ಸೇವಾ ಕೂಟದ ಶೆಡ್ಯೂಲ್
ಜೂನ್ 9ರಿಂದ ಆರಂಭವಾಗುವ ವಾರ
ಗೀತೆ 121
10 ನಿ:ಸ್ಥಳಿಕ ಪ್ರಕಟನೆಗಳು. ಪುಟ 4ರಲ್ಲಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಏಪ್ರಿಲ್-ಜೂನ್ ಕಾವಲಿನಬುರುಜು ಮತ್ತು ಏಪ್ರಿಲ್-ಜೂನ್ ಎಚ್ಚರ! ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
20 ನಿ:ಬೈಬಲ್ ಅಧ್ಯಯನವನ್ನು ನಡೆಸಲಿಕ್ಕಾಗಿ ತಯಾರಿಮಾಡುವುದು. 2004ರ ಆಗಸ್ಟ್ ತಿಂಗಳ ನಮ್ಮ ರಾಜ್ಯದ ಸೇವೆಯ ಪುಟ 1ರ ಮೇಲೆ ಆಧಾರಿತ. ಚರ್ಚೆಯ ಸಮಾಪ್ತಿಯಲ್ಲಿ, ಒಬ್ಬ ಪ್ರಚಾರಕನು ಬೈಬಲ್ ಅಧ್ಯಯನ ನಡೆಸಲು ಬಹಳ ಅವಸರದಿಂದ ಸಿದ್ಧತೆ ಮಾಡುವುದನ್ನು ಪ್ರತ್ಯಕ್ಷಾಭಿನಯಿಸಲಿ. ತದನಂತರ, ಇನ್ನೊಬ್ಬ ಪ್ರಚಾರಕನು ನಮ್ಮ ರಾಜ್ಯದ ಸೇವೆಯಲ್ಲಿ ಕೊಡಲಾಗಿರುವ ಸಲಹೆಗಳನ್ನು ಅನ್ವಯಿಸುತ್ತಾ ತಯಾರಿಮಾಡಲಿ.
15 ನಿ:“ಎಡೆಬಿಡದೆ ಸಾರಿರಿ.”a ಸಮಯವಿರುವಲ್ಲಿ ಕೊಡಲಾದ ವಚನಗಳ ಕುರಿತು ಹೇಳಿಕೆ ನೀಡುವಂತೆ ಸಭಿಕರನ್ನು ಆಮಂತ್ರಿಸಿ.
ಗೀತೆ 201
ಜೂನ್ 16ರಿಂದ ಆರಂಭವಾಗುವ ವಾರ
ಗೀತೆ 90
10 ನಿ:ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
15 ನಿ:ಸುವಾರ್ತೆಯಿಂದ ಜನರಿಗೆ ಸಿಗಬಲ್ಲ ವ್ಯಾವಹಾರಿಕ ಪ್ರಯೋಜನವನ್ನು ಎತ್ತಿಹೇಳಿರಿ. ಶುಶ್ರೂಷಾ ಶಾಲೆ ಪುಸ್ತಕದ ಪುಟ 159ರ ಮೇಲೆ ಆಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಸ್ಥಳಿಕ ಟೆರಿಟೊರಿಯಲ್ಲಿರುವ ಜನರಿಗೆ ಇಂದು ಯಾವ ಚಿಂತೆಗಳಿವೆ ಎಂಬುದನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ. ನಮ್ಮ ನಿರೂಪಣೆಗಳನ್ನು ಅವರ ಚಿಂತೆಗಳಿಗನುಸಾರ ಹೇಗೆ ಅಳವಡಿಸಬಹುದೆಂಬುದರ ಕುರಿತು ಸಲಹೆಗಳನ್ನು ಕೇಳಿರಿ.
20 ನಿ:“ನೀವು ಕುಟುಂಬವಾಗಿ ಪಾರಾಗಲು ಸಿದ್ಧರಾಗಿದ್ದೀರೋ?”b ಸಮಯವಿರುವಲ್ಲಿ ಕೊಡಲಾಗಿರುವ ವಚನಗಳ ಕುರಿತು ಹೇಳಿಕೆಗಳನ್ನು ನೀಡುವಂತೆ ಸಭಿಕರನ್ನು ಕೇಳಿರಿ.
