ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/10 ಪು. 4
  • ಪ್ರಶ್ನಾ ಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಚೌಕ
  • 2010 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ನಮ್ಮ ಪಯನೀಯರರನ್ನು ಗಣ್ಯಮಾಡುವುದು
    1990 ನಮ್ಮ ರಾಜ್ಯದ ಸೇವೆ
  • ಪಯನೀಯರ್‌ ಶುಶ್ರೂಷೆಯ ಆಶೀರ್ವಾದಗಳು
    2003 ನಮ್ಮ ರಾಜ್ಯದ ಸೇವೆ
  • ಅವರು ನಂಬಿಗಸ್ತಿಕೆಯ ಮಾದರಿಯನ್ನಿಟ್ಟಿದ್ದಾರೆ
    2006 ನಮ್ಮ ರಾಜ್ಯದ ಸೇವೆ
  • ಪಯನೀಯರರ ತಾಸಿನ ಆವಶ್ಯಕತೆಗಳಲ್ಲಿ ಬದಲಾವಣೆ
    1999 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2010 ನಮ್ಮ ರಾಜ್ಯದ ಸೇವೆ
km 11/10 ಪು. 4

ಪ್ರಶ್ನಾ ಚೌಕ

◼ ನಾವು ಯಾವ ಪ್ರಾಯೋಗಿಕ ವಿಧಗಳಲ್ಲಿ ಪಯನೀಯರರಿಗೆ ನೆರವು ನೀಡಬಹುದು?

2009ರ ಸೇವಾ ವರ್ಷದಲ್ಲಿ ಸುಮಾರು 8,00,000 ಸಹೋದರ ಸಹೋದರಿಯರು ರೆಗ್ಯುಲರ್‌ ಮತ್ತು ಸ್ಪೆಷಲ್‌ ಪಯನೀಯರರಾಗಿ ಲೋಕದಾದ್ಯಂತ ಸೇವೆಸಲ್ಲಿಸಿದರು. ರಾಜ್ಯದ ಸುವಾರ್ತೆಯನ್ನು ಹಬ್ಬಿಸಲೆಂದು ಈ ಪೂರ್ಣ ಸಮಯದ ಸೇವಕರು ತಮ್ಮ ಸಮಯ, ಶಕ್ತಿ ಮತ್ತು ಭೌತಿಕ ಸಂಪನ್ಮೂಲಗಳ ಪ್ರಥಮಫಲಗಳನ್ನು ಅರ್ಪಿಸುತ್ತಾರೆ. (ಜ್ಞಾನೋ. 3:9) ಅವರ ಪ್ರಯತ್ನಗಳಿಂದ ಯೆಹೋವನಿಗೆಷ್ಟು ಸಂತೋಷವಾಗುತ್ತಿರಬೇಕು! ನಾವು ಯಾವ ವಿಧಗಳಲ್ಲಿ ಯೆಹೋವನ ನೋಟವನ್ನು ಪ್ರತಿಬಿಂಬಿಸಬಹುದು? ತಮ್ಮ ಸೇವೆಯಲ್ಲಿ ಆನಂದ ಕಂಡುಕೊಂಡು ಅದರಲ್ಲಿ ಮುಂದುವರಿಯುವಂತೆ ನಮ್ಮ ಪಯನೀಯರರಿಗೆ ಹೇಗೆ ಸಹಾಯ ಮಾಡಬಹುದು?

ನಾವಾಡುವ ಸಂದರ್ಭೋಚಿತ ಮಾತುಗಳು ಪಯನೀಯರ್‌ ಸೇವೆಯನ್ನು ಮುಂದುವರಿಸುವಂತೆ ಖಂಡಿತ ಅವರನ್ನು ಪ್ರೇರಿಸಬಹುದು. (ಜ್ಞಾನೋ. 25:11) ಶುಶ್ರೂಷೆಯಲ್ಲಿ ಅವರೊಂದಿಗೆ ಕೆಲಸಮಾಡಲು ಸಾಧ್ಯವಾಗುವಂತೆ ನಾವು ನಮ್ಮ ಶೆಡ್ಯೂಲ್‌ನಲ್ಲಿ ಹೊಂದಾಣಿಕೆಗಳನ್ನು ಮಾಡಬಲ್ಲೆವೊ? ಜೊತೆಯಾಗಿ ಸೇವೆ ಮಾಡಲಿಕ್ಕಿರುವಾಗ, ಅವರ ವಾಹನದಲ್ಲಿ ಹೋಗುವ ಬದಲು ನಿಮ್ಮ ವಾಹನದಲ್ಲಿ ಹೋಗಬಹುದು ಅಥವಾ ಅವರ ಪ್ರಯಾಣದ ವೆಚ್ಚಗಳನ್ನು ನೀವೇ ಭರಿಸಬಹುದು. ಒಂದುವೇಳೆ ನಾವು ಅವರ ವಾಹನದಲ್ಲಿ ಪ್ರಯಾಣಿಸುವುದಾದರೆ, ಅವರ ಖರ್ಚುವೆಚ್ಚಗಳನ್ನು ಭರಿಸಲಿಕ್ಕಾಗಿ ಹಣದ ಸಹಾಯ ಸಹ ಮಾಡಬಹುದು. (1 ಕೊರಿಂ. 13:5; ಫಿಲಿ. 2:4) ಅಲ್ಲದೆ ಪಯನೀಯರರಿಗೆ ಅತಿಥಿಸತ್ಕಾರ ತೋರಿಸುವ ಮೂಲಕ ಹಾಗೂ ಕೆಲವೊಮ್ಮೆ ಅವರನ್ನು ಊಟಕ್ಕೆ ಕರೆಯುವ ಮೂಲಕ ನಮ್ಮ ಪ್ರೀತಿಪೂರ್ವಕ ಬೆಂಬಲವನ್ನು ವ್ಯಕ್ತಪಡಿಸಬಲ್ಲೆವು.—1 ಪೇತ್ರ 4:8, 9.

