ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
2013 ಆಗಸ್ಟ್ 26ರ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುವುದು. ಪ್ರತಿಯೊಂದು ಪ್ರಶ್ನೆಯೊಂದಿಗೆ ಅದನ್ನು ಚರ್ಚಿಸಲಾಗುವ ವಾರವನ್ನು ಕೊಡಲಾಗಿದೆ. ಹೀಗೆ ಆಯಾ ವಾರದಂದು ಶಾಲೆಗಾಗಿ ತಯಾರಿ ಮಾಡುವಾಗ ಸಂಶೋಧನೆ ಮಾಡಲು ಸಾಧ್ಯವಾಗುವುದು.
1. ರಾಜ ಹೆರೋದ ಮನುಷ್ಯರಿಂದ ಘನಮಾನವನ್ನು ಸ್ವೀಕರಿಸಿದ ಪ್ರಸಂಗದಿಂದ ನಾವು ಯಾವ ಪ್ರಮುಖ ಪಾಠ ಕಲಿಯುತ್ತೇವೆ? (ಅ. ಕಾ. 12:21-23) [ಜುಲೈ 1, ಕಾವಲಿನಬುರುಜು 08 5/15 ಪು. 32 ಪ್ಯಾ. 7]
2. ತಿಮೊಥೆಯನ ಮಾದರಿಯನ್ನು ಅನುಕರಿಸುವುದರಿಂದ ಯುವಜನತೆ ಹೇಗೆ ಪ್ರಯೋಜನ ಪಡೆಯಬಹುದು? (ಅ. ಕಾ. 16:1, 2) [ಜುಲೈ 8, ಕಾವಲಿನಬುರುಜು 08 5/15 ಪು. 32 ಪ್ಯಾ. 10]
3. ಅಪೊಲ್ಲೋಸ ಎಫೆಸದಲ್ಲಿದ್ದ ಸಭಾಮಂದಿರದಲ್ಲಿ ‘ಧೈರ್ಯದಿಂದ ಮಾತಾಡುತ್ತಿದ್ದದ್ದನ್ನು’ ನೋಡಿದಾಗ ಅಕ್ವಿಲ ಪ್ರಿಸ್ಕಿಲ್ಲರು ಅವನಿಗೆ ಹೇಗೆ ಹೆಚ್ಚಿನ ನೆರವು ನೀಡಿದರು? (ಅ. ಕಾ. 18:24-26) [ಜುಲೈ 15, ಕಾವಲಿನಬುರುಜು 10 6/15 ಪು. 11 ಪ್ಯಾ. 4]
4. ಸುವಾರ್ತೆ ಸಾರುವ ಹಕ್ಕನ್ನು ಸಮರ್ಥಿಸಲು ಯೆಹೋವನ ಸಾಕ್ಷಿಗಳು ನ್ಯಾಯಾಲಯದ ಮೊರೆ ಹೋಗಬಹುದೆಂಬದಕ್ಕೆ ಯಾವ ಶಾಸ್ತ್ರೀಯ ಆಧಾರವಿದೆ? (ಅ. ಕಾ. 25:10-12) [ಜುಲೈ 22, ಕಾವಲಿನಬುರುಜು 03 10/1 ಪು. 15ರ ಚೌಕ]
5. ಪೌಲ ರೋಮ್ನಲ್ಲಿ ಸೆರೆಯಾಳಾಗಿದ್ದಾಗ ಕೂಡ ಸಾರಲು ಯಾವೆಲ್ಲ ವಿಧಾನಗಳನ್ನು ಬಳಸಿದನು? ಅವನ ಮಾದರಿಯನ್ನು ಇಂದು ಯೆಹೋವನ ಸೇವಕರು ಹೇಗೆ ಅನುಕರಿಸುತ್ತಿದ್ದಾರೆ? (ಅ. ಕಾ. 28:17, 23, 30, 31) [ಜುಲೈ 29, ಕಾವಲಿನಬುರುಜು 12 1/15 ಪು. 12, 13 ಪ್ಯಾ. 18, 21]
6. ನಾವು ಯಾಕೆ ಸುವಾರ್ತೆ ಸಾರುತ್ತೇವೆ? (ರೋಮ. 1:14, 15) [ಆಗ. 5, ಕಾವಲಿನಬುರುಜು 08 6/15 ಪು. 30 ಪ್ಯಾ. 2]
7. “ಪೂರ್ವದಲ್ಲಿ ಸಂಭವಿಸಿದ ಪಾಪಗಳನ್ನು” ‘ಕ್ರಿಸ್ತ ಯೇಸು ವಿಮೋಚನಾ ಮೌಲ್ಯ ನೀಡುವ’ ಮೊದಲೇ ಹೇಗೆ ಕ್ಷಮಿಸಸಾಧ್ಯವಿತ್ತು? (ರೋಮ. 3:24, 25) [ಆಗ. 5, ಕಾವಲಿನಬುರುಜು 08 6/15 ಪು. 29 ಪ್ಯಾ. 6]
8. ಕಷ್ಟಗಳಿಂದ ಕಂಗೆಟ್ಟಾಗ ಏನು ಪ್ರಾರ್ಥನೆ ಮಾಡೋದು ಅಂತ ತೋಚದ ವ್ಯಕ್ತಿಗಳಿಗಾಗಿ ಯೆಹೋವ ದೇವರು ಪ್ರೀತಿಯಿಂದ ಯಾವ ಏರ್ಪಾಡು ಮಾಡಿದ್ದಾನೆ? (ರೋಮ. 8:26, 27) [ಆಗ. 12, ಕಾವಲಿನಬುರುಜು 08 6/15 ಪು. 30 ಪ್ಯಾ. 10]
9. “ಅತಿಥಿಸತ್ಕಾರದ ಪಥವನ್ನು ಅನುಸರಿಸಿರಿ” ಎನ್ನುವುದರ ಅರ್ಥವೇನು? (ರೋಮ. 12:13) [ಆಗ. 19, ಕಾವಲಿನಬುರುಜು 09 10/15 ಪು. 5-6 ಪ್ಯಾ. 12-13]
10. “ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳಿರಿ” ಅಂತ ಪೌಲ ಕೊಟ್ಟ ಸಲಹೆಯನ್ನು ಪಾಲಿಸುವುದು ಹೇಗೆ? (ರೋಮ. 13:14) [ಆಗ. 26, ಕಾವಲಿನಬುರುಜು 05 1/1 ಪು. 11-12 ಪ್ಯಾ. 20-22]