ಮನೆಯವನು ಬೇರೊಂದು ಭಾಷೆಯವನಾಗಿದ್ದಲ್ಲಿ?
1. ಟೆರಿಟೊರಿಯನ್ನು ಆವರಿಸುವಾಗ ಸಭೆಗಳು ಹೆಚ್ಚಿನ ಸಹಕಾರ ನೀಡುವ ಅಗತ್ಯವಿದೆಯೇಕೆ?
1 ಲೋಕದಾದ್ಯಂತ ರಾಜ್ಯ ಪ್ರಚಾರಕರು ತಮ್ಮ ಸಭೆಯ ಭಾಷೆಗಿಂತ ಬೇರೆಯಾದ ಭಾಷೆಯನ್ನಾಡುವ ಆಸಕ್ತ ಜನರನ್ನು ಹೆಚ್ಚೆಚ್ಚಾಗಿ ಕಂಡುಕೊಳ್ಳುತ್ತಿದ್ದಾರೆ. ಅಂಥವರಿಗೆ ಆಧ್ಯಾತ್ಮಿಕವಾಗಿ ಸಹಾಯಮಾಡಲು ಭಾಷಾ ಗುಂಪುಗಳನ್ನು ಮತ್ತು ಸಭೆಗಳನ್ನು ರಚಿಸುವುದು ಅವಶ್ಯವೆಂದು ಹೆಚ್ಚಿನ ಬ್ರಾಂಚ್ಗಳು ಕಂಡುಕೊಂಡಿವೆ. ಒಂದು ಕ್ಷೇತ್ರದಲ್ಲಿ ಅನೇಕ ಭಾಷೆಯ ಜನರು ಇರುವುದರಿಂದ ನಾನಾ ಭಾಷೆಯ ಹಲವಾರು ಸಭೆಗಳು ಒಂದೇ ಟೆರಿಟೊರಿಯಲ್ಲಿ ಸೇವೆಮಾಡಬಹುದು. ಸಾರುವ ಕೆಲಸವು ಕ್ರಮಬದ್ಧ ರೀತಿಯಲ್ಲಿ ನಿರ್ವಹಿಸಲ್ಪಡುವಂತೆ ಬೇರೆ ಬೇರೆ ಸಭೆಗಳು ಹೇಗೆ ಸಹಕಾರ ನೀಡಬಹುದು?—1 ಕೊರಿಂ. 14:33.
2. ಮನೆಯಿಂದ ಮನೆಗೆ ಸಾರುವಾಗ, ನಮ್ಮ ಕ್ಷೇತ್ರದಲ್ಲಿ ಸೇವೆ ಮಾಡುವ ವಿವಿಧ ಭಾಷಾ ಗುಂಪು ಅಥವಾ ಸಭೆಯೊಂದಿಗೆ ನಾವು ಹೇಗೆ ಸಹಕರಿಸಬಹುದು?
2 ಒಳ್ಳೇ ಸಹಕಾರ ನೀಡಿ: ಪ್ರಚಾರಕರು ಬೀದಿ ಸಾಕ್ಷಿಕಾರ್ಯ ಮಾಡುವಾಗ ಅಥವಾ ಅನೌಪಚಾರಿಕ ಸಾಕ್ಷಿ ನೀಡುವಾಗ ಯಾವುದೇ ಭಾಷೆಯನ್ನಾಡುವ ಜನರನ್ನು ಭೇಟಿಯಾಗಿ ಅವರು ಓದಲಿಚ್ಛಿಸುವ ಭಾಷೆಯಲ್ಲಿ ಸಾಹಿತ್ಯವನ್ನು ನೀಡಸಾಧ್ಯವಿದೆ. ಆದರೆ ಬೇರೆ ಭಾಷೆಯ ಗುಂಪು ಅಥವಾ ಸಭೆಯು ಸಹ ಆವರಿಸಿರುವ ಟೆರಿಟೊರಿಯಲ್ಲಿ ಪ್ರಚಾರಕನು ಮನೆ ಮನೆ ಸಾಕ್ಷಿಕಾರ್ಯದಲ್ಲಿ ಪಾಲ್ಗೊಳ್ಳುವಾಗ ಮುಖ್ಯವಾಗಿ ತನ್ನ ಸಭೆಯ ಭಾಷೆಯ ಮನೆಗಳನ್ನು ಮಾತ್ರ ಆವರಿಸಬೇಕು. ಒಂದೇ ಟೆರಿಟೊರಿಯಲ್ಲಿ ಬೇರೆ ಬೇರೆ ಸಭೆಗಳು ಸೇವೆಮಾಡುವಾಗಲಂತೂ ಒಳ್ಳೆಯ ದಾಖಲೆಗಳನ್ನಿಡುವುದು ಅತೀ ಪ್ರಾಮುಖ್ಯ. ಸೇವಾ ಮೇಲ್ವಿಚಾರಕರು ಪರಸ್ಪರ ಮಾತಾಡಿಕೊಂಡು ಎಲ್ಲರಿಗೂ ಪ್ರಯೋಜನಕರವಾದ ರೀತಿಯಲ್ಲಿ ವಿಷಯಗಳನ್ನು ನಿರ್ವಹಿಸಬೇಕು. (ಜ್ಞಾನೋ. 11:14) ಆದರೆ ಒಂದುವೇಳೆ ಮನೆ ಮನೆ ಸೇವೆಯಲ್ಲಿ ಬೇರೊಂದು ಭಾಷೆಯನ್ನಾಡುವ ಯಾರಾದರೂ ಪ್ರಚಾರಕನಿಗೆ ಸಿಕ್ಕಿದ್ದು ಆ ಭಾಷೆಯನ್ನಾಡುವ ಯಾವ ಸಭೆಗಳೂ ಸಮೀಪದಲ್ಲಿ ಇಲ್ಲದಿರುವಲ್ಲಿ, ಪ್ರಚಾರಕನು ತಾನೇ ಅವರಿಗೆ ಸಾಕ್ಷಿ ನೀಡಿ ಆಸಕ್ತಿಯನ್ನು ಬೆಳೆಸಬೇಕು.
