ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 10/07 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2007 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಅಕ್ಟೋಬರ್‌ 8ರಿಂದ ಆರಂಭವಾಗುವ ವಾರ
  • ಅಕ್ಟೋಬರ್‌ 15ರಿಂದ ಆರಂಭವಾಗುವ ವಾರ
  • ಅಕ್ಟೋಬರ್‌ 22ರಿಂದ ಆರಂಭವಾಗುವ ವಾರ
  • ಅಕ್ಟೋಬರ್‌ 29ರಿಂದ ಆರಂಭವಾಗುವ ವಾರ
  • ನವೆಂಬರ್‌ 5ರಿಂದ ಆರಂಭವಾಗುವ ವಾರ
2007 ನಮ್ಮ ರಾಜ್ಯದ ಸೇವೆ
km 10/07 ಪು. 2

ಸೇವಾ ಕೂಟದ ಶೆಡ್ಯೂಲ್‌

ಅಕ್ಟೋಬರ್‌ 8ರಿಂದ ಆರಂಭವಾಗುವ ವಾರ

ಗೀತೆ 56

10 ನಿ: ಸ್ಥಳಿಕ ಪ್ರಕಟನೆಗಳು. ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಅಕ್ಟೋಬರ್‌-ಡಿಸೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಅಕ್ಟೋಬರ್‌ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಕೇವಲ ಒಂದು ಪತ್ರಿಕೆಯ ಕುರಿತು ಮಾತಾಡುವುದಾದರೂ ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿ ಎರಡು ಪತ್ರಿಕೆಗಳನ್ನು ಜೊತೆಯಾಗಿ ನೀಡಬೇಕು.

20 ನಿ: ಯೆಹೋವನ ಸಂಘಟನೆಗೆ ಒತ್ತಾಗಿ ಉಳಿಯಿರಿ. ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ ಅಧ್ಯಾಯ 17ರ ಮೇಲೆ ಆಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ.

15 ನಿ: ಎಲೆಕ್ಟ್ರಾನಿಕ್‌ ಯುಗದಲ್ಲಿ ಸ್ವಸ್ಥಚಿತ್ತರಾಗಿ ಜೀವಿಸುವುದು. (ತೀತ 2:11, 12) 2002, ಸೆಪ್ಟೆಂಬರ್‌ ತಿಂಗಳ ನಮ್ಮ ರಾಜ್ಯದ ಸೇವೆ, ಪುಟ 8, ಪ್ಯಾರ 1-7ರ ಮೇಲೆ ಆಧಾರಿತವಾದ ಭಾಷಣ. ಸಮಯವಿರುವಲ್ಲಿ, 1999, ನವೆಂಬರ್‌ ತಿಂಗಳ ನಮ್ಮ ರಾಜ್ಯದ ಸೇವೆಯ ಪುರವಣಿಯಿಂದ ಇತರ ಅಂಶಗಳನ್ನು ಸ್ಥಳಿಕವಾಗಿ ಅನ್ವಯವಾಗುವಲ್ಲಿ ಒಳಗೂಡಿಸಬಹುದು.

ಗೀತೆ 10

ಅಕ್ಟೋಬರ್‌ 15ರಿಂದ ಆರಂಭವಾಗುವ ವಾರ

ಗೀತೆ 67

10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.

20 ನಿ: ನೀವು ಯಾರಿಗೆ ಕಲಿಸುತ್ತಿದ್ದೀರೊ ಅವರಲ್ಲಿ ಸತ್ಯವು ಫಲಕೊಡುತ್ತಿದೆಯೇ? 2002, ಆಗಸ್ಟ್‌ 15ರ ಕಾವಲಿನಬುರುಜು ಪುಟ 15-20ರ ಮೇಲೆ ಆಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ವಿದ್ಯಾರ್ಥಿಯ ಹೃದಯದಲ್ಲಿರುವುದನ್ನು ನಾವು ಗ್ರಹಿಸಲು ಸಹಾಯವಾಗುವಂಥ ರೀತಿಯಲ್ಲಿ ಬೈಬಲ್‌ ಬೋಧಿಸುತ್ತದೆ ಪುಸ್ತಕವು ಹೇಗೆ ತಯಾರಿಸಲ್ಪಟ್ಟಿದೆ ಎಂಬುದರ ಕುರಿತು ಹೇಳಿಕೆಗಳನ್ನು ಒಳಗೂಡಿಸಿರಿ. ಕೆಲವೊಂದು ಉದಾಹರಣೆಗಳನ್ನು ಪರಿಗಣಿಸಿರಿ: ಅಧ್ಯಾಯ 1, ಪ್ಯಾರ 19; ಅಧ್ಯಾಯ 2, ಪ್ಯಾರ 4; ಅಧ್ಯಾಯ 3, ಪ್ಯಾರ 24; ಮತ್ತು ಅಧ್ಯಾಯ 4, ಪ್ಯಾರ 18. ಪುಸ್ತಕದ ವಿವಿಧ ವೈಶಿಷ್ಟ್ಯಗಳನ್ನು ಸದುಪಯೋಗಿಸುವಂತೆ ಪ್ರಚಾರಕರನ್ನು ಉತ್ತೇಜಿಸಿರಿ.

