಜ್ಯ ಸಭಾಗೃಹದಲ್ಲಿ ನಡೆಸಬಹುದು. ಒಂದುವೇಳೆ ಒಂದಕ್ಕಿಂತ ಹೆಚ್ಚು ಸಭೆಯವರು ರಾಜ್ಯ ಸಭಾಗೃಹವನ್ನು ಬಳಸುತ್ತಿದ್ದರೆ ಕೂಟವನ್ನು ಬೇರೆ ದಿನದಲ್ಲಿ ಇಡಬಾರದು, ತಮ್ಮತಮ್ಮ ಗುಂಪಿನೊಂದಿಗೆ ಕೂಟ ನಡೆಸಬೇಕು.