ಜೂನ್ 24ರ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 24ರ ವಾರ
ಗೀತೆ 34 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 22 ಪ್ಯಾ. 15-22, ಪು. 228ರ ಚೌಕ (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅ. ಕಾರ್ಯಗಳು 8-10 (10 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕ (20 ನಿ.)
❑ ಸೇವಾ ಕೂಟ:
10 ನಿ: “ಒಂದು ವಿಷಯ ಮಾತಾಡಿ! ಎರಡೂ ಪತ್ರಿಕೆ ಕೊಡಿ!” ಭಾಷಣ. ಪುಟ 4ರಲ್ಲಿರುವ ಮಾದರಿ ನಿರೂಪಣೆಯನ್ನು ಬಳಸಿ ಜುಲೈ ತಿಂಗಳ ಮೊದಲ ಶನಿವಾರದಂದು ಬೈಬಲ್ ಅಧ್ಯಯನ ಹೇಗೆ ಆರಂಭಿಸೋದು ಎಂಬ ಪ್ರಾತ್ಯಕ್ಷಿಕೆ ಇರಲಿ.
10 ನಿ: ನಮ್ಮ ಪ್ರಯಾಸ ವ್ಯರ್ಥವಾಗುವುದಿಲ್ಲ. (1 ಕೊರಿಂ. 15:58; ಇಬ್ರಿ. 6:10) ಚರ್ಚೆ. ಸುಮಾರು ವರ್ಷಗಳ ಹಿಂದೆ ಸಾರುವ ಕೆಲಸ ಹೇಗಿತ್ತು ಎಂದು ತಿಳಿಸಲು ತುಂಬ ವರ್ಷಗಳಿಂದ ಸತ್ಯದಲ್ಲಿ ಹುರುಪಿನಿಂದಿರುವ ಕೆಲವು ಪ್ರಚಾರಕರನ್ನು ಆರಿಸಿಕೊಳ್ಳಿ. ಆಗೆಲ್ಲ ಸಭೆಗೆ ಎಷ್ಟು ಜನ ಬರುತ್ತಿದ್ದರು? ಸಭೆಗೆ ಎಷ್ಟು ಸೇವಾಕ್ಷೇತ್ರವಿತ್ತು? ಸುವಾರ್ತೆ ಸಾರುವಾಗ ಜನರು ಹೇಗೆ ಪ್ರತಿಕ್ರಿಯಿಸುತ್ತಿದ್ದರು? ಯಾವ್ಯಾವ ರೀತಿಯ ವಿರೋಧ ಎದುರಿಸಿದಿರಿ? ಈಗ ಸುವಾರ್ತೆ ಸಾರುವ ಕೆಲಸದಲ್ಲಿ ಯಾವೆಲ್ಲ ಪ್ರಗತಿಯಾಗಿದೆ?
10 ನಿ: ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಸಾಹಿತ್ಯ ನೀಡುವಿಕೆ. ಚರ್ಚೆ. ಈ ತಿಂಗಳುಗಳಲ್ಲಿ ಕೊಡಲಿರುವ ಕಿರುಹೊತ್ತಗೆಯ ಬಗ್ಗೆ ಚುಟುಕಾಗಿ ತಿಳಿಸಿ. ಕಿರುಹೊತ್ತಗೆಯನ್ನು ಹೇಗೆ ನೀಡಬಹುದೆಂಬ ಎರಡು ಪ್ರಾತ್ಯಕ್ಷಿಕೆ ಇರಲಿ. ಒಂದು, ಸಿಹಿಸುದ್ದಿ! ಕಿರುಹೊತ್ತಗೆಯನ್ನು ನೀಡುವುದರ ಬಗ್ಗೆ ಇರಬೇಕು. ಇದು ಈ ಸಂಚಿಕೆಯ ಪುಟ 4ರ ನಿರೂಪಣೆಯನ್ನು ಅಥವಾ ಮಾರ್ಚ್ 2013ರ ನಮ್ಮ ರಾಜ್ಯ ಸೇವೆಯಲ್ಲಿರುವ ಮಾದರಿ ನಿರೂಪಣೆಯನ್ನು ಆಧರಿಸಿರಬೇಕು.
ಗೀತೆ 129 ಮತ್ತು ಪ್ರಾರ್ಥನೆ