3. ವಿವಿಧ ಭಾಷಾ ಗುಂಪುಗಳು ಅಥವಾ ಸಭೆಗಳು ಒಂದೇ ಟೆರಿಟೊರಿಯಲ್ಲಿ ಸೇವೆಮಾಡುವಾಗ ಆ ಟೆರಿಟೊರಿಯನ್ನು ಹೇಗೆ ಸಂಘಟಿಸಿಕೊಳ್ಳಬೇಕು?
3 ಮಾಡುವ ಕೆಲಸ ಒಂದೇ: ಬೇರೆ ಬೇರೆ ಸಭೆಗಳು ಒಂದೇ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವುದಾದರೆ ಏನು ಮಾಡಬೇಕು? ಟೆರಿಟೊರಿಯಲ್ಲಿ ಆಡಲಾಗುವ ಭಾಷೆಯನ್ನು ಹೊಂದಿಕೊಂಡು, ಬೇರೆ ಬೇರೆ ಭಾಷಾ ಸಭೆಗಳು ಆ ಟೆರಿಟೊರಿಯನ್ನು ಆವರಿಸಲು ಹೇಗೆ ಸರದಿಯನ್ನು ತಕ್ಕೊಳ್ಳಬೇಕೆಂದು ಸೇವಾ ಮೇಲ್ವಿಚಾರಕರು ನಿರ್ಣಯಿಸುವರು. ಇದಕ್ಕನುಸಾರ ಟೆರಿಟೊರಿ ಮ್ಯಾಪ್ ಕಾರ್ಡ್ಗಳು ಆಯಾ ಸಭೆಗಳಿಗೆ ನೇಮಿಸಲ್ಪಡುವವು. ಪ್ರಚಾರಕರು ಟೆರಿಟೊರಿಯ ಮೇರೆಗಳ ಒಳಗೇ ಸೇವೆಮಾಡಬೇಕು ಮತ್ತು ನಿರ್ದಿಷ್ಟ ಟೆರಿಟೊರಿ ಮ್ಯಾಪ್ ಕಾರ್ಡ್ ಸಭೆಯಿಂದ ದೊರೆತಿರದ ಪಕ್ಷದಲ್ಲಿ ಆ ಟೆರಿಟೊರಿಯಲ್ಲಿ ಸೇವೆಮಾಡಬಾರದು. ಕ್ರೈಸ್ತ ಪ್ರೀತಿಯು ಯಾವುದೇ ಭಾಷಾ ತಡೆಗಟ್ಟನ್ನು ನಿವಾರಿಸುತ್ತದೆ ನಿಶ್ಚಯ. ಅಲ್ಲದೆ, ಎಲ್ಲರೂ ಟೆರಿಟೊರಿಯ ಆವಶ್ಯಕತೆಗಳ ಕುರಿತು ಚಿಂತಿಸಬೇಕು. (ಯೋಹಾ. 13:34, 35) ಟೆರಿಟೊರಿಯನ್ನು ಹೇಗೆ ಆವರಿಸಬೇಕೆಂದು ನಿರ್ಣಯಿಸುವುದರಲ್ಲಿ ಮುಂದಾಳುತ್ವ ವಹಿಸುವವರು ವಿವೇಚನೆ, ಪ್ರೀತಿಯನ್ನು ತೋರಿಸಬೇಕು, ಅಲ್ಲದೆ ಕ್ರಮಬದ್ಧತೆಯನ್ನು ಕಾಪಾಡಬೇಕು.—ಯಾಕೋ. 3:17, 18.
4. ಯಾವ ಪ್ರವಾದನೆಯು ಇಂದು ನೆರವೇರುತ್ತಾ ಇದೆ?
4 ವಿವಿಧ ಭಾಷೆಯನ್ನಾಡುವ ಜನರು ಸುವಾರ್ತೆಗೆ ಕಿವಿಗೊಡುವರೆಂದು ಬೈಬಲ್ ಪ್ರವಾದಿಸಿದೆ. (ಪ್ರಕ. 14:6, 7) ಎಲ್ಲರು ಒಳ್ಳೇ ಸಹಕಾರವನ್ನು ನೀಡುವ ಮೂಲಕ, ಎರಡೂ ಗುಂಪಿನವರು ಅನಾವಶ್ಯಕವಾಗಿ ಒಂದೇ ಮನೆಯನ್ನು ಒಂದೇ ಸಮಯದಲ್ಲಿ ಭೇಟಿಮಾಡುವುದನ್ನು ತಪ್ಪಿಸಬಹುದು. ಹೀಗೆ ಅನೇಕ ಹೊಸಬರಿಗೆ ಹಾಗೂ ಇನ್ನೊಂದು ಭಾಷೆಯನ್ನಾಡುವ ಜನರಿಗೂ ನಾವು ಸುವಾರ್ತೆಯನ್ನು ತಲಪಿಸಸಾಧ್ಯವಿದೆ.—ಎಫೆ. 4:16.