ತನ್ನ ರಾಜ್ಯವನ್ನು ಪ್ರಥಮವಾಗಿ ಹುಡುಕುವವರ ಆವಶ್ಯಕತೆಗಳನ್ನು ಯೆಹೋವನು ಪೂರೈಸುವನು ಎಂಬ ಖಾತ್ರಿಯನ್ನು ಶಾಸ್ತ್ರಗ್ರಂಥ ಕೊಡುತ್ತದೆ. (ಕೀರ್ತ. 37:25; ಮತ್ತಾ. 6:33) ಆತನದನ್ನು ಮಾಡುವ ಒಂದು ವಿಧವು ನಮ್ಮ ಪ್ರೀತಿಯ ಕ್ರೈಸ್ತ ಸಹೋದರತ್ವದ ಮೂಲಕವೇ. (1 ಯೋಹಾ. 3:16-18) ಆದರೆ ತಮ್ಮ ಆರ್ಥಿಕ ಅಗತ್ಯಗಳನ್ನು ಇತರರು ಪೂರೈಸಬೇಕೆಂದು ಪಯನೀಯರರು ಖಂಡಿತ ನಿರೀಕ್ಷಿಸುವುದಿಲ್ಲ. ಅಲ್ಲದೆ ನಿರ್ದಿಷ್ಟ ವಿಷಯಗಳು ತಮಗೆ ಬೇಕಾಗಿರುವಾಗ ಅವರು ಅವುಗಳ ಬಗ್ಗೆ ಇತರರಲ್ಲಿ ಹೇಳಿಕೊಳ್ಳಲಿಕ್ಕಿಲ್ಲ. ಆದಾಗ್ಯೂ ನಂಬಿಗಸ್ತ ಪಯನೀಯರರಿಗೆ ನಾವು ಸಹಾಯ ಮಾಡಬಹುದು ಮತ್ತು ಗಮನಿಸುವವರಾಗಿರುವ ಮೂಲಕ ಪ್ರಾಯೋಗಿಕ ವಿಧಗಳಲ್ಲಿ “ಅವರ ಕೊರತೆಯನ್ನು ನೀಗಿಸಬಹುದು.”—2 ಕೊರಿಂ. 8:14, 15.

ಮೊದಲನೇ ಶತಮಾನದ ಕೆಂಕ್ರೆಯ ಸಭೆಯಲ್ಲಿದ್ದ ಹುರುಪಿನ ಸೌವಾರ್ತಿಕಳಾದ ಫೊಯಿಬೆ ರೋಮ್‌ಗೆ ಹೋದಾಗ ಪೌಲನು ಅಲ್ಲಿರುವ ಸಹೋದರರನ್ನು ಪ್ರೋತ್ಸಾಹಿಸುತ್ತಾ, “ಅವಳನ್ನು ಪವಿತ್ರ ಜನರಿಗೆ ತಕ್ಕ ಹಾಗೆ ಕರ್ತನಲ್ಲಿ ಬರಮಾಡಿಕೊಂಡು ಅವಳಿಗೆ ಅಗತ್ಯವಿರುವ ಯಾವುದೇ ಸಹಾಯವನ್ನು ಮಾಡಿರಿ” ಅಂದನು. (ರೋಮ. 16:1, 2) ನಮ್ಮ ಸಭೆಯಲ್ಲೂ ಎಡೆಬಿಡದೆ ಸುವಾರ್ತೆಯನ್ನು ಸಾರುತ್ತಿರುವ ರೆಗ್ಯುಲರ್‌ ಮತ್ತು ಸ್ಪೆಷಲ್‌ ಪಯನೀಯರರಿಗೆ ಅಂಥದ್ದೇ ಪ್ರೀತಿಪೂರ್ವಕ ಬೆಂಬಲವನ್ನು ಕೊಡುವ ಅವಕಾಶ ನಮಗೂ ಇದೆ.—ಅ. ಕಾ. 5:42.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