ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ ಆಗಸ್ಟ್: ಸ್ಟಾಕ್‌ನಲ್ಲಿರುವ ಈ ಕೆಳಗಿನ 32 ಪುಟದ ಬ್ರೋಷರ್‌ಗಳಲ್ಲಿ ಯಾವುದೇ ಒಂದನ್ನು ನೀಡಿರಿ: ಸಕಲ ಜನರಿಗಾಗಿರುವ ಒಂದು ಗ್ರಂಥ, ಸಂತೃಪ್ತಿಕರವಾದ ಜೀವನ ಲಭ್ಯವಾಗುವ ವಿಧ, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಎಚ್ಚರಿಕೆಯಿಂದಿರಿ!, “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ನೀವು ತ್ರಯೈಕ್ಯವನ್ನು ನಂಬ ಬೇಕೋ? ಪರದೈಸನ್ನು ತರಲಿರುವ ಸರಕಾರ (ಇಂಗ್ಲಿಷ್), ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ? (ಇಂಗ್ಲಿಷ್), ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ. ಸೆಪ್ಟೆಂಬರ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಈ ಪುಸ್ತಕವನ್ನು ನೀಡುವಾಗ ಪ್ರಚಾರಕರು ಸಾಧ್ಯವಿರುವಲ್ಲೆಲ್ಲಾ ಪ್ರಥಮ ಭೇಟಿಯಲ್ಲೇ ಬೈಬಲ್ ಅಧ್ಯಯನವನ್ನು ಆರಂಭಿಸಲು ಪ್ರಯತ್ನಿಸಬೇಕು. ಬೈಬಲ್ ಅಧ್ಯಯನವನ್ನು ನಡೆಸುವ ವಿಧವನ್ನು ಮನೆಯವರಿಗೆ ಸಂಕ್ಷಿಪ್ತವಾಗಿ ತೋರಿಸುವ ಮೂಲಕ ಅವರು ಅದರಿಂದ ಹೇಗೆ ಪ್ರಯೋಜನ ಪಡೆಯಬಲ್ಲರೆಂದು ತಿಳಿಸಿರಿ. ಅಕ್ಟೋಬರ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಮನೆಯವನು ಆಸಕ್ತಿ ತೋರಿಸಿದಲ್ಲಿ, ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಎಂಬ ಟ್ರ್ಯಾಕ್ಟನ್ನು ನೀಡಿ ಚರ್ಚಿಸಿರಿ. ಮನೆಯವನ ಬಳಿ ಈಗಾಗಲೇ ಆ ಟ್ರ್ಯಾಕ್ಟ್ ಇರುವುದಾದರೆ ಪ್ರಚಾರಕರು ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲು ಪ್ರಯತ್ನಿಸಬೇಕು. ನವೆಂಬರ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಈ ಪುಸ್ತಕ ಮನೆಯವರ ಬಳಿ ಇರುವುದಾದರೆ, ಬಣ್ಣ ಮಾಸಿದ ಹಾಳೆಯ ಯಾವುದೇ 192 ಪುಟಗಳ ಪುಸ್ತಕ ಅಥವಾ 1995ಕ್ಕೆ ಮುಂಚೆ ಪ್ರಕಟವಾದ ಇತರ ಪುಸ್ತಕಗಳನ್ನು ಪ್ರಚಾರಕರು ನೀಡಬಹುದು.
◼ 2009ರಲ್ಲಿ ಲೋಕವ್ಯಾಪಕವಾಗಿ ನಡೆಯಲಿರುವ ಜಿಲ್ಲಾ ಮತ್ತು ಅಂತಾರಾಷ್ಟ್ರೀಯ ಅಧಿವೇಶನಗಳನ್ನು ಪ್ರಕಟಪಡಿಸಲು ಪರಿಶ್ರಮಪೂರ್ವಕ ಪ್ರಯತ್ನವನ್ನು ಮಾಡಲಾಗುವುದು. ಪ್ರಚಾರಕರಿಗೆ ತಮ್ಮ ಟೆರಿಟೊರಿಯಲ್ಲಿ ಈ ಅಧಿವೇಶನದ ಕುರಿತ ಒಂದು ವಿಶೇಷ ಕರಪತ್ರವನ್ನು ಹಂಚುವ ಸಂದರ್ಭ ಸಿಗುವುದು. ಸಭೆಗೆ ನೇಮಿತವಾದ ಅಧಿವೇಶನ ನಡೆಯುವ ಮೂರು ವಾರಗಳ ಮುಂಚಿತವಾಗಿ ಈ ಕರಪತ್ರ ಅಭಿಯಾನವನ್ನು ನಡೆಸಬೇಕು.
◼ ಎಲ್ಲ ಪ್ರಚಾರಕರಿಗೆ ಸಭೆಯ ಮೂಲಕ ಅಧಿವೇಶನ ಬ್ಯಾಜ್ ಕಾರ್ಡ್‌ಗಳ ಸಂಗ್ರಹವನ್ನು ಕಳುಹಿಸಲಾಗುವುದು. ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಹಾಜರಾಗುವ ಪ್ರತಿನಿಧಿಗಳು ಅದೇ ಬ್ಯಾಜ್ ಕಾರ್ಡ್‌ಗಳನ್ನು ಉಪಯೋಗಿಸುವರು.