ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಜುಲೈ-ಸೆಪ್ಟೆಂ.
“ಪುರಾತನ ಲೋಕವನ್ನು ನಾಶಮಾಡಿದ ಒಂದು ಭೌಗೋಳಿಕ ಜಲಪ್ರಲಯದ ಕುರಿತು ನೀವೆಂದಾದರೂ ಕೇಳಿದ್ದೀರೋ? ಇದು ನಿಜವಾಗಿಯೂ ಸಂಭವಿಸಿತ್ತೆಂದು ಕೆಲವರು ನಂಬುತ್ತಾರೆ. ನೀವದನ್ನು ನಂಬುತ್ತೀರೋ? [ಪ್ರತಿಕ್ರಿಯೆಗೆ ಅವಕಾಶ ಕೊಡಿ.] ಇದು ನಿಜ ಘಟನೆಯೆಂದು ಯೇಸು ತಾನೇ ಹೇಳಿರುತ್ತಾನೆ. ಆತನು ಹೇಳಿದ ಮಾತುಗಳನ್ನು ನಾನು ನಿಮಗೆ ಓದಿ ಹೇಳಲೋ? [ಮನೆಯವನು ಒಪ್ಪುವುದಾದರೆ, ಲೂಕ 17:26, 27 ಓದಿ.] ಜಲಪ್ರಲಯವು ಭೌಗೋಳಿಕ ಘಟನೆಯೆಂದು ನಂಬಲು ಈ ಲೇಖನವು ಕಾರಣಗಳನ್ನು ಕೊಡುತ್ತದೆ.” ಪುಟ 25ರಲ್ಲಿ ಆರಂಭವಾಗುವ ಲೇಖನವನ್ನು ತೋರಿಸಿರಿ.
ಎಚ್ಚರ! ಜುಲೈ-ಸೆಪ್ಟೆಂ.
“ಇಂದು ಹೆಚ್ಚಿನ ಯುವಜನರಿಗೆ ತಮ್ಮ ನಕಾರಾತ್ಮಕ ಭಾವನೆಗಳನ್ನು ನಿಭಾಯಿಸುವುದು ತುಂಬಾ ಕಷ್ಟಕರವಾಗುತ್ತಿದೆ. ಆದ್ದರಿಂದ ಹದಿವಯಸ್ಕರು ಹೆಚ್ಚೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಇಂದು ನಾವು ಕಾಣುತ್ತೇವೆ. ಅವರಿಗೆ ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ನಾವು ಹೇಗೆ ಸಹಾಯ ಮಾಡಸಾಧ್ಯವಿದೆ? [ಪ್ರತಿಕ್ರಿಯೆಗೆ ಅವಕಾಶಕೊಡಿ. ಮನೆಯವನು ಹೆಚ್ಚನ್ನು ತಿಳಿಯಲು ಬಯಸುವುದಾದರೆ, 2 ತಿಮೊಥಿ 3:1ಕ್ಕೆ ನಿರ್ದೇಶಿಸಿರಿ.] ಈ ಕಠಿನ ಕಾಲಗಳನ್ನು ಹೇಗೆ ನಿಭಾಯಿಸಬಹುದೆಂಬ ವ್ಯಾವಹಾರಿಕ ಸಲಹೆಗಳನ್ನು ಈ ಲೇಖನವು ಯುವಜನರಿಗೆ ಕೊಡುತ್ತದೆ.” ಪುಟ 26ರಲ್ಲಿ ಆರಂಭವಾಗುವ ಲೇಖನವನ್ನು ತೋರಿಸಿರಿ.