2009ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶೆಡ್ಯೂಲ್
ಸೂಚನೆಗಳು
ಇಸವಿ 2009ರಲ್ಲಿ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯನ್ನು ನಡಿಸುವಾಗ ಈ ಕೆಳಗಿನ ಏರ್ಪಾಡುಗಳನ್ನು ಅನುಸರಿಸಲಾಗುವುದು.
ಮಾಹಿತಿಯ ಮೂಲಗಳು: ಸತ್ಯವೇದವು [BSI], ಕಾವಲಿನಬುರುಜು [W-KA], ಕುಟುಂಬ ಸಂತೋಷದ ರಹಸ್ಯ [fy-KA], ಎಚ್ಚರ! [g-KA].
ಶಾಲೆಯನ್ನು ಸ್ವಾಗತದ ಹೇಳಿಕೆಯೊಂದಿಗೆ ಸರಿಯಾದ ಸಮಯಕ್ಕೆ ಆರಂಭಿಸಿದ ಬಳಿಕ ಕೆಳಗೆ ಸೂಚಿಸಲ್ಪಟ್ಟಿರುವಂತೆ ಮುಂದುವರಿಯಿರಿ. ಪ್ರತಿಯೊಂದು ಭಾಗದ ನಂತರ ಶಾಲಾ ಮೇಲ್ವಿಚಾರಕನು ಮುಂದಿನ ಭಾಗವನ್ನು ಪರಿಚಯಿಸುವನು.
ಬೈಬಲ್ ವಾಚನದಿಂದ ಮುಖ್ಯಾಂಶಗಳು: 10 ನಿಮಿಷಗಳು. ಮೊದಲ ನಾಲ್ಕು ನಿಮಿಷಗಳ ವರೆಗೆ, ಒಬ್ಬ ಅರ್ಹ ಹಿರಿಯನು ಅಥವಾ ಶುಶ್ರೂಷಾ ಸೇವಕನು ವಾರದ ಬೈಬಲ್ ವಾಚನದಿಂದ ಶಾಸ್ತ್ರಧಾರಿತ ಅಂಶಗಳನ್ನು ಪರಿಗಣಿಸುವನು. ಆದರೆ ವಾರದ ಬೈಬಲ್ ವಾಚನವು ಬೈಬಲ್ ಪುಸ್ತಕದ ಆರಂಭದ ಅಧ್ಯಾಯಗಳಿಂದ ಶುರುವಾಗುವುದಾದರೆ ಇದಕ್ಕೆ ವಿನಾಯಿತಿ ಇದೆ. ಅಂಥ ಸಂದರ್ಭಗಳಲ್ಲಿ ಮೊದಲ ನಾಲ್ಕು ನಿಮಿಷಗಳಿಗಾಗಿರುವ ವಿಷಯ ಭಾಗವನ್ನು 2004, ಜನವರಿ 1ರ ಕಾವಲಿನಬುರುಜು ಪತ್ರಿಕೆಯಿಂದ ಆರಂಭಗೊಂಡು ಸರಣಿಯಾಗಿ ಮೂಡಿಬಂದಿರುವ “ಯೆಹೋವನ ವಾಕ್ಯವು ಸಜೀವವಾದದ್ದು” ಎಂಬ ಭಾಗಗಳಿಂದ ತೆಗೆದುಕೊಳ್ಳಬೇಕು. ಉದಾಹರಣೆಗೆ, ಜನವರಿ 5 ರಿಂದ ಆರಂಭವಾಗುವ ವಾರದಲ್ಲಿ ಆದಿಕಾಂಡ ಪುಸ್ತಕದ ಮೊದಲ ಐದು ಅಧ್ಯಾಯಗಳನ್ನು ಪರಿಗಣಿಸಲಾಗುವುದು. ಆದುದರಿಂದ, ಭಾಷಣಕರ್ತನು “ಯೆಹೋವನ ವಾಕ್ಯವು ಸಜೀವವಾದದ್ದು ಆದಿಕಾಂಡ ಪುಸ್ತಕದ ಮುಖ್ಯಾಂಶಗಳು—I ಮತ್ತು II” ರಲ್ಲಿರುವ ಆದಿಕಾಂಡ ಪುಸ್ತಕವನ್ನು ಪರಿಚಯ ಮಾಡುವ ಆರಂಭದ ಪ್ಯಾರಗ್ರಾಫ್ಗಳಿಂದ ಕೆಲವು ಅಂಶಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆತನು ಆ ವಿಷಯ ಭಾಗವನ್ನು ಸಭೆಗೆ ಪ್ರಯೋಜನವಾಗುವಂಥ ರೀತಿಯಲ್ಲಿ ಅನ್ವಯಿಸತಕ್ಕದ್ದು. ಚರ್ಚಿಸಲ್ಪಡುವ ಭಾಗವು ವಾರದ ಬೈಬಲ್ ವಾಚನದಿಂದಾಗಿರಲಿ ಅಥವಾ “ಯೆಹೋವನ ವಾಕ್ಯವು ಸಜೀವವಾದದ್ದು” ಎಂಬ ಭಾಗದಿಂದಾಗಿರಲಿ, ಅದರ ಮುಖ್ಯ ಉದ್ದೇಶವು ನೀಡಲ್ಪಡುವ ಮಾಹಿತಿಯು ಏಕೆ ಮತ್ತು ಹೇಗೆ ಅಮೂಲ್ಯವಾದದ್ದಾಗಿದೆ ಎಂಬುದನ್ನು ಗಣ್ಯಮಾಡುವಂತೆ ಸಭಿಕರಿಗೆ ಸಹಾಯಮಾಡುವುದಾಗಿದೆ. ಆರಂಭದ ಭಾಗಕ್ಕಾಗಿ ನಾಲ್ಕು ನಿಮಿಷಗಳಿಗಿಂತ ಹೆಚ್ಚು ಸಮಯವನ್ನು ವ್ಯಯಿಸದಿರುವ ವಿಷಯದಲ್ಲಿ ಭಾಷಣಕರ್ತನು ಜಾಗರೂಕನಾಗಿರಬೇಕು. ಸಭಿಕರು 30 ಸೆಕೆಂಡುಗಳು ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ವಾರದ ಬೈಬಲ್ ವಾಚನದಲ್ಲಿ ತಮಗೆ ಮಹತ್ವವಂದೆಣಿಸಿದ ಅಂಶಗಳನ್ನು ಚುಟುಕಾಗಿ ತಿಳಿಸಲಿಕ್ಕಾಗಿ ಆರು ನಿಮಿಷಗಳು ಬದಿಗಿರಿಸಲ್ಪಟ್ಟಿವೆ ಎಂಬುದನ್ನು ಭಾಷಣಕರ್ತನು ಖಚಿತಪಡಿಸಿಕೊಳ್ಳಬೇಕು. ಅನಂತರ ಶಾಲಾ ಮೇಲ್ವಿಚಾರಕನು ಇತರ ಕ್ಲಾಸ್ ರೂಮ್ಗಳಿಗೆ ನೇಮಿಸಲ್ಪಟ್ಟಿರುವ ವಿದ್ಯಾರ್ಥಿಗಳನ್ನು ಕಳುಹಿಸುವನು.
