ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಅಕ್ಟೋಬರ್-ಡಿಸೆಂಬರ್
“ಹದಿಪ್ರಾಯದವರನ್ನು ಬೆಳೆಸುವುದು ಒಂದು ದೊಡ್ಡ ಕೆಲಸವೆಂದು ಹೆತ್ತವರು ಒಪ್ಪಿಕೊಳ್ಳುತ್ತಾರೆ. ಈ ಸವಾಲನ್ನು ಹೆತ್ತವರು ಹೇಗೆ ಯಶಸ್ವಿಯಾಗಿ ನಿಭಾಯಿಸಬಹುದೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಸಹಾಯಕಾರಿಯಾದ ಶಾಸ್ತ್ರಾಧಾರಿತ ಸಲಹೆಯೊಂದನ್ನು ನಿಮಗೆ ಓದಿಹೇಳಲೋ? [ಮನೆಯವನು ಒಪ್ಪುವುದಾದರೆ ಫಿಲಿಪ್ಪಿ 4:5 ಓದಿ.] ಹೆತ್ತವರಿಗೆ ನೆರವಾಗುವ ವಿಭಿನ್ನ ಶಾಸ್ತ್ರಾಧಾರಿತ ಮೂಲತತ್ತ್ವಗಳು ಈ ಲೇಖನದಲ್ಲಿವೆ.” ಪುಟ 10ರಲ್ಲಿರುವ ಲೇಖನ ತೋರಿಸಿರಿ.
ಎಚ್ಚರ! ಅಕ್ಟೋಬರ್-ಡಿಸೆಂಬರ್
“ಇಂದು ಅನೇಕರು ಖಿನ್ನತೆಯಿಂದ ಬಾಧಿತರಾಗಿದ್ದಾರೆ. ಹೀಗೆ ನೊಂದುಬೆಂದವರಲ್ಲಿ ದೇವರು ವೈಯಕ್ತಿಕವಾಗಿ ಆಸಕ್ತನೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗೆ ಅವಕಾಶಕೊಡಿ. ನಂತರ ಮನೆಯವರಿಗೆ ಚರ್ಚೆ ಮುಂದುವರಿಸಲು ಆಸಕ್ತಿಯಿದೆಯೆಂದು ತೋರುವಲ್ಲಿ ಅವರ ಅನುಮತಿ ಕೇಳಿ ಕೀರ್ತನೆ 34:18 ಓದಿ.] ಖಿನ್ನತೆಯಿಂದ ಬಾಧಿತರಾದವರಿಗೆ ಔಷಧೋಪಚಾರ ಅಗತ್ಯವಿದ್ದರೂ ಅವರು ಹೇಗೆ ದೇವರ ಸಹಾಯ ಪಡೆಯಬಲ್ಲರೆಂದು ಈ ಪತ್ರಿಕೆ ವಿವರಿಸುತ್ತದೆ. ಅವರಿಗೆ ಸಾಂತ್ವನ ತರುವ ರೀತಿಯಲ್ಲಿ ನಾವು ಹೇಗೆ ಮಾತಾಡಬಹುದೆಂಬ ಸಲಹೆಗಳೂ ಅದರಲ್ಲಿವೆ.”