ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2008ರ ಡಿಸೆಂಬರ್ 29ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. 2008ರ ನವೆಂಬರ್ 3ರಿಂದ ಡಿಸೆಂಬರ್ 25ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲೆ ಆಧಾರಿತವಾದ 20-ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು.
ಭಾಷಣ ಗುಣಗಳು
1. “ಪ್ರೀತಿಯ ನಿಮಿತ್ತ” ಹುರಿದುಂಬಿಸುವುದು ಪರಿಣಾಮಕಾರಿಯಾಗಿರುತ್ತದೆ ಏಕೆ? (ಫಿಲೆ. 9) [be-KA ಪು. 266 ಪ್ಯಾರ. 2-4]
2. ಇತರರಲ್ಲಿ ನಾವು ಹೇಗೆ ಧೈರ್ಯವನ್ನು ತುಂಬಿಸಬಲ್ಲೆವು? [be-KA ಪು. 268 ಪ್ಯಾರ. 4-ಪು. 269 ಪ್ಯಾರ. 2]
ನೇಮಕ ನಂ. 1
3. ತೀತನಿಗೆ ಪೌಲನು ಬರೆದ ಪತ್ರವು ನಮಗಿಂದು ‘ಉತ್ತಮವೂ ಪ್ರಯೋಜನಕರವೂ’ ಆಗಿದೆ ಹೇಗೆ? (ತೀತ 3:8) [bsi08-2-KA ಪು. 11 ಪ್ಯಾರ. 8]
4. ಪೇತ್ರನ ಪ್ರಥಮ ಪತ್ರವು ಸಮಯೋಚಿತವಾಗಿತ್ತು ಏಕೆ? [bsi08-2-KA ಪು. 19 ಪ್ಯಾರ. 1]
5. ಪ್ರಕಟನೆಯ ಸಾಂಕೇತಿಕ ಚಿತ್ರಣಗಳು ನಮ್ಮನ್ನು ಹೇಗೆ ಪ್ರಭಾವಿಸಬೇಕು? [bsi08-2-KA ಪು. 28 ಪ್ಯಾರ. 1]
ವಾರದ ಬೈಬಲ್ ವಾಚನ
6. ತೀತ 2:3 ರಲ್ಲಿ ಪೌಲನು, ‘ಚಾಡಿಹೇಳುವುದು’ ಮತ್ತು ‘ದ್ರಾಕ್ಷಾಮದ್ಯಕ್ಕೆ ಗುಲಾಮರು ಆಗಿರುವ ವಿಷಯವನ್ನು ಏಕೆ ಒಟ್ಟಿಗೆ ಸೇರಿಸಿದ್ದಿರಬಹುದು? [w94-KA 6/15 ಪು. 20 ಪ್ಯಾರ. 12]
7. ಸೈತಾನನು “ಮರಣಾಧಿಕಾರಿ” ಆಗಿರುವುದು ಅವನು ಯಾರಿಗೆ ಬೇಕಾದರೂ ಅಕಾಲಿಕ ಮರಣವನ್ನು ಬರಮಾಡಬಹುದೆಂಬುದನ್ನು ಸೂಚಿಸುತ್ತದೋ? (ಇಬ್ರಿ. 2:14) [w08 10/15-KA “ಯೆಹೋವನ ವಾಕ್ಯವು ಸಜೀವವಾದದ್ದು—ತೀತ, ಫಿಲೆಮೋನ ಮತ್ತು ಇಬ್ರಿಯರಿಗೆ ಬರೆದ ಪತ್ರಗಳ ಮುಖ್ಯಾಂಶಗಳು”]
8. ಹೊಸ ಒಡಂಬಡಿಕೆಯ “ಮಾನವ ಒಡಂಬಡಿಕೆಗಾರನು” ಯಾರು? (ಇಬ್ರಿ. 9:16, NW) [w92-KA 6/1 ಪು. 31]
9. ಸಮಾಧಾನಪ್ರಿಯರು ಎಂಬುದರ ಅರ್ಥವೇನು, ಮತ್ತು ಇದರ ಕುರಿತು ನಾವು ನಮ್ಮನ್ನೇ ಏನು ಕೇಳಿಕೊಳ್ಳಬೇಕು? (ಯಾಕೋ. 3:17) [w08 3/15 ಪು. 24 ಪ್ಯಾರ. 18]
10. ‘ದೇವರು ನಮ್ಮ ಹೃದಯಕ್ಕಿಂತ ದೊಡ್ಡವನು’ ಎಂಬ ವಾಕ್ಸರಣಿಯ ಅರ್ಥವೇನು? (1 ಯೋಹಾ. 3:20) [w05-KA 8/1 ಪು. 30 ಪ್ಯಾರ. 19]