ನೇಮಕ ನಂಬರ್ 1: 4 ನಿಮಿಷಗಳು ಅಥವಾ ಅದಕ್ಕಿಂತಲೂ ಕಡಿಮೆ. ಇದು ವಾಚನ ನೇಮಕವಾಗಿದ್ದು, ಒಬ್ಬ ಸಹೋದರನಿಗೆ ನೇಮಿಸತಕ್ಕದ್ದು. ವಿದ್ಯಾರ್ಥಿಯು ನೇಮಿತ ವಿಷಯಭಾಗವನ್ನು ಒಂದು ಪೀಠಿಕೆ ಅಥವಾ ಸಮಾಪ್ತಿಯನ್ನು ಕೊಡದೆ ಓದಬೇಕು. ಅರ್ಥಭರಿತವಾಗಿ, ನಿರರ್ಗಳವಾಗಿ, ಸರಿಯಾದ ಅರ್ಥಒತ್ತಿನಿಂದ, ಧ್ವನಿಯ ಏರಿಳಿತದೊಂದಿಗೆ, ಸೂಕ್ತವಾದಲ್ಲಿ ನಿಲ್ಲಿಸಿ, ಸ್ವಾಭಾವಿಕತೆಯಿಂದ ಓದುವಂತೆ ವಿದ್ಯಾರ್ಥಿಗಳಿಗೆ ಸಹಾಯಮಾಡುವುದರಲ್ಲಿ ಶಾಲಾ ಮೇಲ್ವಿಚಾರಕನು ವಿಶೇಷವಾಗಿ ಆಸಕ್ತನಾಗಿರುವನು.
ನೇಮಕ ನಂಬರ್ 2: 5 ನಿಮಿಷಗಳು. ಇದು ಒಬ್ಬ ಸಹೋದರಿಗೆ ನೇಮಿಸಲ್ಪಡುವುದು. ಈ ನೇಮಕವನ್ನು ಪಡೆದುಕೊಳ್ಳುವ ಸಹೋದರಿಯರಿಗೆ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಿಂದ ಪ್ರಯೋಜನ ಪಡೆಯಿರಿ ಪುಸ್ತಕದ 82ನೆಯ ಪುಟದಲ್ಲಿ ಕಂಡುಬರುವ ಪಟ್ಟಿಯಿಂದ ಒಂದು ಸನ್ನಿವೇಶವು ನೇಮಿಸಲ್ಪಡುವುದು ಅಥವಾ ಅವರೇ ಸ್ವತಃ ಒಂದು ಸನ್ನಿವೇಶವನ್ನು ಆ ಪಟ್ಟಿಯಿಂದ ಆರಿಸಿಕೊಳ್ಳುವರು. ವಿದ್ಯಾರ್ಥಿನಿಯು ನೇಮಿತ ಮುಖ್ಯ ವಿಷಯವನ್ನೇ ಉಪಯೋಗಿಸಬೇಕು ಮತ್ತು ಅದನ್ನು ಸ್ಥಳಿಕ ಟೆರಿಟೊರಿಗಾಗಿ ವಾಸ್ತವಿಕವೂ ಪ್ರಾಯೋಗಿಕವೂ ಆಗಿರುವ ಒಂದು ಕ್ಷೇತ್ರ ಸೇವಾ ಅಂಶಕ್ಕೆ ಅನ್ವಯಿಸಬೇಕು. ಮಾಹಿತಿಯ ಮೂಲಕ್ಕಾಗಿ ಯಾವುದೇ ರೆಫರೆನ್ಸ್ಗಳು ಕೊಡಲ್ಪಡದಿರುವಾಗ, ನಮ್ಮ ಪ್ರಕಾಶನಗಳಲ್ಲಿ ಸಂಶೋಧನೆ ನಡೆಸುವ ಮೂಲಕ, ಈ ಭಾಗಕ್ಕಾಗಿರುವ ವಿಷಯಭಾಗವನ್ನು ವಿದ್ಯಾರ್ಥಿನಿಯೇ ಸಂಗ್ರಹಿಸುವ ಅಗತ್ಯವಿರುವುದು. ವಿದ್ಯಾರ್ಥಿನಿಯು ವಿಷಯಭಾಗವನ್ನು ಹೇಗೆ ವಿಕಸಿಸುತ್ತಾಳೆ ಮತ್ತು ಮನೆಯವರು ಶಾಸ್ತ್ರವಚನಗಳ ಕುರಿತು ವಿವೇಚಿಸುವಂತೆ ಹಾಗೂ ಆ ಭಾಷಣದ ಪ್ರಮುಖ ಅಂಶಗಳನ್ನು ಅರ್ಥಮಾಡಿಕೊಳ್ಳುವಂತೆ ಹೇಗೆ ಸಹಾಯಮಾಡುತ್ತಾಳೆ ಎಂಬ ವಿಷಯದಲ್ಲಿ ಶಾಲಾ ಮೇಲ್ವಿಚಾರಕನು ವಿಶೇಷವಾಗಿ ಆಸಕ್ತಿಯುಳ್ಳವನಾಗಿರುವನು. ಶಾಲಾ ಮೇಲ್ವಿಚಾರಕನು ಒಬ್ಬ ಸಹಾಯಕಿಯನ್ನು ನೇಮಿಸುವನು.
ನೇಮಕ ನಂಬರ್ 3: 5 ನಿಮಿಷಗಳು. ಇದನ್ನು ಒಬ್ಬ ಸಹೋದರ ಇಲ್ಲವೆ ಸಹೋದರಿಗೆ ನೇಮಿಸಬಹುದು. ವಿದ್ಯಾರ್ಥಿಯು ನೇಮಿತ ಮುಖ್ಯ ವಿಷಯವನ್ನು ವಿಕಸಿಸಬೇಕು. ಮಾಹಿತಿಯ ಮೂಲಕ್ಕಾಗಿ ಯಾವುದೇ ರೆಫರೆನ್ಸ್ಗಳು ಕೊಡಲ್ಪಡದಿರುವಾಗ, ನಮ್ಮ ಪ್ರಕಾಶನಗಳಲ್ಲಿ ಸಂಶೋಧನೆ ನಡೆಸುವ ಮೂಲಕ, ವಿದ್ಯಾರ್ಥಿಯೇ ವಿಷಯವನ್ನು ಸಂಗ್ರಹಿಸಬೇಕು. ಇದು ಒಬ್ಬ ಸಹೋದರನಿಗೆ ನೇಮಿಸಲ್ಪಡುವಾಗ, ರಾಜ್ಯ ಸಭಾಗೃಹದಲ್ಲಿರುವ ಸಭಿಕರನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ ಈ ನೇಮಕವನ್ನು ಒಂದು ಭಾಷಣವಾಗಿ ಕೊಡತಕ್ಕದ್ದು. ಒಬ್ಬ ಸಹೋದರಿಗೆ ಈ ಭಾಗವು ಕೊಡಲ್ಪಡುವಾಗ, ಅದನ್ನು ಯಾವಾಗಲೂ ನೇಮಕ ನಂಬರ್ 2ಕ್ಕಾಗಿ ಕೊಡಲ್ಪಟ್ಟಿರುವ ಸೂಚನೆಗಳಿಗೆ ತಕ್ಕಂತೆ ನೀಡಬೇಕಾಗಿದೆ. ನಕ್ಷತ್ರ ಚಿಹ್ನೆ ಇರುವಂಥ ಮುಖ್ಯ ವಿಷಯಗಳು ಭಾಷಣಗಳೋಪಾದಿ ನೀಡಲಿಕ್ಕಾಗಿ ಸಹೋದರರಿಗೆ ಮಾತ್ರ ನೇಮಿಸಲ್ಪಡಬೇಕು ಎಂಬುದನ್ನು ದಯವಿಟ್ಟು ಗಮನಿಸಿರಿ ಮತ್ತು ನಿಮ್ಮ ಸಭೆಯಲ್ಲಿ ಸಾಕಷ್ಟು ಹಿರಿಯರು ಮತ್ತು ಶುಶ್ರೂಷಾ ಸೇವಕರು ಇರುವುದಾದರೆ, ಅವರಿಗೆ ನೇಮಿಸಿರಿ.
