ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ ಜೂನ್: ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್) ಅಥವಾ ಬೈಬಲ್—ದೇವರ ವಾಕ್ಯವೊ ಮನುಷ್ಯನದ್ದೊ? (ಇಂಗ್ಲಿಷ್) ಈ ಸಾಹಿತ್ಯಗಳು ಇಲ್ಲದಿರುವ ಸಭೆಗಳು ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ ಪುಸ್ತಕವನ್ನು ನೀಡಬಹುದು. ಜುಲೈ ಮತ್ತು ಆಗಸ್ಟ್: ಈ ಕೆಳಗಿನ 32 ಪುಟಗಳ ಯಾವುದೇ ಬ್ರೋಷರನ್ನು ಉಪಯೋಗಿಸಿ: ಸಕಲ ಜನರಿಗಾಗಿರುವ ಒಂದು ಗ್ರಂಥ, ಸಂತೃಪ್ತಿಕರವಾದ ಜೀವನ—ಲಭ್ಯವಾಗುವ ವಿಧ, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ? ನೀವು ತ್ರಯೈಕ್ಯವನ್ನು ನಂಬಬೇಕೋ? ಪರದೈಸನ್ನು ತರಲಿರುವ ಸರಕಾರ (ಇಂಗ್ಲಿಷ್), ದೇವರ ಮಾರ್ಗದರ್ಶನ—ಪರದೈಸಕ್ಕೆ ನಡೆಸುವ ಮಾರ್ಗ, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? ಮತ್ತು ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ. ಸೆಪ್ಟೆಂಬರ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮೊದಲ ಭೇಟಿಯಲ್ಲೇ ಬೈಬಲ್ ಅಧ್ಯಯನವನ್ನು ಪ್ರಾರಂಭಿಸಲು ಹೆಚ್ಚಿನ ಪ್ರಯತ್ನವನ್ನು ಮಾಡಿ. ಮನೆಯವನ ಬಳಿ ಈಗಾಗಲೇ ಈ ಪುಸ್ತಕವಿರುವಲ್ಲಿ, ಅದರಿಂದ ಅವರು ಹೇಗೆ ಪ್ರಯೋಜನ ಹೊಂದಬಲ್ಲರೆಂದು ತೋರಿಸಲು ಬೈಬಲ್ ಅಧ್ಯಯನವನ್ನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಿರಿ.
◼ ಆಗಸ್ಟ್ ತಿಂಗಳಿನಲ್ಲಿ ಐದು ವಾರಾಂತ್ಯಗಳಿರುವುದರಿಂದ, ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಇದೊಂದು ಉತ್ತಮ ತಿಂಗಳು.
◼ ಅಧ್ಯಕ್ಷ ಮೇಲ್ವಿಚಾರಕನಿಂದ ನೇಮಿಸಲ್ಪಟ್ಟವರು ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳ ಸಭೆಯ ಅಕೌಂಟ್ಸ್ ಅನ್ನು ಆಡಿಟ್ ಮಾಡಬೇಕು. ಅನಂತರ ಮುಂದಿನ ಅಕೌಂಟ್ಸ್ ವರದಿಯೊಂದಿಗೆ ಇದನ್ನು ಸಭೆಗೆ ಪ್ರಕಟಿಸಬೇಕು.—ಇನ್‌ಸ್ಟ್ರಕ್ಷನ್ಸ್ ಫಾರ್ ಕಾಂಗ್ರಿಗೇಷನ್ ಅಕೌಂಟಿಂಗ್ (S-27) ಫಾರ್ಮನ್ನು ನೋಡಿರಿ.
