ಸೇವಾಕ್ಷೇತ್ರದಲ್ಲಿ ಜಾಗ್ರತೆ ವಹಿಸಿ
1. ಸೇವಾಕ್ಷೇತ್ರದಲ್ಲಿ ಜಾಗರೂಕರಾಗಿರಬೇಕು ಏಕೆ?
1 ‘ತೋಳಗಳ ಮಧ್ಯೆ ಕುರಿಗಳಂತೆ’ ದೇವರ ಸೇವಕರು ಇಂದು “ವಿಕೃತವಾದ ಮತ್ತು ವಕ್ರವಾದ ಸಂತತಿಯ ಮಧ್ಯೆ” ಸುವಾರ್ತೆ ಸಾರುತ್ತಿದ್ದಾರೆ. (ಮತ್ತಾ. 10:16; ಫಿಲಿ. 2:15) ಗಲಭೆ, ದೊಂಬಿ, ಅಪಹರಣದಂಥ ಘಟನೆಗಳು ಇಂದು ಸರ್ವಸಾಮಾನ್ಯ. ದುಷ್ಟರು ‘ಕೆಟ್ಟದ್ದರಿಂದ ತೀರ ಕೆಟ್ಟದ್ದಕ್ಕೆ ಹೋಗುತ್ತಿದ್ದಾರೆ’ ಎಂಬದಕ್ಕೆ ಇವೆಲ್ಲ ಸಾಕ್ಷ್ಯ. (2 ತಿಮೊ. 3:13) ಸೇವಾಕ್ಷೇತ್ರದಲ್ಲಿ ಜಾಗರೂಕರಾಗಿರಲು ನಮಗೆ ಯಾವ ಬೈಬಲ್ ತತ್ವಗಳು ನೆರವಾಗುತ್ತವೆ?—ಮತ್ತಾ. 10:16.
2. ನಾವು ಸೇವೆಮಾಡುತ್ತಿರುವ ಕ್ಷೇತ್ರವನ್ನು ಬಿಟ್ಟುಹೋಗುವುದು ಯಾವಾಗ ಉತ್ತಮ?
2 ಜಾಣ್ಮೆ ತೋರಿಸಿ: ಕೇಡನ್ನು ಕಂಡಾಗ ‘ಅಡಗಿಕೊಳ್ಳುವುದು’ ಜಾಣತನ ಎನ್ನುತ್ತದೆ ಜ್ಞಾನೋಕ್ತಿ 22:3. ಹುಷಾರಾಗಿರಿ! ನೀವು ಸೇವೆಮಾಡುತ್ತಿರುವ ಕ್ಷೇತ್ರ ಸಾಮಾನ್ಯವಾಗಿ ಸುರಕ್ಷಿತವಾಗಿರಬಹುದು. ಆದರೆ ಅಲ್ಲಿನ ಪರಿಸ್ಥಿತಿಯೂ ಥಟ್ಟನೆ ಬದಲಾಗಬಹುದು. ಪೊಲೀಸರು ಬಂದಿಳಿಯುವುದನ್ನು, ಜನರು ಗುಂಪುಗೂಡುವುದನ್ನು ನೀವು ಕಾಣಬಹುದು. ಕೆಲವೊಮ್ಮೆ ಮನೆಯವರೇ ನಿಮ್ಮನ್ನು ಎಚ್ಚರಿಸಬಹುದು. ಏನಾಗುತ್ತಿದೆಯೆಂಬ ಕುತೂಹಲದಿಂದ ನೋಡುತ್ತಾ ನಿಲ್ಲಬೇಡಿ. ಆದಷ್ಟು ಬೇಗನೆ ಅಲ್ಲಿಂದ ಹೊರಟು ಬೇರೊಂದು ಕಡೆ ಸಾರುವುದು ಜಾಣತನ.—ಜ್ಞಾನೋ. 17:14; ಯೋಹಾ. 8:59; 1 ಥೆಸ. 4:11.
3. ಪ್ರಸಂಗಿ 4:9ರ ತತ್ವವನ್ನು ಸೇವೆಗೆ ಹೇಗೆ ಅನ್ವಯಿಸಿಕೊಳ್ಳಬಲ್ಲೆವು?
