ಪ್ರತಿದಿನವೂ ಯೆಹೋವನನ್ನು ಸ್ತುತಿಸಿರಿ
1. ದೇವರ ಸೇವಕರು ಏನನ್ನು ಮಾಡಲು ಪ್ರಚೋದಿಸಲ್ಪಟ್ಟಿದ್ದಾರೆ ಮತ್ತು ಏಕೆ?
1 ರಾಜ ದಾವೀದನು ಯೆಹೋವನನ್ನು “ದಿನಂಪ್ರತಿ,” ನಿತ್ಯನಿರಂತರವಾಗಿ ಸ್ತುತಿಸುವ ನಿರ್ಧಾರವನ್ನು ಮಾಡಿದನು. (ಕೀರ್ತ. 145:2, 7, 21) ನಮಗೂ ಯೆಹೋವನನ್ನು ದಿನದಿನವೂ ಸ್ತುತಿಸಲು ಸಕಾರಣವಿದೆ.—ಕೀರ್ತ. 37:10; 145:14, 18; 2 ಪೇತ್ರ 3:13.
2. ಕುಟುಂಬಗಳು ಯೆಹೋವನನ್ನು ದಿನದಿನವೂ ಹೇಗೆ ಸ್ತುತಿಸಬಹುದು?
2 ನಮ್ಮ ಮನೆಯಲ್ಲಿ: ಅರ್ಥಭರಿತ ಆಧ್ಯಾತ್ಮಿಕ ಚರ್ಚೆಗಳಿಗಾಗಿ ನಮ್ಮಲ್ಲಿ ಬಲವರ್ಧಕವಾದ ಮುದ್ರಿತ ಸಾಹಿತ್ಯಗಳಿವೆ. ದಿನದ ವಚನವನ್ನು ಚರ್ಚಿಸುವಾಗ, ಕುಟುಂಬ ಆರಾಧನೆಯನ್ನು ನಡೆಸುವಾಗ ಮತ್ತು ಸಭಾ ಕೂಟಗಳಿಗೆ ತಯಾರಿಸುವಾಗ ನಾವು ಈ ಚರ್ಚೆಯನ್ನು ಮಾಡುತ್ತೇವೆ. ಹೆಚ್ಚಿನ ಕುಟುಂಬಗಳು ಪ್ರತಿದಿನ ಒಂದು ಊಟಕ್ಕಾದರೂ ಒಟ್ಟುಗೂಡಿ ಬರುವುದನ್ನು ರೂಢಿಸಿಕೊಂಡಿವೆ. ಅದು ಅವಸರವಿಲ್ಲದೆ ಆರಾಮವಾಗಿ ಕುಳಿತು ಮಾತಾಡುವ ಹಾಗೂ ಯೆಹೋವನನ್ನು ಸ್ತುತಿಸುವ ಸಂದರ್ಭಗಳನ್ನು ಒದಗಿಸುತ್ತದೆ. ಹೆತ್ತವರಿಂದ ನಡೆಸಲ್ಪಡುವ ಅಂಥ ಚರ್ಚೆಗಳು ಮಕ್ಕಳನ್ನು ‘ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ ಬೆಳೆಸುವುದರಲ್ಲಿ’ ಒಂದು ಮಹತ್ವದ ಸಹಾಯಕವಾಗಿರಬಲ್ಲವು.—ಎಫೆ. 6:4; ಧರ್ಮೋ. 6:5-7.
3. ನಮ್ಮ ಸಹೋದರರೊಂದಿಗೆ ಇರುವಾಗ ನಮಗೆ ಯಾವ ಸದವಕಾಶಗಳಿವೆ?
3 ನಮ್ಮ ಸಹೋದರರೊಂದಿಗೆ: ನಾವು ಕ್ಷೇತ್ರ ಸೇವೆಯಲ್ಲಿ ಮತ್ತು ಸಭಾ ಕೂಟಗಳಲ್ಲಿ ಇರುವಾಗ, ಜೊತೆವಿಶ್ವಾಸಿಗಳೊಂದಿಗೆ ಯೆಹೋವನನ್ನು ಸ್ತುತಿಸುವ ಅತ್ಯುತ್ತಮ ಅವಕಾಶಗಳು ನಮಗಿವೆ. (ಜ್ಞಾನೋ. 15:30; ಫಿಲಿ. 4:8; ಇಬ್ರಿ. 13:15) ನಾವೆಲ್ಲರೂ ಯೆಹೋವನನ್ನು ಪ್ರೀತಿಸುತ್ತೇವಾದ್ದರಿಂದ, ಒಬ್ಬರೊಂದಿಗೊಬ್ಬರು ಮಾತಾಡುವಾಗ ಯೆಹೋವನ ಒಳ್ಳೇತನಕ್ಕಾಗಿ ಗಣ್ಯತೆಯ ಪ್ರಾಮಾಣಿಕ ಮಾತುಗಳನ್ನು ಆಡುವುದು ನಮಗೆ ಸುಲಭವಾಗಿರುತ್ತದೆ.—ಕೀರ್ತ. 106:1.
