ಯೆಹೋವ ದೇವರನ್ನು ಕೊಂಡಾಡಲು ಇನ್ನಷ್ಟು ಅವಕಾಶ
1. ಯೆಹೋವ ದೇವರನ್ನು ‘ಬಹಳವಾಗಿ ಕೊಂಡಾಡಲು’ ನಮಗೆ ನೆರವಾಗುವ ಹೊಸ ಏರ್ಪಾಡು ಯಾವುದು?
1 ಈ ವರ್ಷದ ಮಾರ್ಚ್ನಿಂದ ಹೊಸ ಏರ್ಪಾಡು ಜಾರಿಗೆ ಬಂದಿದೆ. ಅಂದರೆ ಮಾರ್ಚ್, ಏಪ್ರಿಲ್ ಮತ್ತು ಸರ್ಕಿಟ್ ಮೇಲ್ವಿಚಾರಕರ ಭೇಟಿ ಇರುವ ತಿಂಗಳುಗಳಲ್ಲಿ 30 ತಾಸುಗಳ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವ ಅವಕಾಶವಿದೆ. ಒಂದುವೇಳೆ ಸರ್ಕಿಟ್ ಮೇಲ್ವಿಚಾರಕರ ಭೇಟಿ ಎರಡು ತಿಂಗಳ ಮಧ್ಯೆ ಬಿದ್ದರೆ ಪ್ರಚಾರಕರು ಆ ಎರಡು ತಿಂಗಳುಗಳಲ್ಲಿ ಯಾವುದಾದರೂ ಒಂದು ತಿಂಗಳನ್ನು ಆಯ್ಕೆ ಮಾಡಿ 30 ತಾಸುಗಳ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಬಹುದು. ಸರ್ಕಿಟ್ ಮೇಲ್ವಿಚಾರಕರ ಭೇಟಿಯ ಸಮಯದಲ್ಲಿ ರೆಗ್ಯುಲರ್ ಮತ್ತು ವಿಶೇಷ ಪಯನೀಯರರಿಗಾಗಿ ಏರ್ಪಡಿಸುವ ಇಡೀ ಕೂಟಕ್ಕೆ ಎಲ್ಲಾ ಆಕ್ಸಿಲಿಯರಿ ಪಯನೀಯರರು ಹಾಜರಾಗಬಹುದು. ನಮ್ಮಿಂದ 50 ತಾಸುಗಳನ್ನು ಮುಟ್ಟಲು ಆಗದಿದ್ದರೂ ವರ್ಷದಲ್ಲಿ ನಾಲ್ಕು ತಿಂಗಳು 30 ತಾಸುಗಳ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವ ಅವಕಾಶ ಇರುವುದರಿಂದ ನಾವು ಯೆಹೋವ ದೇವರನ್ನು ‘ಬಹಳವಾಗಿ ಕೊಂಡಾಡಬಹುದು.’—ಕೀರ್ತ. 109:30; 119:171.
2. ಸರ್ಕಿಟ್ ಮೇಲ್ವಿಚಾರಕರ ಭೇಟಿಯ ಸಮಯದಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವವರು ಏನನ್ನು ಸವಿಯುವರು?
