“ನನ್ನ ಸೇವಾ ಸಮಯವನ್ನು ಲೆಕ್ಕಿಸುವುದು ಹೇಗೆ?”
ನೀವು ಯಾವತ್ತಾದರೂ ಈ ಪ್ರಶ್ನೆ ಕೇಳಿದ್ದೀರೊ? ಈ ಕುರಿತು ಸಂಘಟಿತರು ಪುಸ್ತಕದ ಪುಟ 86-87ರಲ್ಲಿ ನಿರ್ದೇಶನಗಳನ್ನು ಕೊಡಲಾಗಿದೆ. ಸೆಪ್ಟೆಂಬರ್ 2008ರ ನಮ್ಮ ರಾಜ್ಯ ಸೇವೆಯ ಪ್ರಶ್ನಾ ಚೌಕದಲ್ಲಿರುವಂತೆ ಆಗಾಗ್ಗೆ ಹೆಚ್ಚಿನ ನಿರ್ದೇಶನವನ್ನೂ ಕೊಡಲಾಗುತ್ತದೆ. ಪರಿಸ್ಥಿತಿಗಳು ವಿಭಿನ್ನವಾಗಿರುವುದರಿಂದ ನಮಗೆ ನಿಯಮಗಳ ಒಂದು ಉದ್ದ ಪಟ್ಟಿಯನ್ನು ಕೊಡಲಾಗಿಲ್ಲ. ಹೀಗಿರಲಾಗಿ ಹಿರಿಯರಾಗಲಿ ಇತರರಾಗಲಿ ಇದಕ್ಕಿಂತ ಹೆಚ್ಚಿನ ನಿರ್ದೇಶನಗಳನ್ನು ಕೊಡುವುದು ಸೂಕ್ತವಲ್ಲ.
ಯಾವುದೇ ಪ್ರಶ್ನೆ ಏಳುವಲ್ಲಿ ಮತ್ತು ಅದರ ಬಗ್ಗೆ ನಮ್ಮ ಪ್ರಕಾಶನದಲ್ಲಿ ಯಾವುದೇ ನಿರ್ದೇಶನ ಇಲ್ಲದಿರುವಲ್ಲಿ ಪ್ರತಿಯೊಬ್ಬ ಪ್ರಚಾರಕನು ಹೀಗೆ ಕೇಳಿಕೊಳ್ಳಬೇಕು: ಈ ಸಮಯವನ್ನು ನಾನು ಶುಶ್ರೂಷೆಯಲ್ಲಿ ಕಳೆದೆನೊ? ಇಲ್ಲವೇ ಶುಶ್ರೂಷೆಗೆ ನಿಜವಾಗಿ ಸಂಬಂಧವಿಲ್ಲದ ಕಾರ್ಯದಲ್ಲಿ ಕಳೆದೆನೊ? ನಮ್ಮ ವೈಯಕ್ತಿಕ ಕ್ಷೇತ್ರ ಸೇವಾ ವರದಿಯಲ್ಲಿ ಪ್ರತಿ ತಿಂಗಳು ಏನನ್ನು ಬರೆಯುತ್ತೇವೊ ಅದು ನಮಗೆ ಆನಂದ ತರಬೇಕು, ನಮ್ಮ ಮನಸ್ಸಾಕ್ಷಿಯನ್ನು ಚುಚ್ಚಬಾರದು. (ಅ. ಕಾ. 23:1) ನಮ್ಮ ಮುಖ್ಯ ಚಿಂತೆ ಸೇವಾ ಸಮಯವನ್ನು ಲೆಕ್ಕಿಸುವುದು ಹೇಗೆ ಎಂಬುದಲ್ಲ ಬದಲಾಗಿ ಶುಶ್ರೂಷೆಯಲ್ಲಿ ಶ್ರಮಶೀಲರಾಗಿದ್ದು ಸಮಯವನ್ನು ಪರಿಣಾಮಕಾರಿಯಾಗಿ ಬಳಸುವುದೇ ನಿಶ್ಚಯ.—ಇಬ್ರಿ. 6:11.