15 ನಿ: “ನವೆಂಬರ್‌ ತಿಂಗಳಲ್ಲಿ ನೀಡಲಾಗುವ ಎಚ್ಚರ! ಪತ್ರಿಕೆಯ ವಿಶೇಷ ಸಂಚಿಕೆ!”a ಎಚ್ಚರ! ಪತ್ರಿಕೆಯಲ್ಲಿರುವ ವಿಷಯಗಳನ್ನು ಸಂಕ್ಷಿಪ್ತವಾಗಿ ಪರಿಶೀಲಿಸಿ. ಲೇಖನದ ಪ್ರಶ್ನೋತ್ತರ ಚರ್ಚೆಯನ್ನು ನಡೆಸಿರಿ. ಪ್ಯಾರ 3ನ್ನು ಪರಿಗಣಿಸುವಾಗ, ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಅಕ್ಟೋಬರ್‌-ಡಿಸೆಂಬರ್‌ ತಿಂಗಳ ಎಚ್ಚರ! ಪತ್ರಿಕೆಯನ್ನು ಹೇಗೆ ನೀಡಬೇಕೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಪ್ರತ್ಯಕ್ಷಾಭಿನಯದ ಕೊನೆಯಲ್ಲಿ ಮುಂದಿನ ಭೇಟಿಗಾಗಿ ತಳಪಾಯವನ್ನು ಹಾಕಿರಿ.

ಗೀತೆ 151

ಅಕ್ಟೋಬರ್‌ 22ರಿಂದ ಆರಂಭವಾಗುವ ವಾರ

ಗೀತೆ 175

10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಅಕ್ಟೋಬರ್‌-ಡಿಸೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ನವೆಂಬರ್‌ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.

15 ನಿ: ಸ್ಥಳಿಕ ಅಗತ್ಯಗಳು.

20 ನಿ: ಬೆಳಕಿನವರಂತೆ ನಡೆದುಕೊಳ್ಳಿರಿ. ಭಾಷಣ ಮತ್ತು ಇಂಟರ್‌ವ್ಯೂಗಳು. ನಾವು ಈ ಲೋಕದ ಕತ್ತಲೆಯನ್ನು ತೊರೆದು ಯೆಹೋವನ ಬೆಳಕು ನಮ್ಮನ್ನು ಮಾರ್ಗದರ್ಶಿಸುವಂತೆ ಅನುಮತಿಸಿದ್ದೇವೆ. (ಎಫೆ. 5:8, 9) ಇದು ನಮ್ಮ ಜೀವನಕ್ಕೆ ಉದ್ದೇಶವನ್ನು ಕೊಟ್ಟು ಉತ್ತಮಗೊಳಿಸಿದೆ. (1 ತಿಮೊ. 4:8) ಈ ಬೆಳಕು ನಮಗೆ ನಿರೀಕ್ಷೆಯನ್ನೂ ಕೊಡುತ್ತದೆ. (ರೋಮಾ. 15:4) ಯೆಹೋವನೊಂದಿಗೆ ಒಳ್ಳೇ ಸಂಬಂಧವನ್ನು ಗಳಿಸಲು ಮತ್ತು ಉಳಿಸಲು ದೊಡ್ಡ ಅಡೆತಡೆಗಳನ್ನು ಎದುರಿಸಿ ಜಯಿಸಿದ ಇಬ್ಬರು ಅಥವಾ ಮೂವರು ಪ್ರಚಾರಕರನ್ನು ಇಂಟರ್‌ವ್ಯೂ ಮಾಡಿರಿ. ಸತ್ಯಕ್ಕೆ ಬರುವಾಗ ಅವರು ಯಾವ ಪಂಥಾಹ್ವಾನಗಳನ್ನು ಎದುರಿಸಿದರು? ಅವುಗಳನ್ನು ಜಯಿಸಲು ಅವರು ಹೇಗೆ ಶಕ್ತರಾದರು? ಅವರ ಜೀವನವು ಈಗ ಯಾವ ರೀತಿಯಲ್ಲಿ ಉತ್ತಮಗೊಂಡಿದೆ? ಸತ್ಯದಲ್ಲಿ ಸ್ಥಿರಚಿತ್ತರಾಗಿ ಉಳಿಯಲು ಅವರಿಗೆ ಯಾವುದು ಸಹಾಯಮಾಡಿದೆ? ಆಧ್ಯಾತ್ಮಿಕ ಪ್ರಗತಿಯನ್ನು ಮಾಡುತ್ತಾ ಇರುವಂತೆಯೂ ಯೆಹೋವನು ಪ್ರಕಟಿಸಿರುವ ಸತ್ಯಕ್ಕಾಗಿ ಆಳವಾದ ಗಣ್ಯತೆಯನ್ನು ತೋರಿಸುತ್ತಾ ಇರುವಂತೆಯೂ ಎಲ್ಲರನ್ನು ಪ್ರೋತ್ಸಾಹಿಸುತ್ತಾ ಕೊನೆಗೊಳಿಸಿರಿ.​—⁠2 ಪೇತ್ರ 1:5-8.