ಗೀತೆ 54
ಜೂನ್ 23ರಿಂದ ಆರಂಭವಾಗುವ ವಾರ
ಗೀತೆ 140
10 ನಿ:ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ ಮತ್ತು ದಾನಗಳ ಅಂಗೀಕಾರ ಪತ್ರ ಓದಿರಿ. ಜುಲೈ ತಿಂಗಳ ಸಾಹಿತ್ಯ ನೀಡುವಿಕೆಯನ್ನು ತಿಳಿಸಿರಿ. ಒಂದು ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿರಿ.
20 ನಿ:ರೆಗ್ಯುಲರ್ ಪಯನೀಯರ್ ಸೇವೆಯಿಂದ ಸಿಗುವ ಸಮೃದ್ಧ ಬದುಕು. 2008, ಜನವರಿ 15ರ ಕಾವಲಿನಬುರುಜು, ಪುಟ 17-19ರ ಮೇಲೆ ಆಧಾರಿತ. ರೆಗ್ಯುಲರ್ ಪಯನೀಯರರು ಇರುವುದಾದರೆ ಇಬ್ಬರನ್ನು ಇಂಟರ್‌ವ್ಯೂ ಮಾಡಿರಿ. ಒಬ್ಬರು ಹೊಸ ಪಯನೀಯರರು, ಇನ್ನೊಬ್ಬರು ಕೆಲವು ವರ್ಷಗಳಿಂದ ಸೇವೆ ಮಾಡಿರುವವರು. ಈ ಅಮೂಲ್ಯ ಸೇವೆಯು ಅವರ ಜೀವನವನ್ನು ಹೇಗೆ ಸಮೃದ್ಧಗೊಳಿಸಿದೆಯೆಂದು ಅವರು ಹೇಳಲಿ.
15 ನಿ:ಪ್ರಶ್ನೆಗಳನ್ನು ಉತ್ತರಿಸುವಾಗ ಬೈಬಲನ್ನು ಉಪಯೋಗಿಸಿರಿ. ಶುಶ್ರೂಷಾ ಶಾಲೆ ಪುಸ್ತಕದ ಪುಟ 143-4 ರ ಮೇಲೆ ಆಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಸ್ಥಳಿಕ ಟೆರಿಟೊರಿಯಲ್ಲಿ ಸಾಮಾನ್ಯವಾಗಿ ಜನರು ಕೇಳುವ ಒಂದು ಪ್ರಶ್ನೆಯನ್ನು ಪ್ರಚಾರಕನೊಬ್ಬನು ಬೈಬಲಿನಿಂದ ಉತ್ತರಿಸುವ ಒಂದು ಚುಟುಕಾದ ಪ್ರತ್ಯಕ್ಷಾಭಿನಯವನ್ನು ಸೇರಿಸಿ.
ಗೀತೆ 82
ಜೂನ್ 30ರಿಂದ ಆರಂಭವಾಗುವ ವಾರ
ಗೀತೆ 97
10 ನಿ:ಸ್ಥಳಿಕ ಪ್ರಕಟನೆಗಳು. ಜೂನ್ ತಿಂಗಳಿನ ಸೇವಾ ವರದಿಯನ್ನು ಕೊಡುವಂತೆ ಎಲ್ಲರಿಗೂ ನೆನಪಿಸಿರಿ. ಪುಟ 4ರಲ್ಲಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಜುಲೈ-ಸೆಪ್ಟೆಂಬರ್ ಕಾವಲಿನಬುರುಜು ಮತ್ತು ಜುಲೈ-ಸೆಪ್ಟೆಂಬರ್ ಎಚ್ಚರ! ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
20 ನಿ:ನಮ್ಮ ಸಂಭಾಷಣಾ ಕಲೆಯನ್ನು ಉತ್ತಮಗೊಳಿಸುವ ವಿಧ. ಶುಶ್ರೂಷಾ ಶಾಲೆ ಪುಸ್ತಕದ ಪುಟ 62, ಪ್ಯಾರ 4 ರಿಂದ ಪುಟ 64, ಪ್ಯಾರ 5ರ ಮೇಲೆ ಆಧಾರಿತ ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ವಿಷಯವನ್ನು ಸ್ಥಳಿಕ ಟೆರಿಟೊರಿಗೆ ಅನ್ವಯಿಸಿರಿ. ಮನೆ ಮನೆಯ ಸೇವೆ ಅಥವಾ ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಜನರನ್ನು ಸಂಭಾಷಣೆಯಲ್ಲಿ ಒಳಗೂಡಿಸುವುದರಲ್ಲಿ ನುರಿತ ಪ್ರಚಾರಕನನ್ನು ಚುಟುಕಾಗಿ ಇಂಟರ್‌ವ್ಯೂ ಮಾಡಿ.
