ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಜುಲೈ-ಸೆಪ್ಟೆಂ.
“ನಮ್ಮ ದಿನಗಳಲ್ಲಿ ನೈಸರ್ಗಿಕ ವಿಪತ್ತುಗಳು ಹೆಚ್ಚಾಗುವುದನ್ನು ಕಾಣುವಾಗ ಅದಕ್ಕೆ ಅತಿಮಾನುಷಶಕ್ತಿ ಕಾರಣವೋ ಎಂದು ಕೆಲವರು ಯೋಚಿಸುತ್ತಾರೆ. ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ. ಮನೆಯವನು ಚರ್ಚಿಸಲು ಬಯಸಿದರೆ ಮುಂದುವರಿಸಿರಿ.] ಮಾನವರನ್ನು ಸೃಷ್ಟಿಸಿದಾತನ ಕುರಿತು ಒಂದು ಪುರಾತನ ವಚನವು ಏನನ್ನುತ್ತದೆ ಎಂಬುದನ್ನು ನಾನು ನಿಮಗೆ ಓದಿಹೇಳಲೋ? [ಮನೆಯವನು ಒಪ್ಪಿದಲ್ಲಿ 1 ಯೋಹಾನ 4:8 ಓದಿ.] ಈ ಲೇಖನವು ನೈಸರ್ಗಿಕ ವಿಪತ್ತಿನಿಂದಾಗುವ ಕಷ್ಟಾನುಭವಕ್ಕೆ ದೇವರು ಯಾಕೆ ಕಾರಣನಲ್ಲ ಎಂಬುದನ್ನು ವಿವರಿಸುತ್ತದೆ.” ಪುಟ 31ರಲ್ಲಿರುವ ಲೇಖನವನ್ನು ತೋರಿಸಿರಿ.
ಎಚ್ಚರ! ಜುಲೈ-ಸೆಪ್ಟೆಂ
“ಜೀವನದಲ್ಲಿ ಮಾಡಲಿಕ್ಕೆ ತುಂಬ ಕೆಲಸಗಳಿರುವಾಗ ಆರಾಧನೆಗಾಗಿ ಸಮಯವೆಲ್ಲಿದೆ ಎಂದು ಅನೇಕರು ಯೋಚಿಸುತ್ತಾರೆ. ನಿಮಗೂ ಹಾಗನಿಸುತ್ತದೋ? [ಪ್ರತಿಕ್ರಿಯೆಗೆ ಅವಕಾಶಕೊಡಿ. ಮನೆಯವನು ಮಾತಾಡಲು ಒಪ್ಪುವಂತೆ ಕಾಣುವಲ್ಲಿ ಎಫೆಸ 5:15-17 ಓದಿ.] ದೇವರ ಆರಾಧನೆಗಾಗಿ ನಾವೆಷ್ಟು ಸಮಯ ಮತ್ತು ಶಕ್ತಿಯನ್ನು ಬದಿಗಿರಿಸಬೇಕೆಂದು ದೇವರು ಅಪೇಕ್ಷಿಸುತ್ತಾನೆಂದು ತಿಳಿಯಲು ನಿಮಗೆ ಆಸಕ್ತಿಯಿದೆಯೋ?” ಮನೆಯವನು ಒಪ್ಪಿದಲ್ಲಿ ಪುಟ 14ರಲ್ಲಿರುವ ಲೇಖನವನ್ನು ತೋರಿಸಿರಿ.