ಸಲಹೆ: 1-2 ನಿಮಿಷಗಳು. ಶಾಲಾ ಮೇಲ್ವಿಚಾರಕನು ವಿದ್ಯಾರ್ಥಿಯು ಕೆಲಸಮಾಡುತ್ತಿರುವ ಭಾಷಣ ಗುಣವನ್ನು ಮೊದಲೇ ತಿಳಿಸುವುದಿಲ್ಲ. ಅವನು ನೇಮಕ ನಂ. 1, ನಂ. 2 ಮತ್ತು ನಂ. 3ರ ನಂತರ ಭಾಷಣದ ಒಂದು ಪ್ರಶಂಸಾರ್ಹ ಅಂಶದ ಕುರಿತು ಕೆಲವು ಸಕಾರಾತ್ಮಕ ಹೇಳಿಕೆಗಳನ್ನು ನೀಡುವನು. ಭಾಷಣವು ಏಕೆ ಪರಿಣಾಮಕಾರಿಯಾಗಿತ್ತು ಎಂಬುದಕ್ಕಿರುವ ನಿರ್ದಿಷ್ಟ ಕಾರಣಗಳ ಕಡೆಗೆ ಗಮನವನ್ನು ಸೆಳೆಯಬೇಕು ಮತ್ತು ಪದೇ ಪದೇ ಶುಶ್ರೂಷಾ ಶಾಲೆ ಪಠ್ಯಪುಸ್ತಕಕ್ಕೆ ಸೂಚಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯ ಆವಶ್ಯಕತೆಗನುಸಾರ, ಕೂಟದ ನಂತರ ಅಥವಾ ಬೇರೊಂದು ಸಮಯದಲ್ಲಿ ಹೆಚ್ಚಿನ ಸಹಾಯಕರ ಸಲಹೆಯನ್ನು ಖಾಸಗಿಯಾಗಿ ನೀಡಬಹುದು.
ಸಮಯಪಾಲನೆ: ಯಾವುದೇ ಭಾಷಣವಾಗಲಿ ಸಲಹೆಗಾರನ ಹೇಳಿಕೆಗಳಾಗಲಿ ನಿಗದಿತ ಸಮಯವನ್ನು ಮೀರಿ ಹೋಗಬಾರದು. ನಂ. 1, ನಂ. 2 ಮತ್ತು ನಂ. 3 ನೇಮಕಗಳಿಗೆ ನಿಗದಿತವಾದ ಸಮಯವು ಮುಗಿಯಲಿರುವಾಗ, ಆ ಭಾಷಣಗಳನ್ನು ಜಾಣ್ಮೆಯಿಂದ ನಿಲ್ಲಿಸತಕ್ಕದ್ದು. ಬೈಬಲ್ ವಾಚನದಿಂದ ಮುಖ್ಯಾಂಶಗಳನ್ನು ನಿರ್ವಹಿಸುತ್ತಿರುವ ಸಹೋದರರು ಸಮಯವನ್ನು ಮೀರಿಹೋಗುವಲ್ಲಿ, ಅವರಿಗೆ ಖಾಸಗಿ ಸಲಹೆಯನ್ನು ಕೊಡಬೇಕು. ಎಲ್ಲರೂ ತಮ್ಮ ಸಮಯವನ್ನು ಜಾಗರೂಕತೆಯಿಂದ ಗಮನಿಸತಕ್ಕದ್ದು. ಇಡೀ ಕಾರ್ಯಕ್ರಮದ ಸಮಯ: 30 ನಿಮಿಷಗಳು.
ಸಲಹಾ ಪಟ್ಟಿ: ಶುಶ್ರೂಷಾ ಶಾಲೆ ಪಠ್ಯಪುಸ್ತಕದಲ್ಲಿದೆ.
ಸಹಾಯಕ ಸಲಹೆಗಾರ: ಲಭ್ಯವಿರುವಲ್ಲಿ, ಶಾಲಾ ಮೇಲ್ವಿಚಾರಕನ ಜೊತೆಗೆ ಒಬ್ಬ ಸಹಾಯಕ ಸಲಹೆಗಾರನಾಗಿ ನೇಮಕವನ್ನು ನಿರ್ವಹಿಸಲಿಕ್ಕಾಗಿ ಹಿರಿಯರ ಮಂಡಲಿಯು ಒಬ್ಬ ಸಮರ್ಥ ಹಿರಿಯನನ್ನು ಆಯ್ಕೆಮಾಡಬಹುದು. ಸಭೆಯಲ್ಲಿ ಅನೇಕ ಮಂದಿ ಹಿರಿಯರು ಇರುವುದಾದರೆ, ಪ್ರತಿ ವರ್ಷ ಒಬ್ಬೊಬ್ಬ ಸಮರ್ಥ ಹಿರಿಯನಿಗೆ ಈ ನೇಮಕವನ್ನು ಒಪ್ಪಿಸಬಹುದು. ಸಹಾಯಕ ಸಲಹೆಗಾರನ ಜವಾಬ್ದಾರಿಯು, ಬೈಬಲ್ ಮುಖ್ಯಾಂಶಗಳನ್ನು ನೀಡುವ ಸಹೋದರರಿಗೆ, ಅಗತ್ಯವಿರುವಲ್ಲಿ ಖಾಸಗಿ ಸಲಹೆಯನ್ನು ಕೊಡುವುದಾಗಿದೆ. ಜೊತೆ ಹಿರಿಯರು ಅಥವಾ ಶುಶ್ರೂಷಾ ಸೇವಕರು ಪ್ರತಿ ಬಾರಿ ಅಂಥ ಭಾಷಣಗಳನ್ನು ಕೊಟ್ಟ ಬಳಿಕ ಅವನು ಸಲಹೆಯನ್ನು ಕೊಡಲೇಬೇಕೆಂದಿಲ್ಲ.
