ಡಿಸೆಂಬರ್ 21ರಿಂದ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 21ರಿಂದ ಆರಂಭವಾಗುವ ವಾರ
ಗೀತೆ 23
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಹೋಶುವ 9-11
ನಂ. 1: ಯೆಹೋಶುವ 9:1-15
ನಂ. 2: ಜೀವನೋಪಾಯವನ್ನು ನಿರ್ವಹಿಸುವ ಪಂಥಾಹ್ವಾನ (fy ಪು. 105, 106 ¶9, 10)
ನಂ. 3: ದೇವರ ಶಾಂತಿಭರಿತ ಹೊಸ ಲೋಕ—ನೀವು ಅಲ್ಲಿ ಜೀವಿಸಬಲ್ಲಿರಿ
❑ ಸೇವಾ ಕೂಟ:
ಗೀತೆ 4
5 ನಿ: ಪ್ರಕಟಣೆಗಳು.
15 ನಿ: ಕಾವಲಿನಬುರುಜು ಮತ್ತು ಎಚ್ಚರ! ನೀಡಲು ತಯಾರಿ. ಪ್ರತ್ಯಕ್ಷಾಭಿನಯ: ಗುಂಪು ಮೇಲ್ವಿಚಾರಕನೊಬ್ಬನು ಯುವ ಪ್ರಚಾರಕನಿಗೆ ತಾನು ತಯಾರಿಸಿದ ನಿರೂಪಣೆಯನ್ನು ತಿಳಿಸುತ್ತಾನೆ. ತಾನದನ್ನು ಆಯ್ಕೆ ಮಾಡಲು ಕಾರಣ, ಮನೆಯವನಿಗೆ ಕೇಳುವ ಪ್ರಶ್ನೆ, ತೋರಿಸಲಿರುವ ವಚನಗಳನ್ನು ವಿವರಿಸುತ್ತಾನೆ. ಪ್ರಚಾರಕನು ತಾನು ಯೋಚಿಸಿರುವ ನಿರೂಪಣೆಯನ್ನು ವಿವರಿಸಿ ಅದನ್ನು ಸರಿಪಡಿಸಲು ಸಹಾಯ ಕೇಳುತ್ತಾನೆ. ಅವನು ತೋರಿಸಲಿಚ್ಛಿಸುವ ಲೇಖನವನ್ನೇ ಬಳಸುತ್ತಾ ಇಬ್ಬರೂ ಒಂದು ಪ್ರಶ್ನೆ ತಯಾರಿಸಿ, ವಚನಗಳನ್ನು ಆರಿಸುತ್ತಾರೆ.
15 ನಿ: “ನಿಮ್ಮ ವಿದ್ಯಾರ್ಥಿಗಳಿಗೋಸ್ಕರ ‘ಪ್ರಾಣ ಕೊಡಿ.’” ಪ್ರಶ್ನೋತ್ತರ ಚರ್ಚೆ. ಪ್ಯಾರ 2ನ್ನು ಚರ್ಚಿಸಿದ ಬಳಿಕ ಒಬ್ಬ ಪ್ರಚಾರಕನನ್ನು/ಳನ್ನು ಇಂಟರ್ವ್ಯೂ ಮಾಡಿ. ಅವರು ತಮ್ಮ ವಿದ್ಯಾರ್ಥಿಗಳಿಗೆ ಯಾವೆಲ್ಲಾ ವಿಧಗಳಲ್ಲಿ ವೈಯಕ್ತಿಕ ಆಸಕ್ತಿ ತೋರಿಸುತ್ತಾರೆಂದು ಮತ್ತು ಇದರ ಫಲಿತಾಂಶಗಳೇನೆಂದು ತಿಳಿಸಲಿ. ಬಳಿಕ, ತನ್ನೊಂದಿಗೆ ಅಧ್ಯಯನ ಮಾಡಿದವರು ತೋರಿಸಿದ ವೈಯಕ್ತಿಕ ಆಸಕ್ತಿಯಿಂದ ಪ್ರಯೋಜನ ಪಡೆದ ಪ್ರಚಾರಕರೊಬ್ಬರನ್ನೂ ಇಂಟರ್ವ್ಯೂ ಮಾಡಿರಿ.
ಗೀತೆ 66