ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2008ರ ಜೂನ್ 30ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. 2008ರ ಮೇ 5ರಿಂದ ಜೂನ್ 30ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲೆ ಆಧಾರಿತವಾದ 30ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ರೆಫರೆನ್ಸ್ಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶುಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ನಾವು ಉಪಯೋಗಿಸುವ ದೃಷ್ಟಾಂತಗಳು/ಉದಾಹರಣೆಗಳು ನಮ್ಮ ಕೇಳುಗರಿಗೆ ಅರ್ಥವಾಗುತ್ತವೆ ಎಂಬದನ್ನು ಖಚಿತಪಡಿಸಲು ನಾವೇನು ಮಾಡಬೇಕು? [be-KA ಪು. 242 ಪ್ಯಾರ. 3-ಪು. 243 ಪ್ಯಾರ. 1]
2. ಪರಿಚಿತ ಸನ್ನಿವೇಶಗಳ ಮೇಲೆ ಆಧಾರಿತವಾದ ಸರಳ ದೃಷ್ಟಾಂತಗಳು ಏಕೆ ಪರಿಣಾಮಕಾರಿಯಾಗಿವೆ? [be-KA ಪು. 245 ಪ್ಯಾರ. 2-4]
3. ದೃಶ್ಯ ಸಾಧನಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು ಎಷ್ಟು ಪ್ರಾಮುಖ್ಯ, ಮತ್ತು ಮಹತ್ವಪೂರ್ಣ ಪಾಠಗಳನ್ನು ಕಲಿಸಲಿಕ್ಕಾಗಿ ಅವುಗಳನ್ನು ಯೆಹೋವನು ಹೇಗೆ ಉಪಯೋಗಿಸಿದನು? (ಆದಿ. 15:5; ಯೆರೆ. 18:6; ಯೋನ 4:10, 11) [be-KA ಪು. 247 ಪ್ಯಾರ. 1-2]
4. ನಮ್ಮ ಬೋಧಿಸುವಿಕೆಯನ್ನು ಉತ್ತಮಗೊಳಿಸಲು ದೃಶ್ಯ ಸಾಧನಗಳನ್ನು ಹೇಗೆ ಬಳಸಬಲ್ಲೆವು? [be-KA ಪು. 248 ಪ್ಯಾರ. 1-3]
5. ಬೈಬಲ್ ವಿದ್ಯಾರ್ಥಿಗಳಿಗೆ ಕಲಿಸುವಾಗ ನಕ್ಷೆಗಳನ್ನು ಪರಿಣಾಮಕಾರಿ ದೃಶ್ಯ ಸಾಧನಗಳಾಗಿ ಹೇಗೆ ಉಪಯೋಗಿಸಬಲ್ಲೆವು? [be-KA ಪು. 248 ಪ್ಯಾರ. 4]
ನೇಮಕ ನಂ. 1
6. ಬೈಬಲ್ ಅಧ್ಯಯನದ ಜೊತೆಗೆ ಪವಿತ್ರಾತ್ಮ ಕೊಡುವ ಸಹಾಯದಿಂದ ನಾವೇನನ್ನು ವಿವೇಚಿಸಿ ತಿಳಿದುಕೊಳ್ಳುವೆವು? [be-KA ಪು. 32 ಪ್ಯಾರ. 3-4]