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ: 20 ನಿಮಿಷಗಳು. ಪ್ರತಿ ಎರಡು ತಿಂಗಳಿಗೊಮ್ಮೆ ಶಾಲಾ ಮೇಲ್ವಿಚಾರಕನು ಒಂದು ಪುನರ್ವಿಮರ್ಶೆಯನ್ನು ನಡೆಸುವನು. ಮೇಲೆ ವಿವರಿಸಲ್ಪಟ್ಟಿರುವಂಥ ರೀತಿಯಲ್ಲೇ ಬೈಬಲ್ ವಾಚನದ ಮುಖ್ಯಾಂಶಗಳ ಪರಿಗಣನೆ ಮಾಡಿದ ನಂತರ ಇದನ್ನು ನಡೆಸಲಾಗುವುದು. ಸದ್ಯದ ವಾರವನ್ನೂ ಸೇರಿಸಿ ಹಿಂದಿನ ಎರಡು ತಿಂಗಳುಗಳಲ್ಲಿ ಶಾಲೆಯಲ್ಲಿ ಪರಿಗಣಿಸಲ್ಪಟ್ಟ ವಿಷಯಭಾಗದ ಮೇಲೆ ಪುನರ್ವಿಮರ್ಶೆಯು ಆಧಾರಿತವಾಗಿರುವುದು. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆಯು ನಡೆಸಲ್ಪಡಲಿರುವ ವಾರದಲ್ಲಿ ನಿಮ್ಮ ಸಭೆ ಸರ್ಕಿಟ್ ಸಮ್ಮೇಳನಕ್ಕೆ ಹಾಜರಾಗಲಿರುವುದಾದರೆ ಅಥವಾ ಸರ್ಕಿಟ್ ಮೇಲ್ವಿಚಾರಕನ ಭೇಟಿಯಿರುವುದಾದರೆ, ಪುನರ್ವಿಮರ್ಶೆಯನ್ನು ಒಂದು ವಾರ ಮುಂದಕ್ಕೆ ಹಾಕಬೇಕು ಮತ್ತು ಮುಂದಿನ ವಾರಕ್ಕೆ ಶೆಡ್ಯೂಲ್ ಮಾಡಲ್ಪಟ್ಟಿರುವ ನಂ. 1, ನಂ. 2 ಮತ್ತು ನಂ. 3 ಭಾಗಗಳನ್ನು ಈ ವಾರದಲ್ಲಿ ನಿರ್ವಹಿಸಬೇಕು. ಆದರೆ ವಾರದ ಬೈಬಲ್ ವಾಚನ ಮತ್ತು ಬೈಬಲ್ ಮುಖ್ಯಾಂಶಗಳ ನೀಡುವಿಕೆಯ ಶೆಡ್ಯೂಲ್ನಲ್ಲಿ ಯಾವುದೇ ಬದಲಾವಣೆಯನ್ನು ಮಾಡಬಾರದು.
ಶೆಡ್ಯೂಲ್
ಜನ. 5 ಬೈಬಲ್ ವಾಚನ: ಆದಿಕಾಂಡ 1-5
ನಂ. 1: ಆದಿಕಾಂಡ 3:1-15
ನಂ. 2: ಒತ್ತಡದ ಕೆಳಗಿರುವ ಕುಟುಂಬ (fy-KA ಪು. 5-9 ¶ 1-14)
ನಂ. 3: ಯಾವುದು ನಿಷ್ಫಲವಾಗುವುದಿಲ್ಲ? (1 ಕೊರಿಂ. 15:58)
ಜನ. 12 ಬೈಬಲ್ ವಾಚನ: ಆದಿಕಾಂಡ 6-10
ನಂ. 1: ಆದಿಕಾಂಡ 9:1-17
ನಂ. 2: ನಾನು ನನ್ನ ಒಡಹುಟ್ಟಿದವರ ಛಾಯೆಯಿಂದ ಹೇಗೆ ಹೊರಬರಬಲ್ಲೆ? (g04-KA 1/8 ಪು. 13-15)
ನಂ. 3: ಕುಟುಂಬ ಸಂತೋಷದ ರಹಸ್ಯ (fy-KA ಪು. 9-12 ¶15-23)
ಜನ. 19 ಬೈಬಲ್ ವಾಚನ: ಆದಿಕಾಂಡ 11-16
ನಂ. 1: ಆದಿಕಾಂಡ 14:1-16
ನಂ. 2: ನೀವು ವಿವಾಹಕ್ಕೆ ಸಿದ್ಧರಾಗಿದ್ದೀರೋ? (fy-KA ಪು. 13-15 ¶1-6)
ನಂ. 3: ಯೆಹೋವನು ನಮ್ಮನ್ನು ಹೇಗೆ ರೂಪಿಸುತ್ತಾನೆ? (ಯೆಶಾ. 64:8)
ಜನ. 26 ಬೈಬಲ್ ವಾಚನ: ಆದಿಕಾಂಡ 17-20
ನಂ. 1: ಆದಿಕಾಂಡ 17:1-17
ನಂ. 2: ಸಂಬಂಧಿಕರು ನಿಮ್ಮ ನಂಬಿಕೆಯಲ್ಲಿ ಪಾಲಿಗರಾಗದಿರುವಾಗ (g04-KA 1/8 ಪು. 20, 21)
ನಂ. 3: ಮೊದಲಾಗಿ ಸ್ವತಃ ನಿಮ್ಮ ಕುರಿತು ತಿಳಿದುಕೊಳ್ಳಿರಿ (fy-KA ಪು. 16-18 ¶7-10)
ಫೆಬ್ರ. 2 ಬೈಬಲ್ ವಾಚನ: ಆದಿಕಾಂಡ 21-24
ನಂ. 1: ಆದಿಕಾಂಡ 22:1-18
ನಂ. 2: ಪದ್ಧತಿಗಳು ಮತ್ತು ಬೈಬಲು (fy-KA ಪು. 17)
ನಂ. 3: aಇತರರಿಗಾಗಿರುವ ನಮ್ಮ ಪ್ರೀತಿಯನ್ನು ವಿಶಾಲಮಾಡಿಕೊಳ್ಳುವ ವಿಧಗಳು (2 ಕೊರಿಂ. 6:11-13)
ಫೆಬ್ರ. 9 ಬೈಬಲ್ ವಾಚನ: ಆದಿಕಾಂಡ 25-28
ನಂ. 1: ಆದಿಕಾಂಡ 25:1-18
ನಂ. 2: ಒಬ್ಬ ಸಂಗಾತಿಯಲ್ಲಿ ಅವಲೋಕಿಸಬೇಕಾದ ವಿಷಯಗಳು (fy-KA ಪು. 18-22 ¶11-15)
ನಂ. 3: ಮಕ್ಕಳು—ಅವರಿಗೆ ಹೆತ್ತವರಿಂದ ಅಗತ್ಯವಿರುವ ವಿಷಯಗಳು (g04-KA 4/8 ಪು. 3-11)
ಫೆಬ್ರ. 16 ಬೈಬಲ್ ವಾಚನ: ಆದಿಕಾಂಡ 29-31
ನಂ. 1: ಆದಿಕಾಂಡ 29:1-20
ನಂ. 2: ‘ಚಿಂತೆಮಾಡುವುದನ್ನು’ ನಿಲ್ಲಿಸಬೇಕು ಏಕೆ? (ಮತ್ತಾ. 6:25)
ನಂ. 3: ಮುಂಚಿತವಾಗಿಯೇ ಕಂಡುಹಿಡಿಯಿರಿ (fy-KA ಪು. 22-24 ¶16-19)
ಫೆಬ್ರ. 23 ಬೈಬಲ್ ವಾಚನ: ಆದಿಕಾಂಡ 32-35
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಮಾರ್ಚ್ 2 ಬೈಬಲ್ ವಾಚನ: ಆದಿಕಾಂಡ 36-39
ನಂ. 1: ಆದಿಕಾಂಡ 39:1-16
ನಂ. 2: ನಿಮ್ಮ ಪ್ರಣಯಯಾಚನೆಯನ್ನು ಗೌರವಾರ್ಹವಾಗಿ ಇಡಿರಿ (fy-KA ಪು. 24, 25 ¶20, 21)
ನಂ. 3: ಮಾನವಕುಲದ ಅಗತ್ಯಗಳನ್ನು ಪೂರೈಸಲು ದೇವರ ರಾಜ್ಯಕ್ಕೆ ಮಾತ್ರವೇ ಸಾಧ್ಯ
ಮಾರ್ಚ್ 9 ಬೈಬಲ್ ವಾಚನ: ಆದಿಕಾಂಡ 40-42
ನಂ. 1: ಆದಿಕಾಂಡ 40:1-15
ನಂ. 2: ವಿವಾಹ ದಿನದ ಆಚೆಗೆ ನೋಡುವುದು (fy-KA ಪು. 25, 26 ¶22, 23)
ನಂ. 3: bಸ್ವತಂತ್ರ ಮನೋಭಾವದ ಬಗ್ಗೆ ಜಾಗ್ರತೆ ವಹಿಸಿ!
