ಪ್ರಶ್ನಾ ಚೌಕ
◼ ದೀಕ್ಷಾಸ್ನಾನ ಪಡೆದಿಲ್ಲದ ಒಬ್ಬ ಪ್ರಚಾರಕ ದೀಕ್ಷಾಸ್ನಾನ ಪಡೆಯಬೇಕೆಂದರೆ ಸಭಾ ಕೂಟಗಳ ಹಾಜರಿ ಎಷ್ಟಿರಬೇಕು? ಮತ್ತು ಸಾರುವ ಕೆಲಸ ಎಷ್ಟು ಮಾಡಬೇಕು?
ದೀಕ್ಷಾಸ್ನಾನ ಪಡೆದುಕೊಳ್ಳುವ ನಿರ್ಣಯ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಮಾಡುವ ಅತ್ಯಂತ ಪ್ರಮುಖ ನಿರ್ಣಯ. ಹಾಗಾಗಿ ದೀಕ್ಷಾಸ್ನಾನ ಪಡೆಯುವ ಮುಂಚೆ ಒಬ್ಬ ವ್ಯಕ್ತಿಗೆ ದೇವರು ತನ್ನಿಂದ ಏನನ್ನು ಬಯಸುತ್ತಾನೆ ಅಂತ ಗೊತ್ತಿರಬೇಕು. ಅದರ ಜೊತೆಗೆ ದೇವರ ನಿಯಮಗಳಿಗೆ ತಕ್ಕಂತೆ ನಡೆಯಲು ತನಗೆ ದೃಢಮನಸ್ಸಿದೆ ಎನ್ನುವುದನ್ನು ತೋರಿಸಿಕೊಡುತ್ತಾ ಇರಬೇಕು.
ಕ್ರೈಸ್ತರು ಸಭೆ ಸೇರುವುದನ್ನು ಅಲಕ್ಷಿಸಬಾರದು ಅಂತ ನಿಯಮವನ್ನೇ ಕೊಡಲಾಗಿದೆ. ಹೀಗಿರುವಾಗ ದೀಕ್ಷಾಸ್ನಾನ ಪಡೆದಿಲ್ಲದ ಪ್ರಚಾರಕರು ಈಗಾಗಲೇ ಸಭಾಕೂಟಗಳನ್ನು ಹಾಜರಾಗುವ ಒಳ್ಳೇ ರೂಢಿ ಬೆಳೆಸಿಕೊಂಡಿರಬೇಕು. (ಇಬ್ರಿ. 10:24, 25) ಅಲ್ಲದೆ ಕೂಟಗಳಲ್ಲಿ ಅವರು ಉತ್ತರಗಳನ್ನು ಕೊಟ್ಟರೂ ಒಳ್ಳೇದು. ದೀಕ್ಷಾಸ್ನಾನಕ್ಕೆ ಮುಂಚೆ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಹೆಸರು ಕೊಡಬೇಕು ಅಂತ ಕಟ್ಟುನಿಟ್ಟು ಇಲ್ಲದಿದ್ದರೂ ಹೆಸರನ್ನೂ ಕೊಡಬಹುದು.
ಇನ್ನು ಸಾರುವ ವಿಷಯಕ್ಕೆ ಬರೋದಾದರೆ ಸುವಾರ್ತೆ ಸಾರಬೇಕು ಮತ್ತು ಶಿಷ್ಯರನ್ನಾಗಿ ಮಾಡಬೇಕು ಅಂತ ಕ್ರೈಸ್ತರಿಗೆ ಆಜ್ಞೆ ಕೊಡಲಾಗಿದೆ. ಹಾಗಾಗಿ ಇನ್ನೂ ದೀಕ್ಷಾಸ್ನಾನ ಆಗಿರದ ಪ್ರಚಾರಕರು ನಿಯಮಿತವಾಗಿ ಸಾರುವ ಕೆಲಸದಲ್ಲಿ ಪಾಲ್ಗೊಳ್ಳಬೇಕು. (ಮತ್ತಾ. 