ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಏಪ್ರಿ.-ಜೂನ್
“ಪ್ರತಿದಿನವೂ ಕಷ್ಟ, ರೋಗ ಮತ್ತು ಮರಣದ ಕುರಿತು ನಾವು ಕೇಳುತ್ತಿರುತ್ತೇವೆ. ಇವು ಎಂದಾದರೂ ಅಂತ್ಯಗೊಳ್ಳುವವು ಎಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಲಕ್ಷಾಂತರ ಜನರಿಗೆ ನಿರೀಕ್ಷೆಯನ್ನು ಕೊಟ್ಟಿರುವಂಥ ಒಂದು ವಚನವನ್ನು ನೋಡಲು ನೀವು ಇಷ್ಟಪಡುವಿರೋ? [ಅವರು ಒಪ್ಪುವುದಾದರೆ, ಯೋಹಾನ 3:16 ಓದಿ. ಪುಟ 23ಕ್ಕೆ ತಿರುಗಿಸಿರಿ.] ‘ಯೇಸುವಿನ ಮರಣ ನಿಮ್ಮನ್ನು ಹೇಗೆ ರಕ್ಷಿಸಬಲ್ಲದು?’ ಎಂಬುದನ್ನು ಈ ಲೇಖನವು ಚರ್ಚಿಸುತ್ತದೆ.”
ಎಚ್ಚರ! ಏಪ್ರಿ.-ಜೂನ್
“ಧರ್ಮದ ಹೆಸರಿನಲ್ಲಿ ಇಷ್ಟೊಂದು ಕೆಟ್ಟ ಸಂಗತಿಗಳು ನಡೆಯುವುದನ್ನು ನೋಡುವಾಗ ದೇವರು ಇಂಥಾ ಕೃತ್ಯಗಳನ್ನು ಮೆಚ್ಚುತ್ತಾನೋ ಎಂದು ಅನೇಕರು ಕೇಳುತ್ತಾರೆ. ಇದರ ಬಗ್ಗೆ ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ದೇವರು ಇದರ ಬಗ್ಗೆ ಏನು ನೆನಸುತ್ತಾನೆಂದು ತಿಳಿಸುವ ಒಂದು ವಚನವನ್ನು ನಾನು ಓದಲೋ? [ಅವರು ಒಪ್ಪುವುದಾದರೆ, ನಿರೂಪಣೆಯನ್ನು ಮುಂದುವರಿಸಿ ಮಾರ್ಕ 7:7 ಓದಿ.] ದೇವರಿಂದ ಬರುವ ಸತ್ಯವನ್ನು ಒಬ್ಬ ವ್ಯಕ್ತಿಯು ತಿಳಿಯುವುದು ಹೇಗೆ? [ಪುಟ 25ಕ್ಕೆ ತಿರುಗಿಸಿರಿ.] ಈ ಪ್ರಶ್ನೆಯನ್ನು ಈ ಲೇಖನವು ಉತ್ತರಿಸುತ್ತದೆ.”
ಕಾವಲಿನಬುರುಜು ಜುಲೈ-ಸೆಪ್ಟೆಂ.
“ತಾವು ನೋಡಿದ್ದನ್ನು ಮಾತ್ರವೇ ನಂಬುತ್ತೇವೆಂದು ಅನೇಕರು ಹೇಳುತ್ತಾರೆ. ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಆ ಕುರಿತು ಪವಿತ್ರ ಗ್ರಂಥದಿಂದ ಒಂದು ವಚನವನ್ನು ತೋರಿಸಲೋ? [ಅವರು ಒಪ್ಪುವುದಾದರೆ, ರೋಮಾಪುರ 1:20 ಓದಿ.] ಈ ಪತ್ರಿಕೆಯು, ಸೃಷ್ಟಿಯಲ್ಲಿ ನಾವು ಸ್ಪಷ್ಟವಾಗಿ ಕಾಣಬಲ್ಲ ದೇವರ ಮೂರು ಗುಣಗಳನ್ನು ವಿವರಿಸುತ್ತದೆ, ಮಾತ್ರವಲ್ಲ ಆ ಗುಣಗಳು ನಮ್ಮನ್ನು ಹೇಗೆ ಪ್ರಭಾವಿಸಬಲ್ಲವೆಂಬದನ್ನೂ ವಿವರಿಸುತ್ತದೆ. ನಿಮಗೆ ಆಸಕ್ತಿಯಿರುವುದಾದರೆ ಈ ಪತ್ರಿಕೆಯನ್ನು ಓದಿನೋಡಬಹುದು.”
ಎಚ್ಚರ! ಜುಲೈ-ಸೆಪ್ಟೆಂ.
“ಲೋಕದ ಪರಿಸ್ಥಿತಿಗಳು ಇಂದು ಏಕೆ ಇಷ್ಟು ಕೆಟ್ಟುಹೋಗಿವೆಯೆಂದು ಅನೇಕರು ಯೋಚಿಸುತ್ತಾರೆ. ನಮ್ಮ ಕಾಲದ ಕುರಿತು ಒಂದು ಪ್ರಾಚೀನ ಪ್ರವಾದನೆ ಏನನ್ನುತ್ತದೆ ಎಂಬುದನ್ನು ನಿಮಗೆ ತೋರಿಸಲೋ? [ಅವರು ಒಪ್ಪುವುದಾದರೆ, 2 ತಿಮೊಥೆಯ 3:1-4 ಓದಿ.] ಕಡೇ ದಿವಸಗಳ ಕುರಿತು ಆಸಕ್ತರಾಗಿರುವುದಕ್ಕೆ ಸಕಾರಣವಿದೆ. ಏಕೆಂದರೆ ಭೂಮಿಯ ಮೇಲೆ ಒಳ್ಳೇ ಪರಿಸ್ಥಿತಿಗಳು ಬರಲಿವೆ ಎಂಬುದಕ್ಕೆ ಈ ಕಡೇ ದಿವಸಗಳು ಸೂಚನೆಯಾಗಿವೆ. ಅದು ಹೇಗೆಂಬುದನ್ನು ಈ ಪತ್ರಿಕೆಯು ವಿವರಿಸುತ್ತದೆ.”