ಮಾರ್ಚ್ 16 ಬೈಬಲ್ ವಾಚನ: ಆದಿಕಾಂಡ 43-46
ನಂ. 1: ಆದಿಕಾಂಡ 44:1-17
ನಂ. 2: ಚಿರಸ್ಥಾಯಿಯಾದ ವಿವಾಹಕ್ಕೆ ಒಂದನೆಯ ಕೀಲಿ ಕೈ (fy-KA ಪು. 27-29 ¶1-6)
ನಂ. 3: ನನ್ನ ಹೋಮ್ವರ್ಕ್ ಮಾಡಲು ಸಮಯವನ್ನು ಹೇಗೆ ಕಂಡುಕೊಳ್ಳಬಲ್ಲೆ? (g04-KA 4/8 ಪು. 21-23)
ಮಾರ್ಚ್ 23 ಬೈಬಲ್ ವಾಚನ: ಆದಿಕಾಂಡ 47-50
ನಂ. 1: ಆದಿಕಾಂಡ 48:1-16
ನಂ. 2: ಪಿಶಾಚನಿಗೆ ನಾವು ಹೆದರಬೇಕೋ?
ನಂ. 3: ಚಿರಸ್ಥಾಯಿಯಾದ ವಿವಾಹಕ್ಕೆ ಎರಡನೆಯ ಕೀಲಿ ಕೈ (fy-KA ಪು. 30, 31 ¶7-10)
ಮಾರ್ಚ್ 30 ಬೈಬಲ್ ವಾಚನ: ವಿಮೋಚನಕಾಂಡ 1-6
ನಂ. 1: ವಿಮೋಚನಕಾಂಡ 1:1-19
ನಂ. 2: ರೋಗದ ವಿರುದ್ಧ ಹೋರಾಟ (g04-KA 7/8 ಪು. 3-13)
ನಂ. 3: ಕುಟುಂಬದಲ್ಲಿ ಕ್ರಿಸ್ತಸದೃಶ ತಲೆತನ? (fy-KA ಪು. 31-33 ¶11-15)
ಏಪ್ರಿ. 6 ಬೈಬಲ್ ವಾಚನ: ವಿಮೋಚನಕಾಂಡ 7-10
ನಂ. 1: ವಿಮೋಚನಕಾಂಡ 9:1-19
ನಂ. 2: ಕುಟುಂಬದಲ್ಲಿ ಹೆಂಡತಿಸದೃಶ ಅಧೀನತೆ (fy-KA ಪು. 34, 35 ¶16-19)
ನಂ. 3: cಗಲಾತ್ಯ 6:2ನ್ನು ಗಲಾತ್ಯ 6:5ರೊಂದಿಗೆ ಹೇಗೆ ಸಮನ್ವಯಗೊಳಿಸಬಹುದು?
ಏಪ್ರಿ. 13 ಬೈಬಲ್ ವಾಚನ: ವಿಮೋಚನಕಾಂಡ 11-14
ನಂ. 1: ವಿಮೋಚನಕಾಂಡ 12:21-36
ನಂ. 2: ಚಿರಸ್ಥಾಯಿಯಾದ ವಿವಾಹಕ್ಕೆ ಅಗತ್ಯವಿರುವ ಒಳ್ಳೆಯ ಸಂವಾದ (fy-KA ಪು. 35-38 ¶20-26)
ನಂ. 3: ನಾವು ಕಷ್ಟಾನುಭವಿಸುವಂತೆ ದೇವರು ಏಕೆ ಅನುಮತಿಸುತ್ತಾನೆ? (g04-KA 7/8 ಪು. 14-16)
ಏಪ್ರಿ. 20 ಬೈಬಲ್ ವಾಚನ: ವಿಮೋಚನಕಾಂಡ 15-18
ನಂ. 1: ವಿಮೋಚನಕಾಂಡ 15:1-19
ನಂ. 2: ಸುಳ್ಳಾರಾಧನೆಯಿಂದ ದೂರವಿರುವುದರಲ್ಲಿ ಏನು ಒಳಗೂಡಿದೆ?
ನಂ. 3: ನಿಮ್ಮ ಸಂಪಾದನೆಗೆ ತಕ್ಕಂತೆ ಜೀವಿಸಿರಿ (fy-KA ಪು. 39-41 ¶1-6)
ಏಪ್ರಿ. 27 ಬೈಬಲ್ ವಾಚನ: ವಿಮೋಚನಕಾಂಡ 19-22
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಮೇ 4 ಬೈಬಲ್ ವಾಚನ: ವಿಮೋಚನಕಾಂಡ 23-26
ನಂ. 1: ವಿಮೋಚನಕಾಂಡ 24:1-18
ನಂ. 2: ಕುಟುಂಬ ಸದಸ್ಯರೆಲ್ಲರೂ ಹೊರೆಯಲ್ಲಿ ಪಾಲಿಗರಾಗುವುದು (fy-KA ಪು. 42-44 ¶7-11)
ನಂ. 3: ವಿವಾಹವನ್ನು ಏಕೆ ಪವಿತ್ರವಾದದ್ದಾಗಿ ಪರಿಗಣಿಸಬೇಕು? (g04-KA 7/8 ಪು. 20, 21)
ಮೇ 11 ಬೈಬಲ್ ವಾಚನ: ವಿಮೋಚನಕಾಂಡ 27-29
ನಂ. 1: ವಿಮೋಚನಕಾಂಡ 29:1-18
ನಂ. 2: ಮನೆಯಲ್ಲಿ ಸ್ವಚ್ಛತೆ—ಅಷ್ಟೇಕೆ ಪ್ರಾಮುಖ್ಯ? (fy-KA ಪು. 45-49 ¶12-20)d
ನಂ. 3: eಅನುಚಿತ ನಿಷ್ಠೆ ಮತ್ತು ಅದರ ಅಪಾಯಗಳು
ಮೇ 18 ಬೈಬಲ್ ವಾಚನ: ವಿಮೋಚನಕಾಂಡ 30-33
ನಂ. 1: ವಿಮೋಚನಕಾಂಡ 31:1-18
ನಂ. 2: ಪ್ರೋತ್ಸಾಹನೆಯು ನಾವು ಏಳಿಗೆ ಹೊಂದುವಂತೆ ಮಾಡುತ್ತದೆ (fy-KA ಪು. 49, 50 ¶21, 22)
ನಂ. 3: ವಿವಾಹಪೂರ್ವ ಸಂಭೋಗದಲ್ಲಿ ತಪ್ಪೇನಿದೆ? (g04-KA 10/8 ಪು. 16-18)
ಮೇ 25 ಬೈಬಲ್ ವಾಚನ: ವಿಮೋಚನಕಾಂಡ 34-37
ನಂ. 1: ವಿಮೋಚನಕಾಂಡ 37:1-24
ನಂ. 2: ಮಗುವಿಗೆ ತರಬೇತು ನೀಡುವುದರಲ್ಲಿ ಬೈಬಲಿನ ವೀಕ್ಷಣವನ್ನು ಸ್ವೀಕರಿಸುವುದು (fy-KA ಪು. 51, 52 ¶1-5)
ನಂ. 3: fಕಟ್ಟುಪಾಡಿಲ್ಲದೆ ಇರುವುದು ಅಂದರೇನು, ಮತ್ತು ನಾವೇಕೆ ಹಾಗಿರಬಾರದು?
