ನಿಮ್ಮ ಕಣ್ಣು ಸರಳವಾಗಿದೆಯೋ?
1. ‘ಕಣ್ಣನ್ನು ಸರಳವಾಗಿಡುವುದರ’ ಅರ್ಥವೇನು?
1 ನಮ್ಮ ಕಣ್ಣುಗಳನ್ನು ಯಾವ ವಿಷಯಗಳ ಮೇಲೆ ನೆಡುತ್ತೇವೋ ಅವು ನಮ್ಮ ಕ್ರಿಯೆಗಳನ್ನು ಪ್ರಭಾವಿಸುತ್ತವೆ. ಆದ್ದರಿಂದಲೇ, “ನಿನ್ನ ಕಣ್ಣು ಸರಳವಾಗಿರುವಲ್ಲಿ ನಿನ್ನ ದೇಹವೆಲ್ಲ ಪ್ರಕಾಶಮಾನವಾಗಿರುವುದು” ಎಂಬ ಯೇಸುವಿನ ಮಾತು ಸೂಕ್ತವಾಗಿದೆ. (ಮತ್ತಾ. 6:22) ಆಧ್ಯಾತ್ಮಿಕವಾಗಿ ನಮ್ಮ ಕಣ್ಣುಗಳನ್ನು ‘ಸರಳವಾಗಿಡುವುದರ’ ಅರ್ಥ ದೇವರ ಚಿತ್ತವನ್ನು ಮಾಡುವ ಏಕೈಕ ಉದ್ದೇಶದ ಮೇಲೆ ನಮ್ಮ ಗಮನ ಕೇಂದ್ರೀಕರಿಸುವುದೇ ಆಗಿದೆ. ಇದರಲ್ಲಿ ರಾಜ್ಯವನ್ನು ಪ್ರಥಮವಾಗಿಡುವುದು ಮತ್ತು ಶುಶ್ರೂಷೆಗೆ ಅಡ್ಡಿಬರುವಂಥ ಅನಾವಶ್ಯಕವಾದ ಪ್ರಾಪಂಚಿಕ ವಿಷಯಗಳಿಂದ ಅಥವಾ ಚಟುವಟಿಕೆಗಳಿಂದ ಅಪಕರ್ಷಿತರಾಗದೇ ಇರುವುದು ಸೇರಿದೆ.
2. ನಮ್ಮ ನೋಟವನ್ನು ಯಾವುದು ಸೊಟ್ಟಗೊಳಿಸಬಲ್ಲದು? ಹಾಗಾಗದಂತೆ ನಮಗೆ ಯಾವ ಸಹಾಯವಿದೆ?
2 ಸ್ವಪರಿಶೀಲನೆ ಅಗತ್ಯ: ಜಾಹೀರಾತು ಮಾಧ್ಯಮದಿಂದಲೋ ಬೇರೆಯವರ ಬಳಿ ಇರುವ ವಸ್ತುಗಳನ್ನು ನೋಡಿಯೋ ನಮ್ಮ ನೋಟ ಸೊಟ್ಟಗಾಗಬಹುದು. ತುಂಬ ಸಮಯ, ಹಣ, ಶಕ್ತಿಯನ್ನು ಖರ್ಚುಮಾಡಬೇಕಾಗುವ ಯಾವುದೇ ಕೆಲಸಕ್ಕೆ ಕೈಹಾಕುವ ಮುಂಚೆ ಇಲ್ಲವೆ ಯಾವುದೇ ವಸ್ತುವನ್ನು ಖರೀದಿಸುವ ಮುಂಚೆ ‘ನಾನು ಮಾಡುತ್ತಿರುವ ಯೆಹೋವನ ಸೇವೆ ಇದರಿಂದಾಗಿ ಹೆಚ್ಚಾಗುವುದೋ ಕಡಿಮೆಯಾಗುವುದೋ?’ ಎಂಬ ಪ್ರಶ್ನೆಯನ್ನು ಸ್ವತಃ ಕೇಳಿಕೊಳ್ಳುತ್ತಾ ಮೊದಲೇ ‘ಲೆಕ್ಕಮಾಡುವುದು’ ಒಳ್ಳೇದು. (ಲೂಕ 14:28; ಫಿಲಿ. 1:9-11) ಅಲ್ಲದೆ ಹೆಚ್ಚು ಸೇವೆಮಾಡಲಿಕ್ಕಾಗಿ ನಮ್ಮ ಜೀವನವನ್ನು ಇನ್ನಷ್ಟು ಸರಳಗೊಳಿಸುವುದು ಹೇಗೆಂಬುದರ ಬಗ್ಗೆ ನಾವು ಆಗಾಗ್ಗೆ ಪರಿಶೀಲಿಸುವುದೂ ವಿವೇಕಯುತ.—2 ಕೊರಿಂ. 13:5; ಎಫೆ. 5:10.
