ಏಪ್ರಿಲ್ 9ರಿಂದ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 9ರಿಂದ ಆರಂಭವಾಗುವ ವಾರ
ಗೀತೆ 97 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 18 ಪ್ಯಾ. 1-9 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆರೆಮೀಯ 22-24 (10 ನಿ.)
ನಂ. 1: ಯೆರೆಮೀಯ 23:15-23 (4 ನಿಮಿಷದೊಳಗೆ)
ನಂ. 2: ಪರದೈಸಿನಲ್ಲಿ ಬೋರ್ ಆಗಲ್ಲ ಯಾಕೆ? (5 ನಿ.)
ನಂ. 3: ಯೆಹೋವ ದೇವರ ಸಂಘಟನೆಗೆ ನಾವಿಂದು ಕೊಡುವ ಬೆಂಬಲ—ದೇವರನ್ನು ಆರಾಧಿಸಿರಿ ಪು. 134-135 ಪ್ಯಾ. 14-15 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: ‘ಸೇವೆಯನ್ನು ನೆರವೇರಿಸುವದಕ್ಕೆ ಎಚ್ಚರವಾಗಿರ್ರಿ.’ ಭಾಷಣ. ಜನವರಿ 15, 2008ರ ಕಾವಲಿನಬುರುಜು ಪುಟ 6-8, ಪ್ಯಾರ 14-19ರ ಆಧರಿತ. ಸೇವೆಮಾಡಲು ತೊಂದರೆಯಾಗದ, ಈ ವರೆಗೆ ಸಾಕ್ಷಿಕಾರ್ಯ ನಡೆದಿರದ ಹತ್ತಿರದ ಕ್ಷೇತ್ರಗಳಲ್ಲಿ ಸೇವೆಮಾಡುವುದರ ಬಗ್ಗೆ ಹಿರಿಯರು ಮೊದಲು ಬ್ರಾಂಚ್ ಆಫೀಸಿಗೆ ಕೇಳಿ ಸಭೆಗೆ ತಿಳಿಸಬಹುದು. ಇಂಥ ಕ್ಷೇತ್ರಗಳಲ್ಲಿ ಕೆಲವು ಪ್ರಚಾರಕರು ಅಥವಾ ಕುಟುಂಬಗಳು ರಜಾ ದಿನ/ವಾರಗಳಂದು ಸೇವೆಮಾಡಬಹುದು. ಇದನ್ನು ಹಿರಿಯರು ಚೆನ್ನಾಗಿ ಸಂಘಟಿಸಿ ಮೇಲ್ವಿಚಾರಣೆ ಮಾಡಬೇಕು. ಪ್ರಚಾರಕರು ತಮ್ಮ ಯೋಜನೆಗಳ ಬಗ್ಗೆ ಹಿರಿಯರೊಂದಿಗೆ ಮಾತಾಡಬಹುದು. ಬೇಸಗೆಯಲ್ಲಿ ಶಾಲೆಗಳಿಗೆ ರಜೆ ಇರುವುದರಿಂದ, ಹತ್ತಿರದ ಸಭೆ/ಗುಂಪಿಗೆ ಅವರ ಸೇವಾ ಕ್ಷೇತ್ರವನ್ನು (ಟೆರಿಟೊರಿಯನ್ನು) ಆವರಿಸಲು ನೆರವು ನೀಡುವ ಯೋಜನೆಯನ್ನೂ ಹಿರಿಯರು ಮಾಡಬಹುದು. ಇಂಥ ಸಭೆ/ಗುಂಪುಗಳ ಬಗ್ಗೆ ಹಿರಿಯರು ಸರ್ಕಿಟ್ ಮೇಲ್ವಿಚಾರಕರಿಂದ ಮಾಹಿತಿ ಪಡೆಯಬಹುದು.
15 ನಿ: “ಬೋಧನಾ ರೀತಿ ಉತ್ತಮಗೊಳಿಸಲು ಮೂರು ಸಲಹೆ.” ಪ್ರಶ್ನೋತ್ತರ. 2ನೇ ಪ್ಯಾರ ಚರ್ಚಿಸುವಾಗ ಈ ಪ್ರಾತ್ಯಕ್ಷಿಕೆ ಇರಲಿ: ಪ್ರಚಾರಕ ಬೈಬಲ್ ಬೋಧಿಸುತ್ತದೆ ಪುಸ್ತಕದ ಪುಟ 3ರ ಮೊದಲ ಪ್ಯಾರ ಚರ್ಚಿಸುತ್ತಿದ್ದಾರೆ. ಯೋಬ 10:15ನ್ನು ಓದಿದ ಬಳಿಕ ಒಂದೆರಡು ನಿಮಿಷ ಯೋಬ ಯಾರೆಂಬದರ ಬಗ್ಗೆ ವಿವರಿಸುತ್ತಾರೆ. ನಂತರ ಸಭಿಕರನ್ನು ಕೇಳಿ: ಯೋಬನ ಬಗ್ಗೆ ಪ್ರಚಾರಕ ಕೊಟ್ಟ ವಿವರಣೆ ಸರಿಯಾಗಿತ್ತಾದರೂ ಅದು ಉತ್ತಮ ಬೋಧನಾ ರೀತಿಯಲ್ಲ ಏಕೆ?
ಗೀತೆ 10 ಮತ್ತು ಪ್ರಾರ್ಥನೆ