◼ ರೆಗ್ಯುಲರ್ ಪಯನೀಯರ್ ಸೇವೆಯನ್ನು ಆರಂಭಿಸಲು ವಿನಂತಿಸಿಕೊಂಡಿರುವ ತಾರೀಕಿಗಿಂತ ಕಡಿಮೆಪಕ್ಷ 30 ದಿವಸಗಳ ಮುಂಚೆ ಅರ್ಜಿಗಳನ್ನು ಬ್ರಾಂಚ್ ಆಫೀಸಿಗೆ ಕಳುಹಿಸಬೇಕು. ಅರ್ಜಿಗಳು ಪೂರ್ತಿಯಾಗಿ ಭರ್ತಿಮಾಡಲಾಗಿವೆಯೊ ಎಂದು ಸಭಾ ಸೆಕ್ರಿಟರಿಯು ಪರಿಶೀಲಿಸಬೇಕು. ಅರ್ಜಿದಾರರಿಗೆ ತಮ್ಮ ದೀಕ್ಷಾಸ್ನಾನದ ಸರಿಯಾದ ತಾರೀಕು ಜ್ಞಾಪಕವಿಲ್ಲದಿರುವಲ್ಲಿ, ಅವರು ಅಂದಾಜಿಗನುಸಾರ ಹಾಕಿ, ಅದರ ಒಂದು ದಾಖಲೆಯನ್ನು ಇಡಬೇಕು. ಸೆಕ್ರಿಟರಿಯು ಈ ತಾರೀಕನ್ನು ಕಾಂಗ್ರಿಗೇಷನ್ ಪಬ್ಲಿಷರ್ ರೆಕಾರ್ಡ್ (S-21) ಕಾರ್ಡ್‌ನಲ್ಲಿ ದಾಖಲಿಸಬೇಕು.
◼ 2008ರ ಜನವರಿಯಿಂದ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯ ಆಡಿಯೋ ಫೈಲ್‌ಗಳು ಇಂಗ್ಲಿಷ್ ಮತ್ತು ಸ್ಪಾನಿಷ್ ಭಾಷೆಗಳಲ್ಲಿ www.jw.org ವೆಬ್‌ಸೈಟ್‌ನಲ್ಲಿ ಲಭ್ಯವಾಗಿರುತ್ತವೆ. ಸಭೆಗಳಲ್ಲಿ ಇದರ CD ಅಥವಾ MP3 ಡಿಸ್ಕ್‌ಗಳು ದೊರಕುವ ಮುನ್ನವೇ ಅನೇಕರು ಈ ಆಡಿಯೋ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಲು ಇಷ್ಟಪಡುತ್ತಾರೆ. ಡೌನ್‌ಲೋಡ್ ಮಾಡಿದಾಗಲೆಲ್ಲಾ ಅದಕ್ಕಾಗಿ ಸಂಘಟನೆಯು ಹಣ ತೆರಬೇಕಾಗುತ್ತದೆ. ಆದರೂ ಈ ವಿತರಣೆಯು, ಡಿಸ್ಕ್‌ಗಳ ಉತ್ಪಾದನೆ ಮತ್ತು ರವಾನೆಗೆ ತಗಲುವ ಖರ್ಚಿಗಿಂತ ಮಿತವ್ಯಯದ್ದು. ಆದುದರಿಂದ ಆಡಿಯೋ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡುವ ಪ್ರಚಾರಕರು ಪತ್ರಿಕಾ ಸೇವಕನ ಬಳಿ CD ಅಥವಾ MP3 ಡಿಸ್ಕ್‌ಗಳಿಗಾಗಿ ಕೊಟ್ಟ ತಮ್ಮ ಆರ್ಡರ್‌ಗಳನ್ನು ವಜಾಮಾಡಬೇಕಾಗಿ ವಿನಂತಿ. ಇನ್ನು ಹೆಚ್ಚಿನ ಭಾಷೆಗಳಲ್ಲಿ ಆಡಿಯೋ ಪ್ರೋಗ್ರ್ಯಾಮ್‌ಗಳು www.jw.org ಮೂಲಕ ಲಭ್ಯವಾಗಲಿವೆ.