7. ಒಂದು ಶಾಸ್ತ್ರವಚನದ ಅರ್ಥವನ್ನು ಸಂಶೋಧನೆ ಮಾಡಲು ನಾವು ಬೈಬಲನ್ನೇ ಹೇಗೆ ಉಪಯೋಗಿಸಬಲ್ಲೆವು? [be-KA ಪು. 34 ಪ್ಯಾರ. 4-ಪು. 35 ಪ್ಯಾರ. 2]
8. ಮಾನವಕುಲಕ್ಕೆ ದೇವರ ಆಶೀರ್ವಾದಗಳ ಏಕೈಕ ಮಾಧ್ಯಮ ಯೇಸುವೇ ಎಂಬುದನ್ನು ಯೋಹಾನನ ಸುವಾರ್ತೆಯಲ್ಲಿ ಹೇಗೆ ಎತ್ತಿಹೇಳಲಾಗಿದೆ? [bsi08-1-KA ಪು. 14 ಪ್ಯಾರ. 32]
9. ವೈದ್ಯ ಲೂಕನು ಅಪೊಸ್ತಲರ ಕೃತ್ಯಗಳನ್ನು ಬರೆದನೆಂಬದಕ್ಕೆ ಶಾಸ್ತ್ರಾಧಾರವೇನಿದೆ? [bsi08-1-KA ಪು. 16 ಪ್ಯಾರ. 3, 5-7]
10. ಸಾಮಾನ್ಯವಾಗಿ ಒಂದು ಹೊರಮೇರೆಯನ್ನು ನಾವು ಯಾವ ವಿಧದಲ್ಲಿ ತಯಾರಿಸಸಾಧ್ಯವಿದೆ? [be-KA ಪು. 40-41]
ವಾರದ ಬೈಬಲ್ ವಾಚನ
11. ಯಾವ ದೇವಾಲಯವನ್ನು “ಕಟ್ಟುವದಕ್ಕೆ ನಾಲ್ವತ್ತಾರು ವರುಷ ಹಿಡಿಯಿತು”? (ಯೋಹಾ. 2:20) [w08-KA 4/15 “ಯೆಹೋವನ ವಾಕ್ಯವು ಸಜೀವವಾದದ್ದು—ಯೋಹಾನ ಪುಸ್ತಕದ ಮುಖ್ಯಾಂಶಗಳು”]
12. ‘ಮರಣದಿಂದ ಪಾರಾಗಿ ಜೀವಕ್ಕೆ ಸೇರುವವರು’ ಯಾರು? (ಯೋಹಾ. 5:24, 25) [w08-KA 4/15 “ಯೆಹೋವನ ವಾಕ್ಯವು ಸಜೀವವಾದದ್ದು—ಯೋಹಾನ ಪುಸ್ತಕದ ಮುಖ್ಯಾಂಶಗಳು”]
13. ಯೇಸು ತನ್ನ ನಂಬಿಗಸ್ತ ಹಿಂಬಾಲಕರಿಗೆ ಪರಲೋಕದಲ್ಲಿ ಹೇಗೆ ‘ಸ್ಥಳವನ್ನು ಸಿದ್ಧಮಾಡಲಿದ್ದನು’? (ಯೋಹಾ. 14:2) [w08-KA 4/15 “ಯೆಹೋವನ ವಾಕ್ಯವು ಸಜೀವವಾದದ್ದು—ಯೋಹಾನ ಪುಸ್ತಕದ ಮುಖ್ಯಾಂಶಗಳು”]
14. ಯೇಸು ಮಗ್ದಲದ ಮರಿಯಳಿಗೆ “ನನ್ನನ್ನು ಹಿಡಿಯಬೇಡ” ಅಥವಾ ಅಂಟಿಕೊಂಡಿರಬೇಡ ಎಂದು ಹೇಳಿದ್ದೇಕೆ? (ಯೋಹಾ. 20:17) [w08-KA 4/15 “ಯೆಹೋವನ ವಾಕ್ಯವು ಸಜೀವವಾದದ್ದು—ಯೋಹಾನ ಪುಸ್ತಕದ ಮುಖ್ಯಾಂಶಗಳು”]
15. ಯೇಸು ಯಾವ ರೀತಿಯಲ್ಲಿ ಪರಲೋಕಕ್ಕೇರಿ ಹೋದನೋ, “ಅದೇ ರೀತಿಯಲ್ಲಿ” ಬರುವನು ಎಂಬದರ ಅರ್ಥವೇನು? (ಅ. ಕೃ. 1:9-11) [w05-KA 1/15 ಪು. 15 ಪ್ಯಾರ. 21]