4. ಯಾವ ಸಂದರ್ಭಗಳಲ್ಲಿ ನೀವು ಯೆಹೋವನನ್ನು ಸ್ತುತಿಸಬಲ್ಲಿರಿ?
4 ಅವಿಶ್ವಾಸಿಗಳೊಂದಿಗೆ ಮಾತಾಡುವಾಗ: ಸಾರ್ವಜನಿಕ ಶುಶ್ರೂಷೆಯಲ್ಲಿ ಪ್ರತಿದಿನ ಭಾಗವಹಿಸಲು ನಮ್ಮ ಪರಿಸ್ಥಿತಿಗಳು ಅನುಮತಿಸದಿದ್ದರೂ ನಮ್ಮ ಸಹೋದ್ಯೋಗಿಗಳು, ಸಹಪಾಠಿಗಳು ಹಾಗೂ ಸುತ್ತಲಿರುವ ಜನರೊಂದಿಗೆ ಯೆಹೋವನ ಮತ್ತು ಆತನ ಉದ್ದೇಶಗಳ ಕುರಿತು ಸ್ವಲ್ಪವಾದರೂ ಮಾತಾಡಿದಲ್ಲಿ ಪ್ರಾಮಾಣಿಕ ಜನರಲ್ಲಿ ನಿರೀಕ್ಷೆಯನ್ನು ಬೇರೂರಿಸಸಾಧ್ಯವಿದೆ. (ಕೀರ್ತ. 27:14; 1 ಪೇತ್ರ 3:15) ಒಬ್ಬಾಕೆ ಸಹೋದರಿಯು ಪ್ರಯಾಣ ಮಾಡುವಾಗ ಜೊತೆ ಪ್ರಯಾಣಿಕಳಿಗೆ ಸಾಕ್ಷಿಕೊಡಲು ಶಕ್ತಳಾದಳು. ಸಹೋದರಿಯ ಸಂದೇಶದಿಂದ ಆ ಪ್ರಯಾಣಿಕಳು ಎಷ್ಟು ಪ್ರಭಾವಿತಳಾದಳೆಂದರೆ ತನ್ನ ವಿಳಾಸ ಮತ್ತು ಫೋನ್ ನಂಬರನ್ನೂ ಕೊಟ್ಟಳು. ಹೀಗೆ ಅವರು ಒಬ್ಬರನ್ನೊಬ್ಬರು ಸಂಪರ್ಕಿಸಸಾಧ್ಯವಾಯಿತು. ಲೋಕದ ಕಷ್ಟಸಂಕಷ್ಟಗಳು ಹೆಚ್ಚೆಚ್ಚು ಕೆಡುತ್ತಾ ಬರುವಾಗ ಯೆಹೋವನ ಜನರು “ಶುಭದ ಸುವಾರ್ತೆಯನ್ನು” ಕೇಳುವ ಜನರಿಗೆ ಅದನ್ನು ನೀಡುವುದನ್ನು ಮುಂದುವರಿಸಿದ್ದಾರೆ. ಇದು ಜನರಿಗೆ ನಿರೀಕ್ಷೆಯನ್ನು ಕೊಟ್ಟು ಅವರು ಯೆಹೋವನನ್ನು ಸ್ತುತಿಸುವಂತೆ ಮಾಡುತ್ತದೆ.—ಯೆಶಾ. 52:7; ರೋಮ. 15:11.
5. ಯೆಹೋವನನ್ನು ಸ್ತುತಿಸುವುದು ನಮ್ಮ ಅಪೇಕ್ಷೆಯಾಗಿರಬೇಕು ಏಕೆ ಮತ್ತು ಇದು ಏನನ್ನು ಪೂರೈಸಬಹುದು?
5 ಯೆಹೋವನ ಸೇವಕರು ದಿನದಿನವೂ ಆತನನ್ನು ಸ್ತುತಿಸುವುದನ್ನು ನೋಡುವಾಗ ಆತನಿಗೆ ಎಷ್ಟು ಆನಂದವಾಗುತ್ತಿರಬೇಕು! ನಮ್ಮ ಸುತ್ತಮುತ್ತಲಿನ ಯೆಹೋವನ ದೃಶ್ಯ ಸೃಷ್ಟಿಯೂ ಆತನನ್ನು ಸ್ತುತಿಸುತ್ತಾ ಇದೆ. ಅಂತೆಯೇ ಪ್ರತಿದಿನವೂ ಮನೆಯಲ್ಲಿ, ಸಭೆಯಲ್ಲಿ ಮತ್ತು ಯೆಹೋವನ ಸ್ತುತಿಗಾರರಲ್ಲದ ಇತರರೊಂದಿಗೆ ಮಾತಾಡುವಾಗ ನಮ್ಮಿಂದಲೂ ಯೆಹೋವನ ಸ್ತುತಿಯು ಉಕ್ಕೇರುತ್ತಾ ಇರಲಿ.—ಕೀರ್ತ. 19:1-4.