ಜೂನ್ 1 ಬೈಬಲ್ ವಾಚನ: ವಿಮೋಚನಕಾಂಡ 38-40
ನಂ. 1: ವಿಮೋಚನಕಾಂಡ 40:1-19
ನಂ. 2: ನಿಮ್ಮ ಮಗುವಿನ ಅಗತ್ಯಗಳನ್ನು ಪೂರೈಸುವುದು (fy-KA ಪು. 53-55 ¶6-9)
ನಂ. 3: ನಿಮ್ಮ ಮಗುವನ್ನು ಪೋಷಿಸುವುದರ ಮಹತ್ವ (g05-KA 1/8 ಪು. 3-6)
ಜೂನ್ 8 ಬೈಬಲ್ ವಾಚನ: ಯಾಜಕಕಾಂಡ 1-5
ನಂ. 1: ಯಾಜಕಕಾಂಡ 4:1-15
ನಂ. 2: ಸತ್ಯವನ್ನು ನಿಮ್ಮ ಮಗುವಿನ ಮನಸ್ಸಿಗೆ ನಾಟಿಸಿರಿ (fy-KA ಪು. 55-59 ¶10-19)
ನಂ. 3: gಕ್ರೈಸ್ತರು ಅಧಿಕಾರವನ್ನು ಹೇಗೆ ಚಲಾಯಿಸಬೇಕು?
ಜೂನ್ 15 ಬೈಬಲ್ ವಾಚನ: ಯಾಜಕಕಾಂಡ 6-9
ನಂ. 1: ಯಾಜಕಕಾಂಡ 8:1-17
ನಂ. 2: ಹೆತ್ತವರಾದ ನಿಮ್ಮ ಪಾತ್ರ (g05-KA 1/8 ಪು. 7-10)
ನಂ. 3: ಕುಟುಂಬದಲ್ಲಿ ಶಿಸ್ತಿನ ಅತ್ಯಾವಶ್ಯಕತೆ (fy-KA ಪು. 59-61 ¶20-23)h
ಜೂನ್ 22 ಬೈಬಲ್ ವಾಚನ: ಯಾಜಕಕಾಂಡ 10-13
ನಂ. 1: ಯಾಜಕಕಾಂಡ 11:29-45
ನಂ. 2: ನಿಮ್ಮ ಮಗುವನ್ನು ಹಾನಿಯಿಂದ ಕಾಪಾಡಿರಿ (fy-KA ಪು. 61, 62 ¶24-26)
ನಂ. 3: ಸ್ನಾನಿತ ಶಿಷ್ಯರು ಹರ್ಷಿಸುವ ಆಶೀರ್ವಾದಗಳು
ಜೂನ್ 29 ಬೈಬಲ್ ವಾಚನ: ಯಾಜಕಕಾಂಡ 14-16
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಜುಲೈ 6 ಬೈಬಲ್ ವಾಚನ: ಯಾಜಕಕಾಂಡ 17-20
ನಂ. 1: ಯಾಜಕಕಾಂಡ 19:1-18
ನಂ. 2: ದೇವರ ಶಿಸ್ತಿನಲ್ಲಿ ಮಕ್ಕಳನ್ನು ಬೆಳೆಸುವುದು (g05-KA 1/8 ಪು. 20, 21)
ನಂ. 3: ಮಗುವಿನ ತರಬೇತಿಗಾಗಿ ದೈವಿಕ ಮಾರ್ಗದರ್ಶನವನ್ನು ಹುಡುಕಿರಿ (fy-KA ಪು. 62, 63 ¶27, 28)
ಜುಲೈ 13 ಬೈಬಲ್ ವಾಚನ: ಯಾಜಕಕಾಂಡ 21-24
ನಂ. 1: ಯಾಜಕಕಾಂಡ 22:17-33
ನಂ. 2: ಹದಿ ವರ್ಷಗಳನ್ನು ಜಾಣತನದಿಂದ ಉಪಯೋಗಿಸಿ (fy-KA ಪು. 64 ¶1-3)
ನಂ. 3: ನಿಜ ಕ್ರೈಸ್ತರು ಬಡವರಿಗೆ ಹೇಗೆ ಕಾಳಜಿಯನ್ನು ತೋರಿಸುತ್ತಾರೆ?
ಜುಲೈ 20 ಬೈಬಲ್ ವಾಚನ: ಯಾಜಕಕಾಂಡ 25-27
ನಂ. 1: ಯಾಜಕಕಾಂಡ 25:39-54
ನಂ. 2: ಕುಟುಂಬದಲ್ಲಿ ಪ್ರಾಮಾಣಿಕವಾದ ಮತ್ತು ತೆರೆದ ಸಂವಾದ (fy-KA ಪು. 65, 66 ¶4-7)
ನಂ. 3: ನಾನು ಸೋಲನ್ನು ಹೇಗೆ ಎದುರಿಸಬಲ್ಲೆ? (g05-KA 1/8 ಪು. 23-25)
ಜುಲೈ 27 ಬೈಬಲ್ ವಾಚನ: ಅರಣ್ಯಕಾಂಡ 1-3
ನಂ. 1: ಅರಣ್ಯಕಾಂಡ 3:1-20
ನಂ. 2: ಸೌಮ್ಯಭಾವ ತೋರಿಸಲಿಕ್ಕಾಗಿ ಆತ್ಮಸಂಯಮವೇಕೆ ಬೇಕು?
