ಆಗಸ್ಟ್ 6ರಿಂದ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 6ರ ವಾರ
ಗೀತೆ 33 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 6 ಪ್ಯಾ. 9-15 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಹೆಜ್ಕೇಲ 24-27 (10 ನಿ.)
ನಂ. 1: ಯೆಹೆಜ್ಕೇಲ 24:15-27 (4 ನಿಮಿಷದೊಳಗೆ)
ನಂ. 2: ದೇವರ ವಾಕ್ಯವನ್ನು ಧೈರ್ಯದಿಂದ ಹೇಳುವುದನ್ನು ನಿಲ್ಲಿಸಬೇಡಿ—ದೇವರನ್ನು ಆರಾಧಿಸಿರಿ ಪು. 167-168 ಪ್ಯಾ. 1-3 (5 ನಿ.)
ನಂ. 3: ಯೆಹೆಜ್ಕೇಲ 18:20 ಮತ್ತು ವಿಮೋಚನಕಾಂಡ 20:5ರಲ್ಲಿರುವ ವ್ಯತ್ಯಾಸವನ್ನು ನೀವು ಹೇಗೆ ಸಮರ್ಥಿಸುವಿರಿ? (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಮುಂದಿನ ಶೈಕ್ಷಣಿಕ ವರ್ಷಕ್ಕಾಗಿ ತಯಾರಿಸುವುದು ಹೇಗೆ? ಚರ್ಚೆ. ಶಾಲೆಗೆ ಹೋಗುವ ಕ್ರೈಸ್ತ ಮಕ್ಕಳಿಗೆ ಎದುರಾಗಲಿರುವ ಕೆಲವು ಸವಾಲುಗಳೇನೆಂದು ಸಭಿಕರನ್ನು ಕೇಳಿ. ಪ್ರಲೋಭನೆಗಳನ್ನು ಪ್ರತಿರೋಧಿಸಲು ಮತ್ತು ನಂಬಿಕೆಗಳ ಬಗ್ಗೆ ವಿವರಿಸಲು ಮಕ್ಕಳಿಗೆ ಸಹಾಯವಾಗುವಂತೆ ಹೆತ್ತವರು ಕುಟುಂಬ ಆರಾಧನೆಯ ಸಮಯದಲ್ಲಿ ಯುವ ಜನರ ಪ್ರಶ್ನೆಗಳು ಪುಸ್ತಕ, ನಮ್ಮ ಪತ್ರಿಕೆಗಳಲ್ಲಿನ ಲೇಖನಗಳನ್ನು ಹಾಗೂ ಸಂಘಟನೆ ಒದಗಿಸುವ ಮತ್ತಿತರ ಸಾಧನಗಳನ್ನು ಹೇಗೆ ಬಳಸಬಹುದೆಂದು ವಿವರಿಸಿ. (1 ಪೇತ್ರ 3:15) ಒಂದೆರಡು ವಿಷಯಗಳನ್ನು ಆರಿಸಿ, ಅದಕ್ಕೆ ಸಂಬಂಧಪಟ್ಟಂತೆ ನಮ್ಮ ಪ್ರಕಾಶನಗಳಲ್ಲಿರುವ ಸಹಾಯಕಾರಿ ಮಾಹಿತಿಯನ್ನು ವಿವರಿಸಿ. ಶಾಲೆಗೆ ಹೋಗುತ್ತಿರುವಾಗ ಹೇಗೆ ಸಾಕ್ಷಿಕೊಟ್ಟರೆಂದು ತಿಳಿಸುವಂತೆ ಸಭಿಕರನ್ನು ಕೇಳಿ.
15 ನಿ: ಸ್ಥಳೀಯ ಅಗತ್ಯಗಳು.
5 ನಿ: ಆಗಸ್ಟ್ ತಿಂಗಳಲ್ಲಿ ಪತ್ರಿಕೆ ನೀಡಲು ಸಲಹೆಗಳು. ಚರ್ಚೆ. ನಿಮ್ಮ ಸೇವಾಕ್ಷೇತ್ರದ ಜನರಿಗೆ ಎಚ್ಚರ! ಪತ್ರಿಕೆಯ ಸದ್ಯದ ಸಂಚಿಕೆ ಏಕೆ ಇಷ್ಟವಾಗಬಹುದೆಂದು 30-60 ಸೆಕೆಂಡುಗಳಲ್ಲಿ ತಿಳಿಸಿ. ಆಮೇಲೆ, ಮುಖಪುಟ ಲೇಖನಗಳ ಬಗ್ಗೆ ಆಸಕ್ತಿಹುಟ್ಟಿಸಲು ಯಾವ ಪ್ರಶ್ನೆ ಕೇಳಬಹುದೆಂದು ಸಭಿಕರನ್ನು ಕೇಳಿ. ನಂತರ ಯಾವ ವಚನ ಓದಬಹುದೆಂದೂ ಕೇಳಿ. ಈ ಪತ್ರಿಕೆ ಹೇಗೆ ನೀಡಬೇಕೆಂಬ ಪ್ರಾತ್ಯಕ್ಷಿಕೆ ತೋರಿಸಿ.
ಗೀತೆ 97 ಮತ್ತು ಪ್ರಾರ್ಥನೆ