3. ತನ್ನ ಜೀವನವನ್ನು ಸರಳಗೊಳಿಸಲು ಬದಲಾವಣೆಗಳನ್ನು ಮಾಡಿದ ಸಹೋದರಿಯಿಂದ ನಾವೇನು ಕಲಿಯಬಲ್ಲೆವು?
3 ರೆಗ್ಯುಲರ್ ಪಯನೀಯರ್ ಸೇವೆ ಆರಂಭಿಸಿದ ಸಹೋದರಿಯೊಬ್ಬಳನ್ನು ಪರಿಗಣಿಸೋಣ. ಆಕೆಗೆ ತನ್ನ ಅಗತ್ಯಗಳನ್ನು ಪೂರೈಸಲು ಪಾರ್ಟ್ ಟೈಮ್ ಕೆಲಸ ಸಾಕಾಗಿದ್ದರೂ ತನ್ನ ಪೂರ್ಣ ಸಮಯದ ನೌಕರಿಯಲ್ಲೇ ಮುಂದುವರಿದಳು. ಆದರೆ ಕಾಲಾನಂತರ ಆಕೆ ಅಂದದ್ದು: “ಯಾರೂ ಇಬ್ಬರು ಯಜಮಾನರ ಸೇವೆಮಾಡಲಾರರು. ಆದ್ದರಿಂದ ನನ್ನ ಬಯಕೆಗಳನ್ನು ತ್ಯಾಗಮಾಡಿ, ನನ್ನ ಅಗತ್ಯಗಳನ್ನು ಮಾತ್ರ ಪೂರೈಸಲು ನಿರ್ಧರಿಸಿದೆ. ಪ್ರಾಪಂಚಿಕ ವಸ್ತುಗಳು ಇಂದು ಬರುತ್ತವೆ ನಾಳೆ ಹೋಗುತ್ತವೆ. ಆದರೆ ನನಗೆ ಬೇಕೆಂದನಿಸಿದ್ದೆಲ್ಲವನ್ನೂ ಗಿಟ್ಟಿಸಿಕೊಳ್ಳಲು ಹೋದರೆ ಅದರಿಂದ ನಾನು ಬಳಲಿಹೋಗುವೆ ಎಂಬುದನ್ನು ಅರಿತುಕೊಂಡೆ.” ತನ್ನ ಜೀವನವನ್ನು ಸರಳಗೊಳಿಸಲು ಬೇಕಾದ ಬದಲಾವಣೆಗಳನ್ನು ಮಾಡಿ ನೌಕರಿಯನ್ನು ಬದಲಾಯಿಸಲು ಆಕೆಯ ಪರಿಸ್ಥಿತಿ ಅನುಮತಿಸಿತು. ಇದರಿಂದ ತನ್ನ ಪಯನೀಯರ್ ಸೇವೆಯನ್ನು ಮುಂದುವರಿಸಲು ಶಕ್ತಳಾದಳು.
4. ನಮ್ಮ ಕಣ್ಣನ್ನು ಸರಳವಾಗಿಡುವುದು ತುರ್ತಿನದ್ದಾಗಿದೆ ಏಕೆ?
4 ನಾವು ಜೀವಿಸುತ್ತಿರುವ ಸಮಯವು ಅತಿ ತುರ್ತಿನದ್ದು. ಆದ್ದರಿಂದಲೇ ನಮ್ಮ ಕಣ್ಣನ್ನು ಸರಳವಾಗಿಡುವುದು ಅತ್ಯಂತ ಮಹತ್ವದ್ದು. ಒಂದೊಂದು ದಿನ ದಾಟುತ್ತಾ ಹೋದಂತೆ ನಾವು ಈ ವಿಷಯಗಳ ವ್ಯವಸ್ಥೆಯ ಅಂತ್ಯ ಮತ್ತು ದೇವರ ಹೊಸ ಲೋಕದ ಆರಂಭಕ್ಕೆ ಒಂದೊಂದೇ ದಿನ ಹತ್ತಿರವಾಗುತ್ತಿದ್ದೇವೆ. (1 ಕೊರಿಂ. 7:29, 31) ಸಾರುವ ಕೆಲಸದ ಮೇಲೆ ನಮ್ಮ ಗಮನ ಕೇಂದ್ರೀಕರಿಸುವುದರಿಂದ ನಮ್ಮನ್ನೂ ನಮಗೆ ಕಿವಿಗೊಡುವವರನ್ನೂ ರಕ್ಷಿಸುವೆವು.—1 ತಿಮೊ. 4:16.