24:14; 28:19, 20) ಹಾಗಾದರೆ ದೀಕ್ಷಾಸ್ನಾನ ಪಡೆಯಲು ಅವರು ಎಷ್ಟು ತಿಂಗಳು ಸೇವೆ ಮಾಡಬೇಕು? ಪ್ರತೀ ತಿಂಗಳು ಅವರು ನಿಯಮಿತವಾಗಿ ಹುರುಪಿನಿಂದ ಸುವಾರ್ತೆ ಸಾರುವುದರಲ್ಲಿ ಭಾಗವಹಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಬೇಕು. ಅದಕ್ಕೆ ಹಿರಿಯರು ಸಾಕಷ್ಟು ಸಮಯವನ್ನು ಕೊಡಬೇಕು. (ಕೀರ್ತ. 78:37) ಆದರೆ ಅದು ಹೆಚ್ಚು ದೀರ್ಘವಾಗಿರಬೇಕು ಅಂತೇನಿಲ್ಲ. ಕೆಲವೊಮ್ಮೆ ಕೆಲವು ತಿಂಗಳು ಕೂಡ ಸಾಕಾಗುತ್ತೆ. ಕ್ಷೇತ್ರ ಸೇವಾವರದಿ ಎಷ್ಟಿರಬೇಕು? ಇಂತಿಷ್ಟು ಇರಲೇಬೇಕು ಎನ್ನುವ ಕಟ್ಟುನಿಟ್ಟಿನ ನಿಯಮವೇನೂ ಅದಕ್ಕಿಲ್ಲ. ಅದಕ್ಕಾಗಿ ಹಿರಿಯರು ಪ್ರತೀ ಪ್ರಚಾರಕರ ಪರಿಸ್ಥಿತಿ ಮತ್ತು ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.—ಲೂಕ 21:1-4.
ಎಲ್ಲರೂ ಒಂದೇ ತರ ಇರಲ್ಲ ಎನ್ನುವುದನ್ನು ಹಿರಿಯರು (ಕೊಂಚ ಮಂದಿ ಹಿರಿಯರು ಇರುವ ಸಭೆಯಲ್ಲಾದರೆ ಶುಶ್ರೂಷಾ ಸೇವಕರನ್ನು ಸೇರಿಸಿ) ಮನಸ್ಸಿನಲ್ಲಿಟ್ಟುಕೊಳ್ಳಬೇಕು. ದೀಕ್ಷಾಸ್ನಾನ ಪಡೆಯಲು ಅರ್ಹರಾ ಇಲ್ಲವಾ ಅಂತ ತೀರ್ಮಾನಿಸುವಾಗ ವಿವೇಚನೆ ಬಳಸಬೇಕು. ಮುಖ್ಯವಾಗಿ ಅವರಿಗೆ ಯೆಹೋವನ ಸಾಕ್ಷಿಯಾಗುವ ನಿಜವಾದ ಮನಸ್ಸು ಇದೆಯಾ ಅಂತ ನೋಡಬೇಕು. ಯೆಹೋವ ದೇವರ ಸಂಘಟನೆಯ ಜತೆ ಸಾಹಚರ್ಯ ಮಾಡುವುದನ್ನು ಮತ್ತು ಸುವಾರ್ತೆ ಸಾರುವುದನ್ನು ಒಂದು ಸುಯೋಗ ಅಂತ ಪರಿಗಣಿಸುತ್ತಾರಾ ಎನ್ನುವುದನ್ನು ನೋಡಬೇಕು. ಅವರು ಆಧ್ಯಾತ್ಮಿಕ ಪ್ರಬುದ್ಧತೆಯನ್ನು ಇನ್ನೂ ಮುಟ್ಟಿಲ್ಲ ಮತ್ತು ದೀಕ್ಷಾಸ್ನಾನ ಪಡೆದಿರುವ ಪ್ರಚಾರಕರ ಹಾಗೇ ಸಾರುವುದರಲ್ಲಿ ಕುಶಲರಾಗಿಲ್ಲ ಎನ್ನುವುದನ್ನು ಹಿರಿಯರು ಅರ್ಥಮಾಡಿಕೊಳ್ಳಬೇಕು. ಆದರೂ ಒಬ್ಬ ಪ್ರಚಾರಕ ದೀಕ್ಷಾಸ್ನಾನ ಪಡೆಯಲು ಅರ್ಹರಾಗಿಲ್ಲ ಅಂತ ಹಿರಿಯರಿಗೆ ಅನಿಸುವುದಾದರೆ ಅದನ್ನು ಪ್ರೀತಿಯಿಂದ ಅವರಿಗೆ ಹೇಳಿ ಬೈಬಲಾಧರಿತ ಕಾರಣಗಳನ್ನು ತಿಳಿಸಬೇಕು. ಆಧ್ಯಾತ್ಮಿಕ ನೆರವು ನೀಡಲು ಏರ್ಪಾಡು ಮಾಡಬೇಕು.