ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ ಅಕ್ಟೋಬರ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಟ್ರ್ಯಾಕ್ಟ್ ಅನ್ನು ಆಸಕ್ತ ಜನರಿಗೆ ಕೊಟ್ಟು ಬೈಬಲ್ ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ನವೆಂಬರ್: ಬೈಬಲ್—ಅದರಲ್ಲಿ ಏನಿದೆ? ಈ ಹೊಸ ಬ್ರೋಷರ್‌ನೊಂದಿಗೆ ಕೆಳಗಿನವುಗಳನ್ನೂ ನೀಡಬಹುದು: ಸಕಲ ಜನರಿಗಾಗಿರುವ ಒಂದು ಗ್ರಂಥ, ಸಂತೃಪ್ತಿಕರವಾದ ಜೀವನ ಲಭ್ಯವಾಗುವ ವಿಧ, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು? ಡಿಸೆಂಬರ್: ಜೀವಿಸಿರುವವರಲ್ಲೇ ಅತ್ಯಂತ ಮಹಾನ್ ಪುರುಷ. ಮನೆಯಲ್ಲಿ ಮಕ್ಕಳಿರುವಲ್ಲಿ ಬೈಬಲ್ ಕಥೆಗಳ ನನ್ನ ಪುಸ್ತಕ ನೀಡಿ. ಜನವರಿ: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮನೆಯವನ ಬಳಿ ಈ ಪುಸ್ತಕ ಇರುವುದಾದರೆ, ಬಣ್ಣ ಮಾಸಿದ ಹಾಳೆಯ ಯಾವುದೇ 192 ಪುಟಗಳ ಪುಸ್ತಕ ಅಥವಾ 1995ಕ್ಕೆ ಮುಂಚೆ ಪ್ರಕಟವಾದ ಬೇರಾವುದೇ ಪುಸ್ತಕವನ್ನು ಪ್ರಚಾರಕರು ನೀಡಬಹುದು.
◼ 2011, ಏಪ್ರಿಲ್ 18ರ ವಾರದಿಂದ ಆರಂಭಿಸುತ್ತಾ ಸಭಾ ಬೈಬಲ್ ಅಧ್ಯಯನದಲ್ಲಿ ನನ್ನನ್ನು ಹಿಂಬಾಲಿಸಿರಿ ಪುಸ್ತಕವನ್ನು ಬಳಸಲಾಗುವುದು. ಈ ಪ್ರಕಾಶನದ ಅಗತ್ಯವಿರುವ ಸಭೆಗಳು ತಮ್ಮ ಮುಂದಿನ ಸಾಹಿತ್ಯ ವಿನಂತಿಯಲ್ಲಿ ಕೇಳಿಕೊಳ್ಳಬೇಕು.