15 ನಿ:ನೀವು ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಬಲ್ಲಿರೋ? ಸಭಿಕರೊಂದಿಗಿನ ಚರ್ಚೆ. ಬೈಬಲ್ ಅಧ್ಯಯನವನ್ನು ಆರಂಭಿಸುವ ಗುರಿಯೊಂದಿಗೆ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ನೀಡಿರಿ. ಅದರ ಕೆಲವು ವೈಶಿಷ್ಟ್ಯಗಳನ್ನು ಪರಿಗಣಿಸಿ. ಪ್ರಥಮ ಭೇಟಿಯಲ್ಲಿ ಆಸಕ್ತಿ ತೋರಿಸಿದವರನ್ನೂ ಪ್ರತಿಕೆ ಸ್ವೀಕರಿಸಿದವರನ್ನೂ ಪುನರ್ಭೇಟಿಮಾಡುವಾಗ ಮತ್ತು ಮನೆಮನೆಯ ಸೇವೆಯಲ್ಲಿ ಈ ಪುಸ್ತಕವನ್ನು ಹೇಗೆ ನೀಡಬಹುದೆಂಬುದನ್ನು ಚರ್ಚಿಸಿರಿ. (km–KA 8/07 ಪು. 3; km–KA 1/06 ಪು. 3-6ನ್ನು ನೋಡಿ.) ಒಂದೆರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿ.
ಗೀತೆ 179
ಜುಲೈ 7ರಿಂದ ಆರಂಭವಾಗುವ ವಾರ
ಗೀತೆ 125
10 ನಿ:ಸ್ಥಳಿಕ ಪ್ರಕಟಣೆಗಳು.
15 ನಿ:ಸ್ಥಳಿಕ ಅಗತ್ಯಗಳು.
20 ನಿ:“ಮನೆಯವನು ಬೇರೊಂದು ಭಾಷೆಯವನಾಗಿದ್ದಲ್ಲಿ?”cಸೇವಾ ಮೇಲ್ವಿಚಾರಕನು ನಿರ್ವಹಿಸತಕ್ಕದ್ದು. 2ನೇ ಪ್ಯಾರವನ್ನು ಪರಿಗಣಿಸುವಾಗ ನಮ್ಮ ಸಭೆಯ ಟೆರಿಟೊರಿಯಲ್ಲಿ ಸೇವೆ ಮಾಡುವ ಬೇರೆ ಭಾಷಾ ಗುಂಪುಗಳ ಅಥವಾ ಸಭೆಗಳ ಬಗ್ಗೆ ತಿಳಿಸಿ. ಈ ಗುಂಪುಗಳಿಗೆ ಅಥವಾ ಸಭೆಗಳಿಗೆ ಸಾರುವಿಕೆಯಲ್ಲಿ ನೆರವಾಗಲು ಮಾಡಿರುವ ಯಾವುದೇ ನಿರ್ದಿಷ್ಟ ಏರ್ಪಾಡುಗಳ ಕುರಿತು ತಿಳಿಸಿ.
ಗೀತೆ 188
[ಪಾದಟಿಪ್ಪಣಿಗಳು]
a ಪೀಠಿಕೆಯನ್ನು ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಮುಗಿಸಿ ನಂತರ ಪ್ರಶ್ನೋತ್ತರ ಚರ್ಚೆ ಮಾಡಿ.
b ಪೀಠಿಕೆಯನ್ನು ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಮುಗಿಸಿ ನಂತರ ಪ್ರಶ್ನೋತ್ತರ ಚರ್ಚೆ ಮಾಡಿ.
c ಪೀಠಿಕೆಯನ್ನು ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಮುಗಿಸಿ ನಂತರ ಪ್ರಶ್ನೋತ್ತರ ಚರ್ಚೆ ಮಾಡಿ.