◼ ಹಿರಿಯರ ಮಂಡಲಿಗಳು ನೈಸರ್ಗಿಕ ವಿಪತ್ತಿಗಾಗಿ ಪೂರ್ವಸಿದ್ಧರಾಗಿರುವುದರ ಕುರಿತಾದ ಜುಲೈ 6, 2006ರ ಪತ್ರವನ್ನು ಪರಿಶೀಲಿಸತಕ್ಕದ್ದು ಮತ್ತು ಪ್ರತಿಯೊಬ್ಬ ಪ್ರಚಾರಕನ ಸರಿಯಾದ ಸಂಪರ್ಕ ಮಾಹಿತಿಯಿದೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು. ಸಾಮಾನ್ಯವಾಗಿ ವಿಪತ್ತುಗಳು ಸಂಭವಿಸುವ ಪ್ರದೇಶಗಳಲ್ಲಿ, ತುರ್ತು ಸಮಯದಲ್ಲಿ ಸಂಪರ್ಕಿಸಬಹುದಾದ ಇತರ ಹೆಚ್ಚಿನ ವಿಳಾಸಗಳನ್ನು ಪಡೆದುಕೊಳ್ಳತಕ್ಕದ್ದು. ಪ್ರಚಾರಕರು ತುರ್ತು ಪರಿಸ್ಥಿತಿಯಲ್ಲಿ ಮಾತ್ರವಲ್ಲ ರಜೆಯಲ್ಲಿ ಅಥವಾ ಉದ್ಯೋಗ ಸಂಬಂಧವಾಗಿ ಬೇರೆಡೆಗೆ ಪ್ರಯಾಣಿಸುವಾಗ, ಆಸ್ಪತ್ರೆಯಲ್ಲಿ ಹೆಚ್ಚು ಸಮಯ ಉಳಿಯುವಾಗ ಮತ್ತಿತರ ಸಂದರ್ಭಗಳಲ್ಲಿ ಸಹ ಸಭಾ ಪುಸ್ತಕ ಅಧ್ಯಯನ ಮೇಲ್ವಿಚಾರಕನಿಗೆ ಅಥವಾ ಒಬ್ಬ ಹಿರಿಯನಿಗೆ ಅದನ್ನು ತಿಳಿಸುವುದು ಸಹಾಯಕರ.
◼ ಇಸವಿ 2008ರ ಜಿಲ್ಲಾ ಅಧಿವೇಶನಕ್ಕಾಗಿ ವಿಶೇಷ ಆಮಂತ್ರಣ ಪತ್ರ ಇರುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಆದರೆ, ಸ್ವಲ್ಪ ಸಮಯದಲ್ಲೇ ಒಂದು ಪ್ರಮುಖವಾದ ಜಾಗತಿಕ ಕಾರ್ಯಾಚರಣೆಯನ್ನು ಯೋಜಿಸಲಾಗುತ್ತಿದೆ. ಆ ಏರ್ಪಾಡಿನ ಕುರಿತಾದ ಹೆಚ್ಚಿನ ವಿವರಗಳನ್ನು ಮುಂದೆ ತಿಳಿಸಲಾಗುವುದು.
◼ ಲಭ್ಯವಿರುವ ಹೊಸ ಸಾಹಿತ್ಯ:
“ಬಂದು ನನ್ನನ್ನು ಹಿಂಬಾಲಿಸು”—ದೊಡ್ಡ ಮುದ್ರಣ
—ಇಂಗ್ಲಿಷ್
ಇದು ಒಂದು ವಿಶೇಷ ವಿನಂತಿಯಾಗಿದೆ ಮತ್ತು ಇದು ಕೇವಲ ದೃಷ್ಟಿದೋಷವಿದ್ದು ಚಿಕ್ಕ ಮುದ್ರಣವನ್ನು ಓದಲಾಗದವರಿಗಾಗಿ ಮಾತ್ರ ಎಂಬುದನ್ನು ಗಮನಿಸಿ. ಆದುದರಿಂದ ದೃಷ್ಟಿದೋಷವಿರುವ ಪ್ರಚಾರಕರು ವಿನಂತಿಸಿಕೊಂಡಲ್ಲಿ ಮಾತ್ರ ಅದಕ್ಕಾಗಿ ಆರ್ಡರ್ ಮಾಡತಕ್ಕದ್ದು. ಸೇವಾ ಕಮಿಟಿಯು ಪ್ರಚಾರಕನಿಗೆ ಇದು ನಿಜವಾಗಿಯೂ ಅಗತ್ಯವಿದೆಯೋ ಎಂಬುದನ್ನು ಪರಿಗಣಿಸಿದ ನಂತರವೇ ಅದನ್ನು ಲಿಟರೇಚರ್ ರಿಕ್ವೆಸ್ಟ್ ಫಾರ್ಮ್ ಮೂಲಕ ಆರ್ಡರ್ ಮಾಡಬೇಕು.
ಶಾಂತಿಭರಿತ ಹೊಸ ಲೋಕದಲ್ಲಿ ಜೀವನ (ಟ್ರ್ಯಾಕ್ಟ್ ನಂ. 15) —ರಷ್ಯನ್, ಸ್ಪಾನಿಷ್