2 ಸರ್ಕಿಟ್ ಮೇಲ್ವಿಚಾರಕರು ಭೇಟಿಮಾಡಿದಾಗ: ಸರ್ಕಿಟ್ ಮೇಲ್ವಿಚಾರಕರ ಭೇಟಿಯ ಸಮಯದಲ್ಲಿ ತುಂಬ ಜನರು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಬಹುದು. ಸರ್ಕಿಟ್ ಮೇಲ್ವಿಚಾರಕರ ಜೊತೆ ಸೇವೆ ಮಾಡುವುದರಿಂದ ಪರಸ್ಪರ ಪ್ರೋತ್ಸಾಹ ಆನಂದವನ್ನು ಸವಿಯಬಹುದು. (ರೋಮ. 1:11, 12) ಕೆಲವರು ಸರ್ಕಿಟ್ ಮೇಲ್ವಿಚಾರಕರ ಜೊತೆ ಸೇವೆ ಮಾಡಲೆಂದು ವಾರದಲ್ಲಿ ಒಂದು ದಿನ ರಜೆ ತೆಗೆದುಕೊಳ್ಳುತ್ತಾರೆ. ರಜೆ ತೆಗೆದುಕೊಳ್ಳಲು ಆಗದಿದ್ದರೆ ಶನಿವಾರ ಅಥವಾ ಭಾನುವಾರ ಸರ್ಕಿಟ್ ಮೇಲ್ವಿಚಾರಕರ ಜೊತೆ ಸೇವೆ ಮಾಡಲು ಕೇಳಿಕೊಳ್ಳಬಹುದು. ರೆಗ್ಯುಲರ್ ಮತ್ತು ವಿಶೇಷ ಪಯನೀಯರರಿಗಾಗಿ ನಡೆಸುವ ಪಯನೀಯರ್ ಕೂಟಕ್ಕೆ ಹಾಜರಾಗುವಾಗ ಆಕ್ಸಿಲಿಯರಿ ಪಯನೀಯರರಿಗೆ ತುಂಬಾ ಉತ್ತೇಜನ ಸಿಗುತ್ತೆ.
3. ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಮಾರ್ಚ್ ಮತ್ತು ಏಪ್ರಿಲ್ ತಿಂಗಳು ಸೂಕ್ತವೇಕೆ?
3 ಮಾರ್ಚ್, ಏಪ್ರಿಲ್ ಎರಡೂ ತಿಂಗಳುಗಳಲ್ಲಿ: ಇದುವರೆಗೆ ಕ್ರಿಸ್ತನ ಮರಣದ ಸ್ಮರಣೆಯ ತಿಂಗಳಲ್ಲಿ 30 ತಾಸುಗಳ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವ ಏರ್ಪಾಡನ್ನು ಸದುಪಯೋಗಿಸಿಕೊಳ್ಳುತ್ತಿದ್ದವರು ಈಗ “ಸ್ತೋತ್ರಯಜ್ಞವನ್ನು” ದ್ವಿಗುಣಗೊಳಿಸಬಹುದು! (ಇಬ್ರಿ. 13:15) ಮಾರ್ಚ್ ಮತ್ತು ಏಪ್ರಿಲ್ ಎರಡೂ ತಿಂಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವ ಅವಕಾಶವಿದೆ. ಪ್ರತಿ ವರ್ಷ ಈ ಸಮಯದಲ್ಲಿ ಏರ್ಪಡಿಸುವ ಅಭಿಯಾನದಲ್ಲಿ ಪಾಲ್ಗೊಂಡು ಕ್ರಿಸ್ತನ ಮರಣದ ಸ್ಮರಣೆಗೆ ಬೇರೆಯವರನ್ನು ಆಮಂತ್ರಿಸುತ್ತೇವೆ. ಅಲ್ಲದೆ ಆ ತಿಂಗಳುಗಳಲ್ಲಿ ತುಂಬ ಪ್ರಚಾರಕರು ಹೆಚ್ಚು ಸೇವೆ ಮಾಡುವುದರಿಂದ ಬೇರೆ ಬೇರೆ ಪ್ರಚಾರಕರ ಜೊತೆ ಸೇವೆ ಮಾಡುವ ಅವಕಾಶವಿದೆ. ಕ್ರಿಸ್ತನ ಮರಣದ ಸ್ಮರಣೆಯ ಕಾರ್ಯಕ್ರಮಕ್ಕೆ ಹಾಜರಾದವರನ್ನು ಪುನಃ ಭೇಟಿ ಮಾಡಿ ವಿಶೇಷ ಭಾಷಣದ ಕಾರ್ಯಕ್ರಮ ಹಾಜರಾಗಲು ಸ್ಫೂರ್ತಿ ತುಂಬಬಹುದು. ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಇರುವ ಈ ಸದವಕಾಶಗಳನ್ನು ಸದುಪಯೋಗಿಸಿಕೊಳ್ಳಲು ಮನಸ್ಸು ಮಾಡುವಿರಾ?—ಲೂಕ 6:45.