ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
2011ರ ಜೂನ್ 27ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. 2011ರ ಮೇ 2ರಿಂದ ಜೂನ್27ರ ತನಕದ ವಾರಗಳ ನೇಮಕಗಳಲ್ಲಿ ಆವರಿಸಲಾದ ವಿಷಯಗಳ ಮೇಲೆ ಇವು ಆಧರಿತ. 20 ನಿಮಿಷಗಳ ಈ ಪುನರವಲೋಕನವನ್ನು ಶಾಲಾ ಮೇಲ್ವಿಚಾರಕನು ನಡೆಸುವನು.
1. ಯೋಬನ ವಿರುದ್ಧ ಪಾಪಮಾಡಿದವರ ಪರವಾಗಿ ಅವನು ಪ್ರಾರ್ಥಿಸುವಂತೆ ಯೆಹೋವನು ಅವಶ್ಯಪಡಿಸಿದ ವಿಷಯದಿಂದ ನಾವು ಯಾವ ಪಾಠ ಕಲಿಯಬಲ್ಲೆವು? (ಯೋಬ 42:8) [w98 8/15 ಪು. 30 ಪ್ಯಾರ. 5]
2. ಇಂದು ಕ್ರೈಸ್ತರು ಅರ್ಪಿಸುವ ‘ನ್ಯಾಯವಾದ [ನೀತಿಯ] ಯಜ್ಞಗಳು’ ಯಾವುವು? (ಕೀರ್ತ. 4:5) [w06 5/15 ಪು. 18 ಪ್ಯಾರ. 9]
3. ದಾವೀದನ ಅಂತರಾತ್ಮ ಅವನನ್ನು ಬೋಧಿಸಿದ್ದು ಹೇಗೆ? (ಕೀರ್ತ. 16:7) [w04 12/1 ಪು. 14 ಪ್ಯಾರ. 9]
4. ‘ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುವುದು’ ಹೇಗೆ? (ಕೀರ್ತ. 19:1) [w04 10/1 ಪು. 10 ಪ್ಯಾರ. 8]
5. ಕೀರ್ತನೆ 27:14 ನಿರೀಕ್ಷೆ ಮತ್ತು ಧೈರ್ಯದ ನಡುವೆ ಯಾವ ಸಂಬಂಧವಿದೆಯೆಂದು ಸೂಚಿಸುತ್ತದೆ? [w06 10/1 ಪು. 27 ಪ್ಯಾರ. 3, 6]
6. ತನ್ನ ವೈರಿಗಳು ಕಣ್ಣುಸನ್ನೆಮಾಡಲು ಅಥವಾ ಕಣ್ಣು ಮಿಟುಕಿಸಲು ಆಸ್ಪದಕೊಡಬೇಡ ಎಂಬ ದಾವೀದನ ವಿನಂತಿಯ ಅರ್ಥವೇನು? (ಕೀರ್ತ. 35:19) [w06 5/15 ಪು. 20 ಪ್ಯಾರ. 2]
7. ಗಡೀಪಾರಾಗಿದ್ದ ಒಬ್ಬ ಲೇವ್ಯನಿಂದ ಗಣ್ಯತಾಭಾವದ ಕುರಿತು ಯಾವ ಪಾಠ ಕಲಿಯಬಲ್ಲೆವು? (ಕೀರ್ತ. 42:1-3) [w06 6/1 ಪು. 9 ಪ್ಯಾರ. 3]
8. ನೀತಿಗಾಗಿ ಪ್ರೀತಿ ಹಾಗೂ ದುಷ್ಟತನಕ್ಕಾಗಿ ದ್ವೇಷ ಬೆಳೆಸಿಕೊಳ್ಳಲು ನಮಗೆ ಯಾವುದು ಸಹಾಯಮಾಡುತ್ತದೆ? (ಕೀರ್ತ. 45:7) [cf ಪು. 58-59 ಪ್ಯಾರ. 8-10]
9. ಯೆರೂಸಲೇಮನ್ನು “ಅತ್ಯಂತ ರಮಣೀಯ” ಸ್ಥಳ ಎಂದು ಏಕೆ ಕರೆಯಲಾಯಿತು? (ಕೀರ್ತ. 50:2) [w06 6/1 ಪು. 9 ಪ್ಯಾರ. 2]
10. ದೇವರ ಆಲಯದಲ್ಲಿ ನಾವು ಹೇಗೆ ಎಣ್ಣೇಮರದಂತೆ ಇರಬಲ್ಲೆವು? (ಕೀರ್ತ. 52:8) [w00 5/15 ಪು. 29 ಪ್ಯಾರ. 6]