3 ಒಟ್ಟಿಗೆ ಕೆಲಸಮಾಡಿ: “ಒಬ್ಬನಿಗಿಂತ ಇಬ್ಬರು ಲೇಸು” ಎನ್ನುತ್ತದೆ ಪ್ರಸಂಗಿ 4:9. ಒಬ್ಬರೇ ಸೇವೆಮಾಡಿ ನಿಮಗೆ ಅಭ್ಯಾಸ ಇರಬಹುದು. ಆದರೆ ಈಗದು ಎಷ್ಟು ಸುರಕ್ಷಿತ? ಕೆಲವು ಕ್ಷೇತ್ರಗಳಲ್ಲಿ ಸುರಕ್ಷಿತ ಆಗಿರಬಹುದು. ಆದರೆ ಇನ್ನು ಕೆಲವೆಡೆ ಸಹೋದರಿಯೊಬ್ಬರೇ ಅಥವಾ ಯುವವ್ಯಕ್ತಿಯೊಬ್ಬರೇ ಮನೆಮನೆ ಸೇವೆಮಾಡುವುದು ಈಗ ಸುರಕ್ಷಿತವಲ್ಲ. ಸೂರ್ಯಾಸ್ತದ ಬಳಿಕ ಹೋಗಲೇ ಬಾರದು. ಇನ್ನೊಬ್ಬರು ನಮ್ಮೊಂದಿಗಿದ್ದರೆ ತುಂಬ ಉಪಯುಕ್ತ ಎಂದು ಅನುಭವಗಳು ತೋರಿಸಿವೆ. ಅವರು ಸುತ್ತುಮುತ್ತು ಏನು ನಡೆಯುತ್ತಿದೆಯೆಂದು ಗಮನಿಸಬಲ್ಲರು. (ಪ್ರಸಂ. 4:10, 12) ಗುಂಪಿನಲ್ಲಿರುವ ಇತರ ಪ್ರಚಾರಕರ ಮೇಲೂ ನಿಗಾ ಇರಲಿ. ಕ್ಷೇತ್ರದಿಂದ ಮರಳುವಾಗ ಅವರಿಗೆ ತಿಳಿಸಿ ಬರುವ ರೂಢಿ ಬೆಳೆಸಿಕೊಳ್ಳಿ.
4. ಸಭೆಯಲ್ಲಿರುವ ಸರ್ವರ ಸುರಕ್ಷೆಗಾಗಿ ಏನು ಮಾಡಬಲ್ಲೆವು?
4 ಹಿರಿಯರು ನಮ್ಮ “ಪ್ರಾಣಗಳನ್ನು ಕಾಯುವವರಾಗಿದ್ದಾರೆ.” ಆದ್ದರಿಂದ ಸ್ಥಳೀಯ ಪರಿಸ್ಥಿತಿಗೆ ತಕ್ಕಂತೆ ಪ್ರಾಯೋಗಿಕ ಸಲಹೆಸೂಚನೆ ಕೊಡುವ ಜವಾಬ್ದಾರಿ ಅವರಿಗಿದೆ. (ಇಬ್ರಿ. 13:17) ನಾವು ನಮ್ರರಾಗಿದ್ದು, ಅವರಿಗೆ ಪೂರ್ಣ ಸಹಕಾರ ನೀಡುವಾಗ ಯೆಹೋವನು ನಮ್ಮನ್ನು ಖಂಡಿತ ಆಶೀರ್ವದಿಸುವನು. (ಮೀಕ 6:8; 1 ಕೊರಿಂ. 10:12) ದೇವರ ಸೇವಕರಾದ ನಾವೆಲ್ಲ ನಮ್ಮ ಸೇವಾಕ್ಷೇತ್ರದಲ್ಲಿ ಪರಿಣಾಮಕಾರಿ ಸಾಕ್ಷಿ ನೀಡೋಣ. ಅದೇ ಸಮಯ ನಮ್ಮನಮ್ಮ ಜಾಗ್ರತೆವಹಿಸಲೂ ಮರೆಯದಿರೋಣ.