ನಂ. 3: ಕುಟುಂಬದಲ್ಲಿ ಸಂವಾದದ ವಿಷಯ (fy-KA ಪು. 67, 68 ¶8-11)
ಆಗ. 3 ಬೈಬಲ್ ವಾಚನ: ಅರಣ್ಯಕಾಂಡ 4-6
ನಂ. 1: ಅರಣ್ಯಕಾಂಡ 4:1-16
ನಂ. 2: ತಾಯಂದಿರು ಎದುರಿಸುವ ಪಂಥಾಹ್ವಾನಗಳು (g05-KA 4/8 ಪು. 3-8)
ನಂ. 3: ಕುಟುಂಬ ಅಧ್ಯಯನ (fy-KA ಪು. 69, 70 ¶12-14)
ಆಗ. 10 ಬೈಬಲ್ ವಾಚನ: ಅರಣ್ಯಕಾಂಡ 7-9
ನಂ. 1: ಅರಣ್ಯಕಾಂಡ 9:1-14
ನಂ. 2: ಮನೆಯಲ್ಲಿ ಶಿಸ್ತು ಮತ್ತು ಗೌರವ (fy-KA ಪು. 71, 72 ¶15-18)
ನಂ. 3: ಯೆಹೋವನಿಗೆ ನಾವು ನಿಷ್ಠೆಯನ್ನು ತೋರಿಸುವ ವಿಧಗಳು
ಆಗ. 17 ಬೈಬಲ್ ವಾಚನ: ಅರಣ್ಯಕಾಂಡ 10-13
ನಂ. 1: ಅರಣ್ಯಕಾಂಡ 13:17-33
ನಂ. 2: ಕುಟುಂಬವಾಗಿ ಕೆಲಸ ಮತ್ತು ಆಟ (fy-KA ಪು. 72, 73 ¶19-22)
ನಂ. 3: ತಾಯಿಯ ಗೌರವಾನ್ವಿತ ಪಾತ್ರ (g05-KA 4/8 ಪು. 9-11)
ಆಗ. 24 ಬೈಬಲ್ ವಾಚನ: ಅರಣ್ಯಕಾಂಡ 14-16
ನಂ. 1: ಅರಣ್ಯಕಾಂಡ 14:26-43
ನಂ. 2: ದೇವರ ಧರ್ಮಶಾಸ್ತ್ರವನ್ನು ಪ್ರೀತಿಸುವುದರ ಅರ್ಥವೇನು? (ಕೀರ್ತ. 119:97)
ನಂ. 3: ಹದಿಹರೆಯದವನಿಂದ ಪ್ರಾಪ್ತವಯಸ್ಕ (fy-KA ಪು. 74, 75 ¶23-25)
ಆಗ. 31 ಬೈಬಲ್ ವಾಚನ: ಅರಣ್ಯಕಾಂಡ 17-21
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಸೆಪ್ಟೆಂ. 7 ಬೈಬಲ್ ವಾಚನ: ಅರಣ್ಯಕಾಂಡ 22-25
ನಂ. 1: ಅರಣ್ಯಕಾಂಡ 22:20-35
ನಂ. 2: ಕುಟುಂಬದಲ್ಲಿ ಪ್ರತಿಭಟಕನೆಂದರೇನು? (fy-KA ಪು. 76-78 ¶1-6)
ನಂ. 3: ಮಕ್ಕಳಿಗೆ ಅಗತ್ಯವಿರುವ ಗಮನವನ್ನು ನೀಡುವುದು (g05-KA 4/8 ಪು. 12-13)
ಸೆಪ್ಟೆಂ. 14 ಬೈಬಲ್ ವಾಚನ: ಅರಣ್ಯಕಾಂಡ 26-29
ನಂ. 1: ಅರಣ್ಯಕಾಂಡ 27:1-14
ನಂ. 2: ಬಾಲೋಪದೇಶ ಅಥವಾ ಮಾನಸಿಕ ಕ್ರಮಪಡಿಸುವಿಕೆ ಅಂದರೇನು, ಮತ್ತು ಅದು ಪ್ರಾಮುಖ್ಯವೇಕೆ? (ಎಫೆ. 6:4)
ನಂ. 3: ಪ್ರತಿಭಟನೆಗೆ ಕಾರಣಗಳು (fy-KA ಪು. 78, 79 ¶7, 8)
ಸೆಪ್ಟೆಂ. 21 ಬೈಬಲ್ ವಾಚನ: ಅರಣ್ಯಕಾಂಡ 30-32
ನಂ. 1: ಅರಣ್ಯಕಾಂಡ 32:1-15
ನಂ. 2: ಎಲ್ಲ ಕ್ರೈಸ್ತರಿಗೆ ಸ್ವರ್ಗೀಯ ಜೀವನದ ನಿರೀಕ್ಷೆ ಇದೆಯೋ?
ನಂ. 3: ಸ್ವಚ್ಛಂದಾವಕಾಶ ಕೊಟ್ಟ ಏಲಿ ಮತ್ತು ನಿರ್ಬಂಧಿಸಿದ ರೆಹಬ್ಬಾಮ (fy-KA ಪು. 80, 81 ¶9-13)
ಸೆಪ್ಟೆಂ. 28 ಬೈಬಲ್ ವಾಚನ: ಅರಣ್ಯಕಾಂಡ 33-36
ನಂ. 1: ಅರಣ್ಯಕಾಂಡ 33:1-23
ನಂ. 2: ಮೂಲಭೂತ ಅಗತ್ಯಗಳನ್ನು ಪೂರೈಸುವುದು ದಂಗೆಯನ್ನು ತಡೆಗಟ್ಟಬಲ್ಲದು (fy-KA ಪು. 82-84 ¶14-18)i
ನಂ. 3: ಯಾವ ವಿಧಗಳಲ್ಲಿ ದೇವರ ರಾಜ್ಯವು ಮಾನವ ಸರ್ಕಾರಕ್ಕಿಂತ ಉನ್ನತವಾಗಿದೆ?
ಅಕ್ಟೋ. 5 ಬೈಬಲ್ ವಾಚನ: ಧರ್ಮೋಪದೇಶಕಾಂಡ 1-3
ನಂ. 1: ಧರ್ಮೋಪದೇಶಕಾಂಡ 2:1-15
ನಂ. 2: ನಾನು ದೈಹಿಕ ಶ್ರಮದ ಕೆಲಸವನ್ನು ಏಕೆ ಮಾಡಬೇಕು? (g05-KA 4/8 ಪು. 20-22)
ನಂ. 3: ಮಕ್ಕಳು ತೊಡಕುಗಳಲ್ಲಿ ಸಿಕ್ಕಿಬೀಳುವಾಗ (fy-KA ಪು. 85-87 ¶19-23)
ಅಕ್ಟೋ. 12 ಬೈಬಲ್ ವಾಚನ: ಧರ್ಮೋಪದೇಶಕಾಂಡ 4-6
ನಂ. 1: ಧರ್ಮೋಪದೇಶಕಾಂಡ 4:15-28
ನಂ. 2: ಪಟ್ಟುಹಿಡಿದ ಪ್ರತಿಭಟಕನನ್ನು ನಿರ್ವಹಿಸುವುದು (fy-KA ಪು. 87-89 ¶24-27)
ನಂ. 3: ಅಲ್ಪ ಧನವೇ ಲೇಸು ಎಂದು ಯಾವಾಗ ಹೇಳಸಾಧ್ಯವಿದೆ? (ಜ್ಞಾನೋ. 15:16)
ಅಕ್ಟೋ. 19 ಬೈಬಲ್ ವಾಚನ: ಧರ್ಮೋಪದೇಶಕಾಂಡ 7-10
ನಂ. 1: ಧರ್ಮೋಪದೇಶಕಾಂಡ 9:1-14
ನಂ. 2: ನಿಮ್ಮ ಮಕ್ಕಳಿಗೆ ಯಾರು ಕಲಿಸುವರು? (fy-KA ಪು. 90-92 ¶1-7)
ನಂ. 3: ಎಷ್ಟು ಜನರಿಗೆ ಸ್ವರ್ಗೀಯ ನಿರೀಕ್ಷೆ ಇದೆಯೆಂದು ಬೈಬಲ್ ಹೇಳುತ್ತದೆ?
ಅಕ್ಟೋ. 26 ಬೈಬಲ್ ವಾಚನ: ಧರ್ಮೋಪದೇಶಕಾಂಡ 11-13
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ನವೆಂ. 2 ಬೈಬಲ್ ವಾಚನ: ಧರ್ಮೋಪದೇಶಕಾಂಡ 14-18
ನಂ. 1: ಧರ್ಮೋಪದೇಶಕಾಂಡ 15:1-15
ನಂ. 2: ದೇವಭಯದಲ್ಲಿ ಏನು ಒಳಗೂಡಿದೆ?
