ದೇವರ ವಾಕ್ಯ ಬೋಧನೆಗೆ ಉಪಯುಕ್ತ
1. ಯಾವ ವಿಷಯದ ಮೇಲೆ 2014ರ ಸರ್ಕಿಟ್ ಸಮ್ಮೇಳನ ಆಧರಿತವಾಗಿದೆ? ಆ ಸಮ್ಮೇಳನದಲ್ಲಿ ಯಾವ ಪ್ರಶ್ನೆಗೆ ಉತ್ತರ ಸಿಗುತ್ತದೆ?
1 “ಮಹೋನ್ನತ ಬೋಧಕ”ನಾದ ಯೆಹೋವ ದೇವರು ವಿಶ್ವದಲ್ಲೇ ಅತ್ಯುತ್ತಮ ಶಿಕ್ಷಕ. (ಯೆಶಾ. 30:20, 21) ಆತ ನಮ್ಮನ್ನು ಹೇಗೆ ಬೋಧಿಸುತ್ತಾನೆ? ಅದಕ್ಕಾಗಿ ನಮಗೆ ಬೈಬಲನ್ನು ಕೊಟ್ಟಿದ್ದಾನೆ. ಆತನ ಪ್ರೇರಣೆಯಿಂದ ಬರೆಯಲಾಗಿರುವ ಬೈಬಲ್ ಎಲ್ಲ ಪುಸ್ತಕಗಳಿಗಿಂತಲೂ ಶ್ರೇಷ್ಠ. ಬೈಬಲ್ ಮೂಲಕ ದೇವರು ಕೊಡುವ ಶಿಕ್ಷಣದಿಂದ ನಮಗೆ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಹೇಗೆ ಪ್ರಯೋಜನ ಸಿಗುತ್ತದೆ? ಇದಕ್ಕೆ ಉತ್ತರ 2014ನೇ ಸೇವಾವರ್ಷದ ಸರ್ಕಿಟ್ ಸಮ್ಮೇಳನದಲ್ಲಿ ಸಿಗುತ್ತದೆ. “ದೇವರ ವಾಕ್ಯ ಬೋಧನೆಗೆ ಉಪಯುಕ್ತ” ಎಂಬ ವಿಷಯದ ಮೇಲೆ ಈ ಸಮ್ಮೇಳನ ಆಧರಿತವಾಗಿದೆ. ಆಧಾರ ವಚನ 2 ತಿಮೊಥೆಯ 3:16.
2. ಯಾವ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ?
2 ಇನ್ನೇನಿದೆ? ಈ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ:
• ದೈವಿಕ ಶಿಕ್ಷಣ ನಮ್ಮ ಜೀವನದ ಮೇಲೆ ಯಾವ ಪರಿಣಾಮ ಬೀರುತ್ತದೆ? (ಯೆಶಾ. 48:17, 18)
• ಪೂರ್ಣ ಸಮಯದ ಸೇವೆಯನ್ನು ಮಾಡುವ ನಿಟ್ಟಿನಲ್ಲಿ ಜೀವನದಲ್ಲಿ ನಾವು ಯಾವುದಾದರೂ ಬದಲಾವಣೆ ಮಾಡಿಕೊಂಡರೆ ನಮಗೆ ಯಾವ ಆಶ್ವಾಸನೆ ಇದೆ? (ಮಲಾ. 3:10)
• ‘ಅನ್ಯಬೋಧನೆಗಳನ್ನು’ ಕೇಳಿಸಿಕೊಂಡಾಗ ನಮ್ಮ ಪ್ರತಿಕ್ರಿಯೆ ಹೇಗಿರಬೇಕು? (ಇಬ್ರಿ. 13:9)
• ಯೇಸುವಿನ ‘ಬೋಧನಾ ರೀತಿಯನ್ನು’ ನಾವು ಅನುಕರಿಸಬಹುದು ಹೇಗೆ? (ಮತ್ತಾ. 7:28, 29)
• ಸಭೆಯಲ್ಲಿ ಬೋಧಿಸುವ ಬೋಧಕರು ಮೊದಲು ತಮಗೇ ಬೋಧಿಸಿಕೊಳ್ಳಬೇಕು ಯಾಕೆ? (ರೋಮ. 2:21)
• ದೇವರ ವಾಕ್ಯ ಯಾವುದಕ್ಕೆ ಉಪಯುಕ್ತ? (2 ತಿಮೊ. 3:16)
• ದೇವರು ಸಕಲಜನಾಂಗಗಳನ್ನು ‘ನಡುಗಿಸುವಾಗ’ ಜನರ ಮೇಲೆ ಯಾವ ಪರಿಣಾಮ ಉಂಟಾಗುತ್ತದೆ? (ಹಗ್ಗಾ. 2:6, 7)
• ಯೆಹೋವ ದೇವರಿಗೆ ನಮ್ಮ ಮೇಲೆ ಯಾವ ಭರವಸೆ ಇದೆ? (ಎಫೆ. 5:1)
• ನಾವು ಯೆಹೋವ ದೇವರಿಂದ ಶಿಕ್ಷಣ ಪಡೆಯುತ್ತಾ ಇರಲು ಪ್ರಯಾಸಪಡಬೇಕು ಯಾಕೆ? (ಲೂಕ 13:24)
3. ಸಕಾಲದಲ್ಲಿ ಒದಗಿಸಲಾದ ಈ ಕಾರ್ಯಕ್ರಮಕ್ಕೆ ನಾವು ಹಾಜರಾಗಬೇಕು ಮತ್ತು ಶ್ರದ್ಧೆಯಿಂದ ಆಲಿಸಬೇಕು ಯಾಕೆ?
3 ಕಡೇ ದಿವಸಗಳಲ್ಲಿ ಇರುವ ಕಠಿನಕಾಲಗಳ ಬಗ್ಗೆ ಪೌಲ 2 ತಿಮೊಥೆಯ ಅಧ್ಯಾಯ 3ರ ಆರಂಭದ ವಚನಗಳಲ್ಲಿ ವರ್ಣಿಸುತ್ತಾನೆ: “ದುಷ್ಟರೂ ವಂಚಕರೂ ಜನರನ್ನು ಮೋಸಗೊಳಿಸುತ್ತಾ ತಾವೂ ಮೋಸಹೋಗುತ್ತಾ ಕೆಟ್ಟದ್ದರಿಂದ ತೀರ ಕೆಟ್ಟದ್ದಕ್ಕೆ ಹೋಗುವರು.” (2 ತಿಮೊ. 3:13) ಹಾಗಾಗಿ ನಾವು ಮೋಸಹೋಗದೆ ಇರಬೇಕಾದರೆ ದೈವಿಕ ಶಿಕ್ಷಣವನ್ನು ಆಲಿಸಿ ಅನ್ವಯಿಸಿಕೊಳ್ಳಲೇಬೇಕು! ಸಕಾಲದಲ್ಲಿ ನಮಗೆ ಒದಗಿಸಲಾದ ಈ ಕಾರ್ಯಕ್ರಮಕ್ಕೆ ಹಾಜರಾಗುವ ಮತ್ತು ಶ್ರದ್ಧೆಯಿಂದ ಆಲಿಸುವ ದೃಢಸಂಕಲ್ಪವನ್ನು ಮಾಡೋಣ.