ಗೀತೆ 23

ಅಕ್ಟೋಬರ್‌ 29ರಿಂದ ಆರಂಭವಾಗುವ ವಾರ

ಗೀತೆ 124

10 ನಿ: ಸ್ಥಳಿಕ ಪ್ರಕಟನೆಗಳು. ಅಕ್ಟೋಬರ್‌ ತಿಂಗಳ ಕ್ಷೇತ್ರಸೇವಾ ವರದಿಯನ್ನು ನೀಡುವಂತೆ ಪ್ರಚಾರಕರಿಗೆ ನೆನಪುಹುಟ್ಟಿಸಿರಿ. ನವೆಂಬರ್‌ ತಿಂಗಳ ಸಾಹಿತ್ಯ ನೀಡುವಿಕೆಯನ್ನು ತಿಳಿಸಿ. ಒಂದು ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿರಿ.

15 ನಿ: ನಿಮ್ಮ ಸೃಷ್ಟಿಕರ್ತನನ್ನು ಮಹಿಮೆಪಡಿಸಲು ಆಧ್ಯಾತ್ಮಿಕ ಗುರಿಗಳನ್ನಿಡಿರಿ. 2006, ಜೂನ್‌ ತಿಂಗಳ ನಮ್ಮ ರಾಜ್ಯದ ಸೇವೆ, ಪುಟ 4ರ ಮೇಲೆ ಆಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಸಭಿಕರು ತಾವಿಟ್ಟಿರುವ ಆಧ್ಯಾತ್ಮಿಕ ಗುರಿಗಳನ್ನು ಮತ್ತು ಆ ಗುರಿಗಳನ್ನು ಮುಟ್ಟಲು ಅವರು ಏನೇನನ್ನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಸುವಂತೆ ಕೇಳಿಕೊಳ್ಳಿ. ಒಂದೆರಡು ಹೇಳಿಕೆಗಳನ್ನು ಮುಂಚಿತವಾಗಿಯೇ ಏರ್ಪಡಿಸಬಹುದು.

20 ನಿ: “ಬಡವರಿಗೆ ನಿರೀಕ್ಷೆಯನ್ನು ನೀಡಿರಿ.”b

ಗೀತೆ 7

ನವೆಂಬರ್‌ 5ರಿಂದ ಆರಂಭವಾಗುವ ವಾರ

ಗೀತೆ 156

10 ನಿ: ಸ್ಥಳಿಕ ಪ್ರಕಟನೆಗಳು.

15 ನಿ: ನಿಮ್ಮ ಮಕ್ಕಳನ್ನು ತರಬೇತುಗೊಳಿಸುವಾಗ ಯೆಹೋವನನ್ನು ಅನುಕರಿಸಿರಿ. 2001, ಅಕ್ಟೋಬರ್‌ 1ರ ಕಾವಲಿನಬುರುಜು, ಪುಟ 8-13ರ ಮೇಲೆ ಆಧಾರಿತವಾದ ಭಾಷಣ.

20 ನಿ: “ಎಲ್ಲರಿಗೂ ಪ್ರೋತ್ಸಾಹದ ವಿನಿಮಯ.”c ಸಂಚರಣ ಮೇಲ್ವಿಚಾರಕರು ಸಭೆಯನ್ನು ಭೇಟಿಮಾಡಿದಾಗ ತಾವು ಹೇಗೆ ಉತ್ತೇಜನವನ್ನು ಪಡೆದುಕೊಂಡರೆಂದು ನಿರ್ದಿಷ್ಟವಾಗಿ ತಿಳಿಸುವಂತೆ ಸಭಿಕರನ್ನು ಕೇಳಿಕೊಳ್ಳಿ. ಒಂದೆರಡು ಹೇಳಿಕೆಗಳನ್ನು ಮುಂಚಿತವಾಗಿಯೇ ಏರ್ಪಡಿಸಬಹುದು.

ಗೀತೆ 192

[ಪಾದಟಿಪ್ಪಣಿಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