ನಂ. 3: ಕಾಮದ ವಿಷಯದಲ್ಲಿ ದೇವರ ವೀಕ್ಷಣ (fy-KA ಪು. 92, 93 ¶8-11)
ನವೆಂ. 9 ಬೈಬಲ್ ವಾಚನ: ಧರ್ಮೋಪದೇಶಕಾಂಡ 19-22
ನಂ. 1: ಧರ್ಮೋಪದೇಶಕಾಂಡ 22:1-19
ನಂ. 2: ಹೆತ್ತವರಿಗಿರುವ ಮನೆಗೆಲಸ (fy-KA ಪು. 94 ¶12, 13)
ನಂ. 3: jನನ್ನಲ್ಲಿ ಆಸಕ್ತಿ ತೋರಿಸುವ ಹುಡುಗಿಯೊಂದಿಗೆ ನಾನು ಹೇಗೆ ವರ್ತಿಸಬೇಕು? (g05 7/8 ಪು. 18-20)
ನವೆಂ. 16 ಬೈಬಲ್ ವಾಚನ: ಧರ್ಮೋಪದೇಶಕಾಂಡ 23-27
ನಂ. 1: ಧರ್ಮೋಪದೇಶಕಾಂಡ 25:1-16
ನಂ. 2: ನಿಮ್ಮ ಮಕ್ಕಳ ಸ್ನೇಹಿತರು (fy-KA ಪು. 95, 96 ¶14-18)
ನಂ. 3: kನಾವು ಯಾವ ವಿಷಯಗಳನ್ನು ಪವಿತ್ರವೆಂದೆಣಿಸಬೇಕು?
ನವೆಂ. 23 ಬೈಬಲ್ ವಾಚನ: ಧರ್ಮೋಪದೇಶಕಾಂಡ 28-31
ನಂ. 1: ಧರ್ಮೋಪದೇಶಕಾಂಡ 30:1-14
ನಂ. 2: ‘ಮಹಾ ಸಮೂಹಕ್ಕೆ’ ಬೈಬಲ್ ಕೊಡುವ ನಿರೀಕ್ಷೆಯೇನಾಗಿದೆ?
ನಂ. 3: ಕುಟುಂಬಕ್ಕೆ ಯಾವ ರೀತಿಯ ವಿನೋದ ಉತ್ತಮ? (fy-KA ಪು. 97-101 ¶19-25)l
ನವೆಂ. 30 ಬೈಬಲ್ ವಾಚನ: ಧರ್ಮೋಪದೇಶಕಾಂಡ 32-34
ನಂ. 1: ಧರ್ಮೋಪದೇಶಕಾಂಡ 32:1-21
ನಂ. 2: “ಯೆಹೋವನ ಮಹಾದಿನ” ಏನಾಗಿದೆ? (ಚೆಫ. 1:14)
ನಂ. 3: ನಿಮ್ಮ ಕುಟುಂಬವು ಜಗತ್ತನ್ನು ಜಯಿಸಬಲ್ಲದು (fy-KA ಪು. 101, 102 ¶26, 27)
ಡಿಸೆಂ. 7 ಬೈಬಲ್ ವಾಚನ: ಯೆಹೋಶುವ 1-5
ನಂ. 1: ಯೆಹೋಶುವ 5:1-15
ನಂ. 2: ನಮ್ಮ ಗೆಳೆಯರು ದೇವರನ್ನು ಪ್ರೀತಿಸುವವರಾಗಿರಬೇಕು
ನಂ. 3: ಒಂಟಿ ಹೆತ್ತವರ ಕುಟುಂಬಗಳು ಯಶಸ್ವಿಯಾಗಬಲ್ಲವು! (fy-KA ಪು. 103, 104 ¶1-4)
ಡಿಸೆಂ. 14 ಬೈಬಲ್ ವಾಚನ: ಯೆಹೋಶುವ 6-8
ನಂ. 1: ಯೆಹೋಶುವ 8:1-17
ನಂ. 2: ಮನೆವಾರ್ತೆಯ ದಿನಚರಿಯಲ್ಲಿ ನಿಪುಣತೆ ಪಡೆಯುವುದು (fy-KA ಪು. 104, 105 ¶5-8)
ನಂ. 3: ಪ್ರಸಂಗಿ 7:21, 22 ಏಕೆ ವ್ಯಾವಹಾರಿಕ ಸಲಹೆಯಾಗಿದೆ?
ಡಿಸೆಂ. 21 ಬೈಬಲ್ ವಾಚನ: ಯೆಹೋಶುವ 9-11
ನಂ. 1: ಯೆಹೋಶುವ 9:1-15
ನಂ. 2: ಜೀವನೋಪಾಯವನ್ನು ನಿರ್ವಹಿಸುವ ಪಂಥಾಹ್ವಾನ (fy-KA ಪು. 105, 106 ¶9, 10)
ನಂ. 3: ದೇವರ ಶಾಂತಿಭರಿತ ಹೊಸ ಲೋಕ—ನೀವು ಅಲ್ಲಿ ಜೀವಿಸಬಲ್ಲಿರಿ
ಡಿಸೆಂ. 28 ಬೈಬಲ್ ವಾಚನ: ಯೆಹೋಶುವ 12-15
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
[ಪಾದಟಿಪ್ಪಣಿಗಳು]
a ಸಹೋದರರಿಗೆ ಮಾತ್ರ ನೇಮಿಸಿರಿ. ಹಿರಿಯರು ಅಥವಾ ಶುಶ್ರೂಷಾ ಸೇವಕರಾದರೆ ಉತ್ತಮ.
b ಸಹೋದರರಿಗೆ ಮಾತ್ರ ನೇಮಿಸಿರಿ. ಹಿರಿಯರು ಅಥವಾ ಶುಶ್ರೂಷಾ ಸೇವಕರಾದರೆ ಉತ್ತಮ.
c ಸಹೋದರರಿಗೆ ಮಾತ್ರ ನೇಮಿಸಿರಿ. ಹಿರಿಯರು ಅಥವಾ ಶುಶ್ರೂಷಾ ಸೇವಕರಾದರೆ ಉತ್ತಮ.
d ಸಹೋದರರಿಗೆ ಮಾತ್ರ ನೇಮಿಸಿರಿ. ಹಿರಿಯರು ಅಥವಾ ಶುಶ್ರೂಷಾ ಸೇವಕರಾದರೆ ಉತ್ತಮ.
e ಸಹೋದರರಿಗೆ ಮಾತ್ರ ನೇಮಿಸಿರಿ. ಹಿರಿಯರು ಅಥವಾ ಶುಶ್ರೂಷಾ ಸೇವಕರಾದರೆ ಉತ್ತಮ.
f ಸಹೋದರರಿಗೆ ಮಾತ್ರ ನೇಮಿಸಿರಿ. ಹಿರಿಯರು ಅಥವಾ ಶುಶ್ರೂಷಾ ಸೇವಕರಾದರೆ ಉತ್ತಮ.
g ಸಹೋದರರಿಗೆ ಮಾತ್ರ ನೇಮಿಸಿರಿ. ಹಿರಿಯರು ಅಥವಾ ಶುಶ್ರೂಷಾ ಸೇವಕರಾದರೆ ಉತ್ತಮ.
h ಸಹೋದರರಿಗೆ ಮಾತ್ರ ನೇಮಿಸಿರಿ. ಹಿರಿಯರು ಅಥವಾ ಶುಶ್ರೂಷಾ ಸೇವಕರಾದರೆ ಉತ್ತಮ.
i ಚೌಕದಲ್ಲಿರುವ ವಿಷಯಗಳನ್ನು ಸೇರಿಸಿ.
j ಚೌಕದಲ್ಲಿರುವ ವಿಷಯಗಳನ್ನು ಸೇರಿಸಿ.
k ಚೌಕದಲ್ಲಿರುವ ವಿಷಯಗಳನ್ನು ಸೇರಿಸಿ.
l ಚೌಕದಲ್ಲಿರುವ ವಿಷಯಗಳನ್ನು ಸೇರಿಸಿ.